ಗುಡ್ಡ ಜರಿತ – ಸುಳ್ಯ-ಪಾಣತ್ತೂರು ಅಂತರಾಜ್ಯ ರಸ್ತೆ ಬಂದ್

(ನ್ಯೂಸ್ ಕಡಬ)newskadaba.com ಸುಳ್ಯ, ಜು.19. ಭಾರಿ ಪ್ರಮಾಣದಲ್ಲಿ ಮಣ್ಣು ಹಾಗೂ ಮರ ಸಮೇತ ಗುಡ್ಡ ಜರಿದು ರಸ್ತೆ ಬಂದ್ ಆಗಿರುವ ಘಟನೆ ಸುಳ್ಯ-ಕಲ್ಲಪ್ಪಳ್ಳಿ-ಪಾಣತ್ತೂರು ಅಂತಾರಾಜ್ಯ ರಸ್ತೆಯ ಬಾಟೋಳಿ ಎಂಬಲ್ಲಿ ನಡೆದಿದೆ.

ವಾಹನ ಸಂಚಾರಕ್ಕೆ ತಡೆ ಉಂಟಾಗಿದ್ದು ಮತ್ತು ನಡೆದು ಹೋಗಲು ಸಾಧ್ಯವಿಲ್ಲದ‌ ರೀತಿಯಲ್ಲಿ ರಸ್ತೆ ಬಂದ್ ಆಗಿದೆ ಎನ್ನಲಾಗಿದೆ. ರಸ್ತೆಯಲ್ಲಿ ತಾತ್ಕಾಲಿಕವಾಗಿ ಬಡ್ಡಡ್ಕ-ರಂಗತ್ತಮಲೆ-ಕಲ್ಲಪಳ್ಳಿ ವಾಹನ ಪ್ರಯಾಣಿಸಬಹುದು ಎಂದು ವರದಿ ತಿಳಿಸಿದೆ.

error: Content is protected !!
Scroll to Top