News Kadaba

ಹರಿದ್ವಾರದಲ್ಲಿ ಗಂಗಾಜಲ ಕುಡಿಯಲು ಅಸುರಕ್ಷಿತ – ಮಾಲಿನ್ಯ ನಿಯಂತ್ರಣ ಮಂಡಳಿ

(ನ್ಯೂಸ್ ಕಡಬ) newskadaba.com ಡಿ. 04 ಹರಿದ್ವಾರ: ಗಂಗಾ ನದಿ ನೀರು ‘ಬಿ’ ಕೆಟಗರಿಯಲ್ಲಿದ್ದು, ಕುಡಿಯಲು ಅಸುರಕ್ಷಿತ ಆದರೆ ಸ್ನಾನಕ್ಕೆ ಯೋಗ್ಯವಾಗಿದೆ ಎಂದು ಉತ್ತರಾಖಂಡ ಮಾಲಿನ್ಯ ನಿಯಂತ್ರಣ ಮಂಡಳಿ ಬುಧವಾರ ತಿಳಿಸಿದೆ. ಉತ್ತರಾಖಂಡದ ಮಾಲಿನ್ಯ ನಿಯಂತ್ರಣ ಮಂಡಳಿಯು ಉತ್ತರ ಪ್ರದೇಶದ ಗಡಿಯುದ್ದಕ್ಕೂ ಹರಿದ್ವಾರದ ಸುಮಾರು ಎಂಟು ಸ್ಥಳಗಳಲ್ಲಿ ಪ್ರತಿ ತಿಂಗಳು ಗಂಗಾನದಿಯ ನೀರನ್ನು ಪರೀಕ್ಷಿಸುತ್ತದೆ. ಇತ್ತೀಚಿನ ಪರೀಕ್ಷೆಯಲ್ಲಿ ನವೆಂಬರ್ ತಿಂಗಳ ಗಂಗಾ ನದಿಯ ನೀರು ‘ಬಿ’ ಕೆಟಗರಿ ಎಂದು ಕಂಡುಬಂದಿದೆ. ನದಿಯ ನೀರನ್ನು ಐದು ವರ್ಗಗಳಾಗಿ ವಿಂಗಡಿಸಲಾಗಿದೆ […]

ಹರಿದ್ವಾರದಲ್ಲಿ ಗಂಗಾಜಲ ಕುಡಿಯಲು ಅಸುರಕ್ಷಿತ – ಮಾಲಿನ್ಯ ನಿಯಂತ್ರಣ ಮಂಡಳಿ Read More »

ರಾಷ್ಟ್ರೀಯ ನ್ಯೂಸ್

ಆಟೋ ಚಾಲಕ ನಾಪತ್ತೆ: ಪ್ರಕರಣ ದಾಖಲು..!

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 04. ಆಟೋ ಚಾಲಕ ಯುವಕನೊಬ್ಬ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಆಟೋ ಚಾಲಕನನ್ನು ವೀರಕಂಬ ಗ್ರಾಮದ ಬಾಯಿಲ ನಿವಾಸಿ ಪದ್ಮನಾಭ ನಾಯ್ಕ ಅವರ ಪುತ್ರ ಧನರಾಜ್‌( 28) ಎಂದು ಗುರುತಿಸಲಾಗಿದೆ. ನವಂಬರ್‌ 28ರಂದು ಎಂದಿನಂತೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಬಾಯಿಲದಿಂದ ಬೆಳಿಗ್ಗೆ 8.30 ಗಂಟೆಗೆ ಅಟೋರಿಕ್ಷಾವನ್ನು ತೆಗೆದುಕೊಂಡು ಬಾಡಿಗೆಗೆ ಹೋಗುತ್ತೇನೆಂದು ಹೇಳಿ ಹೋದವನು ಈ ದಿನ ಇನ್ನೂ ಮನೆಗೆ ಬಂದಿರುವುದಿಲ್ಲ, ಈ ಕಾರಣ

ಆಟೋ ಚಾಲಕ ನಾಪತ್ತೆ: ಪ್ರಕರಣ ದಾಖಲು..! Read More »

ಕರಾವಳಿ, ಕ್ರೈಮ್ ನ್ಯೂಸ್

ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಓರ್ವ ಉಗ್ರ ಮೃತ್ಯು

(ನ್ಯೂಸ್ ಕಡಬ) newskadaba.com ಡಿ. 03 ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದಾಚಿಗಂ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉಗ್ರರಿರುವ ಮಾಹಿತಿಯ ಹಿನ್ನೆಲೆ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಡಿ.01ರಂದು ಕಾರ್ಯಾಚರಣೆ ಪ್ರಾರಂಭವಾಗಿದ್ದು, ಇಂದು ಬೆಳಿಗ್ಗೆ ಓರ್ವ ಉಗ್ರ ಸಾವನ್ನಪ್ಪಿದ್ದಾನೆ.  ದಾಚಿಗಂ ಅರಣ್ಯ ಪ್ರದೇಶಕ್ಕೂ ಮುನ್ನ ಶ್ರೀನಗರದ ಹರ್ವಾನ್ ಅರಣ್ಯಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದರು. ನಂತರ ಉಗ್ರರ ಅಡಗುತಾಣ

ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಓರ್ವ ಉಗ್ರ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಫೆಂಗಲ್ ಚಂಡಮಾರುತ: ಮಂಗಳೂರು, ಉಡುಪಿಯಲ್ಲಿ ಮಳೆ

(ನ್ಯೂಸ್ ಕಡಬ) newskadaba.com ಡಿ. 03 ದ.ಕ/ಉಡುಪಿ: ಫೆಂಗಲ್ ಚಂಡಮಾರುತದ ಪ್ರಭಾವದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಮವಾರ ಮಧ್ಯಾಹ್ನ ಮತ್ತು ಸಂಜೆ ಭಾರೀ ಮಳೆಯಾಗಿದೆ. ರಾತ್ರಿಯಿಡೀ ಸುರಿದ ಮಳೆ ಮಂಗಳವಾರ ಬೆಳಗಿನ ಜಾವದವರೆಗೂ ಮುಂದುವರಿದಿದೆ. ಮಂಗಳೂರಿನ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ಕೊಟ್ಟಾರ ಚೌಕಿ, ಪಿವಿಎಸ್, ಪಂಪ್‌ವೆಲ್, ಬಜ್ಜೋಡಿ, ಬಜಾಲ್ ಅಂಡರ್‌ಪಾಸ್ ಮತ್ತು ಪಡೀಲ್‌ನಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಐಎಂಡಿ ಮಂಗಳವಾರ ಬೆಳಗಿನ ಜಾವದವರೆಗೆ ಆರೆಂಜ್ ಅಲರ್ಟ್ ನೀಡಿದ್ದು, ಹಳದಿ ಅಲರ್ಟ್ ನೀಡಲಾಗಿದೆ. ಮೋಡ ಕವಿದ ವಾತಾವರಣದ ಕಾರಣ

ಫೆಂಗಲ್ ಚಂಡಮಾರುತ: ಮಂಗಳೂರು, ಉಡುಪಿಯಲ್ಲಿ ಮಳೆ Read More »

ಕರಾವಳಿ

ಚುನಾವಣಾ ಬಾಂಡ್ ಅಕ್ರಮ ಪ್ರಕರಣ ನಿರ್ಮಲಾ ಸೀತಾರಾಮನ್, ಕಟೀಲ್ಗೆ ಬಿಗ್ ರಿಲೀಫ್ ;ಹೈಕೋರ್ಟ್

(ನ್ಯೂಸ್ ಕಡಬ) newskadaba.com ಡಿ. 03 ಬೆಂಗಳೂರು : ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದೀಗ ಈ ಎಫ್ಐಆರ್ ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದೆ.

ಚುನಾವಣಾ ಬಾಂಡ್ ಅಕ್ರಮ ಪ್ರಕರಣ ನಿರ್ಮಲಾ ಸೀತಾರಾಮನ್, ಕಟೀಲ್ಗೆ ಬಿಗ್ ರಿಲೀಫ್ ;ಹೈಕೋರ್ಟ್ Read More »

ಕರ್ನಾಟಕ

‘ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ 44 ಕೋಟಿಗಳನ್ನು ಮಂಜೂರು’ – ಸಿಎಂ

(ನ್ಯೂಸ್ ಕಡಬ) newskadaba.com ಡಿ. 03 ಬೆಂಗಳೂರು : ವಿಕಲಚೇತನರ ಸಬಲೀಕರಣಕ್ಕಾಗಿ ಸರ್ಕಾರ ಬದ್ಧವಾಗಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಪೂರಕ ಅಂದಾಜಿನಲ್ಲಿ 44 ಕೋಟಿಗಳನ್ನು ಮಂಜೂರು ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದರು. ರಾಜ್ಯದಲ್ಲಿ ಸುಮಾರು 15 ಲಕ್ಷ ವಿಕಲಚೇತನರಿದ್ದಾರೆ. ಇವರೆಲ್ಲರ ಆರೈಕೆ ಮಾಡಿ ವಿಶೇಷ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಕರ್ತವ್ಯ. ಸಂವಿಧಾನದಲ್ಲಿ ಎಲ್ಲರೂ ಬದುಕುವ , ಉದ್ಯೋಗ ಪಡೆಯುವಂತಹ ಅವಕಾಶವನ್ನು ಕಲ್ಪಿಸಿದೆ. ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ. ಅವರು ಸಮಾಜದ ಆಸ್ತಿಯಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ

‘ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ 44 ಕೋಟಿಗಳನ್ನು ಮಂಜೂರು’ – ಸಿಎಂ Read More »

ಕರ್ನಾಟಕ

ಶಬರಿಮಲೆಯಲ್ಲಿ ಭಾರೀ ಮಳೆ – ಅರಣ್ಯ ಮಾರ್ಗ ತಾತ್ಕಾಲಿಕ ಬಂದ್

(ನ್ಯೂಸ್ ಕಡಬ) newskadaba.com ಡಿ. 03 ಶಬರಿಮಲೆ: ಫೆಂಗಲ್ ಚಂಡಮಾರುತದಿಂದಾಗಿ ತಮಿಳುನಾಡ, ಕರ್ನಾಟಕ ಮತ್ತು ಕೇರಳದಲ್ಲಿ ಭಾರೀ ಮಳೆಯಾಗುತ್ತಿದೆ. ಕೇರಳದಲ್ಲಿ ಹವಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸ ಲಾಗಿದೆ. ಈ ಹಿನ್ನಲೆ ಇದೀಗ ಶಬರಿಮಲೆಗೆ ತೆರಳವು ಭಕ್ತರ ಮೇಲೂ ಮಳೆ ಸಂಕಷ್ಟ ತಂದಿದೆ. ಶಬರಿಮಲೆ ಪರಿಸರದಲ್ಲೂ ಶನಿವಾರ ಆರಂಭವಾದ ಮಳೆ ಸುರಿಯುತ್ತಲೇ ಇದೆ. ಕರ್ನಾಟಕ ಸೇರಿ ವಿವಿಧ ಜಿಲ್ಲೆಗಳಿಂದ ಶಬರಿಮಲೆಗೆ ತೆರಳಿದ್ದ ನೂರಾರು ಯಾತ್ರಿಕರು ಭಾರೀ ಮಳೆಗೆ ಸಿಲುಕಿಹಾಕಿಕೊಂಡಿದ್ದಾರೆ. ಭೂಕುಸಿತ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅರಣ್ಯ ಮಾರ್ಗವನ್ನು ತಾತ್ಕಾಲಿಕವಾಗಿ

ಶಬರಿಮಲೆಯಲ್ಲಿ ಭಾರೀ ಮಳೆ – ಅರಣ್ಯ ಮಾರ್ಗ ತಾತ್ಕಾಲಿಕ ಬಂದ್ Read More »

ಬ್ರೇಕಿಂಗ್ ನ್ಯೂಸ್

ಕೇಂದ್ರದಿಂದ ರಾಜ್ಯಗಳಿಗೆ ವಿಶೇಷ ಅನುದಾನ: ರೂ. 50,571 ಕೋಟಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಡಿ. 03 ನವದೆಹಲಿ: ಕೇಂದ್ರ ಸರ್ಕಾರ ರೂ. 50, 571 ಕೋಟಿ ಅನುದಾನವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ವೆಚ್ಚವನ್ನು ಹೆಚ್ಚಿಸಲು ಬಂಡವಾಳ ಹೂಡಿಕೆ ಯೋಜನೆ ಭಾಗವಾಗಿ ವಿಶೇಷ ನೆರವನ್ನು ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಅರುಣಾಚಲ ಪ್ರದೇಶ, ಹರಿಯಾಣ, ಕೇರಳ, ಪಂಜಾಬ್ ಮತ್ತು ತೆಲಂಗಾಣ ಹೊರತುಪಡಿಸಿ 28 ರಾಜ್ಯಗಳ ಪೈಕಿ

ಕೇಂದ್ರದಿಂದ ರಾಜ್ಯಗಳಿಗೆ ವಿಶೇಷ ಅನುದಾನ: ರೂ. 50,571 ಕೋಟಿ ಬಿಡುಗಡೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕವಿತಾ ಲಂಕೇಶ್ ನೇತೃತ್ವದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಮಿಟಿ ರಚನೆ

(ನ್ಯೂಸ್ ಕಡಬ) newskadaba.com ಡಿ. 03 ಬೆಂಗಳೂರು: ಕರ್ನಾಟಕ ಚಲನಚಿತ್ರೋದ್ಯಮದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಸಮಿತಿ  ಸಮಿತಿ ರಚಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆದೇಶ ಹೊರಡಿಸಿದೆ. ನಿರ್ದೇಶಕಿ ಕವಿತಾ ಲಂಕೇಶ್‌ ಅವರನ್ನು ಇದಕ್ಕೆ ಅಧ್ಯಕ್ಷರನ್ನಾಗಿಸಲಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಚಿತ್ರರಂಗದ ಸದಸ್ಯರು ಹಾಗೂ ಮಹಿಳಾ ಸಂಘಟನೆಗಳ ಹಲವು ತಿಂಗಳುಗಳ ಒತ್ತಡಕ್ಕೆ ಮಣಿದಿರುವ ವಾಣಿಜ್ಯ ಮಂಡಳಿ, ಕೊನೆಗೂ ಸಮಿತಿ ರಚಿಸಿದೆ. ಕೇರಳ ಚಿತ್ರರಂಗದ ಲೈಂಗಿಕ ದೌರ್ಜನ್ಯದ ಕುರಿತು ಜಸ್ಟೀಸ್ ಹೇಮಾ

ಕವಿತಾ ಲಂಕೇಶ್ ನೇತೃತ್ವದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಮಿಟಿ ರಚನೆ Read More »

ಕರ್ನಾಟಕ

ಇಂದಿನ ಚಿನ್ನದ ದರ

(ನ್ಯೂಸ್ ಕಡಬ) newskadaba.com ಡಿ. 03 ಬೆಂಗಳೂರು: ನಿನ್ನೆ ಇಳಿಕೆ ಕಂಡಿದ ಚಿನ್ನದ ದರದಲ್ಲಿ ಇಂದು ಏರಿಕೆ ಆಗಿದೆ . ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನದ ದರದಲ್ಲಿ ತಲಾ 40 ರೂ. ಮತ್ತು 43 ರೂ. ಏರಿಕೆ ಆಗಿದೆ. ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,130 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,778 ರೂ. ಇದೆ. 22 ಕ್ಯಾರಟ್‌

ಇಂದಿನ ಚಿನ್ನದ ದರ Read More »

ಕರ್ನಾಟಕ
Scroll to Top