News Kadaba

ಸುಳ್ಯ : ಕಾಡಾನೆ ದಾಳಿ ಕೃಷಿ ತೋಟಕ್ಕೆ ಹಾನಿ

(ನ್ಯೂಸ್‌ ಕಡಬ) newskadaba.com, ಆ.22  ಸುಳ್ಯ: ಮರ್ಕಂಜ ಭಾಗದ ಪಾರೆಪ್ಪಾಡಿ, ಉಬ್ರಾಳ, ಮಾವಜಿ ಭಾಗದ ಕೃಷಿ ತೋಟಕ್ಕೆ ಒಂಟಿ ಸಲಗವೊಂದು ದಾಳಿ ನಡೆಸಿ ಅಪಾರ ಪ್ರಾಮಾಣದ ಕೃಷಿ ನಷ್ಟ ಮಾಡಿದೆ ರಾತ್ರಿ ಪಾರೆಪ್ಪಾಡಿ ಪ್ರಶಾಂತ್ ರೈ ಪಾರೆಪ್ಪಾಡಿ, ಹಿಮಕರ ಮಾವಜಿಯವರ ತೋಟಕ್ಕೆ ದಾಳಿ ನಡೆಸಿ ಅಪಾರ ಪ್ರಾಮಾಣದ ಕೃಷಿ ನಾಶ ಮಾಡಿತ್ತು. ಸುಮಾರು ಒಂದು ತಿಂಗಳಿನಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಮಾವಾಜಿ ಕೇಶವ ಗೌಡ, ಸದಾಶಿವ ಗೌಡ, ಮೋನಪ್ಪ ಗೌಡ, ಪಾರ್ವತಿ, ರುಕ್ಕಿಯ್ಯ ಗೌಡ […]

ಸುಳ್ಯ : ಕಾಡಾನೆ ದಾಳಿ ಕೃಷಿ ತೋಟಕ್ಕೆ ಹಾನಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಹೇಶ್‌ ಶೆಟ್ಟಿ ತಿಮರೋಡಿ ಜಾಮೀನು ಭವಿಷ್ಯ ನಾಳೆ ನಿರ್ಧಾರ

(ನ್ಯೂಸ್‌ ಕಡಬ) newskadaba.com, ಆ.22 ಉಡುಪಿ: ಬಿ.ಎಲ್.ಸಂತೋಷ್ ವಿರುದ್ಧದ ಅವಹೇಳನಕಾರಿ ಹೇಳಿಕೆ ಪ್ರಕರಣದಲ್ಲಿ ಬಂಧನವಾಗಿರುವ ಸಾಮಾಜಿಕ ಕಾರ್ಯಕರ್ತ ಮಹೇಶ್‌ ಶೆಟ್ಟಿ ತಿಮರೋಡಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಕಾರಣ ಉಜಿರೆಯ ಮನೆಯಿಂದ ಅವರನ್ನು ಬಂಧಿಸಲಾಗಿತ್ತು. ಇವರ ಜಾಮೀನು ಅರ್ಜಿ ವಿಚಾರಣೆ ನಾಳೆ(ಆ.23) ಕೋರ್ಟ್‌ನಲ್ಲಿ ನಡೆಯಲಿದೆ. ಬ್ರಹ್ಮಾವರದಲ್ಲಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶ ನಾಗೇಶ್ ಎನ್.ಎ. ಅವರು ಆಗಸ್ಟ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ

ಮಹೇಶ್‌ ಶೆಟ್ಟಿ ತಿಮರೋಡಿ ಜಾಮೀನು ಭವಿಷ್ಯ ನಾಳೆ ನಿರ್ಧಾರ Read More »

ಕರಾವಳಿ, ಕರ್ನಾಟಕ

ಸೆ. 1 ರಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 2 ಟೋಲ್‌ ಪ್ಲಾಜಾದಲ್ಲಿ ದರ ಏರಿಕೆ!

(ನ್ಯೂಸ್‌ ಕಡಬ) newskadaba.com, ಆ.22 ಬೆಂಗಳೂರು:  ಸೆಪ್ಟೆಂಬರ್ 1 ರಿಂದ, ರಾಷ್ಟ್ರೀಯ ಹೆದ್ದಾರಿ 75 (ಬೆಂಗಳೂರು-ಮಂಗಳೂರು ರಸ್ತೆ) ದಲ್ಲಿರುವ ಎರಡು ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಹೆಚ್ಚಿನ ಬಳಕೆದಾರ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪರಿಷ್ಕೃತ ದರಗಳು ದೊಡ್ಡಕರೇನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ) ಮತ್ತು ಕರೆಬೈಲು (ತುಮಕೂರು ಜಿಲ್ಲೆ) ಟೋಲ್ ಪ್ಲಾಜಾಗಳಿಗೆ ಅನ್ವಯವಾಗುತ್ತವೆ. ಪ್ರತಿ ಟೋಲ್ ಪ್ಲಾಜಾದಲ್ಲಿ 40.13 ಕಿ.ಮೀ ದೂರಕ್ಕೆ ಶುಲ್ಕಗಳು ಅನ್ವಯವಾಗುತ್ತವೆ. ಈ ಟೋಲ್‌ ಪ್ಲಾಜಾಗಳಲ್ಲಿ ಕಾರ್‌, ಪ್ಯಾಸೆಂಜರ್‌ ವ್ಯಾನ್‌ ಹಾಗೂ ಜೀಪ್‌ಗಳು ಸಿಂಗಲ್‌ ಟ್ರಿಪ್‌ಗೆ 60 ರೂಪಾಯಿ,

ಸೆ. 1 ರಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 2 ಟೋಲ್‌ ಪ್ಲಾಜಾದಲ್ಲಿ ದರ ಏರಿಕೆ! Read More »

ಕರಾವಳಿ, ಕರ್ನಾಟಕ

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ 5 ಲಕ್ಷ ಪರಿಹಾರ- CM ಸಿದ್ಧರಾಮಯ್ಯ ಘೋಷಣೆ

(ನ್ಯೂಸ್‌ ಕಡಬ) newskadaba.com, ಆ.22 ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ನಿಂದ ಸಾಲ ಪಡೆದು ಅವರ ಕಿರಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವವರ ಕುಟುಂಬಕ್ಕೆ ಪರಿಹಾರ ನೀಡವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, ಸಂತ್ರಸ್ತ ಕುಟುಂಬಸ್ಥರಿಂದ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಕಾನೂನಾತ್ಮಕ ಕಡಿವಾಣ ಹಾಕುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಫೆಬ್ರವರಿ ತಿಂಗಳಿನಲ್ಲಿ ಹೊಸ ಕಾನೂನು ಜಾರಿಯಾದ ನಂತರದಿಂದ ಫೈನಾನ್ಸ್ ಸಿಬ್ಬಂದಿಗಳ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆಯಾಗಿದೆ,

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ 5 ಲಕ್ಷ ಪರಿಹಾರ- CM ಸಿದ್ಧರಾಮಯ್ಯ ಘೋಷಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಳ್ಳಾಲ : ಬೈಕ್ ಢಿಕ್ಕಿ – ಪಾದಚಾರಿ ಮೃತ್ಯು

(ನ್ಯೂಸ್‌ ಕಡಬ) newskadaba.com, ಆ.22: ಉಳ್ಳಾಲದ ತೊಕ್ಕೊಟ್ಟು ಸಮೀಪದ ಕಾಪಿಕಾಡಿನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ದುರ್ಘಟನೆ ನಡೆದಿದೆ. ಮೃತರನ್ನು ಕುಂಪಲ ಚೇತನನಗರ ನಿವಾಸಿ ಲೋಕೇಶ್ (48) ಎಂದು ಗುರುತಿಸಲಾಗಿದೆ. ಅವರು ತೊಕ್ಕೊಟ್ಟಿನಲ್ಲಿ ಇರುವ ವಾಣಿಜ್ಯ ಸಂಕೀರ್ಣವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆ.15 ರಂದು ಸಂಜೆ ಪಾಳಿ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಪಿಕಾಡು ಎಂಬಲ್ಲಿ ಹೆದ್ದಾರಿ ದಾಟುತ್ತಿದ್ದಾಗ ಏಕಾಏಕಿ ಬೈಕ್ ಢಿಕ್ಕಿ

ಉಳ್ಳಾಲ : ಬೈಕ್ ಢಿಕ್ಕಿ – ಪಾದಚಾರಿ ಮೃತ್ಯು Read More »

ಕರಾವಳಿ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್ ಇಲ್ಲ – ಸರ್ಕಾರ ಸ್ಪಷ್ಟನೆ

(ನ್ಯೂಸ್‌ ಕಡಬ) newskadaba.com, ಆ.22 ನವದೆಹಲಿ : ದೇಶಾದ್ಯಂತ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುರುವಾರ ದೃಢಪಡಿಸಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದ್ವಿಚಕ್ರ ವಾಹನಗಳ ಮೇಲೆ ಶುಲ್ಕ ವಿಧಿಸಲು ಯೋಜಿಸಿದೆ ಎಂಬ ಸಾಮಾಜಿಕ ಮಾಧ್ಯಮಗಳ ವದಂತಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು, 2008 ರ ಪ್ರಕಾರ ನಾಲ್ಕು ಚಕ್ರಗಳು ಮತ್ತು

ರಾಷ್ಟ್ರೀಯ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್ ಇಲ್ಲ – ಸರ್ಕಾರ ಸ್ಪಷ್ಟನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಐಎಎಸ್ ಟಾಪರ್ ಡಾ. ಶೇಣಾ ಅಗರ್ವಾಲ್ ಯಶೋಗಾಥೆ

(ನ್ಯೂಸ್‌ ಕಡಬ) newskadaba.com, ಆ.22 ಹರಿಯಾಣ : ಭಾರತದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಯುಪಿಎಸ್‌ಸಿ ಪರೀಕ್ಷೆಯು ಒಂದಾಗಿದೆ. ಸಾಧಿಸುವ ಛಲವಿದ್ದರೆ ಈ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಸಾಧ್ಯದ ಮಾತಲ್ಲ ಎಂಬುದಕ್ಕೆ ಐಎಎಸ್ ಅಧಿಕಾರಿ ಡಾ. ಶೇಣಾ ಅಗರ್ವಾಲ್ ಅವರ ಜೀವನದ ಪಯಣವೇ ಜೀವಂತ ನಿದರ್ಶನ. ಇವರ ಜೀವನಯಾತ್ರೆ ಧೈರ್ಯ, ದೃಢ ನಿಶ್ಚಯ ಮತ್ತು ಸಮಾಜ ಸೇವೆಯ ಮಹತ್ವವನ್ನು ಪ್ರತಿಬಿಂಬಿಸುವ ಕಥೆಯಾಗಿದೆ. ಹರಿಯಾಣದ ಯಮುನಾ ನಗರದಲ್ಲಿ ಜನಿಸಿದ ಮತ್ತು ಬೆಳೆದ ಶೇಣಾ, ಬಾಲ್ಯದಿಂದಲೇ ಶೈಕ್ಷಣಿಕವಾಗಿ ಅತ್ಯುತ್ತಮ ಪ್ರತಿಭಾವಂತರಾಗಿದ್ದರು. ಇವರು 10ನೇ

ಐಎಎಸ್ ಟಾಪರ್ ಡಾ. ಶೇಣಾ ಅಗರ್ವಾಲ್ ಯಶೋಗಾಥೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸೆಪ್ಟೆಂಬರ್ 1 ರಿಂದ ಜಾರಿ:ಸಿಬ್ಬಂದಿಗಳ ಸ್ವಾಭಾವಿಕ ಮರಣ, ಪರಿಹಾರ ಹಣ ದುಪ್ಪಟ್ಟು ನಿಗದಿ ಪಡಿಸಿದ KSRTC

(ನ್ಯೂಸ್‌ ಕಡಬ) newskadaba.com, ಆ.22 ಬೆಂಗಳೂರು: ಅಪಘಾತಗಳನ್ನು ಹೊರತುಪಡಿಸಿ ಇತರ ಕಾರಣಗಳಿಂದ ಸಾವನ್ನಪ್ಪುವ ನೌಕರರ ಕುಟುಂಬಸ್ಥರಿಗೆ ನೀಡಲಾಗುವ ಪರಿಹಾರ ಹಣವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದ್ವಿಗುಣಗೊಳಿಸಿದೆ. ಸೆಪ್ಟೆಂಬರ್ 1 ರಿಂದ, ಮೃತ ಸಿಬ್ಬಂದಿ ಕುಟುಂಬಗಳು 20 ಲಕ್ಷ ರೂ.ಗಳನ್ನು ಪಡೆಯಲಿದ್ದಾರೆ. ನಿಗಮದ ಪರಿಷ್ಕೃತ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿಯಲ್ಲಿ 14 ಲಕ್ಷ ರೂ.ಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಂದ 6 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ. KSRTC ಈಗಾಗಲೇ

ಸೆಪ್ಟೆಂಬರ್ 1 ರಿಂದ ಜಾರಿ:ಸಿಬ್ಬಂದಿಗಳ ಸ್ವಾಭಾವಿಕ ಮರಣ, ಪರಿಹಾರ ಹಣ ದುಪ್ಪಟ್ಟು ನಿಗದಿ ಪಡಿಸಿದ KSRTC Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಿರ್ದೇಶಕ ಪ್ರೇಮ್‌ಗೆ ಲಕ್ಷಾಂತರ ರೂ. ವಂಚನೆ

(ನ್ಯೂಸ್‌ ಕಡಬ) newskadaba.com, ಆ.20: ಸ್ಯಾಂಡಲ್‌ವುಡ್ ನಿರ್ದೇಶಕ ಪ್ರೇಮ್‌ಗೆ ಎಮ್ಮೆ ಮಾರುವವನೊಬ್ಬ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದು, ದೂರು ದಾಖಲಾಗಿದೆ. ಸಿನಿಮಾ ನಿರ್ದೇಶಕ ಪ್ರೇಮ್‌ಗೆ ಪ್ರಾಣಿಗಳ ಮೇಲೆ ವಿಪರೀತ ಕಾಳಜಿ. ಈಗಲೂ ವ್ಯವಸಾಯದಲ್ಲಿ ಪ್ರೇಮ್ ತೊಡಗಿಕೊಂಡಿದ್ದಾರೆ. ತಮ್ಮ ಫಾರಂ ಹೌಸ್‌ಗಾಗಿ ಎರಡು ಎಮ್ಮೆ ಖರೀದಿಸಲು ಪ್ರೇಮ್ ಮುಂದಾಗಿದ್ದರು. ಆದರೆ ಎಮ್ಮೆ ಮಾರಾಟಗಾರನೊಬ್ಬ ಹಣ ಪಡೆದು ಪ್ರೇಮ್‌ಗೆ ವಂಚಿಸಿದ್ದಾನೆ ಎನ್ನಲಾಗಿದೆ. ಗುಜರಾತ್ ಮೂಲದ ವನರಾಜ್ ಭಾಯ್ ಎಂಬುವರ ಬಳಿ ಎರಡು ಎಮ್ಮೆಗಳನ್ನು ಖರೀದಿಸಲು ಪ್ರೇಮ್ ಮುಂದಾಗಿದ್ದರು. ಎಮ್ಮೆಗಳ ಫೋಟೊ,

ನಿರ್ದೇಶಕ ಪ್ರೇಮ್‌ಗೆ ಲಕ್ಷಾಂತರ ರೂ. ವಂಚನೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಸಿನಿಮಾ

ಕೇರಳ : ಮನೆಗೆ ನುಗ್ಗಿ ಮಹಿಳೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ದುಷ್ಕರ್ಮಿ

(ನ್ಯೂಸ್‌ ಕಡಬ) newskadaba.com, ಆ.20: ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಮಹಿಳೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಕೇರಳದ ಕಣ್ಣೂರು ಜೆಲ್ಲೆ ಕುಟ್ಟಿಯತ್ತೂರ್‌ಬಳಿಯ ಉರುವಾಂಚಲ್‌ನಲ್ಲಿ ನಡೆದಿದೆ. ಪ್ರವೀಣಾ(39) ಕೊಲೆಯಾದ ಮಹಿಳೆ ದುಷ್ಕರ್ಮಿ ನೀರು ಕೇಳುವ ನೆಪದಲ್ಲಿನ ಮನೆಗೆ ನುಗ್ಗಿ ಆಕೆಯನ್ನು ಸುಟ್ಟು ಹಾಕಿದ್ದಾರೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ನಡೆದ ಸಮಯದಲ್ಲಿ ಪ್ರವೀಣಾ ಅವರ ಮಾವ,ಅತ್ತೆ ಹಾಗೂ ಅವರ ಅತ್ತಿಗೆಯ ಮಕ್ಕಳು ಮನೆಯಲ್ಲಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.ಪ್ರವೀಣಾ ಅವರ ಪತಿ ಅಜೀಜ್‌ ವಿದೇಶದಲ್ಲಿದ್ದಾರೆ.ಜಿಜೇಶ್‌ ಎಂಬಾತ

ಕೇರಳ : ಮನೆಗೆ ನುಗ್ಗಿ ಮಹಿಳೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ದುಷ್ಕರ್ಮಿ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top