News Kadaba

ಮಂಗಳೂರು : ಬಿರುಗಾಳಿ ಅಬ್ಬರ – ಯಕ್ಷಗಾನ ರಂಗಸ್ಥಳ ಧೂಳಿನಿಂದ ಆವೃತ

(ನ್ಯೂಸ್‌ ಕಡಬ) newskadaba.com,  ಎ.21:  ​ ನಗರದಾದ್ಯಂತ ಹಲವೆಡೆ ಸಂಜೆಯ ವೇಳೆಗೆ ಕೊಂಚ ಮಟ್ಟಿನ ಮಳೆಯಾಗಿದ್ದು ಬಿರುಗಾಳಿ ಅಬ್ಬರದಿಂದಾಗಿ ಯಕ್ಷಗಾನ ರಂಗಸ್ಥಳ ಧೂಳಿನಿಂದ ಆವೃತವಾದ ಘಟನೆ ನಡೆದಿದೆ. ಶಕ್ತಿನಗರದಲ್ಲಿ ಬೀಸಿದ ಬಿರುಗಾಳಿಯ ಪರಿಣಾಮ ಯಕ್ಷಗಾನ ಬಯಲಾಟದ ರಂಗಸ್ಥಳ ಧೂಳಿನಿಂದ ಆವರಿಸಿಕೊಂಡಿತ್ತು. ಯಕ್ಷಗಾನದ ಚೌಕಿ, ಹಾಗು ಕಾರ್ಯಕ್ರಮದ ಸಲುವಾಗಿ ಹಾಕಿದ್ದ ಶಾಮಿಯಾನ ಸೇರಿದಂತೆ ಅಲಂಕಾರಿಕ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ ಎಂದು ತಿಳಿದು ಬಂದಿದೆ.

ಮಂಗಳೂರು : ಬಿರುಗಾಳಿ ಅಬ್ಬರ – ಯಕ್ಷಗಾನ ರಂಗಸ್ಥಳ ಧೂಳಿನಿಂದ ಆವೃತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಎ.21:  ​ ಕರಾವಳಿ ಭಾಗದ ಜನರಿಗೆ ಹವಾಮಾನ ಇಲಾಖೆ ಗಂಭೀರ ಎಚ್ಚರಿಕೆ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಉಷ್ಣ ಅಲೆ ಬೀಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ ಈಗಾಗಲೇ ಬಿಸಿಲಿನ ಬೇಗೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೀಟ್‌ವೇವ್ ಎಚ್ಚರಿಕೆ ಘೋಷಿಸಲಾಗಿದೆ.. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಶ್ವ ಮಟ್ಟದಲ್ಲಿ ಸದ್ದು ಮಾಡ್ತಿದೆ ‘ಸೆಪ್ಟೆಂಬರ್ 21’: ಪ್ರತಿಷ್ಠಿತ ಕೇನ್ಸ್‌ಗೆ ಅಧಿಕೃತ ಆಯ್ಕೆ

(ನ್ಯೂಸ್‌ ಕಡಬ) newskadaba.com,  ಎ.20 : ಇದು ಹೆಮ್ಮೆಯ ವಿಷಯ! 22 ವರ್ಷದ ಕಿರಿಯ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರ ನಿರ್ದೇಶನದ ಚೊಚ್ಚಲ ಚಿತ್ರ ‘ಸೆಪ್ಟೆಂಬರ್ 21′, 2026ರ ಮೇ ತಿಂಗಳಿನಲ್ಲಿ ನಡೆಯಲಿರುವ 79ನೇ ಕೇನ್ಸ್ ಚಲನಚಿತ್ರೋತ್ಸವದ ‘ಮಾರ್ಚೆ ಡು ಫಿಲ್ಮ್’ ವಿಭಾಗದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ. ವಿಶ್ವ ಪ್ರಥಮ ಪ್ರದರ್ಶನ: ಮೇ 16 ರಂದು ಸಂಜೆ 5:45 ಕ್ಕೆ ಕೇನ್ಸ್‌ನ ಪಲೈಸ್ ಥಿಯೇಟರ್‌ನಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದೆ. ಕಥಾವಸ್ತು: ಈ ಚಿತ್ರವು ಆಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವವರ

ವಿಶ್ವ ಮಟ್ಟದಲ್ಲಿ ಸದ್ದು ಮಾಡ್ತಿದೆ ‘ಸೆಪ್ಟೆಂಬರ್ 21’: ಪ್ರತಿಷ್ಠಿತ ಕೇನ್ಸ್‌ಗೆ ಅಧಿಕೃತ ಆಯ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ

ಹೊಸ ಜನಗಣತಿಯ ನಂತರ ಕ್ಷೇತ್ರ ಮರುವಿಂಗಡಣೆ ಮಾಡುವುದು ಸೂಕ್ತ: ಸಿಎಂ ಸಿದ್ದರಾಮಯ್ಯ

(ನ್ಯೂಸ್‌ ಕಡಬ) newskadaba.com,  ಎ.20 ಕ್ಷೇತ್ರ ಮರುವಿಂಗಡಣೆಯನ್ನು ಹೊಸ ಜನಗಣತಿಯಾದ ನಂತರ ಮಾಡುವುದು ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಎರಡು ದಿನಗಳ ಪ್ರವಾಸ ನಿಮಿತ್ತ ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ನಾವು ಅದಕ್ಕಾಗಿಯೇ ಕ್ಷೇತ್ರ ಮರು ವಿಂಗಡಣೆಯನ್ನು ವಿರೋಧ ಮಾಡಿದೆವು. ನಾವು ಎಂದಿಗೂ ಮಹಿಳಾ ಮೀಸಲಾತಿಯ ಪರವಾಗಿಯೇ ಇದ್ದೇವೆ ಎಂದರು. ಇಲ್ಲಿಯವರೆಗೆ ಕಾಯಬೇಕಿರಲಿಲ್ಲ ಸಂವಿಧಾನಕ್ಕೆ 73, 74ನೇ ತಿದ್ದುಪಡಿಯನ್ನು ತಂದಿದ್ದು ಕಾಂಗ್ರೆಸ್ ಪಕ್ಷ. ಸ್ಥಳೀಯ ಸಂಸ್ಥೆಗಳಲ್ಲಿ 50% ಮಹಿಳಾ ಮೀಸಲಾತಿ ತಂದಿದ್ದು ಕೂಡ ಕಾಂಗ್ರೆಸ್

ಹೊಸ ಜನಗಣತಿಯ ನಂತರ ಕ್ಷೇತ್ರ ಮರುವಿಂಗಡಣೆ ಮಾಡುವುದು ಸೂಕ್ತ: ಸಿಎಂ ಸಿದ್ದರಾಮಯ್ಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ಕೆಎಂಎಫ್ ಹಳೆಯ ಹಾಲು ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ

(ನ್ಯೂಸ್‌ ಕಡಬ) newskadaba.com,  ಎ.20 ಮಣಿಪಾಲದ ಈಶ್ವರ ನಗರದಲ್ಲಿರುವ ಕೆಎಂಎಫ್ ಹಳೆಯ ಹಾಲು ಸಂಸ್ಕರಣಾ ಘಟಕದಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟಕದಲ್ಲಿ ವೆಲ್ಡಿಂಗ್ ಕೆಲಸ ನಡೆಯುತ್ತಿದ್ದಾಗ ಬೆಳಿಗ್ಗೆ ಸುಮಾರು 11 ಗಂಟೆಗೆ ಈ ಘಟನೆ ಸಂಭವಿಸಿದೆ. ವೆಲ್ಡಿಂಗ್ ಮಾಡುವಾಗ ಬಂದ ಕಿಡಿಗಳು ಹತ್ತಿರದಲ್ಲಿದ್ದ ಎಣ್ಣೆಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ ಘಟಕದಲ್ಲಿದ್ದ ಬಾಯ್ಲರ್‌ಗೂ ಹರಡಿದೆ ಎಂದು ಹೇಳಲಾಗಿದೆ. ಉಡುಪಿಯ ಅಗ್ನಿಶಾಮಕ ದಳದ

ಉಡುಪಿ: ಕೆಎಂಎಫ್ ಹಳೆಯ ಹಾಲು ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಾಳೆಯಿಂದ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ; ಬಸ್‌ ಓಡಾಟ ವ್ಯತ್ಯಯ?

(ನ್ಯೂಸ್‌ ಕಡಬ) newskadaba.com,  ಎ.20 ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಹಿಂಬಾಕಿ ಹಾಗೂ 2024ರ ಜನವರಿಯಿಂದ ವೇತನ ಪರಿಷ್ಕರಣೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮತ್ತೆ ಹೋರಾಟಕ್ಕೆ ಸಜ್ಜಾಗಿದ್ದು, ರಾಜ್ಯದ ಬಸ್ ಸಂಚಾರದಲ್ಲಿ ಬಹುತೇಕ ಏರುಪೇರು ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಶೇಕಡಾ 7 ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಆದರೆ ಶೇಕಡಾ 25 ರಷ್ಟು ವೇತನ ಹೆಚ್ಚಳಕ್ಕೆ ನೌಕರರು ಪಟ್ಟು ಹಿಡಿದಿದ್ದಾರೆ. ವೇತನ ಏರಿಕೆ ಮಾಡದ ಸರಕಾರದ ವಿರುದ್ದ

ನಾಳೆಯಿಂದ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ; ಬಸ್‌ ಓಡಾಟ ವ್ಯತ್ಯಯ? Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಬಯೋಗ್ಯಾಸ್‌ ಯೋಜನೆ ಅನುಷ್ಠಾನಕ್ಕೆ ಸಜ್ಜು

(ನ್ಯೂಸ್‌ ಕಡಬ) newskadaba.com,  ಎ.20 ಸುಸ್ಥಿರ ನಗರ ಜಲ ನಿರ್ವಹಣೆ ಮತ್ತು ಸಕ್ಯೂ೯ಲರ್ ಎಕಾನಮಿ ನಿಟ್ಟಿನಲ್ಲಿ ಕೊಳಚೆ ನೀರಿನ ತ್ಯಾಜ್ಯವನ್ನು ಆದಾಯದ ಬೃಹತ್‌ ಮೂಲವಾಗಿ ಪರಿವರ್ತಿಸಲು ಜಲಮಂಡಳಿ ಸಜ್ಜಾಗಿದೆ. ಜಲಮಂಡಳಿಯ ಐದು ಪ್ರಮುಖ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಉತ್ಪತ್ತಿಯಾಗುವ ಕಚ್ಚಾ ಜೈವಿಕ ಅನಿಲವನ್ನು ಹೆಚ್ಚಿನ ಮೌಲ್ಯದ ಕಂಪ್ರೆಸ್ಡ್‌ ಬಯೋ-ಗ್ಯಾಸ್‌ ಆಗಿ ಮೇಲ್ದರ್ಜೆಗೇರಿಸುವ ಮೂಲಕ ಮಂಡಳಿಯು ಮುಂದಿನ ಎರಡು ದಶಕಗಳಲ್ಲಿಅಂದಾಜು 120 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸಲಿದೆ. ಬಯೋ – ಡೈಜೆಸ್ಟರ್‌ ದೇಶದ ಸೂರತ್‌ನಂತಹ ನಗರಗಳಲ್ಲಿ ಕೇವಲ 120 ಎಂಎಲ್‌ಡಿ

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಬಯೋಗ್ಯಾಸ್‌ ಯೋಜನೆ ಅನುಷ್ಠಾನಕ್ಕೆ ಸಜ್ಜು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಮೇ 4 ರಿಂದ 9 ವರೆಗೆ ‘ಕರಾವಳಿ ಕಲೋತ್ಸವ 2026’

(ನ್ಯೂಸ್‌ ಕಡಬ) newskadaba.com,  ಎ.20: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಣ್ಣರಲೋಕ’ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಚಿಣ್ಣರಲೋಕ ಸೇವಾ ಬಂಧು (ರಿ.) ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಕಲೋತ್ಸವ 2026 ತುಳು, ಕೊಂಕಣಿ, ಬ್ಯಾರಿ, ಅರೆ ಭಾಷೆ ಅಕಾಡೆಮಿ ಸಹಯೋಗಯೊಂದಿಗೆ ಬಹುಸಂಸ್ಕೃತಿ ಉತ್ಸವ ಹಾಗೂ ಆಹಾರ ಮೇಳ ಮೇ 4 ರಿಂದ 9 ವರೆಗೆ ಬಿ.ಸಿ ರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ. ಇನ್ನು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ

ಮಂಗಳೂರು : ಮೇ 4 ರಿಂದ 9 ವರೆಗೆ ‘ಕರಾವಳಿ ಕಲೋತ್ಸವ 2026’ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಾಳೆಯಿಂದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

(ನ್ಯೂಸ್‌ ಕಡಬ) newskadaba.com,  ಎ.20: ಬೆಂಗಳೂರು. ಏ. 20- ಕನಿಷ್ಠ ವೇತನ, ಸೇವೆ ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೇಶದಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಾಳೆಯಿಂದ ಮೂರು ದಿನಗಳ ಪ್ರತಿಭಟನೆಗೆ ಮುಂದಾಗಿದ್ದಾರೆ. ಏಪ್ರಿಲ್‌ 21ರಿಂದ 23ರವರೆಗೆ ನಡೆಯಲಿರುವ ಈ ಪ್ರತಿಭಟನೆ ರಾಷ್ಟ್ರ ರಾಜಧಾನಿಯಾದ ದೆಹಲಿಯ ಜಂತರ್‌ ಮಂತರ್‌ ಮುಂಭಾಗದಲ್ಲಿ ನಡೆಯಲಿದೆ. ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಅಂಗನವಾಡಿ ನೌಕರರು ಭಾಗವಹಿಸುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ ಅಂಗನವಾಡಿ ನೌಕರರನ್ನು ಶಾಶ್ವತವಾಗಿ ನೇಮಕ ಮಾಡಬೇಕು, ಕನಿಷ್ಠ

ನಾಳೆಯಿಂದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಿಲಿಕುಳ: ಗುತ್ತು ಮನೆ, ಕುಶಲಕರ್ಮಿ ಗ್ರಾಮಕ್ಕೆ ವಿದೇಶಿ ಪ್ರವಾಸಿಗರ ಭೇಟಿ

(ನ್ಯೂಸ್‌ ಕಡಬ) newskadaba.com,  ಎ.20: ನವಮಂಗಳೂರು ಬಂದರಿಗೆ ಶನಿವಾರ ಆಗಮಿಸಿದ್ದ ಸೆವೆನ್ ಸೀಸ್ ಮರೈನರ್ ಐ?ರಾಮಿ ಹಡಗಿನಲ್ಲಿ ಆಗಮಿಸಿದ್ದ ನೂರಾರು ವಿದೇಶಿ ಪ್ರವಾಸಿಗರು ಪಿಲಿಕುಳದ ಗುತ್ತುಮನೆ ಮತ್ತು ಕುಶಲಕರ್ಮಿ ಗ್ರಾಮಕ್ಕೆ ಭೇಟಿ ನೀಡಿದರು. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕುಶಲಕರ್ಮಿ ಗ್ರಾಮದಲ್ಲಿ ಮುಂದಿನ ತಲೆಮಾರಿಗೆ ಪಾರಂಪರಿಕವಾಗಿ ಉಳಿಸಿಕೊಂಡು ಬಂದಿರುವ ವಿವಿಧ ಕುಶಲಕರ್ಮಿ ವೃತ್ತಿಗಳ ನೈಜ ಅನುಭವ ಪ್ರವಾಸಿಗರನ್ನು ಆಕರ್ಷಿಸಿತು. ಇಲ್ಲಿ ಕುಂಬಾರಿಕೆ, ಕುಟ್ಟಣದ ಅವಲಕ್ಕಿ ತಯಾರಿಕೆ, ಎಣ್ಣೆ ಗಾಣದ ಕಾರ್ಯವಿಧಾನ, ಕಮ್ಮಾರಿಕೆ, ಬಡಗಿ ಕೆಲಸಗಳು ಹಾಗೂ ಬೆತ್ತ?ಬಿದಿರು ವಿಭಾಗಗಳಲ್ಲಿ

ಪಿಲಿಕುಳ: ಗುತ್ತು ಮನೆ, ಕುಶಲಕರ್ಮಿ ಗ್ರಾಮಕ್ಕೆ ವಿದೇಶಿ ಪ್ರವಾಸಿಗರ ಭೇಟಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top