News Kadaba

ಬಸ್ ನಿರ್ವಹಕನ ಶವ ಪತ್ತೆ: ಕೊಲೆ ಶಂಕೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 16. ಬಸ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಶವ ನೆಹರೂ ಮೈದಾನದ ಇಂದಿರಾ ಕ್ಯಾಂಟಿನ್ ಪರಿಸರದಲ್ಲಿ ಪತೆಯಾಗಿದೆ. ಮೃತ ವ್ಯಕ್ತಿಯನ್ನು ಮಂಗಳೂರು-ವಿಟ್ಲ ಮಧ್ಯೆ ಸಂಚರಿಸುತ್ತಿದ್ದ ಫಲ್ಗುಣಿ, ಸೆಲಿನಾ ಬಸ್ಸುಗಳಲ್ಲಿ ನಿರ್ವಾಹಕನಾಗಿ ದುಡಿಯುತ್ತಿದ್ದ ರಾಜೇಶ್(30) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ಇಂದಿರಾ ಕ್ಯಾಂಟೀನ್ ಪರಿಸರದಲ್ಲಿ ಅನಾಥ ಸ್ಥಿತಿಯಲ್ಲಿ ಕಂಡಕ್ಟರ್ ರಾಜೇಶನ ಜರ್ಜರಿತವಾದ ಮೃತದೇಹ ಪತ್ತೆಯಾಗಿತ್ತು. ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಠಾಣಾ ಪೊಲೀಸರು ಮೃತದೇಹವನ್ನು ವಾರೀಸುದಾರರು ಯಾರೂ ಬಂದಿಲ್ಲದ ಕಾರಣ ವೆನ್ಲಾಕ್ ಶವಾಗಾರದಲ್ಲಿ ಇರಿಸಿದ್ದಾರೆ. […]

ಬಸ್ ನಿರ್ವಹಕನ ಶವ ಪತ್ತೆ: ಕೊಲೆ ಶಂಕೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ನಾಳೆ ರಾಜ್ಯದಲ್ಲಿ ಭಾರೀ ಮಳೆ

(ನ್ಯೂಸ್ ಕಡಬ) newskadaba.com ಅ. 16. ಬೆಂಗಳೂರು: ನೈಋತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಇಂದೂ ಕೂಡ ಮುಂದುವರೆದಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ನಿನ್ನೆ ಧಾರಕಾರವಾಗಿ ಸುರಿದ ಮಳೆ ನಿನ್ನೆ ಸಂಜೆಯಿಂದ ತುಸು ಕಡಿಮೆಯಾಗಿತ್ತಾದರೂ ಸಂಪೂರ್ಣವಾಗಿ ನಿಂತಿರಲಿಲ್ಲ. ಇಂದು ಬೆಳಿಗ್ಗೆ ಯಥಾರೀತಿ ಜಿಟಿಜಿಟಿ ಮಳೆ ಆರಂಭವಾಯಿತು. ನಿನ್ನೆಗೆ ಹೋಲಿಸಿದರೆ ಇಂದು ಮಳೆಯ ಪ್ರಮಾಣ ರಾಜ್ಯದ ಒಳನಾಡಿನಲ್ಲಿ ಕಡಿಮೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ, ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು

ನಾಳೆ ರಾಜ್ಯದಲ್ಲಿ ಭಾರೀ ಮಳೆ Read More »

ಕರ್ನಾಟಕ

ಎರಡು ಬುಲೆಟ್ ರೈಲು ನಿರ್ಮಾಣಕ್ಕೆ ಗುತ್ತಿಗೆ ಪಡೆದ ಬಿಇಎಂಎಲ್‌

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 16. ಅತಿವೇಗದ ಎರಡು ರೈಲುಗಳ ವಿನ್ಯಾಸ ಹಾಗೂ ತಯಾರಿಕೆಗೆ ಸಂಬಂಧಿಸಿದಂತೆ ಚೆನ್ನೈನಲ್ಲಿರುವ ಭಾರತೀಯ ರೈಲ್ವೆ ಇಲಾಖೆಯ ಅಧೀನಕ್ಕೆ ಸೇರಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ (ಐಸಿಎಫ್‌) 866.87 ಕೋಟಿ ರು. ಮೌಲ್ಯದ ಗುತ್ತಿಗೆ ಲಭಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಬಿಇಎಂಎಲ್‌ ಮಂಗಳವಾರ ತಿಳಿಸಿದೆ. ಪ್ರತಿ ರೈಲು ಎಂಟು ಬೋಗಿಗಳನ್ನು ಒಳಗೊಂಡಿದ್ದು, ಗಂಟೆಗೆ 280 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಮುಂಬೈ ಹಾಗೂ ಅಹಮದಾಬಾದ್ ನಡುವೆ ನಿರ್ಮಿಸಲಾಗುತ್ತಿರುವ ಅತಿವೇಗದ ರೈಲ್ವೆ

ಎರಡು ಬುಲೆಟ್ ರೈಲು ನಿರ್ಮಾಣಕ್ಕೆ ಗುತ್ತಿಗೆ ಪಡೆದ ಬಿಇಎಂಎಲ್‌ Read More »

ಕರ್ನಾಟಕ

ಚಿನ್ನ ಪ್ರಿಯರಿಗೆ ಮತ್ತೆ ಶಾಕ್

(ನ್ಯೂಸ್ ಕಡಬ) newskadaba.com ಅ. 16. ಬೆಂಗಳೂರು: ಕಳೆದೆರಡು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ ಕಂಡಿದೆ. ಚಿನ್ನದ ದರ ಇಂದು ಇಳಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರಟ್‌ 1 ಗ್ರಾಂ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 45 ರೂ. ಮತ್ತು 49 ರೂ. ಏರಿಕೆ ಮಾಡಿದೆ. ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,140 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ

ಚಿನ್ನ ಪ್ರಿಯರಿಗೆ ಮತ್ತೆ ಶಾಕ್ Read More »

ಕರಾವಳಿ

ಜಮ್ಮು-ಕಾಶ್ಮೀರದ ನೂತನ ಸಿಎಂ ಆಗಿ ಒಮರ್ ಅಬ್ದುಲ್ಲಾ ಇಂದು ಪ್ರಮಾಣವಚನ ಸ್ವೀಕಾರ

(ನ್ಯೂಸ್ ಕಡಬ) newskadaba.com ಶ್ರೀನಗರ, ಅ. 16. ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಅವರು ಇಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಶೇರ್ ಇ ಕಾಶ್ಮೀರ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು ಬೆಳಗ್ಗೆ 11:30ಕ್ಕೆ ಪ್ರಮಾಣವಚನ ಸ್ವೀಕಾರ ಸಮಾರಂಭವು ನಡೆಯಲಿದೆ. ಆರ್ಟಿಕಲ್ 370 ರದ್ಧತಿಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ಗೆದ್ದ ನ್ಯಾಷನಲ್ ಕಾನ್ಫರೆನ್ಸ್‌ನ ಮುಖ್ಯಸ್ಥ ಒಮರ್ ಅಬ್ದುಲ್ಲಾ ಮೊದಲ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು

ಜಮ್ಮು-ಕಾಶ್ಮೀರದ ನೂತನ ಸಿಎಂ ಆಗಿ ಒಮರ್ ಅಬ್ದುಲ್ಲಾ ಇಂದು ಪ್ರಮಾಣವಚನ ಸ್ವೀಕಾರ Read More »

ರಾಷ್ಟ್ರೀಯ ನ್ಯೂಸ್
crime, arrest, suspected

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 16. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಗೂ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉಳ್ಳಾಲದ ಮಂಜನಾಡಿಯ ಬದ್ರಿಯಾ ನಗರದ ನಿವಾಸಿ ಮೊಹಮ್ಮದ್ ಅಬ್ದುಲ್ ಫಯಾನ್(27) ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಕೊಣಾಜೆ, ಉಳ್ಳಾಲ, ಕಡಬ, ಬರ್ಕೆ, ಉಪ್ಪಿನಂಗಡಿ, ಪುತ್ತೂರು, ಬಂಟ್ವಾಳ ಪೊಲೀಸ್ ಠಾಣೆಗಳಲ್ಲಿ ಸುಮಾರು 24 ಪ್ರಕರಣಗಳು ದಾಖಲಾಗಿವೆ. ಆರೋಪಿಯ ಬಗ್ಗೆ ದೊರೆತ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಸೊಸೈಟಿ ಉದ್ಯೋಗಿ ಮೃತ್ಯು..!

(ನ್ಯೂಸ್ ಕಡಬ) newskadaba.com ಸುಳ್ಯ, ಅ. 16. ದ್ವಿಚಕ್ರ ವಾಹನಗಳ ನಡುವೆ ನಡೆ ಅಪಘಾತದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉದ್ಯೋಗಿ ಮೃತಪಟ್ಟ ಘಟನೆ ಸುಳ್ಯದ ಪೈಚಾರು – ಸೋಣಂಗೇರಿ ರಸ್ತೆಯ ಆರ್ತಾಜೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಮೃತರನ್ನು ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿ, ಉದ್ಯೋಗಿ ಭೋಜಪ್ಪ (50) ಎಂದು ಗುರುತಿಸಲಾಗಿದೆ. ಸುಳ್ಯ ಕಡೆಯಿಂದ ಸೋಣಂಗೇರಿ ಕಡೆಗೆ ಸಂಚರಿಸುತ್ತಿದ್ದ ಬುಲೆಟ್ ಹಾಗೂ ಐವರ್ನಾಡಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಸಾಗುತ್ತಿದ್ದ ಭೋಜಪ್ಪ ಅವರ ಹೋಂಡ ಬೈಕ್

ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಸೊಸೈಟಿ ಉದ್ಯೋಗಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ವೇಣೂರು, ಅ. 16. ಕಾಲೇಜು ವಿದ್ಯಾರ್ಥಿನಿಯರಿಗೆ ಚುಡಾಯಿಸಿ ಮೊಬೈಲ್ ನಂಬರಿಗೆ ಒತ್ತಾಯಿಸಿದ್ದ ಯುವಕನೊಬ್ಬನನ್ನು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರ ನೆರವಿನಿಂದ ವೇಣೂರು ಪೊಲೀಸರು ಬಂಧಿಸಿದ್ದಾರೆ. ವೇಣೂರಿನ ಗೋಳಿಯಂಗಡಿಯಲ್ಲಿರುವ ಪ್ರತಿಷ್ಠಿತ ಧರ್ಮಸ್ಥಳ ಐ ಟಿ ಐ ಕಾಲೇಜಿಗೆ ಹೋಗುತ್ತಿರುವ ವಿದ್ಯಾರ್ಥಿನಿಯರನ್ನು ಅವ್ಯಾಚ್ಯ ಶಬ್ದಗಳಿಂದ ಮಾತನಾಡುತ್ತಾ, ನಿನ್ನ ಮೊಬೈಲ್ ನಂಬರ್ ಕೊಡು, ಪ್ರತಿದಿನ ಬೈಕಿನಲ್ಲಿ ಕಾಲೇಜಿಗೆ ಡ್ರಾಪ್ ಮಾಡುತ್ತೇನೆ ಎಂದು ಪೀಡಿಸುತ್ತಿದ್ದನು. ಇದರಿಂದ ಗಾಬರಿಗೊಂಡ ಯುವತಿಯು ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ತಿಳಿಸಿದ್ದಾಳೆ ಎನ್ನಲಾಗಿದೆ.    

ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ತುಳಸಿ ಗಿಡದಲ್ಲಿ ಅರಳುತ್ತಿವೆ ದಾಸವಾಳ ಹೂವುಗಳು..!

(ನ್ಯೂಸ್ ಕಡಬ) newskadaba.com ಸುಳ್ಯ, ಅ. 16. ತುಳಸಿ ಗಿಡದಲ್ಲಿ ದಾಸವಾಳ ಹೂವು ಅರಳುತ್ತಿವೆ ಎಂದರೆ ಅಚ್ಚರಿಯಾಗೋದು ಸಹಜ‌. ಆದರೆ ಇದು ನಿಜ ಎಂದು ಎಂದು ಅಜ್ಜಾವರದ ಶಾಂತಿಮಜಲಿನ ಈ ಮನೆಯವರು ಹೇಳುತ್ತಾರೆ‌. ಅಜ್ಜಾವರ ಗ್ರಾಮದ ಶಾಂತಿಮಜಲಿನ ಭವಾನಿ ಅವರ ಮನೆಯಂಗಳದ ತುಳಸಿ ಗಿಡದಲ್ಲಿ ಅರಳುತ್ತಿರುವುದು ದಾಸವಾಳ ಹೂವು. ಒಂದು ವಾರದಲ್ಲಿ 3ನೇ ಬಾರಿಗೆ ಈ ರೀತಿ ಹೂವು ಅರಳಿ ನಿಂತಿದೆ. ತುಳಸಿ ಗಿಡದಲ್ಲಿ ಇನ್ನೂ ಕೂಡ ಹೂವಿನ ಮೊಗ್ಗು ಇದ್ದು ಇನ್ನಷ್ಟು ದಾಸವಾಳ ಗಿಡಗಳು ಅರಳುವ

ತುಳಸಿ ಗಿಡದಲ್ಲಿ ಅರಳುತ್ತಿವೆ ದಾಸವಾಳ ಹೂವುಗಳು..! Read More »

ಕರಾವಳಿ

ಹಿರಿಯ ನಟ ಅತುಲ್ ಪರ್ಚುರೆ ನಿಧನ

(ನ್ಯೂಸ್ ಕಡಬ) newskadaba.com ಮುಂಬೈ, ಅ. 15. ಹಿರಿಯ ನಟ ಅತುಲ್ ಪರ್ಚುರೆ ಅವರು ತಮ್ಮ 57 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಕ್ಯಾನ್ಸರ್ ವಿರುದ್ಧ ಹೋರಾಡಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಕೊನೆಯುಸಿರೆಳೆದಿದ್ದಾರೆ. ಅವರು ಕಪಿಲ್ ಶರ್ಮಾ ಅವರ ಹಾಸ್ಯ ಕಾರ್ಯಕ್ರಮದ ಸ್ಮರಣೀಯ ಅವಧಿಯನ್ನು ಒಳಗೊಂಡಂತೆ ಹಲವಾರು ಹಿಂದಿ ದೂರದರ್ಶನ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಮರಾಠಿ ಪ್ರಸಿದ್ಧ ನಟರಾಗಿದ್ದರು. ಒಂದು ಟಾಕ್ ಶೋ ಪ್ರದರ್ಶನದಲ್ಲಿ, ಅವರು ತಮ್ಮ ಕ್ಯಾನ್ಸರ್ ರೋಗನಿರ್ಣಯವನ್ನು ಬಹಿರಂಗಪಡಿಸಿದರು, ವೈದ್ಯರು ಅವರ ಯಕೃತ್ತಿನಲ್ಲಿ

ಹಿರಿಯ ನಟ ಅತುಲ್ ಪರ್ಚುರೆ ನಿಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top