News Kadaba

ಚಂದ್ರನ ಕಕ್ಷೆ ಪ್ರವೇಶಿಸಿರುವ ನೌಕೆ..! –  ಸೆರೆ ಹಿಡಿದ ಮೊದಲ ಚಿತ್ರ ಬಿಡುಗಡೆ

(ನ್ಯೂಸ್ ಕಡಬ)newskadaba.com ನವದೆಹಲಿ, ಆ.07. ಚಂದ್ರಯಾನ-3 ಚಂದ್ರನ ಕಕ್ಷೆ ಪ್ರವೇಶಿಸಿರುವ ಬಾಹ್ಯಾಕಾಶ ನೌಕೆ ಸೆರೆ ಹಿಡಿದಿರುವ ಚಂದ್ರನ ಮೊದಲ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಿಡುಗಡೆಗೊಳಿಸಿದೆ ಎಂದು ವರದಿ ತಿಳಿಸಿದೆ. ಇಸ್ರೋ ಚಂದ್ರನ ಫೋಟೋವನ್ನು ಎಕ್ಸ್‌(ಟ್ವಿಟರ್‌)ನಲ್ಲಿ ಹಂಚಿಕೊಂಡಿದ್ದು, ಇದು ನೌಕೆ ಕಕ್ಷೆ ಪ್ರವೇಶಿಸಿದ ಸಂದರ್ಭದಲ್ಲಿ ಸೆರೆ ಹಿಡಿಯಲಾದ ಫೋಟೋ ಎಂದು ಹೇಳಿದೆ. ಆ. 05ರಂದು ಚಂದ್ರನ ಆರ್ಬಿಟ್ ಅಳವಡಿಕೆ (LOI) ಸಮಯದಲ್ಲಿ ಚಂದ್ರಯಾನ -3 ಬಾಹ್ಯಾಕಾಶ ನೌಕೆಯಿಂದ ಚಂದ್ರನನ್ನು ವೀಕ್ಷಿಸಲಾಗಿದೆ ಎಂದು ಮಿಷನ್‌ನ ಅಧಿಕೃತ […]

ಚಂದ್ರನ ಕಕ್ಷೆ ಪ್ರವೇಶಿಸಿರುವ ನೌಕೆ..! –  ಸೆರೆ ಹಿಡಿದ ಮೊದಲ ಚಿತ್ರ ಬಿಡುಗಡೆ Read More »

ರಾಷ್ಟ್ರೀಯ ನ್ಯೂಸ್

‘ಸರ್ಕಾರಿ ಆಸ್ಪತ್ರೆ’ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿಯರಿಗೆ AIDS ಸೋಂಕು..!

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಆ. 07. ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕಳೆದ 16 ತಿಂಗಳಲ್ಲಿ 60ಕ್ಕೂ ಹೆಚ್ಚು ಗರ್ಭಿಣಿಯರಿಗೆ ಎಚ್‌ಐವಿ ಪಾಸಿಟಿವ್ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ತಿಳಿಸಿದೆ. ಮೀರತ್ ನ ಲಾಲಾ ಲಜಪತ್ ರಾಯ್ ವೈದ್ಯಕೀಯ ಕಾಲೇಜಿನ ಎ.ಆರ್.ಟಿ. ಕೇಂದ್ರದ ವರದಿಯ ನಂತರ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬೆಳಕಿಗೆ ಬಂದಿವೆ. ಲಾಲಾ ಲಜಪತ್ ರಾಯ್ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳ ಹೆರಿಗೆಗಾಗಿ ಬಂದ 81 ಗರ್ಭಿಣಿ ಮಹಿಳೆಯರಲ್ಲಿ ಎಚ್‌ಐವಿ ದೃಢಪಟ್ಟಿದ್ದು,

‘ಸರ್ಕಾರಿ ಆಸ್ಪತ್ರೆ’ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿಯರಿಗೆ AIDS ಸೋಂಕು..! Read More »

ರಾಷ್ಟ್ರೀಯ ನ್ಯೂಸ್

ಬಹುಮಹಡಿ ಕಟ್ಟಡದಿಂದ ಹಾರಿ ಬಿಲ್ಡರ್ ಆತ್ಮಹತ್ಯೆ..!

(ನ್ಯೂಸ್ ಕಡಬ)newskadaba.com ಮಂಗಳೂರು, ಆ.07. ಬಹುಮಹಡಿ ಕಟ್ಟಡದಿಂದ ಹಾರಿ ಬಿಲ್ಡರ್ ಓರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಿಲ್ಡರ್ ಮೋಹನ್ ಅಮೀನ್ (66) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ. 17 ಮಹಡಿಯಲ್ಲಿ ವಾಸವಿದ್ದ ಅವರು ಅಪಾರ್ಟ್‌ಮೆಂಟ್ ನ ಟೆರೆಸ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಮೋಹನ್ ಅಮೀನ್ ಅವರ ಆತ್ಮಹತ್ಯೆ ಹಿಂದಿನ ನಿಖರ ಕಾರಣ ತಿಳಿದು ಬಂದಿಲ್ಲ. ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಬಹುಮಹಡಿ ಕಟ್ಟಡದಿಂದ ಹಾರಿ ಬಿಲ್ಡರ್ ಆತ್ಮಹತ್ಯೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು..!

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 07. ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕರವರು ಕಾಲು ಜಾರಿ ಬಿದ್ದು ಬೆನ್ನು ಮೂಳೆಗೆ ಪೆಟ್ಟಾಗಿದ್ದು, ಅವರನ್ನು ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮೂಲತಃ ತುಮಕೂರಿನ ಗುಬ್ಬಿಯವರಾದ ತಿಮ್ಮಕ್ಕ ಅವರು ಮಕ್ಕಳಿಲ್ಲದ ಕಾರಣ ಪತಿಯೊಂದಿಗೆ ಸೇರಿ ಮರಗಳನ್ನು ನೆಟ್ಟು ಬೆಳೆಸಿದ್ದು, ದಂಪತಿಗಳು ಮೊದಲ ವರ್ಷದಲ್ಲಿ 4 ಕಿ.ಮೀ ರಸ್ತೆಯ ಎರಡು ಬದಿಗಳಲ್ಲಿ 10 ಆಲದ ಸಸಿಗಳನ್ನು ನೆಟ್ಟು ಬೆಳೆಸಲು ಆರಂಭಿಸಿದ್ದರು. ಇಲ್ಲಿಯವರೆಗೂ ತಿಮ್ಮಕ್ಕರವರು 8 ಸಾವಿರಕ್ಕೂ

ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು..! Read More »

ಕರ್ನಾಟಕ

ಕೊಂಬೆ ಕಡಿಯುವಾಗ ವಿದ್ಯುತ್ ಸ್ಪರ್ಶವಾಗಿ ವ್ಯಕ್ತಿ ಮರದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಚಿಕ್ಕಮಗಳೂರು, ಆ.07. ಮರದ ಕೊಂಬೆ ಕಡಿಯಲು ಹೋಗಿದ್ದ ವ್ಯಕ್ತಿ ವಿದ್ಯುತ್ ತಂತಿ ಸ್ಪರ್ಶವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಯಿಲುಮನೆ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಲೋಕಪ್ಪ ಗೌಡ (56) ಎಂದು ಗುರುತಿಸಲಾಗಿದೆ. ವಿದ್ಯುತ್ ತಂತಿ ತಗುಲಿ ಮರದ ಮೇಲೆಯೇ ಪ್ರಾಣ ಬಿಟ್ಟಿದ್ದು, ವಿದ್ಯುತ್ ತಂತಿಗೆ ಮರದ ಕೊಂಬೆಗಳು ತಗಲುತ್ತಿದೆ ಎಂದು ಮರ ಕಡಿಯಲು ಹೋಗಿದ್ದ ವೇಳೆ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ

ಕೊಂಬೆ ಕಡಿಯುವಾಗ ವಿದ್ಯುತ್ ಸ್ಪರ್ಶವಾಗಿ ವ್ಯಕ್ತಿ ಮರದಲ್ಲೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮರದಿಂದ ಬಿದ್ದು ಪೊಲೀಸ್ ಪೇದೆ ಮೃತ್ಯು

(ನ್ಯೂಸ್ ಕಡಬ) newskadaba.com ಕೊಡಗು, ಆ. 07. ಮರದಿಂದ ಬಿದ್ದು ಪೊಲೀಸ್​ ಸಿಬ್ಬಂದಿಯೋರ್ವರು ಮೃತಪಟ್ಟ ಘಟನೆ ಕುಶಾಲನಗರ ತಾಲೂಕಿನ ಕಾನ್​ ಬೈಲ್​ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಸಿಬ್ಬಂದಿಯನ್ನು ಲೋಕೇಶ್ (40)  ಎಂದು ಗುರುತಿಸಲಾಗಿದೆ. ಲೋಕೇಶ್​ ಅವರು ಮಾವಿನ ಮರ ಕಸಿ ಮಾಡಲು ಮರ ಏರಿದ್ದ ಸಮಯದಲ್ಲಿ ಬಿಪಿ ಕಡಿಮೆಯಾಗಿ, ತಲೆ ತಿರುಗಿ ಮರದಿಂದ ಕಾಂಕ್ರೀಟ್ ರೋಡ್​ಗೆ ಬಿದ್ದ ಪರಿಣಾಮ​ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಲೋಕೇಶ್​ ಅವರು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರಿಗೆ 10 ವಷ೯ಗಳಿಂದ

ಮರದಿಂದ ಬಿದ್ದು ಪೊಲೀಸ್ ಪೇದೆ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕರ್ನಾಟಕದ ನೂತನ DG ಹಾಗೂ IGP ಯಾಗಿ ಡಾ| ಅಲೋಕ್ ಕುಮಾರ್ ನೇಮಕ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.06. ಪ್ರವೀಣ್ ಸೂದ್ ಅವರು ಸಿಬಿಐಗೆ ನೇಮಕಗೊಂಡ ನಂತರ, ಅವರ ಸ್ಥಾನಕ್ಕೆ ರಾಜ್ಯ ಸರ್ಕಾರದಿಂದ ಡಾ.ಅಲೋಕ್ ಮೋಹನ್ ಅವರನ್ನು ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ತಾತ್ಕಾಲಿಕ ನೇಮಕಾತಿಯನ್ನು, ಈಗ ಅಧಿಕೃತಗೊಳಿಸಿ ಆದೇಶಿಸಿದೆ ಎನ್ನಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಡಾ.ಅಲೋಕ್ ಮೋಹನ್, ಐಪಿಎಸ್ (ಕೆಎನ್: 1987) ಪೊಲೀಸ್ ಮಹಾನಿರ್ದೇಶಕರು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರು, ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್, ರಾಜ್ಯ ವಿಪತ್ತು

ಕರ್ನಾಟಕದ ನೂತನ DG ಹಾಗೂ IGP ಯಾಗಿ ಡಾ| ಅಲೋಕ್ ಕುಮಾರ್ ನೇಮಕ Read More »

ಕರ್ನಾಟಕ

ಬೆಳ್ತಂಗಡಿ: ಅನೈತಿಕ ಪೊಲೀಸ್ ಗಿರಿ ಪ್ರಕರಣ – ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.05. ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ನಡೆದ ಅನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನು ಅವಿನಾಶ್ ಧರ್ಮಸ್ಥಳ, ನಂದೀಪ್ ಧರ್ಮಸ್ಥಳ ಹಾಗೂ ಅಕ್ಷತ್ ಉಪ್ಪಿನಂಗಡಿ ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಬಸ್ ನಿಲ್ದಾಣ ಬಳಿ, ರಿಕ್ಷಾ ಚಾಲಕ ಮಹಮ್ಮದ್ ಆಸೀಕ್ ಎಂಬವರ ಮೇಲೆ ಹಲ್ಲೆಯಾಗಿದ್ದು, ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ

ಬೆಳ್ತಂಗಡಿ: ಅನೈತಿಕ ಪೊಲೀಸ್ ಗಿರಿ ಪ್ರಕರಣ – ಮೂವರು ಆರೋಪಿಗಳ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಬ್ರಿಟನ್‌ ನಲ್ಲಿ ಆತಂಕ ಸೃಷ್ಟಿಸಿದ ಕೊರೊನಾ ರೂಪಾಂತರಿ..!

(ನ್ಯೂಸ್ ಕಡಬ)newskadaba.com ಬ್ರಿಟನ್, ಆ.05. ಬ್ರಿಟನ್‌ ನಲ್ಲಿ ಕೊರೊನಾ ಹೊಸ ರೂಪಾಂತರ ಜನರಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿಸಿದ್ದು, ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (ಯುಕೆಎಚ್‌ಎಸ್‌ಎ) ಪ್ರಕಾರ, ಇಲ್ಲಿ ಪ್ರತಿ 7 ರೋಗಿಗಳಲ್ಲಿ ಒಬ್ಬರು ಈ ಹೊಸ ರೂಪಾಂತರಿ ಸೋಂಕಿಗೆ ಒಳಗಾಗಿದ್ದಾರೆ. ಇದು EG.5.1 ಎಂದು ಹೆಸರಿಸಲಾದ ಒಮಿಕ್ರಾನ್ ನಿಂದ ಪಡೆದ ರೂಪಾಂತರಿಯಾಗಿದೆ. ಏಜೆನ್ಸಿಯ ಪ್ರಕಾರ, ಈ ಹೊಸ ರೂಪಾಂತರದ ಹೆಚ್ಚಿನ ಪ್ರಕರಣಗಳು ಏಷ್ಯಾದಲ್ಲಿ ಕಂಡುಬರುತ್ತಿವೆ. ಇದು ಇಲ್ಲಿವರೆಗೆ ಕಾಣಿಸಿರುವ ಕೊರೊನಾದ 2ನೇ ಅತ್ಯಂತ ಅಪಾಯಕಾರಿ ರೂಪಾಂತರಿಯಾಗಿದೆ ಎಂದು

ಬ್ರಿಟನ್‌ ನಲ್ಲಿ ಆತಂಕ ಸೃಷ್ಟಿಸಿದ ಕೊರೊನಾ ರೂಪಾಂತರಿ..! Read More »

ರಾಷ್ಟ್ರೀಯ ನ್ಯೂಸ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ 3 ವರ್ಷ ಜೈಲು..!

(ನ್ಯೂಸ್ ಕಡಬ)newskadaba.com ಲಾಹೋರ್, ಆ.05. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ, ಇಸ್ಲಾಮಾಬಾದ್ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ ಎಂದು ಖಾಸಗಿ ಮಾಧ್ಯಮ ವರದಿ ಮಾಡಿದೆ. ಇಮ್ರಾನ್‌ ಖಾನ್‌ ಗೆ ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು ಐದು ವರ್ಷಗಳ ಕಾಲ ಸಕ್ರಿಯ ರಾಜಕೀಯದಲ್ಲಿ ಭಾಗವಹಿಸದಂತೆ ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯ ನಿರ್ಬಂಧಿಸಿದೆ. ಪಾಕಿಸ್ತಾನದ ಹೈಕೋರ್ಟ್ ಕೆಲ ನ್ಯಾಯಾಲಯದ ತೀರ್ಪ ನ್ನು ತಳ್ಳಿ ಹಾಕಿ ಇಮ್ರಾನ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ 3 ವರ್ಷ ಜೈಲು..! Read More »

ರಾಷ್ಟ್ರೀಯ ನ್ಯೂಸ್
Scroll to Top