News Kadaba

ಮಾ.19 ರಂದು ಸುನೀತಾ ವಿಲಿಯಮ್ಸ್ ಭೂಮಿಗೆ ವಾಪಾಸ್ !

(ನ್ಯೂಸ್ ಕಡಬ) newskadaba.com ಮಾ. 14 : ವಾಷಿಂಗ್ಟನ್:‌ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಮಾರ್ಚ್ 19 ರ ಮೊದಲು ಭೂಮಿಗೆ ಹಿಂತಿರುಗುವುದಿಲ್ಲ ಎಂದು ನಾಸಾ ದೃಢಪಡಿಸಿದೆ. ಮಾರ್ಚ್ 19 ರ ನಂತರ ಅವರು ಭೂಮಿಗೆ ವಾಪಾಸಗಲಿದ್ದಾರೆ. ಎಂಟು ದಿನಗಳ ವಾಸ್ತವ್ಯಕ್ಕಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್ಎಸ್) ತಲುಪಿದ್ದ ಇವರಿಬ್ಬರು ಬೋಯಿಂಗ್ನ ದೋಷಪೂರಿತ ಸ್ಟಾರ್ಲೈನರ್ನಲ್ಲಿ ಪ್ರಯಾಣಿಸಿದ ನಂತರ ಒಂಬತ್ತು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದರು. ಅಮೆರಿಕದ ಬಾಹ್ಯಾಕಾಶ […]

ಮಾ.19 ರಂದು ಸುನೀತಾ ವಿಲಿಯಮ್ಸ್ ಭೂಮಿಗೆ ವಾಪಾಸ್ ! Read More »

ಬ್ರೇಕಿಂಗ್ ನ್ಯೂಸ್

ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪಗೆ ರಿಲೀಫ್:‌ ಸಮನ್ಸ್‌ ಗೆ ತಡೆ ನೀಡಿದ ಹೈಕೋರ್ಟ್

(ನ್ಯೂಸ್ ಕಡಬ) newskadaba.com ಮಾ. 14 : ಬೆಂಗಳೂರು: ಪೋಕ್ಸೋ ಪ್ರಕರಣದ ಸಂಬಂಧ ಮಾರ್ಚ್​ 15 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂಪ್ಪರಿಗೆ 1ನೇ ತ್ವರಿತಗತಿ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್​ಗೆ ಹೈಕೋರ್ಟ್​ ತಡೆ ನೀಡಿದೆ. ಇದರ ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ ಖುದ್ದು ಹಾಜರಾತಿಗೂ ವಿನಾಯಿತಿ ನೀಡಿದೆ. ಈ ಮೂಲಕ ಬಿಎಸ್​ ಯಡಿಯೂಪ್ಪ ಅವರಿಗೆ ರಿಲೀಫ್​ ಸಿಕ್ಕಂತಾಗಿದೆ. ಈ ವೇಳೆ ಬಿಎಸ್ ಯಡಿಯೂರಪ್ಪ ಅವರ ಅರ್ಜಿಯ ವಿಚಾರಣೆ ಅಗತ್ಯವಿದೆ ಎಂದು ಹೇಳಿದ ನ್ಯಾಯಾಲಯವು ಕಾಗ್ನಿಜೆನ್ಸ್, ಸಮನ್ಸ್ ಆದೇಶಕ್ಕೆ ತಡೆ

ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪಗೆ ರಿಲೀಫ್:‌ ಸಮನ್ಸ್‌ ಗೆ ತಡೆ ನೀಡಿದ ಹೈಕೋರ್ಟ್ Read More »

ಕರ್ನಾಟಕ

ವಿವಿ ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ-ಸಿಎಂ

(ನ್ಯೂಸ್ ಕಡಬ) newskadaba.com ಮಾ. 14 : ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ: ಕ್ಯಾಬಿನೆಟ್ ಉಪ ಸಮಿತಿ ವರದಿಯೇ ಇನ್ನೂ ಬಂದಿಲ್ಲ. ಉಪ ಸಮಿತಿ ವರದಿ ಬರುವ ಮೊದಲೇ ಬಿಜೆಪಿಗೆ ಆತಂಕ ಏಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ತಿಳಿಸಿದರು.ಈ ಬಗ್ಗೆ ವಿರೋಧ ಪಕ್ಷದ ಸದಸ್ಯರು ವ್ಯಕ್ತಪಡಿಸಿದ ಆತಂಕಕ್ಕೆ ಉತ್ತರಿಸಿದರು. ಉಪ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಈ ಸಂಗತಿಯ ಕೂಲಂಕುಷ ಪರಿಶೀಲನೆಗೆ ಉಪ ಸಮಿತಿ ರಚಿಸಲಾಗಿದೆ. ಉಪಸಮಿತಿ ವರದಿ ಕೊಡುವುದು ಬಾಕಿ ಇದೆ. ವರದಿ ಬರುತ್ತಿದ್ದಂತೆ ಅದನ್ನು ಕ್ಯಾಬಿನೆಟ್

ವಿವಿ ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ-ಸಿಎಂ Read More »

ಕರ್ನಾಟಕ

ಬೈಕ್‌ನಲ್ಲಿ ಬೆನ್ನಟ್ಟಿ ಗುಂಡಿಕ್ಕಿ ಶಿವಸೇನಾ ನಾಯಕನ ಹತ್ಯೆ

(ನ್ಯೂಸ್ ಕಡಬ) newskadaba.com ಮಾ. 14 : ಮೊಗಾದಲ್ಲಿ ಶಿವಸೇನೆಯ ಜಿಲ್ಲಾಧ್ಯಕ್ಷನನ್ನು ಬೈಕ್‌ನಲ್ಲಿ ಬೆನ್ನಟ್ಟಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ದಾಳಿಯಲ್ಲಿ ಒಬ್ಬ ಬಾಲಕ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ರಾತ್ರಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಗತ್ ರೈ ಮಂಗಾ ಹಾಲು ಖರೀದಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ಮೂವರು ಅಪರಿಚಿತ ವ್ಯಕ್ತಿಗಳು ಆತನ ಮೇಲೆ ಗುಂಡು ಹಾರಿಸಿದರು ಎನ್ನಲಾಗಿದೆ, ಆದರೆ ಗುಂಡು ಮಂಗಾನ ಕೈಯಿಂದ ತಪ್ಪಿ 12 ವರ್ಷದ ಬಾಲಕನಿಗೆ

ಬೈಕ್‌ನಲ್ಲಿ ಬೆನ್ನಟ್ಟಿ ಗುಂಡಿಕ್ಕಿ ಶಿವಸೇನಾ ನಾಯಕನ ಹತ್ಯೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಜಲಮಂಡಳಿಗೆ BIS ಮಾನ್ಯತೆ: ದೇಶದಲ್ಲಿಯೇ ಮೊದಲು ಎಂಬ ಹೆಗ್ಗಳಿಕೆ

(ನ್ಯೂಸ್ ಕಡಬ) newskadaba.com ಮಾ. 14 ಬೆಂಗಳೂರು: ಬೆಂಗಳೂರು ಜಲಮಂಡಳಿ ಪೂರೈಕೆ ಮಾಡುವ ಕಾವೇರಿ ನೀರಿನ ಗುಣಮಟ್ಟ ಪರೀಕ್ಷೆಯಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಮಾನ್ಯತೆ ಪಡೆದಿದೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ ‘ಬಿಐಎಸ್’ನಿಂದ ಪ್ರಮಾಣ ಪತ್ರ ಪಡೆದ ಹೆಗ್ಗಳಿಕೆಗೆ ಬೆಂಗಳೂರು ಜಲಮಂಡಳಿ ಪಾತ್ರವಾಗಿದೆ. ಕೊಳವೆ ಮೂಲಕ ನೀರು ಪೂರೈಕೆ ಮಾಡುವ ಸಂಸ್ಥೆಯು ಬಿಐಎಸ್‌ ಪ್ರಮಾಣ ಪತ್ರ ಪಡೆದಿರುವುದು ದೇಶದಲ್ಲೇ ಮೊದಲಾಗಿದೆ. ಕಳೆದ ಆರು ತಿಂಗಳಿನಿಂದ ವಿವಿಧ ಹಂತಗಳಲ್ಲಿ ನಡೆದ ಬಿಐಎಸ್‌ ಕಠಿಣ ಪರೀಕ್ಷೆಗಳಲ್ಲಿ ಬೆಂಗಳೂರು ಜಲಮಂಡಳಿ ತೇರ್ಗಡೆಯಾಗಿತ್ತು. ನೀರು

ಜಲಮಂಡಳಿಗೆ BIS ಮಾನ್ಯತೆ: ದೇಶದಲ್ಲಿಯೇ ಮೊದಲು ಎಂಬ ಹೆಗ್ಗಳಿಕೆ Read More »

ಕರ್ನಾಟಕ

ಮಂಗಳೂರು: ಪ್ಲಾಸ್ಟಿಕ್ ಫ್ಲೆಕ್ಸ್ ಬ್ಯಾನರ್‌ಗಳ ವಿರುದ್ಧ ಎಂಸಿಸಿ ಸಮರ- ಮಾರ್ಚ್ 15 ರಿಂದ ಕಠಿಣ ಕ್ರಮ

(ನ್ಯೂಸ್ ಕಡಬ) newskadaba.com ಮಾ. 14: ನಗರದ ಸೌಂದರ್ಯವನ್ನು ಪುನಃಸ್ಥಾಪಿಸಲು ಮತ್ತು ಪರಿಸರ ಹಾನಿಯನ್ನು ತಡೆಯಲು, ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಪ್ಲಾಸ್ಟಿಕ್ ಫ್ಲೆಕ್ಸ್ ಬ್ಯಾನರ್‌ಗಳ ವಿರುದ್ಧ ಕಠಿಣ ಕ್ರಮವನ್ನು ತೀವ್ರಗೊಳಿಸಿದೆ. ಸಂಪೂರ್ಣ ನಿಷೇಧವನ್ನು ವಿಧಿಸಿದೆ ಮತ್ತು ಉಲ್ಲಂಘಿಸುವವರಿಗೆ ಕಠಿಣ ದಂಡದ ಎಚ್ಚರಿಕೆ ನೀಡಿದೆ. ಮಾರ್ಚ್ 15 ರಿಂದ ಜಾರಿಗೆ ಬರಲಿರುವ ಹೊಸ ಕ್ರಮಗಳಲ್ಲಿ ಭಾರಿ ದಂಡ ಮತ್ತು ಪುನರಾವರ್ತಿತ ಅಪರಾಧಿಗಳಿಗೆ ಸಂಭಾವ್ಯ ಪರವಾನಗಿ ರದ್ದತಿ ಸೇರಿವೆ. ಗುರುವಾರ ಎಂಸಿಸಿ ಕಂದಾಯ ಇಲಾಖೆ ನಡೆಸಿದ ಸಭೆಯಲ್ಲಿ, ಫ್ಲೆಕ್ಸ್ ಮತ್ತು ಬ್ಯಾನರ್ ಮುದ್ರಣಕಾರರಿಗೆ

ಮಂಗಳೂರು: ಪ್ಲಾಸ್ಟಿಕ್ ಫ್ಲೆಕ್ಸ್ ಬ್ಯಾನರ್‌ಗಳ ವಿರುದ್ಧ ಎಂಸಿಸಿ ಸಮರ- ಮಾರ್ಚ್ 15 ರಿಂದ ಕಠಿಣ ಕ್ರಮ Read More »

ಕರಾವಳಿ

ಕೊಡಗು : 7ನೇ ತರಗತಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

(ನ್ಯೂಸ್ ಕಡಬ) newskadaba.com ಮಾ. 14: ಇಲ್ಲಿನ ವಸತಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಪೂರ್ವಿಕಾ (13) ಸಾವನ್ನಪ್ಪಿದ ವಿದ್ಯಾರ್ಥಿನಿ. ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನ, ಕ್ಯಾತೆ ಗ್ರಾಮದ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಪೂರ್ವಿಕಾ ನನಗೆ ಸುಸ್ತಾಗುತ್ತಿದೆ ಎಂದು ಹೇಳಿದ್ದಳು. ಕೂಡಲೇ ಶಿಕ್ಷಕರು ಆಕೆಗೆ ಕೊಡ್ಲಿಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹಾಸನದ ಖಾಸಗಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಸಾವನ್ನಪ್ಪಿದ್ದಾಳೆ.

ಕೊಡಗು : 7ನೇ ತರಗತಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಮೇರಿಕನ್ ಏರ್‌ಲೈನ್ಸ್ ವಿಮಾನಕ್ಕೆ ಬೆಂಕಿ, ಅಚ್ಚರಿಯ ರೀತಿಯಲ್ಲಿ ಪ್ರಯಾಣಿಕರು ಪಾರು

(ನ್ಯೂಸ್ ಕಡಬ) newskadaba.com ಮಾ. 14: ಹಾರಾಟದ ವೇಳೆ ಸಮಸ್ಯೆ ಉಂಟಾಗಿ ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಅಮೇರಿಕನ್ ಏರ್‌ಲೈನ್ಸ್ ವಿಮಾನವು ಬೆಂಕಿಗೆ ಆಹುತಿಯಾಗಿದ್ದು, ಅಚ್ಚರಿಯಲ್ಲಿ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ಹೊರಗೆ ಹಾರಿದ್ದಾರೆ. ಕೊಲೊರಾಡೋ ಸ್ಟಿಂಗ್ಸ್ ವಿಮಾನ ನಿಲ್ದಾಣದಿಂದ ಡಲ್ಲಾಸ್ ಫೋರ್ಟ್ ವರ್ತ್ಗೆ ತೆರಳುತ್ತಿದ್ದ ಅಮೇರಿಕನ್ ರ್ಏಲೈನ್ಸ್ ಬೋಯಿಂಗ್ 737-800 ವಿಮಾನದ ಎಂಜಿನ್ ಸಮಸ್ಯೆ ಗಮನಿಸಿ ಪೈಲಟ್ ತುರ್ತು ವರದಿ ಮಾಡಿದ ನಂತರ ಹತ್ತಿರದ ಡೆನ್ವರ್‌ಗೆ ತಿರುಗಿಸಲಾಯಿತು ಮತ್ತು ಸುರಕ್ಷಿತವಾಗಿ ಇಳಿಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಅಮೇರಿಕನ್ ಏರ್‌ಲೈನ್ಸ್ ವಿಮಾನಕ್ಕೆ ಬೆಂಕಿ, ಅಚ್ಚರಿಯ ರೀತಿಯಲ್ಲಿ ಪ್ರಯಾಣಿಕರು ಪಾರು Read More »

ಬ್ರೇಕಿಂಗ್ ನ್ಯೂಸ್

ಮಂಗಳೂರು ಕೇರಳದ ಗ್ಯಾಂಗ್‌ ಸೆರೆ, ಭಾರಿ ದುಷ್ಕೃತ್ಯಕ್ಕೆ ಸಂಚು ಬಯಲು

(ನ್ಯೂಸ್ ಕಡಬ) newskadaba.com ಮಾ. 14: ಮಂಗಳೂರು: ಕೇರಳದಿಂದ ಬಂದು ಮಂಗಳೂರಿನಲ್ಲಿ  ಭಾರಿ ದುಷ್ಕೃತ್ಯಕ್ಕೆ ಸಂಚು ಎಸಗಿದ್ದ ಒಂದು ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್‌ನಿಂದ ಪಿಸ್ತೂಲುಗಳು, ಗುಂಡು, ಗಾಂಜಾ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇರಳ ಮೂಲದ ಐವರು ನಟೋರಿಯಸ್ ಅಪರಾಧಿಗಳನ್ನು ಬಂಧಿಸಲಾಗಿದೆ. ವಾಮಂಜೂರಿನಲ್ಲಿ ಮುಸ್ಲಿಂ ಧರ್ಮಗುರುವಿನ ಮೇಲಾದ ಮಿಸ್ ಫೈರ್ ಪ್ರಕರಣದ ತನಿಖೆ ಮಾಡುವ ವೇಳೆ ಇವರು ಸಿಕ್ಕಿಬಿದ್ದಿದ್ದಾರೆ. ಕಳೆದ ಜನವರಿಯಲ್ಲಿ ಮಂಗಳೂರು ಹೊರವಲಯದ ವಾಮಂಜೂರು ಎಂಬಲ್ಲಿ ಮುಸ್ಲಿಂ ಧರ್ಮಗುರು ಸಫ್ವಾನ್ ಎಂಬುವರ ಮೇಲೆ ಗುಂಡು ಹಾರಿಸಲಾಗಿತ್ತು. ಅಕ್ರಮ ಪಿಸ್ತೂಲ್​​ನಿಂದ ಅದ್ದು

ಮಂಗಳೂರು ಕೇರಳದ ಗ್ಯಾಂಗ್‌ ಸೆರೆ, ಭಾರಿ ದುಷ್ಕೃತ್ಯಕ್ಕೆ ಸಂಚು ಬಯಲು Read More »

ಕರಾವಳಿ

ಮಧುಮೇಹಿಗಳು ಬಳಸುವ ಔಷಧ ಬೆಲೆ ಶೇ.90 ಇಳಿಕೆ

(ನ್ಯೂಸ್ ಕಡಬ) newskadaba.com ಮಾ. 14: ಮಧುಮೇಹಿಗಳು ಬಳಸುವ ಎಂಪಾಗ್ಲಿಫ್ಲೋಜಿನ್‌ ಅಂಶದ ಮಾತ್ರೆಯ ಬೆಲೆ 90% ರಷ್ಟು ಕಡಿತ ಮಾಡುವ ಮೂಲಕ ಮಧುಮೇಹಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಪೇಟೆಂಟ್‌ ಅವಧಿ ಮುಗಿದ ಕಾರಣ ಹಲವಾರು ದೇಶೀಯ ಔಷಧ ತಯಾರಕರು ಜೆನೆರಿಕ್ ಮಾದರಿ ಬಿಡುಗಡೆ ಮಾಡುವುದಾಗಿ ಘೋಷಿಸಿವೆ. ಮಧುಮೇಹ ಔಷಧ ಎಂಪಾಗ್ಲಿಫ್ಲೋಜಿನ್‌ನ ಬೆಲೆ 90% ರಷ್ಟು ಕುಸಿದಿದೆ. ಮ್ಯಾನ್‌ಕೈಂಡ್ ಫಾರ್ಮಾ, ಅಲ್ಕೆಮ್ ಲ್ಯಾಬೊರೇಟರೀಸ್, ಗ್ಲೆನ್‌ಮಾರ್ಕ್, ಕೊರೊನಾ ರೆಮಿಡೀಸ್ ಕೆಲವು ಕಂಪನಿಗಳನ್ನು ಬಿಡುಗಡೆ ಮಾಡಿದ್ದು, ಹೆಚ್ಚಿನ ಭಾರತೀಯ ರೋಗಿಗಳಿಗೆ ಈ ಔಷಧವನ್ನು ಕೈಗೆಟುಕುವಂತೆ ಮಾಡಿದೆ.

ಮಧುಮೇಹಿಗಳು ಬಳಸುವ ಔಷಧ ಬೆಲೆ ಶೇ.90 ಇಳಿಕೆ Read More »

ಕರ್ನಾಟಕ
Scroll to Top