News Kadaba

ಪತ್ರಕರ್ತರ ಮೇಲೆ ಹಲ್ಲೆ : ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದ ಸಿಎಂ

(ನ್ಯೂಸ್‌ ಕಡಬ) newskadaba.com, ಆ.08: ನವದೆಹಲಿ: ಧರ್ಮಸ್ಥಳದಲ್ಲಿ ಪತ್ರಕರ್ತರು ಹಾಗೂ ಯೂಟ್ಯೂಬರ್‌ಗಳ ಮೇಲೆ ಹಲ್ಲೆಯಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಲಾಲ್‌ಬಾಗ್‌ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ದೆಹಲಿಯಲ್ಲಿ ಇಂಡಿಯಾ ರಾಜಕೀಯ ಮೈತ್ರಿಕೂಟದ ನಾಯಕರಿಗೆ ಔತಣಕೂಟ ಆಯೋಜಿಸಲಾಗಿದೆ. ಅದರಲ್ಲಿ ಭಾಗವಹಿಸಲು ನಾನು ದೆಹಲಿಗೆ ತೆರಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ಬಿಜೆಪಿಯವರ ಮತಗಳ್ಳತನದ ವಿರುದ್ಧ ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದರು.

ಪತ್ರಕರ್ತರ ಮೇಲೆ ಹಲ್ಲೆ : ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದ ಸಿಎಂ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಮೆರಿಕದ ಸರಕುಗಳ ಮೇಲೂ ಶೇ.50 ರಷ್ಟು ಸುಂಕ ವಿಧಿಸಿ: ಮೋದಿಗೆ ಶಶಿ ತರೂರ್ ಆಗ್ರಹ

(ನ್ಯೂಸ್‌ ಕಡಬ) newskadaba.com, ಆ.08: ನವದೆಹಲಿ: ಭಾರತದ ರಫ್ತಿನ ಮೇಲೆ ಅಮೆರಿಕ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಭಾರತವೂ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇ. 50 ಕ್ಕೆ ಹೆಚ್ಚಿಸಬೇಕು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಗುರುವಾರ ಆಗ್ರಹಿಸಿದ್ದಾರೆ. ಭಾರತವು ಅಮೆರಿಕದ ಸರಕುಗಳ ಮೇಲೆ ಪ್ರಸ್ತುತ ಶೇ. 17 ರಷ್ಟು ಸುಂಕದ ಬದಲು ಶೇ. 50 ರಷ್ಟು ಸುಂಕ ವಿಧಿಸಬೇಕು ಎಂದು ತರೂರ್ ಕೇಂದ್ರ ಸರ್ಕಾವನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಅಮೆರಿಕದ ಇಂತಹ

ಅಮೆರಿಕದ ಸರಕುಗಳ ಮೇಲೂ ಶೇ.50 ರಷ್ಟು ಸುಂಕ ವಿಧಿಸಿ: ಮೋದಿಗೆ ಶಶಿ ತರೂರ್ ಆಗ್ರಹ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜಾತಿ ಜನಗಣತಿ ಡಿಜಿಟಲ್ ಸಮೀಕ್ಷೆಗೆ ಸಜ್ಜು, 17% ಒಳ ಮೀಸಲಾತಿ ಐದು ವಿಭಿನ್ನ ಪ್ರವರ್ಗ

(ನ್ಯೂಸ್‌ ಕಡಬ) newskadaba.com, ಆ.08: ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಮರು ಜಾತಿ ಜನಗಣತಿ ನಡೆಸುವ ಚಟುವಟಿಕೆ ಮತ್ತೆ ಚರ್ಚೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯ ಕಾರ್ಯವನ್ನು ಡಿಜಿಟಲ್ ವಿಧಾನದಲ್ಲಿ ನಡೆಸುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ. ಡಿಜಿಟಲ್ ವಿಧಾನವನ್ನು ಬಳಸಿಕೊಂಡು ಸಮೀಕ್ಷೆ ನಡೆಸಲು ಅಗತ್ಯವಾದ ತಂತ್ರಾಂಶದ ಅಭಿವೃದ್ಧಿ ಹಾಗೂ ಉಸ್ತುವಾರಿಯನ್ನು ಇ-ಆಡಳಿತ ಇಲಾಖೆಯ ಮೂಲಕ ಕೈಗೊಳ್ಳುವ ಬಗ್ಗೆ ಸಲಹೆ ನೀಡಲಾಗಿದೆ. ಇದರ ಮೂಲಕ ಸಮೀಕ್ಷೆ ಹೆಚ್ಚು ನಿಖರ ಹಾಗೂ ಸಮಯಬದ್ಧವಾಗಿ ನಡೆಯುವ ನಿರೀಕ್ಷೆ ಇದೆ. ಈಗಾಗಲೇ,

ಜಾತಿ ಜನಗಣತಿ ಡಿಜಿಟಲ್ ಸಮೀಕ್ಷೆಗೆ ಸಜ್ಜು, 17% ಒಳ ಮೀಸಲಾತಿ ಐದು ವಿಭಿನ್ನ ಪ್ರವರ್ಗ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಾಲಾ ತಪಾಸಣೆಗೆ ಮೊಬೈಲ್ ಆಧಾರಿತ ಆ್ಯಪ್ ಬಳಕೆ, ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೀಘ್ರದಲ್ಲೇ ಬಿಡುಗಡೆ!

(ನ್ಯೂಸ್‌ ಕಡಬ) newskadaba.com, ಆ.08: ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶೀಘ್ರದಲ್ಲೇ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮೊಬೈಲ್ ಆಧಾರಿತ ಶಾಲಾ ತಪಾಸಣೆ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಿದೆ. ಈ ಅಪ್ಲಿಕೇಶನ್ ಶಾಲಾ ತಪಾಸಣೆ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುವುದು, ರಿಯಲ್-ಟೈಂ ಮೇಲ್ವಿಚಾರಣೆ ಮತ್ತು ಯೋಜನೆ ಮತ್ತು ಮೇಲ್ವಿಚಾರಣೆಗೆ ಡೇಟಾ ಲಭ್ಯತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಸಾರ್ವಜನಿಕ ಶಿಕ್ಷಣ ಆಯುಕ್ತ ಕೆವಿ ತ್ರಿಲೋಕ್ ಚಂದ್ರ ಮಾತನಾಡಿ, ಈ ಆ್ಯಪ್ ಕ್ಷೇತ್ರ ಸಿಬ್ಬಂದಿಗೆ ಶಾಲೆಗಳಿಗೆ ಭೇಟಿ ನೀಡಿದ ವೇಳೆ ಭೌತಿಕ

ಶಾಲಾ ತಪಾಸಣೆಗೆ ಮೊಬೈಲ್ ಆಧಾರಿತ ಆ್ಯಪ್ ಬಳಕೆ, ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೀಘ್ರದಲ್ಲೇ ಬಿಡುಗಡೆ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ರಾಜ್ಯದಲ್ಲಿನ ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ದಾಖಲಾತಿ ಬಿಡುಗಡೆ ಮಾಡ್ತಾರೆ’- ಪ್ರಿಯಾಂಕ್ ಖರ್ಗೆ

(ನ್ಯೂಸ್‌ ಕಡಬ) newskadaba.com, ಆ.08: ಕಾಂಗ್ರೆಸ್ ಯಾವತ್ತು ಹಿಟ್ ಅಂಡ್ ರನ್ ಮಾಡೋದಿಲ್ಲ. ಕರ್ನಾಟಕದಲ್ಲಿ ಮತಗಳ್ಳತನದ ಬಗ್ಗೆ ದಾಖಲಾತಿ ಇದೆ. ರಾಹುಲ್ ಗಾಂಧಿ ಬಿಡುಗಡೆ ಮಾಡ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಶುಕ್ರವಾರ ರಾಹುಲ್ ಗಾಂಧಿಯಿಂದ ಚುನಾವಣೆ ಆಯೋಗದ ವಿರುದ್ಧ ಪ್ರತಿಭಟನೆ ಮಾಡ್ತಿರೋ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ಮಾಡ್ತಾರೆ. ದೆಹಲಿಯಲ್ಲಿ ಮತಗಳ್ಳತನ ದಾಖಲೆ ಬಿಡುಗಡೆ ಆಗುತ್ತದೆ. ಅದಾದ ಮೇಲೆ ಚುನಾವಣೆ ಆಯೋಗ ಯಾರ ನಿಯಂತ್ರಣದಲ್ಲಿ ಕೆಲಸ

‘ರಾಜ್ಯದಲ್ಲಿನ ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ದಾಖಲಾತಿ ಬಿಡುಗಡೆ ಮಾಡ್ತಾರೆ’- ಪ್ರಿಯಾಂಕ್ ಖರ್ಗೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಂದಕಕ್ಕೆ ಉರುಳಿದ ಸಿಆರ್‌ಪಿಎಫ್ ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿದ್ದ ವಾಹನ; ಮೂವರು ಸಾವು

(ನ್ಯೂಸ್‌ ಕಡಬ) newskadaba.com, ಆ.08: ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಕಂದಕಕ್ಕೆ ಉರುಳಿದ್ದು, ಮೂವರು ಪ್ರಾಣ ಕಳೆದುಕೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಬಸಂತ್‌ಗಢ ಪ್ರದೇಶದ ಕಾಂಡ್ವಾ ಬಳಿ ಗುರುವಾರ ಸಂಭವಿಸಿದೆ. ಬಸಂತ್ ಘರ್‌ನಲ್ಲಿ ನಡೆದ ಕಾರ್ಯಾಚರಣೆಯಿಂದ ಭದ್ರತಾ ಸಿಬ್ಬಂದಿ ಹಿಂತಿರುಗುತ್ತಿದ್ದಾಗ ಕಡ್ವಾ ಪ್ರದೇಶದಲ್ಲಿ ಬೆಳಗ್ಗೆ 10.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೀಡಾದ ವಾಹನವು ಸೇನಾ ಪಡೆಯ

ಕಂದಕಕ್ಕೆ ಉರುಳಿದ ಸಿಆರ್‌ಪಿಎಫ್ ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿದ್ದ ವಾಹನ; ಮೂವರು ಸಾವು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೇರಳದಲ್ಲಿ ಭಾರೀ ಮಳೆ – ಕೆಲವೇ ಗಂಟೆಗಳಲ್ಲಿ ಕುಸಿದು ಬಿದ್ದ ಶಾಲೆ

(ನ್ಯೂಸ್‌ ಕಡಬ) newskadaba.com, ಆ.08:‌ಭಾರೀ ಮಳೆಯಿಂದಾಗಿ ಬುಧವಾರ ನಗರದ ಕೊಡಾಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದ ಛಾವಣಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್, ದೊಡ್ಡ ದುರಂತವೊಂದು ತಪ್ಪಿದೆ. ರಜೆ ಇದ್ದ ಕಾರಣ ಶಾಲೆಯಲ್ಲಿ ಯಾವುದೇ ವಿದ್ಯಾರ್ಥಿಗಳು ಅಥವಾ ಸಿಬ್ಬಂದಿ ಇರಲಿಲ್ಲ. ಈ ಘಟನೆ ಬೆಳಗಿನ ಜಾವದಲ್ಲಿ ಸಂಭವಿಸಿದೆ, ವಿದ್ಯಾರ್ಥಿಗಳು ಸಾಮಾನ್ಯವಾಗಿ ಸೇರುವ ಸಭಾಂಗಣದೊಳಗೆ ಲೋಹದ ಹಾಳೆಯ ಛಾವಣಿಯ ಕೆಳಗೆ ಅಳವಡಿಸಲಾದ ಜಿಪ್ಸಮ್ ಬೋರ್ಡ್ ಸೀಲಿಂಗ್ ಕುಸಿದಿದೆ. ಸುಮಾರು 54 ಲಕ್ಷ ರೂ. ವೆಚ್ಚದಲ್ಲಿ ಕೇವಲ ಎರಡು ವರ್ಷಗಳ

ಕೇರಳದಲ್ಲಿ ಭಾರೀ ಮಳೆ – ಕೆಲವೇ ಗಂಟೆಗಳಲ್ಲಿ ಕುಸಿದು ಬಿದ್ದ ಶಾಲೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಭಾರತದೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳದಂತೆ ಟ್ರಂಪ್‌ಗೆ ನಿಕ್ಕಿ ಹ್ಯಾಲಿ ಸಲಹೆ

(ನ್ಯೂಸ್‌ ಕಡಬ) newskadaba.com, ಆ.07: ಭಾರತ, ಅಮೆರಿಕ ನಡುವೆ ಸುಂಕ ಸಮರ ತಾರಕಕ್ಕೇರಿರುವ ಬೆನ್ನಲ್ಲೇ, ಇಂಥ ನಿರ್ಣಾಯಕ ಸಮಯದಲ್ಲಿ ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳಬೇಡಿ ಎಂದು ರಿಪಬ್ಲಿಕನ್‌ ನಾಯಕಿ ನಿಕ್ಕಿ ಹ್ಯಾಲಿ ಅವರು ಡೊನಾಲ್ಡ್ ಟ್ರಂಪ್‌ಗೆ ಸಲಹೆ ನೀಡಿದ್ದಾರೆ. ರಷ್ಯಾದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಮುಂದಿನ 24 ಗಂಟೆಯಲ್ಲಿ ಸುಂಕ ಗಣನೀಯ ಏರಿಕೆ ಮಾಡುವುದಾಗಿ ಟ್ರಂಪ್‌ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಗೆ ನಿಕ್ಕಿ ಹ್ಯಾಲಿ ಪ್ರತಿಕ್ರಿಯಿಸಿದ್ದು, ಟ್ರಂಪ್‌ ಅವರ ಪ್ರಸ್ತಾಪಗಳು ನಿರ್ಣಾಯಕ

ಭಾರತದೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳದಂತೆ ಟ್ರಂಪ್‌ಗೆ ನಿಕ್ಕಿ ಹ್ಯಾಲಿ ಸಲಹೆ Read More »

ರಾಷ್ಟ್ರೀಯ ನ್ಯೂಸ್

ರಾಜ್ಯಾದ್ಯಂತ ಇನ್ನೂ 5 ದಿನ ವ್ಯಾಪಕ ಮಳೆ ಮುಂದುವರಿಕೆ ಸಾಧ್ಯತೆ

(ನ್ಯೂಸ್‌ ಕಡಬ) newskadaba.com, ಆ.07: ರಾಜ್ಯದಲ್ಲಿ ನೈಋತ್ಯ ಮುಂಗಾರು ಚೇತರಿಕೆಯಾಗಿದ್ದು, ರಾಜ್ಯದಲ್ಲಿ ಉತ್ತಮ ಹಾಗೂ ವ್ಯಾಪಕ ಮಳೆಯಾಗುತ್ತಿದೆ. ಕಳೆದ ವಾರ ದುರ್ಬಲಗೊಂಡಿದ್ದ ಮುಂಗಾರು ಈ ವಾರ ಚುರುಕಾಗಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ರಾಜ್ಯದಲ್ಲಿ ಒಳ್ಳೆಯ ಮಳೆಯಾಗುತ್ತಿದೆ. ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಇನ್ನೂ ಐದು ದಿನಗಳ ಕಾಲ ರಾಜ್ಯದಲ್ಲಿ ಒಳ್ಳೆಯ ಮಳೆಯಾಗುವ ಸಾಧ್ಯತೆಗಳಿವೆ. ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ರಾಜ್ಯದ ಹಲವೆಡೆ ಮಳೆಯಾಗಲಿದೆ. ಹಲವೆಡೆ ಹಗುರದಿಂದ ಸಾಧಾರಣ ಮಳೆಯಾದರೆ, ಕೆಲವೆಡೆ

ರಾಜ್ಯಾದ್ಯಂತ ಇನ್ನೂ 5 ದಿನ ವ್ಯಾಪಕ ಮಳೆ ಮುಂದುವರಿಕೆ ಸಾಧ್ಯತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರ್ತವ್ಯ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ

(ನ್ಯೂಸ್‌ ಕಡಬ) newskadaba.com, ಆ.07: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ದೆಹಲಿಯ ಕರ್ತವ್ಯ ಪಥದಲ್ಲಿ ನಿರ್ಮಿಸಲಾದ ‘ಕರ್ತವ್ಯ ಭವನ-3’ ವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಇದು ಸೆಂಟ್ರಲ್ ವಿಸ್ಟಾ ಪುನಾರ್ವಿಕಾಸ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಹತ್ತು ನವೀನ ಭವನಗಳ ಪೈಕಿ ಮೊದಲನೆಯದು. ಈ ಭವನ ಉದ್ಘಾಟನೆಯೊಂದಿಗೆ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಂದೆಡೆ ಏಕತ್ರಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ನಿರ್ಣಾಯಕ ಮುಂದಿನ ಹಂತ ಶುರುವಾಗಿದೆ. ಈಗಲೂ ದೆಹಲಿಯ ವಿಭಿನ್ನ ಭಾಗಗಳಲ್ಲಿ ಹರಡಿರುವ ಸಚಿವಾಲಯಗಳು ಶೀಘ್ರದಲ್ಲೇ ಈ ನವೀನ ಕಟ್ಟಡಗಳಿಗೆ

ಕರ್ತವ್ಯ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top