News Kadaba

ಪಿ.ಎ. ಫಾರ್ಮಸಿಯ ಕಾಲೇಜು ವತಿಯಿಂದ ಯೆನೆಪೋಯ ಆರ್ಯುವೇದಿಕ್ ಆಸ್ಪತ್ರೆ ರೋಗಿಗಳಿಗೆ ಉಚಿತ ಗಾಲಿ ಕುರ್ಚಿ ವಿತರಣೆ

(ನ್ಯೂಸ್ ಕಡಬ) newskadaba.com ದೇರಳಕಟ್ಟೆ, ಸೆ. 27. ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ವತಿಯಿಂದ “ವಿಶ್ವ ಔಷಧ ತಜ್ಞರ ದಿನ”ದ ಅಂಗವಾಗಿ ನರಿಂಗಾನ ಗ್ರಾಮದ ಕಲ್ಲೊರ ಕೋಡಿಯಲ್ಲಿರುವ ಯೆನೆಪೋಯ ಆರ್ಯುವೇದಿಕ್ ಆಸ್ಪತ್ರೆಯ ರೋಗಿಗಳಿಗೆ ಉಚಿತ ಗಾಲಿ ಕುರ್ಚಿ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಲಾಯಿತು. ಬಳಿಕ ಸೋಮೇಶ್ವರದಲ್ಲಿರುವ ಪಶ್ಚಿಮ್ ರಿಹಾಬಿಲೇಶನ್ ಸೆಂಟರ್ ಮಾನಸಿಕ ಪುನಶ್ಚೇತನ ಕೇಂದ್ರದಲ್ಲಿರುವ ಆಶ್ರಮ ನಿವಾಸಿಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿ, ಆರೋಗ್ಯ ಸಂರಕ್ಷಣೆಯ ಮಾಹಿತಿಗಳನ್ನು ನೀಡಿ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಯಿತು. […]

ಪಿ.ಎ. ಫಾರ್ಮಸಿಯ ಕಾಲೇಜು ವತಿಯಿಂದ ಯೆನೆಪೋಯ ಆರ್ಯುವೇದಿಕ್ ಆಸ್ಪತ್ರೆ ರೋಗಿಗಳಿಗೆ ಉಚಿತ ಗಾಲಿ ಕುರ್ಚಿ ವಿತರಣೆ Read More »

ಕರಾವಳಿ

ಅ.02 ರಂದು “ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರ” ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಮಂಜೇಶ್ವರ, ಸೆ. 28. ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ ನ ಆಶ್ರಯದಲ್ಲಿ “ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರ” ಅ. 02 ರಂದು ಲೋಕಾರ್ಪಣೆಗೊಳ್ಳಲಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸ್ನೇಹಾಲಯದ ಮ್ಯಾನೇಜಿಂಗ್ ಟ್ರಸ್ಟಿ ಜೋಸೆಫ್ ಕ್ರಾಸ್ತಾ ಅವರು, ಅನಿವಾಸಿ ಉದ್ಯಮಿ ಮೈಕಲ್ ಡಿ ಸೋಜ ಅವರು ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರವನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡೊ. ಪೀಟರ್ ಪಾವ್ಲ್ ಸಲ್ದಾನ್ಹಾ ಇವರು ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಅ.02 ರಂದು “ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರ” ಲೋಕಾರ್ಪಣೆ Read More »

ಕರಾವಳಿ

ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ; ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಸೆ. 27. ವಿಟ್ಲ: ಅಂಗಡಿಗೆ ತೆರಳಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಕುದ್ದುಪದವು ಎಂಬಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆ ಕುದ್ದುಪದವು ನಿವಾಸಿ ಅಶ್ರಫ್ ಎಂಬಾತ ಅಂಗಡಿಗೆ ತೆರಳಿದ್ದ ಬಾಲಕಿಗೆ ಲೈಂಗಿಕ ದೌರ್ಜನ್ಯ ವೆಸಗಿದ ಘಟನೆ ವಿಟ್ಲ ಸಮೀಪದ ಕುದ್ದುಪದವು ಎಂಬಲ್ಲಿ ನಡೆದಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಶ್ರಫ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ; ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು Read More »

ಬ್ರೇಕಿಂಗ್ ನ್ಯೂಸ್

ಕೋಮುಗಲಭೆ ಪ್ರಕರಣ: ಬಂಧಿತ 55 ಆರೋಪಿಗಳಿಗೆ ಜಾಮೀನು

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ. 27. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದಿದ್ದ ಕೋಮುಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 55 ಆರೋಪಿಗಳಿಗೆ ಮಂಡ್ಯ 1ನೇ ಜಿಲ್ಲಾ & ಸೆಷನ್ಸ್​ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಕಳೆದ ಸೆಪ್ಟೆಂಬರ್ 11ರಂದು ನಾಗಮಂಗಲ ಅಕ್ಷರಶಃ ಹೊತ್ತಿ ಉರಿದಿತ್ತು. ಈ ಗಲಭೆ ಪ್ರಕರಣದ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು 55 ಆರೋಪಿಗಳನ್ನು ಬಂಧಿಸಿದ್ದರು. ನಾಗಮಂಗಲವನ್ನು ಸಂಪೂರ್ಣ ನಿಯಂತ್ರಿಸಲು ಹರಸಾಹಸಪಟ್ಟಿದ್ದರು. ಆರೋಪಿಗಳನ್ನು ಬಂಧಿಸಿದ ಬಳಿಕ ನಾಗಮಂಗಲದ ಗಲಭೆ ರಾಜಕೀಯ ತಿರುವುಗಳನ್ನು ಪಡೆದುಕೊಂಡಿತ್ತು.  

ಕೋಮುಗಲಭೆ ಪ್ರಕರಣ: ಬಂಧಿತ 55 ಆರೋಪಿಗಳಿಗೆ ಜಾಮೀನು Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಸ್ತೆ ಅಪಘಾತ: ಯುವತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 27. ನಗರದಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಯುವತಿಯೊಬ್ಬಳು ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಶಾಲಿನಿ ಎಂದು ಗುರುತಿಸಲಾಗಿದೆ. ಬೆನ್ಸನ್ ಟೌನ್ ಚಿನ್ನಪ್ಪ ಗಾರ್ಡನ್ ನಿಂದ ಬರುತ್ತಿದ್ದ ಆಟೋ ಮೆಜೆಸ್ಟಿಕ್ ಗೆ ಪ್ಯಾಸೆಂಜರ್ ಡ್ರಾಪ್ ಮಾಡಲು ಹೊರಟಿತ್ತು. ಸಿಗ್ನಲ್ ಜಂಪ್ ಮಾಡಿದ ಲಾರಿ ಡ್ರೈವರ್ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಆಟೋ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದ ಯುವತಿ ಸ್ಥಳದಲ್ಲೇ ಎನ್ನಲಾಗಿದೆ.  

ರಸ್ತೆ ಅಪಘಾತ: ಯುವತಿ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Crime

ವೈದ್ಯನ ನಿರ್ಲಕ್ಷಕ್ಕೆ 7 ವರ್ಷದ ಬಾಲಕಿ ಮೃತ್ಯು..! ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಸೆ. 27. ಖಾಸಗಿ ಕ್ಲಿನಿಕ್ ವೈದ್ಯ ನೀಡಿದ ಇಂಜೆಕ್ಷನ್​ನಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಅಜ್ಜಂಪುರ ಸಮೀಪದ ಕೆಂಚಾಪುರ ಗ್ರಾಮದ ಅಶೋಕ್ ಅವರ 7 ವರ್ಷದ ಮಗ ಸೋನೇಶ್ ಕಳೆದ ನಾಲ್ಕು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ. ಪೋಷಕರು ಸೋನೇಶ್ ನನ್ನು ಅಜ್ಜಂಪುರ ಪಟ್ಟಣದ ಖಾಸಗಿ ಕ್ಲಿನಿಕ್ ವೈದ್ಯ ವರುಣ್ ಬಳಿ ಸೆಪ್ಟೆಂಬರ್ 24 ರಂದು ಚಿಕಿತ್ಸೆಗಾಗಿ ಕರೆದೊಯ್ದಿದ್ರು. ವೈದ್ಯ ವರುಣ್ ನೀಡಿದ

ವೈದ್ಯನ ನಿರ್ಲಕ್ಷಕ್ಕೆ 7 ವರ್ಷದ ಬಾಲಕಿ ಮೃತ್ಯು..! ಪ್ರಕರಣ ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಚಿನ್ನದ ದರದಲ್ಲಿ ಇಂದು ಇಳಿಕೆ: ಇಂದು ಕಡಿತವಾಗಿದ್ದು ಇಷ್ಟು

(ನ್ಯೂಸ್ ಕಡಬ) newskadaba.com ಸೆ. 27.ಬೆಂಗಳೂರು: ಕೆಲವು ದಿನಗಳಿಂದ ಸತತವಾಗಿ ಏರಿಕೆಯಾಗುತ್ತಿದ್ದ ಚಿನ್ನದ ದರ ಇಂದು ಕೊಂಚ ಇಳಿಕೆಯಾಗಿದೆ. ಶನಿವಾರ ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ ತಲಾ 5 ರೂ. ಕಡಿಮೆಯಾಗಿದೆ. ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,095 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 7,740 ರೂ.ಗೆ ಇದೆ. 22 ಕ್ಯಾರಟ್‌ ಚಿನ್ನದ ದರಗಳ

ಚಿನ್ನದ ದರದಲ್ಲಿ ಇಂದು ಇಳಿಕೆ: ಇಂದು ಕಡಿತವಾಗಿದ್ದು ಇಷ್ಟು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅರ್ಜುನ್ ಪಾರ್ಥಿವ ಶರೀರಕ್ಕೆ ಜಿಲ್ಲಾಡಳಿತ ವತಿಯಿಂದ ಅಂತಿಮ ನಮನ

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ. 27. ಶಿರೂರಿನಲ್ಲಿ ಭೂಕುಸಿತಕ್ಕೆ ಸಿಲುಕಿ ನದಿಪಾಲಾಗಿ ೭೨ ದಿನಗಳ ಬಳಿಕ ಪತ್ತೆಯಾದ ಲಾರಿ ಚಾಲಕ ಅರ್ಜುನ್ ಕೋಝಿಕ್ಕೋಡ್ ಕನ್ನಾಡಿಕ್ಕಾಲ್ ನ ಪಾರ್ಥಿವ ಶರೀರ ಅಂಬ್ಯುಲೆನ್ಸ್ ಮೂಲಕ ಕಾಸರಗೋಡಿಗೆ ತಲಪಿದಾಗ ಅಂತಿಮ ನಮನ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ . ಶಿಲ್ಪಾ ಮೊದಲಾದವರು ಪುಷ್ಪ ಚಕ್ರ ಅರ್ಪಿಸಿದರು. ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ತಡರಾತ್ರಿಯಾದಾರೂ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿದರು.  

ಅರ್ಜುನ್ ಪಾರ್ಥಿವ ಶರೀರಕ್ಕೆ ಜಿಲ್ಲಾಡಳಿತ ವತಿಯಿಂದ ಅಂತಿಮ ನಮನ Read More »

ಕರಾವಳಿ, ಕ್ರೈಮ್ ನ್ಯೂಸ್

ಸಾಲ ತೀರಿಸುವಂತೆ ಬ್ಯಾಂಕ್ ಕಳುಹಿಸಿದ ನೋಟಿಸ್‌ಗೆ ಹೆದರಿ ರೈತ ಆತ್ಮಹತ್ಯೆಗೆ ಶರಣು..!

(ನ್ಯೂಸ್ ಕಡಬ) newskadaba.com ಕಲಬುರಗಿ, ಸೆ. 27. ಸಾಲ ತೀರಿಸುವಂತೆ ಬ್ಯಾಂಕ್ ಕಳುಹಿಸಿದ ನೋಟಿಸ್‌ಗೆ ಹೆದರಿ ಪೆಟ್ರೋಲ್ ಸುರಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತರನ್ನು ಪಾಂಡಪ್ಪ ತಿಪ್ಪಣ್ಣ ಕೊರವರ್ (45) ಎಂದು ಗುರುತಿಸಲಾಗಿದೆ. 3 ಎಕರೆ ಜಮೀನು ಹೊಂದಿದ್ದ ಪಾಂಡಪ್ಪ ಬ್ಯಾಂಕ್‌ನಲ್ಲಿ 1 ಲಕ್ಷ ರು. ಜತೆಗೆ ಕೈ ಸಾಲ ಮಾಡಿದ್ದರು. ಮಳೆಯಿಂದ ತೊಗರಿ ಬೆಳೆ ನಷ್ಟವಾಗಿತ್ತು. ಈ ನಡುವೆ ಸಾಲ ತೀರಿಸಲು ವಕೀಲರ ಮೂಲಕ 2 ಬಾರಿ ಬ್ಯಾಂಕ್ ನೋಟಿಸ್ ಕಳುಹಿಸಿತ್ತು. ಹೀಗಾಗಿ

ಸಾಲ ತೀರಿಸುವಂತೆ ಬ್ಯಾಂಕ್ ಕಳುಹಿಸಿದ ನೋಟಿಸ್‌ಗೆ ಹೆದರಿ ರೈತ ಆತ್ಮಹತ್ಯೆಗೆ ಶರಣು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್ ಗೆ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 27. ಚುನಾವಣಾ ಬಾಂಡ್‌ಗಳ ಮೂಲಕ ಕೋಟ್ಯಂತರ ರೂ. ಸುಲಿಗೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ. ಜನಾಧಿಕಾರಸಂಘರ್ಷ ಪರಷತ್‌ನ ಆದರ್ಶ ಆರ್. ಐಯ್ಯ‌ರ್ ದೂರು ನೀಡಿದ್ದರು. ಈ ದೂರಿನ ಮೇರೆಗೆ ಶುಕ್ರವಾರ ನ್ಯಾಯಾಲಯ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಅ.10ಕ್ಕೆ ಮುಂದೂಡಿಕೆ ಮಾಡಿದೆ. ಸಚಿವೆ ನಿರ್ಮಲಾ ಸೀತಾರಾಮನ್ ಜತೆಗೆ ಬಿಜೆಪಿ ರಾಷ್ಟ್ರೀಯ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್ ಗೆ ಆದೇಶ Read More »

ಕರ್ನಾಟಕ
Scroll to Top