News Kadaba

ಟ್ರಂಪ್ ಹತ್ಯೆಗೆ ಯತ್ನ: ಅಪರಾಧ ಸಾಬೀತಾದರೆ ಆರೋಪಿಗೆ ಜೀವಾವಧಿ ಶಿಕ್ಷೆ

(ನ್ಯೂಸ್‌ ಕಡಬ) newskadaba.com,  ಎ.28   ಶ್ವೇತಭವನದ ಪತ್ರಿಕಾ ಭೋಜನಕೂಟದ ವೇಳೆ ಗುಂಡಿನ ದಾಳಿ ನಡೆಸಿದ್ದ ಕ್ಯಾಲಿಫೋರ್ನಿಯಾದ ಕೋಲ್ ತೋಮಸ್ ಅಲೆನ್(31) ವಿರುದ್ಧ ಅಮೆರಿಕದ ಫೆಡರಲ್ ನ್ಯಾಯಾಲಯವು ‘ಅಧ್ಯಕ್ಷರ ಹತ್ಯೆ ಯತ್ನ’ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊರಿಸಿದೆ. ಈ ಅಪರಾಧಗಳು ಸಾಬೀತಾದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸೋಮವಾರ ವಾಷಿಂಗ್ಟನ್‌ನ ಫೆಡರಲ್ ನ್ಯಾಯಾಲಯಕ್ಕೆ ಅಲೆನ್‌ನನ್ನು ಹಾಜರುಪಡಿಸಲಾಯಿತು. ಹಂಗಾಮಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಅವರ ಪ್ರಕಾರ, ಅಲೆನ್ ಈ ದಾಳಿಗಾಗಿ ವ್ಯವಸ್ಥಿತ ಸಿದ್ಧತೆ […]

ಟ್ರಂಪ್ ಹತ್ಯೆಗೆ ಯತ್ನ: ಅಪರಾಧ ಸಾಬೀತಾದರೆ ಆರೋಪಿಗೆ ಜೀವಾವಧಿ ಶಿಕ್ಷೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಹೋದರಿಯ ಅಸ್ಥಿಪಂಜರ ಹಿಡಿದು ಬ್ಯಾಂಕಿಗೆ ತಂದ ವ್ಯಕ್ತಿ

(ನ್ಯೂಸ್‌ ಕಡಬ) newskadaba.com,  ಎ.28   ಒಡಿಶಾದ (Odisha) ಕಿಯೋಂಜಾರ್ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರದ ಅವಶೇಷಗಳನ್ನು ಭುಜದ ಮೇಲೆ ಹೊತ್ತುಕೊಂಡು, ಬಿಸಿಲಿನಲ್ಲಿ 3 ಕಿಲೋ ಮೀಟರ್ ನಡೆದು ಬ್ಯಾಂಕಿಗೆ ಹೋಗಿ, ಆಕೆಯ ಖಾತೆಯಿಂದ 19,300 ರುಪಾಯಿ ಪಡೆಯಲು ಮುಂದಾಗಿದ್ದಾನೆ. ಈ ಘಟನೆಯು ನಮ್ಮ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ಜಿತು ಮುಂಡಾ ಎಂಬ ವ್ಯಕ್ತಿ, ಕಿಯೋಂಜಾರ್‌ನ ಡಯಾನಾಲಿ ಗ್ರಾಮದವರು. ಅವರ ಸಹೋದರಿ ಕಾಕ್ರಾ ಮುಂಡಾ, ಮಲ್ಲಿಪಾಸಿಯ ಒಡಿಶಾ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರು. ಕಾಕ್ರಾ ಎರಡು

ಸಹೋದರಿಯ ಅಸ್ಥಿಪಂಜರ ಹಿಡಿದು ಬ್ಯಾಂಕಿಗೆ ತಂದ ವ್ಯಕ್ತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಎಎಸ್‌ಐ ಕೊಲೆ ಯತ್ನ ಪ್ರಕರಣ: ಅಪರಾಧಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ, 50,000 ರೂ. ದಂಡ

(ನ್ಯೂಸ್‌ ಕಡಬ) newskadaba.com,  ಎ.28   ಉರ್ವ ಪೊಲೀಸ್ ಠಾಣೆಯ ಎಎಸ್‌ಐ ಐತ್ತಪ್ಪ ಅವರ ಮೇಲೆ ಹತ್ಯೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುರತ್ಕಲ್ ಕಾನ ನಿವಾಸಿ ಮೊಹಮ್ಮದ್ ನಿಯಾಜ್ (27) ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-1 ತ್ವರಿತಗತಿ ನ್ಯಾಯಾಲಯ ಏಳು ವರ್ಷಗಳ ಕಠಿಣ ಶಿಕ್ಷೆ ಮತ್ತು 50,000 ರೂಪಾಯಿ ದಂಡ ವಿಧಿಸಿದೆ. ಎಎಸ್‌ಐ ಐತ್ತಪ್ಪ ಅವರು ಸಲ್ಲಿಸಿದ ದೂರಿನ ಪ್ರಕಾರ, ಈ ಘಟನೆಯು 2017ರ ಏಪ್ರಿಲ್ 5  ರಂದು ಬೆಳಗಿನ ಜಾವ 3.20

ಮಂಗಳೂರು: ಎಎಸ್‌ಐ ಕೊಲೆ ಯತ್ನ ಪ್ರಕರಣ: ಅಪರಾಧಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ, 50,000 ರೂ. ದಂಡ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನದ ದರದಲ್ಲಿಂದು ಕೊಂಚ ಇಳಿಕೆ

(ನ್ಯೂಸ್‌ ಕಡಬ) newskadaba.com,  ಎ.28   ಚಿನ್ನದ ದರದಲ್ಲಿಂದು ಕೊಂಚ ಇಳಿಕೆ ಬಂದಿದೆ. 22 ಕ್ಯಾರಟ್‌ 1 ಗ್ರಾಂ  ಚಿನ್ನದ ಬೆಲೆಯಲ್ಲಿ 65 ರೂ. ಇಳಿಕೆಯಾಗಿ 14,025 ರೂ. ಇದ್ದರೆ 24 ಕ್ಯಾರಟ್‌ 1 ಗ್ರಾಂಗೆ 71 ರೂ. ಇಳಿಕೆಯಾಗಿ 15,300 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,12,200 ರೂ. ಪಾವತಿಸಿದರೆ, 10 ಗ್ರಾಂಗೆ 1,40,250 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,02,500 ರೂ. ಪಾವತಿಸಬೇಕು. 24 ಕ್ಯಾರಟ್‌ನ

ಚಿನ್ನದ ದರದಲ್ಲಿಂದು ಕೊಂಚ ಇಳಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್ – ಮನೆಯಿಂದಲೇ ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆಗೆ ಹೊಸ ಲಿಂಕ್ ಬಿಡುಗಡೆ

(ನ್ಯೂಸ್‌ ಕಡಬ) newskadaba.com,  ಎ.28   ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್ – ಮನೆಯಿಂದಲೇ ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆಗೆ ಹೊಸ ಲಿಂಕ್ ಬಿಡುಗಡೆ ವಿದ್ಯುತ್ ಗ್ರಾಹಕರಿಗೆ ಇಂಧನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ವಿದ್ಯುತ್ ಬಿಲ್‌ನಲ್ಲಿನ ಹೆಸರು ಬದಲಾವಣೆ ಈಗ ಮತ್ತಷ್ಟು ಸುಲಭಗೊಂಡಿದೆ. ಮನೆಯಲ್ಲೇ ಕುಳಿತುಕೊಂಡು ವಿದ್ಯುತ್ ಬಿಲ್‌ನಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಬಹುದು. ಇಂಧನ ಇಲಾಖೆ ಹೊಸ ಲಿಂಕ್ ಬಿಡುಗಡೆ ಮಾಡಿದ್ದು, ಹೊಸ ಆನ್‌ಲೈನ್ ಲಿಂಕ್ ಮೂಲಕ ಹೆಸರು ಬದಲಾವಣೆ ಮಾಡಿಕೊಳ್ಳಬಹುದು. ಈಗಾಗಲೇ ಐದು ಸಾವಿರ ಗ್ರಾಹಕರು ಈ

ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್ – ಮನೆಯಿಂದಲೇ ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆಗೆ ಹೊಸ ಲಿಂಕ್ ಬಿಡುಗಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಕು: ಸರ್ಕಾರಿ ಶಾಲೆಗಳ ಬಲವರ್ಧನೆಗೆ 8 ಗ್ಯಾರಂಟಿಗಳ ಘೋಷಣೆ..!

(ನ್ಯೂಸ್‌ ಕಡಬ) newskadaba.com,  ಎ.28   ರಾಜ್ಯದ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂಟು ‘ಗ್ಯಾರಂಟಿ’ಗಳನ್ನು ಘೋಷಿಸಿದ್ದಾರೆ.ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಮಗ್ರ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ತ್ವರಿತ ನೇಮಕಾತಿ ಮೂಲಕ ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿಯೊಂದು ಶಾಲೆಯಲ್ಲೂ ಸುಸಜ್ಜಿತ ಕಟ್ಟಡ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾದ ತರಗತಿ ಕೊಠಡಿಗಳು, ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಕು: ಸರ್ಕಾರಿ ಶಾಲೆಗಳ ಬಲವರ್ಧನೆಗೆ 8 ಗ್ಯಾರಂಟಿಗಳ ಘೋಷಣೆ..! Read More »

ಕರಾವಳಿ

ಇಂಡೋನೇಷ್ಯಾದಲ್ಲಿ ಎರಡು ರೈಲುಗಳು ಢಿಕ್ಕಿ; 7 ಮೃತ್ಯು; 81 ಮಂದಿಗೆ ಗಾಯ

(ನ್ಯೂಸ್‌ ಕಡಬ) newskadaba.com,  ಎ.28   ಎರಡು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿ, 81 ಮಂದಿ ಗಾಯಗೊಂಡಿರುವ ಘಟನೆ ಇಂಡೋನೇಷ್ಯಾದ ಜಕಾರ್ತಾ ಹೊರವಲಯದಲ್ಲಿ ಸಂಭವಿಸಿದೆ. ಜಕಾರ್ತಾ ಹೊರವಲಯದ ಬೆಕಾಸಿಯಲ್ಲಿ ಸೋಮವಾರ ತಡರಾತ್ರಿ ಪ್ರಯಾಣಿಕ ರೈಲು ಹಾಗೂ ಮತ್ತೊಂದು ರೈಲಿನ ನಡುವೆ ಢಿಕ್ಕಿ ಸಂಭವಿಸಿದೆ. ಅಪಘಾತದಿಂದಾಗಿ ಇನ್ನೂ ಹಲವು ಪ್ರಯಾಣಿಕರು ರೈಲಿನೊಳಗೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇನ್ನು ಘಟನೆಯ ತನಿಖೆಯನ್ನು ಇಂಡೋನೇಷ್ಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿ ನಡೆಸುತ್ತಿದೆ. ಲೆವೆಲ್ ಕ್ರಾಸಿಂಗ್‌ನಲ್ಲಿ

ಇಂಡೋನೇಷ್ಯಾದಲ್ಲಿ ಎರಡು ರೈಲುಗಳು ಢಿಕ್ಕಿ; 7 ಮೃತ್ಯು; 81 ಮಂದಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರಿನಲ್ಲಿಯೇ ಹಾಲು ಸಂಸ್ಕರಣಾ ಕಾರ್ಖಾನೆ- ಅಶೋಕ್ ರೈ

(ನ್ಯೂಸ್‌ ಕಡಬ) newskadaba.com,  ಎ.28   ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಡಿಕೆಎಂಯು)ದ ಹಾಲು ಸಂಸ್ಕರಣಾ ಕಾರ್ಖಾನೆ ನಿರ್ಮಿಸಲು ಪುತ್ತೂರು ಹೊರವಲಯದ ಕಟಾರದಲ್ಲಿ ೧೦ ಎಕರೆ ಸರ್ಕಾರಿ ಜಮೀನು ನೀಡಲಾಗಿದ್ದು, ಅಲ್ಲಿ ಕಾರ್ಖಾನೆ ನಿರ್ಮಿಸಲು ಕೆಲ ಸಮಯದಿಂದ ಒಕ್ಕೂಟ ಮೀನಮೇಷ ಎಣಿಸುತ್ತಿತ್ತು. ಈ ವಿಚಾರದಲ್ಲಿ ನಾನು ನನ್ನ ಸ್ಪಷ್ಟ ನಿಲುವು ತಿಳಿಸಿದ್ದೆ. ಇದಾದ ಬಳಿಕ ಒಕ್ಕೂಟದವರು ವಾಸ್ತವ ಸ್ಥಿತಿ ಅರಿತುಕೊಂಡು ಪುತ್ತೂರಿನ ನಿಗದಿತ ಜಾಗದಲ್ಲೇ ಕಾರ್ಖಾನೆ ನಿರ್ಮಿಸಲು ನಿರ್ಧರಿಸಿದ್ದಾರೆ. ಮೇ ೨೦ರಂದು ಕಟಾರದ ಸ್ಥಳ ಪರಿಶೀಲನೆ ನಡೆಯಲಿದೆ

ಪುತ್ತೂರಿನಲ್ಲಿಯೇ ಹಾಲು ಸಂಸ್ಕರಣಾ ಕಾರ್ಖಾನೆ- ಅಶೋಕ್ ರೈ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ನದಿಯಲ್ಲಿ ಮುಳುಗಿ ಆಟೋರಿಕ್ಷಾ ಚಾಲಕ ಮೃತ್ಯು

(ನ್ಯೂಸ್‌ ಕಡಬ) newskadaba.com,  ಎ.28  ಹೆರ್ಗಾ ಗ್ರಾಮದ 42 ವರ್ಷದ ಆಟೋರಿಕ್ಷಾ ಚಾಲಕ ಏಪ್ರಿಲ್ 26 ರಂದು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿದೆ.. ಹೆರ್ಗ ನಿವಾಸಿ ನಾರಾಯಣ ಪೂಜಾರಿ (75) ಸಲ್ಲಿಸಿದ ದೂರಿನ ಪ್ರಕಾರ, ಬಾಡಿಗೆ ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅವರ ಮಗ ಸುಜಿತ್ ಕುಮಾರ್ (42) ಏಪ್ರಿಲ್ 26 ರಂದು ಬೆಳಿಗ್ಗೆ 6:00 ಗಂಟೆ ಸುಮಾರಿಗೆ ಕೆಲಸಕ್ಕಾಗಿ ಮನೆಯಿಂದ ಹೊರಟಿದ್ದರು. ನಂತರ ಮಧ್ಯಾಹ್ನ ಸುಮಾರು 12:45 ಕ್ಕೆ ಉಡುಪಿ

ಉಡುಪಿ: ನದಿಯಲ್ಲಿ ಮುಳುಗಿ ಆಟೋರಿಕ್ಷಾ ಚಾಲಕ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆರಿಶಿಣ ಮತ್ತು ಮಸಾಲೆ ಪುಡಿಗಳಲ್ಲಿ ಸೀಸದ ಅಂಶ ಪತ್ತೆ: ರಾಜ್ಯಾದ್ಯಂತ ತಪಾಸಣೆಗೆ ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ

(ನ್ಯೂಸ್‌ ಕಡಬ) newskadaba.com,  ಎ.28 ಆರಿಶಿಣ ಮತ್ತು ಮಸಾಲೆ ಪುಡಿಗಳಲ್ಲಿ ಸೀಸದ ಅಂಶ ಪತ್ತೆ: ರಾಜ್ಯಾದ್ಯಂತ ತಪಾಸಣೆಗೆ ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ ಬೆಂಗಳೂರು: ದೈನಂದಿನ ಅಡುಗೆಯಲ್ಲಿ ಅತ್ಯಗತ್ಯವಾಗಿ ಬಳಸುವ ಅರಿಶಿಣ ಪುಡಿ ಹಾಗೂ ವಿವಿಧ ಮಸಾಲೆ ಪುಡಿಗಳಲ್ಲಿ ಮಾರಕ ಸೀಸದ (Lead) ಅಂಶ ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಗಂಭೀರ ಬೆಳವಣಿಗೆಯನ್ನು ಗಮನಿಸಿರುವ ಕರ್ನಾಟಕ ಸರ್ಕಾರವು, ರಾಜ್ಯಾದ್ಯಂತ ಮಾರಾಟವಾಗುತ್ತಿರುವ ಮಸಾಲೆ ಪದಾರ್ಥಗಳ ಅಧಿಕೃತ ಗುಣಮಟ್ಟ ಪರೀಕ್ಷೆಗೆ ತಕ್ಷಣದ ಆದೇಶ ಹೊರಡಿಸಿದೆ. ಘಟನೆಯ ಹಿನ್ನೆಲೆ: ಆಹಾರ ಸುರಕ್ಷತೆ

ಆರಿಶಿಣ ಮತ್ತು ಮಸಾಲೆ ಪುಡಿಗಳಲ್ಲಿ ಸೀಸದ ಅಂಶ ಪತ್ತೆ: ರಾಜ್ಯಾದ್ಯಂತ ತಪಾಸಣೆಗೆ ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top