News Kadaba

ಕೃತಕ ಹೃದಯದಿಂದ 100 ದಿನಗಳ ಕಾಲ ಬದುಕುಳಿದ ವ್ಯಕ್ತಿ

(ನ್ಯೂಸ್ ಕಡಬ) newskadaba.com ಮಾ. 14: ಆಸ್ಟ್ರೇಲಿಯಾದಲ್ಲಿ ಕೃತಕ ಹೃದಯ ಅಳವಡಿಸಿದ ವ್ಯಕ್ತಿಯೊಬ್ಬರು 100 ದಿನಗಳ ಕಾಲ ಆರೋಗ್ಯವಾಗಿ ಬದುಕುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಆಸ್ಟ್ರೇಲಿಯಾದ 40 ವರ್ಷದ ರೋಗಿಯೊಬ್ಬರು ಹೃದಯ ನೀಡುವಂತಹ ದಾನಿಗಾಗಿ ಕಾಯುತ್ತಿದ್ದರಿಂದ ವೈದ್ಯರು ಅವರಿಗೆ ಕೃತಕ ಟೈಟಾನಿಯಂ ಹೃದಯವನ್ನು ಅಳವಡಿಸಿದ್ದಾರೆ. ಅಚ್ಚರಿ ಎಂಬಂತೆ ಅವರು ನೂರು ದಿನಗಳ ಕಾಲ ಬದುಕಿದ್ದು, ಆ ಮೂಲಕ ಈ ತಂತ್ರಜ್ಞಾನದಿಂದ ದೀರ್ಘಕಾಲ ಬದುಕಿದ ವ್ಯಕ್ತಿ ಎಂದು ಎನಿಸಿಕೊಂಡಿದ್ದಾರೆ. ಹೃದಯ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿ ಪ್ರಸ್ತುತ ಇದೀಗ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿ […]

ಕೃತಕ ಹೃದಯದಿಂದ 100 ದಿನಗಳ ಕಾಲ ಬದುಕುಳಿದ ವ್ಯಕ್ತಿ Read More »

ಬ್ರೇಕಿಂಗ್ ನ್ಯೂಸ್

ವಿಧಾನ ಪರಿಷತ್: ಗ್ಯಾರಂಟಿ ಸಮಿತಿ ರದ್ದುಗೊಳಿಸುವಂತೆ ಬಿಜೆಪಿ, ಜೆಡಿಎಸ್ ಆಗ್ರಹ

(ನ್ಯೂಸ್ ಕಡಬ) newskadaba.com ಮಾ. 13: ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರದ್ದುಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ, ಏಜೆನ್ಸಿಗಳಿಗೆ 40 ಲಕ್ಷ ರೂ.ಗಳನ್ನು ನೀಡಿರುವುದನ್ನು ಒಪ್ಪಿಕೊಂಡಿದೆ ಎಂದು ಬಿಜೆಪಿ ಸದಸ್ಯ ಮತ್ತು ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. “ನೀವು ಏಜೆನ್ಸಿಗಳಿಗೆ ಹಣ ನೀಡಿದ್ದರೆ, ಅನುಷ್ಠಾನ ಸಮಿತಿ ಏಕೆ? ಕಾರ್ಯಕರ್ತರಿಗೆ ಸಂಬಳ ನೀಡಿ ಜನರಿಂದ

ವಿಧಾನ ಪರಿಷತ್: ಗ್ಯಾರಂಟಿ ಸಮಿತಿ ರದ್ದುಗೊಳಿಸುವಂತೆ ಬಿಜೆಪಿ, ಜೆಡಿಎಸ್ ಆಗ್ರಹ Read More »

ಕರ್ನಾಟಕ

ದಿಗಂತ್ ನಾಪತ್ತೆ ಪ್ರಕರಣ: ಪ್ರಚೋದನಾಕಾರಿ ಭಾಷಣ ಮಾಡಿದ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ- ರಮಾನಾಥ ರೈ

(ನ್ಯೂಸ್ ಕಡಬ) newskadaba.com ಮಾ. 13: ಮಂಗಳೂರು: ಫರಂಗಿಪೇಟೆಯ ಯುವಕ ದಿಗಂತ್ ನಾಪತ್ತೆ ಪ್ರಕರಣ ಜಿಲ್ಲೆಯ ಪೊಲೀಸರ ಕಾರ್ಯಾಚರಣೆ ಮೂಲಕ ಸುಖಾಂತ್ಯ ಕಂಡಿದೆ. ಆದರೆ ನಾಪತ್ತೆ ಸಂದರ್ಭದಲ್ಲಿ ಯಾವುದೇ ಸುಳಿವಿಲ್ಲದಾಗ, ಸುಳ್ಳಿನ ಮೂಲಕ ಸಮಾಜದಲ್ಲಿ ದ್ವೇಷ ಹುಟ್ಟಿಸುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ಪಕ್ಷದ ಹಾಗೂ ಸಂಘಟನೆಗಳ ಪ್ರಮುಖರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.

ದಿಗಂತ್ ನಾಪತ್ತೆ ಪ್ರಕರಣ: ಪ್ರಚೋದನಾಕಾರಿ ಭಾಷಣ ಮಾಡಿದ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ- ರಮಾನಾಥ ರೈ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಪಗ್ರಹಗಳ ಅನ್‌ಡಾಕ್ ಕಾರ್ಯ ಯಶಸ್ವಿ- ಇಸ್ರೋ ಮತ್ತೊಂದು ಸಾಧನೆ

(ನ್ಯೂಸ್ ಕಡಬ) newskadaba.com ಮಾ. 13: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಗುರುವಾರ ಸ್ಪಾಡೆಕ್ಸ್ ಉಪಗ್ರಹಗಳನ್ನು ಡಾಕಿಂಗ್ ಮಾಡುವ ಮೂಲಕ ಚಂದ್ರಯಾನ-4, ಗಗನಯಾನ, ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ ಮತ್ತು ಚಂದ್ರನ ಮೇಲೆ ಗಗನಯಾತ್ರಿಯನ್ನು ಇಳಿಸುವುದು ಸೇರಿದಂತೆ ದೇಶದ ಭವಿಷ್ಯದ ಮಹತ್ವಾಕಾಂಕ್ಷೆಯ ಕಾರ್ಯಾಚರಣೆಗಳ ಸುಗಮ ನಿರ್ವಹಣೆಗೆ ದಾರಿ ಮಾಡಿಕೊಟ್ಟಿತು. ಕಕ್ಷೆಯಲ್ಲಿ ಯಶಸ್ವಿಯಾಗಿ ಬೇರ್ಪಡುವ “ಅದ್ಭುತ ನೋಟಗಳನ್ನು” ತೋರಿಸುವ ಎರಡು ವೀಡಿಯೊಗಳನ್ನು ಇಸ್ರೋ X ನಲ್ಲಿ ಹಂಚಿಕೊಂಡಿದೆ.SDX-1 ಮತ್ತು SDX-2 ಎರಡರಿಂದಲೂ ಸೆರೆಹಿಡಿಯಲಾದ ಸ್ಪ್ಯಾಡೆಕ್ಸ್ ಅನ್‌ಡಾಕಿಂಗ್” ಎಂದು ಪೋಸ್ಟ್ ಹಂಚಿಕೊಂಡಿದೆ.

ಉಪಗ್ರಹಗಳ ಅನ್‌ಡಾಕ್ ಕಾರ್ಯ ಯಶಸ್ವಿ- ಇಸ್ರೋ ಮತ್ತೊಂದು ಸಾಧನೆ Read More »

ಬ್ರೇಕಿಂಗ್ ನ್ಯೂಸ್

ಉಡುಪಿ: ಕುಂದಾಪುರದಲ್ಲಿ ದೆಹಲಿಗೆ ತೆರಳುವ 2 ರೈಲುಗಳಿಗೆ ಹೆಚ್ಚುವರಿ ನಿಲುಗಡೆ; ಸಾರ್ವಜನಿಕ ಬೇಡಿಕೆಗೆ ಮನ್ನಣೆ

(ನ್ಯೂಸ್ ಕಡಬ) newskadaba.com ಮಾ. 13: ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿ, ಭಾರತೀಯ ರೈಲ್ವೆಯು ಕುಂದಾಪುರ ರೈಲ್ವೇ ನಿಲ್ದಾಣದಲ್ಲಿ ದೆಹಲಿಗೆ ತೆರಳುವ ಎರಡು ರೈಲುಗಳಿಗೆ ಹೆಚ್ಚುವರಿ ನಿಲುಗಡೆಗೆ ಆದೇಶಿಸಿದೆ. ರೈಲು ಸಂಖ್ಯೆ 22653/22654 ತಿರುವನಂತಪುರಂ ಸೆಂಟ್ರಲ್ – ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 22655/22656 ಎರ್ನಾಕುಲಂ – ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲುಗಳು ಕುಂದಾಪುರ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ನೀಡಲಿವೆ. ಈ ಹೆಚ್ಚುವರಿ ನಿಲುಗಡೆಯಿಂದ ಕುಂದಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ದೆಹಲಿ ಮತ್ತು

ಉಡುಪಿ: ಕುಂದಾಪುರದಲ್ಲಿ ದೆಹಲಿಗೆ ತೆರಳುವ 2 ರೈಲುಗಳಿಗೆ ಹೆಚ್ಚುವರಿ ನಿಲುಗಡೆ; ಸಾರ್ವಜನಿಕ ಬೇಡಿಕೆಗೆ ಮನ್ನಣೆ Read More »

ಕರಾವಳಿ

7 ಸರ್ಕಾರಿ ಪಿಯು ಕಾಲೇಜು ಆರಂಭಕ್ಕೆ ಪ್ರಸ್ತಾವ : ಮಧು ಬಂಗಾರಪ್ಪ

(ನ್ಯೂಸ್ ಕಡಬ) newskadaba.com ಮಾ. 13: ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ 7 ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತೀಕರಿಸಿ ಹೊಸದಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭಿಸುವ ಪ್ರಸ್ತಾವನೆ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧುಬಂಗಾರಪ್ಪ ವಿಧಾನಸಭೆಗೆ ತಿಳಿಸಿದರು. ಪ್ರಶೋತ್ತರ ವೇಳೆಯಲ್ಲಿ ಶಾಸಕ ವಿಶ್ವಾಸ್ ವಸಂತ ವೈದ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ನಿರ್ದೇಶಕರು ಕಳೆದ ಡಿ.9 ರಂದು ಈ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಆರ್ಥಿಕ ಇಲಾಖೆ ಅನುಮತಿ

7 ಸರ್ಕಾರಿ ಪಿಯು ಕಾಲೇಜು ಆರಂಭಕ್ಕೆ ಪ್ರಸ್ತಾವ : ಮಧು ಬಂಗಾರಪ್ಪ Read More »

ಕರ್ನಾಟಕ

ಪಬ್ಲಿಕ್ ಶಾಲೆಗಳನ್ನು ವಿಸ್ತರಿಸುವ ಕುರಿತು ADB ಬ್ಯಾಂಕ್ ಅಧಿಕಾರಿಗಳ ಜೊತೆ ಸಚಿವ ಮಧು ಬಂಗಾರಪ್ಪ ಸಭೆ

(ನ್ಯೂಸ್ ಕಡಬ) newskadaba.com ಮಾ. 13: ರಾಜ್ಯದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕಿನೊಂದಿಗೆ ವಿಸ್ತರಿಸುವ ಕುರಿತಂತೆ ಶಾಲಾ ಶಿಕ್ಷಣ ಹಾಗೂ ಪ್ರಾಥಮಿಕ ಸಚಿವ ಮಧು ಬಂಗಾರಪ್ಪ ವಿಧಾನಸೌಧದಲ್ಲಿಂದು ಬ್ಯಾಂಕಿನ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಹಂತದವರೆಗೂ ಒಂದೇ ಸೂರಿನಡಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗಿದೆ. ಈ ಶಾಲೆಗಳಿಂದಾಗಿ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ವಿಕಾಸ ಹಾಗೂ ಕಲಿಕಾ ಸಾಮರ್ಥ್ಯ

ಪಬ್ಲಿಕ್ ಶಾಲೆಗಳನ್ನು ವಿಸ್ತರಿಸುವ ಕುರಿತು ADB ಬ್ಯಾಂಕ್ ಅಧಿಕಾರಿಗಳ ಜೊತೆ ಸಚಿವ ಮಧು ಬಂಗಾರಪ್ಪ ಸಭೆ Read More »

ಕರ್ನಾಟಕ

ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ‘ಗೃಹ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ’- ಸುರೇಶ್ ಬಾಬು

(ನ್ಯೂಸ್ ಕಡಬ) newskadaba.com ಮಾ. 13: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ರಾಜ್ಯ ಸರ್ಕಾರ , ರನ್ಯಾಗೆ ಕ್ಲೀನ್‌ಚಿಟ್ ಕೊಟ್ಟರೂ ಆಶ್ಚರ್ಯ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ಹೇಳಿದ್ದಾರೆ. ರನ್ಯಾ ರಾವ್ ಕೇಸ್ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂತಹ ಮಾಫಿಯಾಗಳು ಹೆಚ್ಚಾಗಿ ತಲೆ ಎತ್ತುತ್ತಿವೆ. ಗೃಹ ಇಲಾಖೆ ಸರಿಯಾಗಿ ಕೆಲಸ ಮಾಡ್ತಿಲ್ಲ. ದಕ್ಷ ಅಧಿಕಾರಿಗಳು ಇದ್ದರೂ ಸರ್ಕಾರ ಸರಿಯಾಗಿ ಬಳಕೆ ಮಾಡಿಕೊಳ್ತಿಲ್ಲ. ರನ್ಯಾ ರಾವ್ ಅನೇಕ ಬಾರಿ ದುಬೈಗೆ

ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ‘ಗೃಹ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ’- ಸುರೇಶ್ ಬಾಬು Read More »

ಕರ್ನಾಟಕ

ಮಣಿಪುರದಲ್ಲಿ ಮ್ಯಾನ್ಮಾರ್ ಪ್ರಜೆ ಬಂಧನ, ಕೋಟ್ಯಂತರ ಮೌಲ್ಯದ ಯಾಬಾ ಮಾತ್ರೆ ವಶ

(ನ್ಯೂಸ್ ಕಡಬ) newskadaba.com ಮಾ. 13: ಮಣಿಪುರದ ತೆಂಗೌಪಾಲ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮ್ಯಾನ್ಮಾರ್ ಪ್ರಜಿಯನ್ನು ಬಂಧಿಸಿದ್ದು, ಆತನಿಂದ 4.4 ಕೆಜಿ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಂಡಿವೆ. ಹೌಲೆನ್ನೆಯಿಂದ ನ್ಯೂ ಶಿಜಾಂಗ್‌ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಮ್ಯಾನ್ಮಾರ್‌ನ ತಮು ನಿವಾಸಿ 32 ವರ್ಷದ ಹೆರಿ ಅವರನ್ನು ಭದ್ರತಾ ಪಡೆಗಳು ಬಂಧಿಸಿವೆ. ಆತನಿಂದ ನಾಲ್ಕು ಪ್ಯಾಕೆಟ್ ಯಾಬಾ ಮಾತ್ರೆಗಳನ್ನು (ಅಂದಾಜು 4.4 ಕೆಜಿ ತೂಕ) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ರೇಜಿ ಡ್ರಗ್ ಎಂದೂ ಕರೆಯಲ್ಪಡುವ ಮೆಥಾಂಫೆಟಮೈನ್ ಮತ್ತು ಕೆಫೀನ್

ಮಣಿಪುರದಲ್ಲಿ ಮ್ಯಾನ್ಮಾರ್ ಪ್ರಜೆ ಬಂಧನ, ಕೋಟ್ಯಂತರ ಮೌಲ್ಯದ ಯಾಬಾ ಮಾತ್ರೆ ವಶ Read More »

ಬ್ರೇಕಿಂಗ್ ನ್ಯೂಸ್

ಮಧ್ಯಪ್ರದೇಶ : ಗ್ಯಾಸ್ ಟ್ಯಾಂಕರ್ ಡಿಕ್ಕಿ ಯಾಗಿ 7 ಜನರ ಸಾವು

(ನ್ಯೂಸ್ ಕಡಬ) newskadaba.com ಮಾ. 13: ಗ್ಯಾಸ್ ಟ್ಯಾಂಕರ್ ವಾಹನ ಚಾಲಕ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಬದ್ಘಾವರ್‌ ಉಜ್ಜಯಿನಿ ಹೆದ್ದಾರಿಯ ಬಮನ್‌ಸುತಾ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಕಾರು ಮತ್ತು ಜೀಪ್‌ನಲ್ಲಿದ್ದ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಧಾರ್ ಎಸ್‌ಪಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮಧ್ಯಪ್ರದೇಶ : ಗ್ಯಾಸ್ ಟ್ಯಾಂಕರ್ ಡಿಕ್ಕಿ ಯಾಗಿ 7 ಜನರ ಸಾವು Read More »

ಬ್ರೇಕಿಂಗ್ ನ್ಯೂಸ್
Scroll to Top