News Kadaba

ಚಾಮುಂಡಿ ಬೆಟ್ಟದಲ್ಲಿ ರಸ್ತೆ ಮೇಲೆ ಉರುಳಿಬಿದ್ದ ಬೃಹತ್ ಕಲ್ಲುಬಂಡೆ

(ನ್ಯೂಸ್ ಕಡಬ) newskadaba.com ಡಿ. 03 ಮೈಸೂರು: ಫೆಂಗಲ್‌ ಚಂಡಮಾರುತದ ಪ್ರಭಾವ ನಗರಕ್ಕೆ ವ್ಯಾಪಕವಾಗಿ ತಟ್ಟಿದ್ದು, ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಚಾಮುಂಡಿ ಬೆಟ್ಟದಲ್ಲಿ ಬೃಹತ್‌ ಕಲ್ಲುಬಂಡೆಯೊಂದು ಉರುಳಿಬಿದ್ದಿದೆ. ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ರಾತ್ರಿ ಸಮಯದಲ್ಲಿ ಬೃಹತ್‌ ಬಂಡೆಯೊಂದು ಉರುಳಿಬಿದ್ದಿದೆ. ಒಂದು ವೇಳೆ ಬೆಳಗಿನ ಸಮಯದಲ್ಲಿ ವಾಹನಗಳು ಸಂಚರಿಸಬೇಕಾದರೆ ಬಂಡೆ ಉರುಳಿದ್ದರೆ ತೊಂದರೆಯಾಗುತ್ತಿತ್ತು. ಇಂದು ಬೆಳಿಗ್ಗೆ ಬಂಡೆಯನ್ನು ಗಮನಿಸಿದ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಬಂಡೆಯನ್ನು ಪಕ್ಕಕ್ಕೆ ಸರಿಸಿದ್ದಾರೆ. ಸರಸ್ವತಿಪುರಂನಲ್ಲಿ ಎರಡು ಮರಗಳು ಕಾರಿನ […]

ಚಾಮುಂಡಿ ಬೆಟ್ಟದಲ್ಲಿ ರಸ್ತೆ ಮೇಲೆ ಉರುಳಿಬಿದ್ದ ಬೃಹತ್ ಕಲ್ಲುಬಂಡೆ Read More »

ಕರ್ನಾಟಕ

ಸಂಸತ್ತಿನ ಚಳಿಗಾಲದ ಅಧಿವೇಶನ : ಸಿಗರೆಟ್, ತಂಪುಪಾನೀಯದ ಮೇಲಿನ ಜಿಎಸ್ಟಿ ಶೇ.35ಕ್ಕೆ ಹೆಚ್ಚಳ ಸಂಭವ

(ನ್ಯೂಸ್ ಕಡಬ) newskadaba.com ಡಿ. 03 ನವದೆಹಲಿ: ಅದಾನಿ ಹಗರಣ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟಿಗೆ ಒಳಗಾಗಿದ್ದ ಸಂಸತ್ತಿನ ಚಳಿಗಾಲದ ಅಧಿವೇಶನದ ಕಲಾಪಗಳು ಮಂಗಳವಾರದಿಂದ ಸುಗಮವಾಗಿ ಆರಂಭವಾಗುವ ನಿರೀಕ್ಷೆ ಇದೆ. ಸಭಾಧ್ಯಕ್ಷರೊಂದಿಗಿನ ಸರ್ವಪಕ್ಷ ಸಭೆಯ ಬಳಿಕ ಈ ಮಹತ್ವದ ಬೆಳವಣಿಗೆ ನಡೆದಿದೆ. ‘ಡಿ.13 ಮತ್ತು 14ರಂದು ಲೋಕಸಭೆಯಲ್ಲಿ ಮತ್ತು 16 ಮತ್ತು 17ರಂದು ರಾಜ್ಯಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಗೆ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷಗಳು ಒಪ್ಪಿಕೊಂಡಿವೆ. ಸಂವಿಧಾನ ಸ್ವೀಕರಿಸಿ 75 ವರ್ಷ ಆದ ನಿಮಿತ್ತ ಈ

ಸಂಸತ್ತಿನ ಚಳಿಗಾಲದ ಅಧಿವೇಶನ : ಸಿಗರೆಟ್, ತಂಪುಪಾನೀಯದ ಮೇಲಿನ ಜಿಎಸ್ಟಿ ಶೇ.35ಕ್ಕೆ ಹೆಚ್ಚಳ ಸಂಭವ Read More »

ಕರ್ನಾಟಕ

ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ: “ಗಾಂಧಿ ಭಾರತ” ಹೆಸರಲ್ಲಿ ವರ್ಷವಿಡೀ ಕಾರ್ಯಕ್ರಮಕ್ಕೆ ಸರ್ಕಾರ ನಿರ್ಧಾರ

(ನ್ಯೂಸ್ ಕಡಬ) newskadaba.com ಡಿ. 03 ಬೆಂಗಳೂರು: ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ 1924ರಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನದ ಸ್ಮರಣಾರ್ಥ “ಗಾಂಧಿ ಭಾರತ” ಹೆಸರಲ್ಲಿ ವರ್ಷವಿಡೀ ಅರ್ಥಪೂರ್ಣ ಕಾರ್ಯಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಆಚರಣೆ ಜಗತ್ತಿಗೆ ಗಾಂಧಿ ಸಂದೇಶ ಸಾರುವಂತಿರಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿ ಭೇಟಿ ನೀಡಿದ ರಾಜ್ಯದ 120 ಸ್ಥಳಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಯೋಜಿಸಿದೆ. ಜೊತೆಗೆ ರಿಚರ್ಡ್ ಅಟೆನ್‌ಬರೋ ಅವರ ಗಾಂಧಿ ಸಿನಿಮಾ ಕೂಡ ಕನ್ನಡದಲ್ಲಿ ನಿರ್ಮಾಣವಾಗಲಿದೆ. ಸುವರ್ಣ

ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ: “ಗಾಂಧಿ ಭಾರತ” ಹೆಸರಲ್ಲಿ ವರ್ಷವಿಡೀ ಕಾರ್ಯಕ್ರಮಕ್ಕೆ ಸರ್ಕಾರ ನಿರ್ಧಾರ Read More »

ಕರ್ನಾಟಕ

ಉಳ್ಳಾಲ: ತಲಪಾಡಿ ಟೋಲ್ ಸಿಬ್ಬಂದಿಗೆ ಕಾರಿನಲ್ಲಿದ್ದ ಮೂವರಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಡಿ. 03.ಉಳ್ಳಾಲ: ಟೋಲ್ ಸಿಬ್ಬಂದಿಗೆ ಕಾರಿನಲ್ಲಿದ್ದ ಮೂವರ ತಂಡ ಹಲ್ಲೆ ಎಸಗಿರುವ ಘಟನೆ ರಾಷ್ಟೀಯ ಹೆದ್ದಾರಿ 66ರ ತಲಪಾಡಿಯಲ್ಲಿ ಭಾನುವಾರ ತಡರಾತ್ರಿ ವೇಳೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಉಳ್ಳಾಲದ ಓರ್ವನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಉತ್ತರಪ್ರದೇಶ ನೋಂದಾಯಿತ  ಐ-20 ಕಾರೊಂದರಲ್ಲಿ ಐವರು ಯುವಕರು ಮಂಗಳೂರಿನಿಂದ ಕೇರಳ ಕಡೆಗೆ   ತೆರಳುತ್ತಿದ್ದರು. ತಲಪಾಡಿ  ಟೋಲ್ ಗೇಟಿನಲ್ಲಿ ಟೋಲ್ ಪಾವತಿಸದೆ ಕಾರು ಮುಂದೆ ಚಲಿಸಿದ್ದು, ಈ ವೇಳೆ ಟೋಲ್ ನಿರ್ವಹಣೆ ನಡೆಸುವ ಇಜಿಎಸ್ ಸಂಸ್ಥೆ ಉದ್ಯೋಗಿ

ಉಳ್ಳಾಲ: ತಲಪಾಡಿ ಟೋಲ್ ಸಿಬ್ಬಂದಿಗೆ ಕಾರಿನಲ್ಲಿದ್ದ ಮೂವರಿಂದ ಹಲ್ಲೆ Read More »

ಕರಾವಳಿ

ಬೆಂಗಳೂರಿನಿಂದ ಶಬರಿಮಲೆಗೆ ಐರಾವತ, ವೋಲ್ವೋ ಬಸ್ ಸೇವೆ ಶುರು

(ನ್ಯೂಸ್ ಕಡಬ) newskadaba.com ಡಿ. 02. ಬೆಂಗಳೂರು : ಈಗಾಗಲೇ ಶಬರಿಮಲೆಯಲ್ಲಿ ಅಯ್ಯಪ್ಪನ  ದರ್ಶನ ಪ್ರಾರಂಭವಾಗಿದ್ದು, ಭಕ್ತರು ಸಾಗರೋಪಾದಿಯಲ್ಲಿ ಜಮಾಯಿಸುತ್ತಿದ್ದಾರೆ. ಡಿಸೆಂಬರ್‌ನಿಂದ ಜನವರಿವರೆಗೆ ಕರ್ನಾಟಕದಿಂದ ಶಬರಿಮಲೆಗೆ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸುತ್ತಾರೆ. ಈ ಬಾರಿ ಭಕ್ತರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗುಡ್‌ ನ್ಯೂಸ್‌ ನೀಡಿದ್ದು, ಇನ್ನು ಮುಂದೆ ಬೆಂಗಳೂರಿನಿಂದ ಶಬರಿಮಲೆ ಯಾತ್ರೆ ಸುಗಮವಾಗಲಿದೆ. ಭಕ್ತರಿಗೆ ಅನುಕೂಲಕರವಾಗುವಂತೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ ಸೇವೆಯನ್ನು ಆರಂಭಿಸಿದೆ. ರಾಜಧಾನಿ ಬೆಂಗಳೂರಿನಿಂದ ಕೇರಳದ ವರೆಗೆ ಇನ್ನು ಐರಾವತ ವೋಲ್ವೋ ಬಸ್‌ಗಳು ಸಂಚರಿಸಲಿವೆ.

ಬೆಂಗಳೂರಿನಿಂದ ಶಬರಿಮಲೆಗೆ ಐರಾವತ, ವೋಲ್ವೋ ಬಸ್ ಸೇವೆ ಶುರು Read More »

ಕರ್ನಾಟಕ

ಕಡಬ ಠಾಣಾ ಪೊಲೀಸರ ವಿರುದ್ಧ ದೂರು ಸ್ವೀಕರಿಸದ, ದೂರುದಾರರನ್ನು ಬೆದರಿಸಿದ ಆರೋಪ

(ನ್ಯೂಸ್ ಕಡಬ) newskadaba.com ಡಿ. 02 ಕಡಬ. : ಕಡಬದ ಬಿಳಿನೆಲೆ ಗ್ರಾಮದ ಮುಂಗ್ಲಿ ಮಜಲು ನಿವಾಸಿ ಸಂದೀಪ್ (29) ಎಂಬವರು ಕಳೆದ ನ.27ರಿಂದ ನಾಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಆದರೆ ಆರಂಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದರೂ ಕಡಬ ಪೊಲೀಸರು ದೂರು ಸ್ವೀಕರಿಸಿರಲಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಜೊತೆಗೆ ದೂರು ನೀಡಲು ಬಂದ ಸಂದೀಪ್ ಅವರ ತಾಯಿಯನ್ನೇ ಬೆದರಿಸಿ ಕಳುಹಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಮರ್ದಾಳದಲ್ಲಿ ವಿನಯ ಎಂಬವರ ಜೊತೆ ಶಾಮಿಯಾನ ಕೆಲಸ ಮಾಡಿಕೊಂಡಿದ್ದ ಸಂದೀಪ್, ನವೆಂಬರ್ ೨೭ರಿಂದ ನಾಪತ್ತೆಯಾಗಿದ್ದರು.

ಕಡಬ ಠಾಣಾ ಪೊಲೀಸರ ವಿರುದ್ಧ ದೂರು ಸ್ವೀಕರಿಸದ, ದೂರುದಾರರನ್ನು ಬೆದರಿಸಿದ ಆರೋಪ Read More »

ಕರಾವಳಿ

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆ- ವಾರ್ಷಿಕ ಬಹುಮಾನ ವಿತರಣ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಡಿ. 02. ಕಡಬ ಸೈಂಟ್ ಜೋಕಿಮ್ಸ್ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗಗಳ ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಬಸ್ತಿಯಂ ಪಾಯಿಸ್ ಬಹುಮಾನ ವಿತರಿಸಿ ಮಾತನಾಡಿದರು. ಪ್ರತಿಭೆಯನ್ನು ಪುರಸ್ಕರಿಸುವ ಮೂಲಕ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಿ ಪೋಷಿಸುವ ಜವಾಬ್ದಾರಿ ವಿದ್ಯಾಸಂಸ್ಥೆಗಳ ಮೇಲಿದೆ; ಈ ಮೂಲಕ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆ- ವಾರ್ಷಿಕ ಬಹುಮಾನ ವಿತರಣ ಕಾರ್ಯಕ್ರಮ Read More »

ಕರಾವಳಿ

ಕಾಸರಗೋಡು: ಭಾರೀ ಮಳೆ ಮುನ್ಸೂಚನೆ- ನಾಳೆ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 02. ಭಾರೀ  ಮಳೆ ಮುನ್ಸೂಚನೆ ಹಾಗೂ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ ಹಿನ್ನಲೆಯಲ್ಲಿ ನಾಳೆ (3) ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆ ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಆದೇಶ ನೀಡಿದ್ದಾರೆ. ಪ್ರೊಪೇಶನಲ್ ಕಾಲೇಜು, ಟ್ಯೂಶನ್ ಕೇಂದ್ರ, ಅಂಗನವಾಡಿ, ಮದ್ರಸಗಳಿಗೆ ರಜೆ ಅನ್ವಯ ವಾಗಲಿದೆ. ಆದರೆ ಮೋಡಲ್ ರೆಶಿಡೆನ್ಶಿಯಲ್ ಶಾಲೆಗಳಿಗೆ ರಜೆ ಅನ್ವಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಭಾರೀ ಮಳೆ ಸುರಿಯುತ್ತಿದೆ. ಮುಂದಿನ

ಕಾಸರಗೋಡು: ಭಾರೀ ಮಳೆ ಮುನ್ಸೂಚನೆ- ನಾಳೆ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ Read More »

ಕರಾವಳಿ

OTS ಗಡುವು ಅಂತ್ಯ: BBMPಯಿಂದ ದಾಖಲೆಯ 4,284 ಕೋಟಿ ರೂ.ತೆರಿಗೆ ಸಂಗ್ರಹ

(ನ್ಯೂಸ್ ಕಡಬ) newskadaba.com ಡಿ. 02. ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಬಾಕಿ ಪಾವತಿಗೆ ನೀಡಿದ್ದ ಒನ್ ಟೈಮ್ ಸೆಟ್ಲಮೆಂಟ್ ಅವಕಾಶ ಶನಿವಾರ (ನ.30)ಕ್ಕೆ ಕೊನೆಗೊಂಡಿದ್ದು, ಒಟಿಎಸ್ ಪರಿಣಾಮ ಬಿಬಿಎಂಪಿಗೆ ದಾಖಲೆಯ 4,284 ಕೋಟಿ ರೂ. ಆಸ್ತಿ ತೆರಿಗೆ ವಸೂಲಿಯಾಗಿದೆ. ಈ ಮೂಲಕ ಪಾಲಿಕೆಯೂ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. 2022-23ರಲ್ಲಿ 2,300 ಕೋಟಿ ರೂಪಾಯಿ ಮತ್ತು 2023-24ರಲ್ಲಿ 2293.81 ಕೋಟಿ ರೂಪಾಯಿಗಳನ್ನು ಪಾಲಿಕೆ ಸಂಗ್ರಹಿಸಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ

OTS ಗಡುವು ಅಂತ್ಯ: BBMPಯಿಂದ ದಾಖಲೆಯ 4,284 ಕೋಟಿ ರೂ.ತೆರಿಗೆ ಸಂಗ್ರಹ Read More »

ಕರ್ನಾಟಕ

ದ್ವಿತೀಯ ಪಿಯುಸಿ, ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆ-1 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 02. ಏಪ್ರಿಲ್ 2- ವಿಜ್ಞಾನ ಪ್ರಸಕ್ತ ಸಾಲಿನ (2024-25) ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ‌. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟ ಮಾಡಿದೆ. ಮಾರ್ಚ್ 1 ರಿಂದ 19ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದರೆ, ಮಾರ್ಚ್ 20 ರಿಂದ ಏಪ್ರಿಲ್ 2ರ ವರೆಗೆ ಎಸ್ಎಸ್ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ಬಹುತೇಕ ತಾತ್ಕಾಲಿಕ ವೇಳಾಪಟ್ಟಿಯೇ ಅಂತಿಮವಾಗಲಿದೆ. ವೇಳಾಪಟ್ಟಿಗೆ ಆಕ್ಷೇಪಣೆ

ದ್ವಿತೀಯ ಪಿಯುಸಿ, ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆ-1 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ Read More »

ಕರ್ನಾಟಕ
Scroll to Top