ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ತುಳಸಿ ಗಿಡದಲ್ಲಿ ಅರಳುತ್ತಿವೆ ದಾಸವಾಳ ಹೂವುಗಳು..! – News Kadaba

ತುಳಸಿ ಗಿಡದಲ್ಲಿ ಅರಳುತ್ತಿವೆ ದಾಸವಾಳ ಹೂವುಗಳು..!

(ನ್ಯೂಸ್ ಕಡಬ) newskadaba.com ಸುಳ್ಯ, ಅ. 16. ತುಳಸಿ ಗಿಡದಲ್ಲಿ ದಾಸವಾಳ ಹೂವು ಅರಳುತ್ತಿವೆ ಎಂದರೆ ಅಚ್ಚರಿಯಾಗೋದು ಸಹಜ‌. ಆದರೆ ಇದು ನಿಜ ಎಂದು ಎಂದು ಅಜ್ಜಾವರದ ಶಾಂತಿಮಜಲಿನ ಈ ಮನೆಯವರು ಹೇಳುತ್ತಾರೆ‌. ಅಜ್ಜಾವರ ಗ್ರಾಮದ ಶಾಂತಿಮಜಲಿನ ಭವಾನಿ ಅವರ ಮನೆಯಂಗಳದ ತುಳಸಿ ಗಿಡದಲ್ಲಿ ಅರಳುತ್ತಿರುವುದು ದಾಸವಾಳ ಹೂವು.

ಒಂದು ವಾರದಲ್ಲಿ 3ನೇ ಬಾರಿಗೆ ಈ ರೀತಿ ಹೂವು ಅರಳಿ ನಿಂತಿದೆ. ತುಳಸಿ ಗಿಡದಲ್ಲಿ ಇನ್ನೂ ಕೂಡ ಹೂವಿನ ಮೊಗ್ಗು ಇದ್ದು ಇನ್ನಷ್ಟು ದಾಸವಾಳ ಗಿಡಗಳು ಅರಳುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಗಿಡ ಕಸಿ ಮಾಡಿದರೆ ಈ ರೀತಿ ತುಳಸಿ ಗಿಡದಲ್ಲಿ ದಾಸವಾಳ ಅರಳಬಹುದು. ಆದರೆ ಇವರ ಮನೆಯಲ್ಲಿ ಇವರೇನು ಹಾಗೆ ಕಸಿ ಕಟ್ಟಿಲ್ಲ. ತನ್ನಷ್ಟಕ್ಕೇ ಈ ವಿಸ್ಮಯ ಕಂಡು ಬಂದಿದೆ ಎನ್ನುತ್ತಾರೆ. ತುಳಸಿ ಗಿಡದ ಸಮೀಪದಲ್ಲಿಯೇ ದಾಸವಾಳ ಹೂವಿನ ಗಿಡಗಳು ಇದೆ. ಆದುದರಿಂದ ತುಳಸಿ ಗಿಡ ಹಾಗೂ ದಾಸವಾಳ ಪರಾಗಸ್ಪರ್ಶ ಆಗಿರುವ ಕಾರಣ ಈ ರೀತಿಯ ವಿಸ್ಮಯ ಉಂಟಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ. ತುಳಸಿ ಗಿಡದಲ್ಲಿ ದಾಸವಾಳ ಅರಳಿರುವುದು ನೋಡಲು ಹಲವು ಮಂದಿ ಕುತೂಹಲಿಗಳು ಆಗಮಿಸುತ್ತಿದ್ದಾರೆ.

 

 

Scroll to Top