News Kadaba

ಶಬರಿಮಲೆ: ಆನ್ಲೈನ್ ಬುಕ್ಕಿಂಗ್ ಕಡ್ಡಾಯ, ದಿನಕ್ಕೆ 80 ಮಂದಿಗೆ ಮಾತ್ರವೇ ದರ್ಶನಕ್ಕೆ ಅವಕಾಶ

(ನ್ಯೂಸ್ ಕಡಬ)newskadaba.com,ಮಂಗಳೂರು ಅ. 07. ಶಬರಿಮಲೆ ಯಾತ್ರೆಯ ಋತು ಪ್ರಾರಂಭವಾಗಲಿದ್ದು, ಈ ಹಿನ್ನಲೆ ಸಿಎಂ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಈ ಬಾರಿ ಶಬರಿಮಲೆಗೆ ಆನ್‌ಲೈನ್ ಬುಕ್ಕಿಂಗ್‌ಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ. ಒಂದು ದಿನದಲ್ಲಿ ಗರಿಷ್ಠ 80,000 ಮಂದಿಗೆ ಮಾತ್ರ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಯಾತ್ರಿಕರು ಕಡಿಮೆ ದಟ್ಟಣೆಯ ಮಾರ್ಗವನ್ನು ಆಯ್ಕೆ ಮಾಡಬಹುದು. ಕಾನನ ಮಾರ್ಗದಲ್ಲಿ ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಜನದಟ್ಟಣೆ ಇರುವ ಸಮಯದಲ್ಲಿ ವಾಹನಗಳನ್ನು ನಿಯಂತ್ರಿಸಬೇಕಾದರೆ ಕೇಂದ್ರಗಳನ್ನು […]

ಶಬರಿಮಲೆ: ಆನ್ಲೈನ್ ಬುಕ್ಕಿಂಗ್ ಕಡ್ಡಾಯ, ದಿನಕ್ಕೆ 80 ಮಂದಿಗೆ ಮಾತ್ರವೇ ದರ್ಶನಕ್ಕೆ ಅವಕಾಶ Read More »

ಬ್ರೇಕಿಂಗ್ ನ್ಯೂಸ್

ಉಡುಪಿಯಲ್ಲಿ ಮೇಘಸ್ಪೋಟ:10ಕ್ಕೂ ಹೆಚ್ಚು ಮನೆ ಮುಳುಗಡೆ

(ನ್ಯೂಸ್ ಕಡಬ)newskadaba.com, ಉಡುಪಿ ಅ. 07. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಅತ್ಯಲ್ಪ ಅವಧಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಮೇಘ ಸ್ಪೋಟವಾಗಿರಬಹುದು ಎಂದು ಹೇಳಲಾಗುತ್ತಿದೆ. 2.25 ಗಂಟೆಯಲ್ಲಿ 18 ಸೆಂ.ಮೀ. ಮಳೆಯಾದ ಪರಿಣಾಮ, ಬಮ್ಮಗುಂಡಿ ನದಿಯಲ್ಲಿ ಹಠಾತ್ ಪ್ರವಾಹ ಕಾಣಿಸಿಕೊಂಡಿದೆ. ಇದರಿಂದ ಹೆಬ್ರಿ ತಾಲೂಕಿನ ಮು ದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಬಲ್ಲಾಡಿ ಯಲ್ಲಿ 10ಕ್ಕೂ ಹೆಚ್ಚು ಮನೆಗಳು ಸಂ ಪೂರ್ಣ ಮುಳುಗಡೆಯಾಗಿವೆ. ಜಮನಿಗೆ ನೀರು ನುಗ್ಗಿದೆ 2 ಕಾರು, ಎರಡು ಬೈಕ್‌ಗಳು ಸೇರಿ

ಉಡುಪಿಯಲ್ಲಿ ಮೇಘಸ್ಪೋಟ:10ಕ್ಕೂ ಹೆಚ್ಚು ಮನೆ ಮುಳುಗಡೆ Read More »

ಬ್ರೇಕಿಂಗ್ ನ್ಯೂಸ್

ಸಂಸದೀಯ ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ನೇಮಕ

(ನ್ಯೂಸ್ ಕಡಬ)newskadaba.com ಮಂಗಳೂರು, ಅ. 07. ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಸದೀಯ ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಸಮಿತಿಗೆ ನೇಮಕಗೊಂಡಿರುವ ಕ್ಯಾ. ಚೌಟ ಅವರು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ನೀತಿ-ನಿಯಮಗಳು, ಕಾರ್ಯಯೋಜನೆಗಳ ಬಗ್ಗೆ ಪುನರ್ ಪರಿಶೀಲಿಸುವ ಹಾಗೂ ನಿಗಾ ವಹಿಸುವಲ್ಲಿ ಪಾತ್ರವಹಿಸಲಿದ್ದಾರೆ.

ಸಂಸದೀಯ ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ನೇಮಕ Read More »

ಕರಾವಳಿ
crime, arrest, suspected

ಮಾದಕ ವಸ್ತು ಸಾಗಾಟ: ಇಬ್ಬರು ಅರೆಸ್ಟ್..!

(ನ್ಯೂಸ್ ಕಡಬ)newskadaba.com ಮಂಗಳೂರು, ಅ. 07. ಮಾದಕ ವಸ್ತು ಎಲ್‌ಎಸ್‌ಡಿ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರನ್ನು ಮೂಲ್ಕಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪ್ರಸ್ತುತ ಹಳೆಯಂಗಡಿ ಬಳಿಯ ಕೊಪ್ಪಳ ಸಮೀಪದಲ್ಲಿ ವಾಸ್ತವ್ಯವಿದ್ದ ಅದಿಲ್ ಮತ್ತು ಮಹಮ್ಮದ್ ನಿಹಾಲ್ ಎಂದು ಗುರುತಿಸಲಾಗಿದೆ. ಬಂಧಿತರು ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದರು. ಬಂಧಿತ ಆರೋಪಿಗಳಿಂದ ಕಾರು ಹಾಗೂ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.  

ಮಾದಕ ವಸ್ತು ಸಾಗಾಟ: ಇಬ್ಬರು ಅರೆಸ್ಟ್..! Read More »

ಕರಾವಳಿ

ವಿಶ್ವಸಂಸ್ಥೆ: ಯುದ್ಧದ ವಾತವರಣ ಅಂತ್ಯ

(ನ್ಯೂಸ್ ಕಡಬ)newskadaba.com, ನ್ಯೂಯಾರ್ಕ್ ಅ. 05. ಮಧ್ಯಪ್ರಾಚ್ಯ ದೇಶದಲ್ಲಿ ನಡೆಯುತ್ತಿರುವ ಯುದ್ದದ ವಾತಾರಣ ಕಡಿಮೆ ಮಾಡಲು ಇಸ್ರೇಲ್ ಮತ್ತು ಇರಾನ್ ತಕ್ಷಣ ಯುದ್ಧದ ವಾತಾವರಣ ಅಂತ್ಯಗೊಳಿಸಬೇಕು ಎಂದು ವಿಶ್ವಸಂಸ್ಥೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.ಜೊತೆಗೆ ಅಮೆರಿಕಾ, ಇಂಗ್ಲೆಂಡ್ ಮತ್ತು ಜರ್ಮನಿಯನ್ನು ಒಳಗೊಂಡಿರುವ ಜಿ-7 ದೇಶಗಳು ಮದ್ಯ ಪ್ರಾಚ್ಯ ದೇಶಗಳ ವಿಷಯದಲ್ಲಿ “ಸಂಯಮ”ದಿಂದ ವರ್ತಿಸಬೇಕು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಹೇಳಿದ್ದಾರೆ. ಕಳೆದ ಏಳು ದಿನಗಳಲ್ಲಿ, ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರನ್ನು ಹತ್ಯೆ ಮಾಡಲಾಗಿದೆ, ಇಸ್ರೇಲ್ ಲೆಬನಾನ್

ವಿಶ್ವಸಂಸ್ಥೆ: ಯುದ್ಧದ ವಾತವರಣ ಅಂತ್ಯ Read More »

ಅಂತರ್ರಾಷ್ಟ್ರೀಯ ನ್ಯೂಸ್

ಕಾಡಾನೆಗಳ ಹಾವಳಿ: ಕೃಷಿಗೆ ಹಾನಿ

ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಅ. 05. ಧರ್ಮಸ್ಥಳ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರಿದಿದೆ. ಶುಕ್ರವಾರ ರಾತ್ರಿಯ ವೇಳೆ ಧರ್ಮಸ್ಥಳ ಪೊಲಸೊಳಿಕೆ ನಿವಾಸಿ ಕೃಷ್ಣಪ್ಪ ಅವರ ಮನೆಯ ಸಮೀಪದ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ ಹಾಗೂ ಅಡಿಕೆ ಗಿಡಗಳನ್ನು, ಮರಗೆಣಸಿನ ಗಿಡಗಳನ್ನು ನಾಶಗೊಳಿಸಿದೆ. ತೋಟದಲ್ಲಿದ್ದ ಬಾಳೆಗಿಡಗಳನ್ನು ಸಂಪೂರ್ಣವಾಗಿ ಮುರಿದು ಹಾಕಿದ್ದು ಮನೆಯ ಸಮೀಪವೇ ಆನೆಗಳು ಓಡಾಟ ನಡೆಸಿದ್ದು ಜನರಲ್ಲಿ ಭಯಮೂಡಿಸಿದೆ. ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ನಿವಾಸಿ ಕ್ಸೇವಿಯರ್ ಎಂಬವರಿಗೆ ಸೇರಿದ ತೋಟಕ್ಕೆ ನುಗ್ಗಿದ ಕಾಡಾನೆಗಳು

ಕಾಡಾನೆಗಳ ಹಾವಳಿ: ಕೃಷಿಗೆ ಹಾನಿ Read More »

ಕರಾವಳಿ

ಮಲಯಾಳಂ ನಟ ಮೋಹನ್ ರಾಜ್ ನಿಧನ

(ನ್ಯೂಸ್ ಕಡಬ)newskadaba.com ತಿರುವನಂತಪುರಂ, ಅ. 05. ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ನಟ ಮೋಹನ್ ರಾಜ್ (69) ಅವರು ತಿರುವನಂತಪುರಂ ಬಳಿಯ ಕಂಜಿರಾಂಕುಳಂನ ಶುಕ್ರವಾರ ನಿಧನರಾದರು. ಮಲಯಾಳಂ ಸೇರಿದಂತೆ ತೆಲುಗು, ತಮಿಳಿನ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೋಹನ್ ರಾಜ್ ನಟಿಸಿದ್ದರು. ಖಳನಟರಾಗಿ ಅವರು ಹೆಚ್ಚು ಜನಪ್ರಿಯರಾಗಿದ್ದರು. ಕೆಲ ವರ್ಷಗಳ ಬಳಿಕ ಗಾಯದಿಂದ ಸೇನೆ ತೊರೆದು ಕೇಂದ್ರ ಸರ್ಕಾರಿ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿಕೊಂಡು ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.  

ಮಲಯಾಳಂ ನಟ ಮೋಹನ್ ರಾಜ್ ನಿಧನ Read More »

ಕ್ರೈಮ್ ನ್ಯೂಸ್, ಸಿನಿಮಾ

ವಿಪರೀತ ಜ್ವರದಿಂದ ಯುವಕ ಮೃತ್ಯು..!

(ನ್ಯೂಸ್ ಕಡಬ)newskadaba.com ವಿಟ್ಲ, ಅ. 05. ಮಂಗಿಲಪದವು ಬನಾರಿ ನಿವಾಸಿ ಯುವಕನೊಬ್ಬ ವಿಪರೀತ ಜ್ವರದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಅಬೂಬಕ್ಕರ್ ಸಿದ್ದೀಕ್ (30) ಎಂದು ಗುರುತಿಸಲಾಗಿದೆ. ಎರಡು, ಮೂರು ದಿನಗಳ ವಿಪರೀತ ಜ್ವರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವಿಟ್ಲ ಕೇಂದ್ರ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮೂಲತಃ ವಿಟ್ಲ ಸಮೀಪದ ಮೇಗಿನಪೇಟೆ ಕಾಟ್ರಸ್ ನಿವಾಸಿಯಾಗಿದ್ದು, ಪ್ರಸ್ತುತ ವಿಟ್ಲ ಸಮೀಪದ ಮಂಗಿಲಪದವು ಬಾಬಟ್ಟ ಬನಾರಿ ಎಂಬಲ್ಲಿ ನೆಲೆಸಿದ್ದರು

ವಿಪರೀತ ಜ್ವರದಿಂದ ಯುವಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ONGC ಅಪ್ರೆಂಟಿಸ್ ನೋಂದಣಿ ಆರಂಭ, 2337 ಹುದ್ದೆಗಳಿಗೆ ಆನ್ಲೈನ್ನಲ್ಲಿ ಅಪ್ಲೈ ಮಾಡಿ

(ನ್ಯೂಸ್ ಕಡಬ)newskadaba.com, ನವದೆಹಲಿಅ. 05. ಆಯಿಲ್ ಅಂಡ್ ನೈಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC) ಅಪ್ರೆಂಟಿಸ್‌ಗಳ 2237 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ONGCಯ ಅಧಿಕೃತ ವೆಬ್‌ಸೈಟ್ ongcindia.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.   ಮುಖ್ಯ ದಿನಾಂಕಗಳು ಅರ್ಜಿ ಪ್ರಾರಂಭ ದಿನಾಂಕ: 5 ಅಕ್ಟೋಬರ್ 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ಅಕ್ಟೋಬರ್ 2024 ಅಂತಿಮ ಪ್ರಕಟಣೆ: 15 ನವೆಂಬರ್ 2024 ಅಭ್ಯರ್ಥಿಗಳ ವಯಸ್ಸು 18 ರಿಂದ 24 ವರ್ಷಗಳ

ONGC ಅಪ್ರೆಂಟಿಸ್ ನೋಂದಣಿ ಆರಂಭ, 2337 ಹುದ್ದೆಗಳಿಗೆ ಆನ್ಲೈನ್ನಲ್ಲಿ ಅಪ್ಲೈ ಮಾಡಿ Read More »

ಉದ್ಯೋಗ

ಕಡಬ ಗಣೇಶ್ ಬಿಲ್ಡಿಂಗ್ ಬಳಿ ವ್ಯಾಪಕ ಅಪಘಾತ: ಹಂಪ್ಸ್ ನಿರ್ಮಿಸುವಂತೆ ಸಾರ್ವಜನಿಕರ ಅಗ್ರಹ ✍️ ಕೆ.ಎಸ್.ಬಾಲಕೃಷ್ಣ ಕೊಯಿಲ

(ನ್ಯೂಸ್ ಕಡಬ)newskadaba.com  ಕಡಬ, ಅ. 05. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಪೇಟೆಯ ಗಣೇಶ್ ಬಿಲ್ಡಿಂಗ್ ಬಳಿ ವ್ಯಾಪಕ ಅಪಘಾತಗಳಾಗುತ್ತಿದ್ದು, ಇಲ್ಲಿ ರಸ್ತೆಯಲ್ಲಿ  ಹಂಪ್ಸ್ ನಿರ್ಮಾಣ ಮಾಡಬೇಕೆನ್ನುವ ಅಗ್ರಹ ಜೋರಾಗಿ ಕೇಳಿ ಬರುತ್ತಿದೆ. ಗಣೇಶ್ ಬಿಲ್ಡಿಂಗ್ ಬಳಿ ವಿವಿಧ ಅಂಗಡಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಛೇರಿ, ಸಿಬಿಎಸ್ಇ ಸ್ಕೂಲ್, ಹತ್ತಿರದಲ್ಲಿ ಹೋಟೇಲ್, ಬೈಕ್ ಶೋರೂಂ ಹೀಗೆ ಹತ್ತು ವಲವು ವಾಣಿಜ್ಯ ವ್ಯಾಪಾರ ಕೇಂದ್ರಗಳು ಇರುವುದರಿಂದ ವಾಹನಗಳ ಓಡಾಟ ಅಧಿಕವಾಗಿದೆ.  ಸಹಜವಾಗಿಯೇ ಜನಸಂಖ್ಯೆ ಕೂಡಾ ಹೆಚ್ಚಾಗಿರುತ್ತದೆ. ಇನ್ನು ಇಲ್ಲಿ

ಕಡಬ ಗಣೇಶ್ ಬಿಲ್ಡಿಂಗ್ ಬಳಿ ವ್ಯಾಪಕ ಅಪಘಾತ: ಹಂಪ್ಸ್ ನಿರ್ಮಿಸುವಂತೆ ಸಾರ್ವಜನಿಕರ ಅಗ್ರಹ ✍️ ಕೆ.ಎಸ್.ಬಾಲಕೃಷ್ಣ ಕೊಯಿಲ Read More »

ಕರಾವಳಿ
Scroll to Top