News Kadaba

ವಿಧ್ವಂಸಕ ಕೃತ್ಯಕ್ಕೆ ಶಂಕಿತ ಉಗ್ರರ ಪ್ಲ್ಯಾನ್ ವಿಫಲ- ಕಮಿಷನರ್ ನಿಂದ ಸ್ಪೋಟಕ ಮಾಹಿತಿ ಬಹಿರಂಗ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 19. ವಿಧ್ವಂಸಕ ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಿದ್ದು, ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಈ ಕುರಿತು ಬೆಂಗಳೂರು ಕಮಿಷನರ್ ದಯಾನಂದ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿಸಿಬಿ ಪೊಲೀಸರು ಜುನೈದ್, ಸೊಹೈಲ್, ಉಮರ್, ಮುದಾಸಿರ್ ಹಾಗೂ ಜಾಹಿದ್ ಎಂಬ ಶಂಕಿತ ಉಗ್ರರನ್ನು ಇಂದು ಬಂಧಿಸಿದ್ದು, ಇವರ ಹಿಂದೆ ಉಗ್ರ ಸಂಘಟನೆಯ ಕೈವಾಡವಿರುವ ಶಂಕೆಯಿದೆ ಎಂದು ಹೇಳಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಐವರು […]

ವಿಧ್ವಂಸಕ ಕೃತ್ಯಕ್ಕೆ ಶಂಕಿತ ಉಗ್ರರ ಪ್ಲ್ಯಾನ್ ವಿಫಲ- ಕಮಿಷನರ್ ನಿಂದ ಸ್ಪೋಟಕ ಮಾಹಿತಿ ಬಹಿರಂಗ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 19. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಹಠಾತ್ ದೋಷ ಕಂಡು ಬಂದ ಹಿನ್ನೆಲೆ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನ ವಿಮಾನ ನಿಲ್ದಾನದಲ್ಲಿ ವರದಿಯಾಗಿದೆ. ಕಳೆದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ  ವಿರೋಧ ಪಕ್ಷದ ಸಭೆಯಲ್ಲಿ ಭಾಗವಹಿಸಿ ದೆಹಲಿಗೆ ವಾಪಸ್ ಆಗುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.  

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ- ಕರಾವಳಿಯಾದ್ಯಂತ ಯೆಲ್ಲೋ ಅಲರ್ಟ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 19. ರಾಜ್ಯದ ಹಲವಡೆ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆಯಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ವರದಿಯಾಗಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಬೀದರ್, ಬೆಳಗಾವಿ, ಕಲಬುರಗಿ

ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ- ಕರಾವಳಿಯಾದ್ಯಂತ ಯೆಲ್ಲೋ ಅಲರ್ಟ್..! Read More »

ಕರಾವಳಿ

ಕರ್ನಾಟಕದಲ್ಲಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು- ಐವರು ಉಗ್ರರ ಬಂಧಿಸಿದ ಸಿಸಿಬಿ ಪೊಲೀಸರು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 19. ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸಿರುವ ಘಟನೆ ನಡೆದಿದೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬಂಧಿತರನ್ನು ಸೈಯ್ಯದ್, ಸುಹೇಲ್ ಉಮೇರ್, ಜುನೇದ್, ಮುದಾಸಿನ್, ಜಾಹೀದ್ ಎಂದು ಗುರುತಿಸಲಾಗಿದೆ. ಸಿಸಿಬಿ ಪೊಲೀಸರು ಕರ್ನಾಟಕದಲ್ಲಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪದ ಮೇಲೆ ಐವರು ಉಗ್ರರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು- ಐವರು ಉಗ್ರರ ಬಂಧಿಸಿದ ಸಿಸಿಬಿ ಪೊಲೀಸರು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್- ಸಂಚಾರ ನಿಮಯ ಉಲ್ಲಂಘನೆಯ ದಂಡದ ವಿವರ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 19. ಭಾರತದಲ್ಲಿ ಯಾವ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಎಷ್ಟು ದಂಡ ಕಟ್ಟಬೇಕಾಗುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳುವುದು ಬಹುಮುಖ್ಯ. ಅದರಲ್ಲೂ ವಾಹನಗಳನ್ನು ರಸ್ತೆಗಿಳಿಸಿದಾಗ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೇ ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಹಲವಾರು ಪ್ರಯೋಜನಗಳಿದ್ದು, ಟ್ರಾಫಿಕ್‌ನಲ್ಲಿ ವಾಹನಗಳು ಸುಗಮವಾಗಿ ಚಲಿಸುತ್ತದೆ. ಸದ್ಯ ಭಾರತದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಭಾರೀ ದಂಡ ತೆರಬೇಕಾಗುತ್ತದೆ. ಇದರೊಂದಿಗೆ ಕೆಲವು ಪ್ರಕರಣಗಳಲ್ಲಿ ನಿಯಮ ಉಲ್ಲಂಘಿಸಿದ ವ್ಯಕ್ತಿ ಜೈಲು ಪಾಲಾಗುವ ಸಾಧ್ಯತೆಯೂ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್- ಸಂಚಾರ ನಿಮಯ ಉಲ್ಲಂಘನೆಯ ದಂಡದ ವಿವರ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ- ಕಡಬದ ಯುವಕನ ವಿರುದ್ಧ ದೂರು ದಾಖಲು

(ನ್ಯೂಸ್ ಕಡಬ)newskadaba.com ಪುತ್ತೂರು, ಜು. 19. ವಿದ್ಯಾರ್ಥಿನಿಗೆ ಶಾಲೆಗೆ ಹೋಗುವ ಸಂಧರ್ಭದಲ್ಲಿ ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಗೆ ಸಂಬಂಧಿಸಿದಂತೆ ಓರ್ವನ ವಿರುದ್ಧ ದೂರು ದಾಖಲಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಆರೋಪಿ ಬೆಳಂದೂರಿನ ಪ್ರವೀಣ್ ಯಾನೆ ಸೀತಾರಾಮ ಎಂಬವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.    

ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ- ಕಡಬದ ಯುವಕನ ವಿರುದ್ಧ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಅರೆಕಾಲಿಕ ಉಪನ್ಯಾಸಕರಿಗೆ ಬಿಗ್ ಶಾಕ್..! – 4 ತಿಂಗಳಿನಿಂದ ವೇತನ ಇಲ್ಲ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 19. ರಾಜ್ಯದ ಸರ್ಕಾರಿ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರಿಗೆ ಕಳೆದ 4 ತಿಂಗಳಿಂದ ವೇತನವಿಲ್ಲದೆ ಕಂಗೆಟ್ಟಿದ್ದು, ಮಾರ್ಚ್ ತಿಂಗಳಿನಿಂದ 1,250 ಅರೆಕಾಲಿಕ ಉಪನ್ಯಾಸಕರಿಗೆ ವೇತನ ನೀಡಿಲ್ಲ ಎಂದು ಅರೆಕಾಲಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರಶಾಂತ್ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಅರೆಕಾಲಿಕ ಉಪನ್ಯಾಸಕರಿಗೆ ತಿಂಗಳಿಗೆ 12,500 ರೂ. ವೇತನ ಕೊಡಲಾಗುತ್ತಿದ್ದು, ಕಳೆದ ಮಾರ್ಚ್ ನಿಂದ ವೇತನ ಪಾವತಿಯಾಗಿಲ್ಲ. ಅರೆಕಾಲಿಕ ಉಪನ್ಯಾಸಕರು ವಾರಕ್ಕೆ 10ರಿಂದ 12 ಗಂಟೆ ಪಾಠದಂತೆ ತಿಂಗಳಿಗೆ ಕನಿಷ್ಠ

ಅರೆಕಾಲಿಕ ಉಪನ್ಯಾಸಕರಿಗೆ ಬಿಗ್ ಶಾಕ್..! – 4 ತಿಂಗಳಿನಿಂದ ವೇತನ ಇಲ್ಲ Read More »

ಕರ್ನಾಟಕ

ಮಂಗಳೂರು: ಚಪ್ಪಲಿ ಹುಡುಕಿಕೊಡಿ ಎಂದು 112ಗೆ ಕರೆ ಮಾಡಿದ ವ್ಯಕ್ತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.18. ಸಭಾಂಗಣದ ಹೊರಗೆ ಇಟ್ಟಿದ್ದ ಚಪ್ಪಲಿ ಕಳವಾದ ಬಗ್ಗೆ 112 ತುರ್ತು ಸ್ಪಂದನಕ್ಕೆ ಕರೆ ಮಾಡಿ ಪೊಲೀಸರಿಂದ ಹುಡುಕಾಟ ಮಾಡಿಸಿದ ಘಟನೆ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಯುವಕನೋರ್ವ ಶರವು ದೇವಸ್ಥಾನ ಸಮೀಪದ ಸಭಾಂಗಣಕ್ಕೆ ಬಂದಿದ್ದ. ಒಳಗೆ ಹೋಗುವಾಗ ತೆಗೆದಿಟ್ಟಿದ್ದ ಚಪ್ಪಲಿ ಹೊರಗೆ ಬರುವಾಗ ಇರಲಿಲ್ಲ. ಹುಡುಕಾಟ ನಡೆಸಿದರೂ ಪ್ರಯೋಜನವಾಗದೆ ಕೊನೆಗೆ 112 ಗೆ ಕರೆ ಮಾಡಿದ್ದಾನೆ. ಏನೋ ಗೊಂದಲ ಆಗಿರಬಹುದೆಂದು ಪೊಲೀಸರು ಸ್ಥಳಕ್ಕೆ ಆಗಮಿಸಿದರೆ ಚಪ್ಪಲಿ ಕಳವಾಗಿರುವುದು ಗೊತ್ತಾಗಿದೆ. ಬಳಿಕ ಪೊಲೀಸರು

ಮಂಗಳೂರು: ಚಪ್ಪಲಿ ಹುಡುಕಿಕೊಡಿ ಎಂದು 112ಗೆ ಕರೆ ಮಾಡಿದ ವ್ಯಕ್ತಿ Read More »

ಕರಾವಳಿ

ಯೂಟ್ಯೂಬರ್‌ ಮೇಲೆ ಐಟಿ ದಾಳಿ- 24 ಲಕ್ಷ ರೂ. ನಗದು ಪತ್ತೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 18. ಯೂಟ್ಯೂಬ್‌ ಚಾನೆಲ್‌ಗಳಿಂದ ಜನಪ್ರಿಯ ಯೂಟ್ಯೂಬರ್‌ಗಳು ಕೋಟಿಗಟ್ಟಲೆ ಆದಾಯ ಗಳಿಸುತ್ತಿರುವ ಬೆನ್ನಲ್ಲೇ ಇದೀಗ ಯುಟ್ಯೂಬ್‌ ಚಾನೆಲ್‌ ಮಾಲೀಕರ ಮನೆ ಮೇಲೆ ಐಟಿ ದಾಳಿಗಳೂ ನಡೆಯುತ್ತಿವೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಯೂಟ್ಯೂಬ್‌ ಚಾನೆಲ್‌ ಒಂದನ್ನು ನಡೆಸುವ ಉತ್ತರ ಪ್ರದೇಶದ ಯೂಟ್ಯೂಬರ್ ಒಬ್ಬರ ಮನೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ 24 ಲಕ್ಷ ರೂ. ನಗದು ಪತ್ತೆಯಾಗಿದೆ. ತಸ್ಲೀಮ್‌ ಎಂಬ ವ್ಯಕ್ತಿ ಹಲವು ವರ್ಷಗಳಿಂದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಸುಮಾರು

ಯೂಟ್ಯೂಬರ್‌ ಮೇಲೆ ಐಟಿ ದಾಳಿ- 24 ಲಕ್ಷ ರೂ. ನಗದು ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಂಗಳೂರಿನಲ್ಲಿ ಮತ್ತೊಂದು `ಡಬಲ್ ಮರ್ಡರ್’ ➤ ಮಗನಿಂದಲೇ ತಂದೆ, ತಾಯಿಯ ಬರ್ಬರ ಹತ್ಯೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.18. ಬೆಂಗಳೂರಿನಲ್ಲಿ ಮತ್ತೊಂದು ಡಬಲ್ ಮರ್ಡರ್ ಪ್ರಕರಣ ಬೆಳಕಿಗೆ ಬಂದಿದ್ದು, ಕುಡಿದ ಮತ್ತಿನಲ್ಲಿ ಸ್ವಂತ ಮಗನೇ ತಂದೆ, ತಾಯಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ವಾಸವಾಗಿದ್ದ ಮಂಗಳೂರು ಮೂಲದ ವೃದ್ದ ದಂಪತಿಯನ್ನು ಸ್ವಂತ ಮಗನೇ ಹತ್ಯೆ ಮಾಡಿದ್ದಾನೆ. ಮಗ ಶರತ್ ಎಂಬಾತ ತನ್ನ ತಂದೆ ಭಾಸ್ಕರ್ ಹಾಗೂ ತಾಯಿ ಶಾಂತಾಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಮತ್ತೊಂದು `ಡಬಲ್ ಮರ್ಡರ್’ ➤ ಮಗನಿಂದಲೇ ತಂದೆ, ತಾಯಿಯ ಬರ್ಬರ ಹತ್ಯೆ Read More »

ಕರ್ನಾಟಕ
Scroll to Top