ಕರ್ನಾಟಕದ ನೂತನ DG ಹಾಗೂ IGP ಯಾಗಿ ಡಾ| ಅಲೋಕ್ ಕುಮಾರ್ ನೇಮಕ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.06. ಪ್ರವೀಣ್ ಸೂದ್ ಅವರು ಸಿಬಿಐಗೆ ನೇಮಕಗೊಂಡ ನಂತರ, ಅವರ ಸ್ಥಾನಕ್ಕೆ ರಾಜ್ಯ ಸರ್ಕಾರದಿಂದ ಡಾ.ಅಲೋಕ್ ಮೋಹನ್ ಅವರನ್ನು ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ತಾತ್ಕಾಲಿಕ ನೇಮಕಾತಿಯನ್ನು, ಈಗ ಅಧಿಕೃತಗೊಳಿಸಿ ಆದೇಶಿಸಿದೆ ಎನ್ನಲಾಗಿದೆ.


ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಡಾ.ಅಲೋಕ್ ಮೋಹನ್, ಐಪಿಎಸ್ (ಕೆಎನ್: 1987) ಪೊಲೀಸ್ ಮಹಾನಿರ್ದೇಶಕರು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರು, ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್‌ಎಫ್) ಮಹಾನಿರ್ದೇಶಕರು, ಕರ್ನಾಟಕ ರಾಜ್ಯದ ನಾಗರಿಕ ರಕ್ಷಣಾ ನಿರ್ದೇಶಕರನ್ನಾಗಿ ಈಗಾಗಲೇ ನೇಮಿಸಲಾಗಿತ್ತು ಎಂದು ವರದಿಯಾಗಿದೆ. ಈಗ ಮಹಾನಿರ್ದೇಶಕರಾಗಿ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಪಡೆಯ ಮುಖ್ಯಸ್ಥ) ಆಗಿ ನೇಮಿಸಲಾಗಿದೆ.

Scroll to Top