News Kadaba

ಡ್ರೈನೇಜ್ ನಲ್ಲಿ ಮಡಚಿದ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 19. ಮನೆಯ ಹಿಂದುಗಡೆ ಇರುವ ಡ್ರೈನೇಜ್ ಪಿಟ್‌‌ ನಲ್ಲಿ ಮಹಿಳೆಯ ಮೃತದೇಹವೊಂದು ಪತ್ತೆಯಾದ ಘಟನೆ ಮುಲ್ಕಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕಲ್ಲಾಪು ನಿವಾಸಿ ನಾಗಮ್ಮ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಪಡುಪಣಂಬೂರು ಪಂಚಾಯತ್ ವ್ಯಾಪ್ತಿಯ ಪುಷ್ಪರಾಜ್ ಅಮೀನ್ ಎಂಬವರ ಮನೆಯ ಹಿಂದುಗಡೆ ಇರುವ ಡ್ರೈನೇಜ್ ಪಿಟ್ ನಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಇನ್ನು ಮಹಿಳೆ ನಾಗಮ್ಮ ಕಳೆದ 4 ತಿಂಗಳ ಹಿಂದೆ ಕಲ್ಲಾಪಿನಿಂದ ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ.   ಮನೆ ಮಾಲಕ […]

ಡ್ರೈನೇಜ್ ನಲ್ಲಿ ಮಡಚಿದ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾರು ಹತ್ತಿಸಿ ಮೂವರು ಮಕ್ಕಳ ಕೊಲೆಗೆ ಯತ್ನ – ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಲಕ್ನೋ, ಜು.19. ನಡೆದುಕೊಂಡು ಹೋಗುತ್ತಿದ್ದ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಉತ್ತರಪ್ರದೆಶದ ಲಕ್ನೋದಲ್ಲಿ ನಡೆದಿದೆ. ಘಟನೆಯ ದೃಶ್ಯವು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸದ್ಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚಾಲಕನ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇಬ್ಬರು ಹುಡುಗರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಓರ್ವ ಚಿಕ್ಕ ಮಗುವನ್ನು ಎತ್ತಿಕೊಂಡಿದ್ದಾನೆ. ಹೀಗೆ ಅವರು ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿರುವಾಗ ಏಕಾಏಕಿ ಎದುರಿನಿಂದ ಬಂದ ಕಾರನ್ನು ಚಾಲಕ

ಕಾರು ಹತ್ತಿಸಿ ಮೂವರು ಮಕ್ಕಳ ಕೊಲೆಗೆ ಯತ್ನ – ವಿಡಿಯೋ ವೈರಲ್ Read More »

ರಾಷ್ಟ್ರೀಯ ನ್ಯೂಸ್

ಬೈಕ್ ಸ್ಕಿಡ್ ಆಗಿ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 19. ಬೈಕ್ ಸ್ಕಿಡ್ ಆಗಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಅಡ್ಯಾರ್ ಬಳಿಯ ಸಹ್ಯಾದ್ರಿ ಕಾಲೇಜು ಮುಂಭಾಗದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಕೇರಳ ಮೂಲದ ಮಹಮ್ಮದ್ ನಶತ್(21) ಎಂದು ಗುರುತಿಸಲಾಗಿದೆ. ಈತ ಪಡೀಲ್ ಕಡೆಯಿಂದ ವಳಚ್ಚಿಲ್ ಕಾಲೇಜು ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ, ಡಿವೈಡರ್ ಬಡಿದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ ಎನ್ನಲಾಗಿದೆ.  

ಬೈಕ್ ಸ್ಕಿಡ್ ಆಗಿ ಯುವಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಜು. 19. ಬೀಚ್ ನಲ್ಲಿ ಈಜಲು ಹೋಗಿ ಸಮುದ್ರ ಪಾಲಾಗಿದ್ದ ಗದಗ ಮೂಲದ ಯುವಕ ಪೀರ್ ಸಾಬ್ ನ ಮೃತದೇಹ ಕಂಚುಗೋಡಯ ಎಂಬಲ್ಲಿ ಪತ್ತೆಯಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಿವಾಸಿಯಾಗಿರುವ ಪೀರ್ ಸಾಬ್(21), 2 ತಿಂಗಳ ಹಿಂದೆ ಗಾರೆ ಕೆಲಸಕ್ಕೆ ಬಂದಿದ್ದು ಕಾಪು ತಾಲ್ಲೂಕಿನ ಮುದರಂಗಡಿಯಲ್ಲಿ ವಾಸವಾಗಿದ್ದನು. ಮಂಗಳವಾರ ಸಿರಾಜ್ ಎಂಬವರ ಜೊತೆ ಲಾರಿಯಲ್ಲಿ ಪೀರ್ ಸಾಬ್ ಹಾಗೂ ಸ್ನೇಹಿತ ಸಿದ್ಧಪ್ಪ ಊರಿಗೆ ಹೊರಟಿದ್ದರು. ಮಧ್ಯಾಹ್ನ ಸುಮಾರು 2.30ರ ಹೊತ್ತಿಗೆ

ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ Read More »

ಕರಾವಳಿ

ಬ್ಯಾರಿಕೇಡ್ ಗೆ ಹಿಂದಿನಿಂದ ಢಿಕ್ಕಿ ಹೊಡೆದ ಟೆಂಪೋ ➤ ನಾಲ್ವರಿಗೆ ಗಂಭೀರ ಗಾಯ

(ನ್ಯೂಸ್ ಕಡಬ)newskadaba.com ಉಡುಪಿ, ಜು.19. ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿಯ ಹೊಟೇಲ್ ಬಳಿ ಹೆದ್ದಾರಿಯಲ್ಲಿ ಗಿಡಗಳ ಆರೈಕೆ ಮಾಡುತ್ತಿದ್ದ ಕಾರ್ಮಿಕರು ಮತ್ತು ಟ್ಯಾಕ್ಟರ್‌ಗೆ ಮಿನಿ ಟೆಂಪೋ ಢಿಕ್ಕಿ ಹೊಡೆದು ಟೆಂಪೋ ಚಾಲಕ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ಉಡುಪಿಯಲ್ಲಿ ವರದಿಯಾಗಿದೆ. ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ಶಿಲ್ಪಾ (35), ಮಲ್ಲಪ್ಪ (42) ಮತ್ತು ರೇಣುಕಾ (34) ಮತ್ತು ಟೆಂಪೋ ಚಾಲಕ ಚರಣ್ ರಾಜ್ ಗಾಯಗೊಂಡಿದ್ದು, ಗಾಯಾಳುಗಳ ಪೈಕಿ ಶಿಲ್ಪಾ ಹಾಗೂ ಚಾಲಕನಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.

ಬ್ಯಾರಿಕೇಡ್ ಗೆ ಹಿಂದಿನಿಂದ ಢಿಕ್ಕಿ ಹೊಡೆದ ಟೆಂಪೋ ➤ ನಾಲ್ವರಿಗೆ ಗಂಭೀರ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಗುಡ್ಡ ಜರಿತ – ಸುಳ್ಯ-ಪಾಣತ್ತೂರು ಅಂತರಾಜ್ಯ ರಸ್ತೆ ಬಂದ್

(ನ್ಯೂಸ್ ಕಡಬ)newskadaba.com ಸುಳ್ಯ, ಜು.19. ಭಾರಿ ಪ್ರಮಾಣದಲ್ಲಿ ಮಣ್ಣು ಹಾಗೂ ಮರ ಸಮೇತ ಗುಡ್ಡ ಜರಿದು ರಸ್ತೆ ಬಂದ್ ಆಗಿರುವ ಘಟನೆ ಸುಳ್ಯ-ಕಲ್ಲಪ್ಪಳ್ಳಿ-ಪಾಣತ್ತೂರು ಅಂತಾರಾಜ್ಯ ರಸ್ತೆಯ ಬಾಟೋಳಿ ಎಂಬಲ್ಲಿ ನಡೆದಿದೆ. ವಾಹನ ಸಂಚಾರಕ್ಕೆ ತಡೆ ಉಂಟಾಗಿದ್ದು ಮತ್ತು ನಡೆದು ಹೋಗಲು ಸಾಧ್ಯವಿಲ್ಲದ‌ ರೀತಿಯಲ್ಲಿ ರಸ್ತೆ ಬಂದ್ ಆಗಿದೆ ಎನ್ನಲಾಗಿದೆ. ರಸ್ತೆಯಲ್ಲಿ ತಾತ್ಕಾಲಿಕವಾಗಿ ಬಡ್ಡಡ್ಕ-ರಂಗತ್ತಮಲೆ-ಕಲ್ಲಪಳ್ಳಿ ವಾಹನ ಪ್ರಯಾಣಿಸಬಹುದು ಎಂದು ವರದಿ ತಿಳಿಸಿದೆ.

ಗುಡ್ಡ ಜರಿತ – ಸುಳ್ಯ-ಪಾಣತ್ತೂರು ಅಂತರಾಜ್ಯ ರಸ್ತೆ ಬಂದ್ Read More »

ಕರಾವಳಿ

ಗೃಹಲಕ್ಷ್ಮೀ ಯೋಜನೆಗೆ ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು..! – ಅರ್ಜಿ ಸಲ್ಲಿಕೆ ಹೇಗೆ…? ಇಲ್ಲಿದೆ ಮಾಹಿತಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜುಲೈ 19. ಇಂದಿನಿಂದಲೇ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಶುರುವಾಗಲಿದ್ದು, ರಾಜ್ಯದ ಮಹಿಳೆಯರು ಕಾರು ಕುಳಿತಿರುವ ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ಸಿಗಲಿದೆ. ಇಂದು ಸಂಜೆ 5 ಗಂಟೆಗೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇಂದಿನಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ಆಗಸ್ಟ್ ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ 2 ಸಾವಿರ ಹಣ ಜಮೆಯಾಗಲಿದೆ. ಇನ್ನು ಅರ್ಜಿ ಸಲ್ಲಿಸುವುದು ಎಲ್ಲಿ ? ಏನೆಲ್ಲ ದಾಖಲೆಗಳು ಬೇಕು ಎನ್ನುವ

ಗೃಹಲಕ್ಷ್ಮೀ ಯೋಜನೆಗೆ ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು..! – ಅರ್ಜಿ ಸಲ್ಲಿಕೆ ಹೇಗೆ…? ಇಲ್ಲಿದೆ ಮಾಹಿತಿ Read More »

ರಾಷ್ಟ್ರೀಯ ನ್ಯೂಸ್

ಮರವಂತೆ ಬೀಚ್ ನಲ್ಲಿ ಸಮುದ್ರ ಪಾಲದ ಯುವಕ..!

(ನ್ಯೂಸ್ ಕಡಬ)newskadaba.com ಕುಂದಾಪುರ, ಜು.17. ಮರವಂತೆ ಬೀಚ್ ನಲ್ಲಿ ಯುವಕನೋರ್ವ ಸಮುದ್ರಪಾಲಾದ ಘಟನೆ ಕುಂದಾಪುರದಲ್ಲಿ ನಡೆದಿದೆ. ಸಮುದ್ರಪಾಲಾದ ಯುವಕನನ್ನು ಗದಗ ಜಿಲ್ಲೆಯ ಮುಂಡ್ರಂಗಿ ತಾಲೂಕು ಮೇವಂಡಿ ಗ್ರಾಮದ ಪೀರ್ ನದಾಫ್ ಎಂದು ಗುರುತಿಸಲಾಗಿದೆ. ಮೂವರು ಯುವಕರು ಬೀಚ್‌ ನಲ್ಲಿ ಈಜಲು ಹೋದಾಗ ಘಟನೆ ಸಂಭವಿಸಿದೆ. ನೀರಿಗೆ ಈಜಲು ಇಳಿದಿದ್ದು, ಈ ವೇಳೆ ಅಲೆಯ ರಭಸಕ್ಕೆ ಓರ್ವ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ. ಬಳಿಕ ಸ್ಥಳೀಯರ ತಂಡ ಹಾಗೂ ಅಗ್ನಿಶಾಮಕ ದಳ ಮತ್ತು ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು ಹಾಗೂ ಗಂಗೊಳ್ಳಿ

ಮರವಂತೆ ಬೀಚ್ ನಲ್ಲಿ ಸಮುದ್ರ ಪಾಲದ ಯುವಕ..! Read More »

ಕರಾವಳಿ, ಕ್ರೈಮ್ ನ್ಯೂಸ್

ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಕಾರ್ಕಳ, ಜು. 19. ವಿದ್ಯಾರ್ಥಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದಲ್ಲಿ ವರದಿಯಾಗಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿ ಕೌಶಿಕ್(17) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಕೌಶಿಕ್ ಬಜಗೋಳಿಯಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.  

ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ವಿವಾಹಿತ ಯುವತಿ ನೇಣು ಬಿಗಿದು ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು. 19. ವಿವಾಹಿತ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಬೇಳದಲ್ಲಿ ಸಂಭವಿಸಿದೆ. ಮೃತರನ್ನು ದಾಮೋದರ ಪುತ್ರಿ ಅಶ್ವತಿ(25) ಎಂದು ಗುರುತಿಸಲಾಗಿದೆ. ಅಶ್ವಥಿಯವರ ಮೃತದೇಹ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಈ ಕೃತ್ಯ ನಡೆದಿದೆ. ತಾಯಿ ಸುಜಾತರವರು ಮನೆ ಸಮೀಪದ ಬೀಡಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮಧ್ಯಾಹ್ನ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಬಾಗಿಲು ಬಡಿದರೂ ತೆರೆಯದಿದ್ದುದರಿಂದ

ವಿವಾಹಿತ ಯುವತಿ ನೇಣು ಬಿಗಿದು ಆತ್ಮಹತ್ಯೆ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top