News Kadaba

ಉತ್ತರಾಖಂಡದಲ್ಲಿ ಭಾರೀ ಮಳೆಯ ಪರಿಣಾಮ ಚಮೋಲಿಯಲ್ಲಿ ಭಾರೀ ಪ್ರವಾಹ-ಇಬ್ಬರು ನಾಪತ್ತೆ

(ನ್ಯೂಸ್‌ ಕಡಬ) newskadaba.com,ಆ.23 ಬೆಂಗಳೂರು: ಉತ್ತರಾಖಂಡದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪರಿಣಾಮ ಚಮೋಲಿ ಜಿಲ್ಲೆಯ ಥರಾಲಿಯಲ್ಲಿ ಪ್ರವಾಹ ಉಂಟಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. ಚೆಪ್ಡಾನ್ ಮಾರುಕಟ್ಟೆ ಪ್ರದೇಶದ ಕೆಲವು ಅಂಗಡಿಗಳು ಹಾನಿಗೊಳಗಾಗಿದ್ದು, ಡೆಹ್ರಾಡೂನ್, ತೆಹ್ರಿ, ಪೌರಿ, ಚಮೋಲಿ, ರುದ್ರಪ್ರಯಾಗ, ನೈನಿತಾಲ್ ಮತ್ತು ಅಲ್ಮೋರಾ ಸೇರಿದಂತೆ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ರಕ್ಷಣಾ ತಂಡಗಳೊಂದಿಗೆ ಜಿಲ್ಲಾಧಿಕಾರಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಥರಾಲಿ ಬಜಾರ್, ರಾಡಿಬಾಗ್ ಮತ್ತು […]

ಉತ್ತರಾಖಂಡದಲ್ಲಿ ಭಾರೀ ಮಳೆಯ ಪರಿಣಾಮ ಚಮೋಲಿಯಲ್ಲಿ ಭಾರೀ ಪ್ರವಾಹ-ಇಬ್ಬರು ನಾಪತ್ತೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೇಂದ್ರದ ಅನುದಾನ, ತೆರಿಗೆ ಪಾಲಿನ ಬಗ್ಗೆ ಶ್ವೇತ ಪತ್ರ ಮಂಡಿಸಲು ಸರ್ಕಾರ ಸಿದ್ಧ: ಸಿಎಂ ಸಿದ್ದರಾಮಯ್ಯ

(ನ್ಯೂಸ್‌ ಕಡಬ) newskadaba.com,ಆ.23 ಬೆಂಗಳೂರು: ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಹಾಗೂ ತೆರಿಗೆ ಪಾಲು ಕುರಿತು ಶ್ವೇತಪತ್ರ ಮಂಡಿಸಲು ರಾಜ್ಯಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು. ನಿಯಮ 69ರ ಅಡಿ ಕಾಂಗ್ರೆಸ್‌ನ ಸದಸ್ಯರಾದ ಕೆ.ಎಂ. ಶಿವಲಿಂಗೇಗೌಡ, ಎನ್.ಎಚ್.ಕೋನರೆಡ್ಡಿ, ಶರತ್ ಬಚ್ಚೇಗೌಡ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ್ದರು. ಇದಕ್ಕೆ ಶುಕ್ರವಾರ ಸದನದಲ್ಲಿ ಉತ್ತರಿಸಿದ ಸಿಎಂ, ಕೇಂದ್ರದ ಅನುದಾನ, ತೆರಿಗೆ ಪಾಲು ಬಗ್ಗೆ ಶ್ವೇತ ಪತ್ರ ಹೊರಡಿಸಲು ಸರ್ಕಾರ ಸಿದ್ಧವಿದೆ

ಕೇಂದ್ರದ ಅನುದಾನ, ತೆರಿಗೆ ಪಾಲಿನ ಬಗ್ಗೆ ಶ್ವೇತ ಪತ್ರ ಮಂಡಿಸಲು ಸರ್ಕಾರ ಸಿದ್ಧ: ಸಿಎಂ ಸಿದ್ದರಾಮಯ್ಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಧರ್ಮಸ್ಥಳ ಪ್ರಕರಣ: ಎಸ್.ಐ.ಟಿಯಿಂದ ಮುಸುಕುಧಾರಿ ವ್ಯಕ್ತಿಯ ಬಂಧನ

(ನ್ಯೂಸ್‌ ಕಡಬ) newskadaba.com,ಆ.23 ಧರ್ಮಸ್ಥಳ :  ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಮುಸುಕುಧಾರಿಯನ್ನ ವಿಶೇಷ ತನಿಖಾ ತಂಡವು (SIT) ಬಂಧಿಸಿದೆ. ಸತತ ವಿಚಾರಣೆಯ ಬಳಿಕ ಮುಸುಕುಧಾರಿಯನ್ನು ತನಿಖಾ ತಂಡವು ಬಂಧಿಸಿದೆ. ಇಂದು 11 ಗಂಟೆಗೆ ಎಸ್.ಐ.ಟಿ ಅಧಿಕಾರಿಗಳು ಕೋರ್ಟ್ ಗೆ ಹಾಜರುಪಡಿಸಿ ಬಳಿಕ ಆತನನ್ನ ಕಸ್ಟಡಿ ವಿಚಾರಣೆಗೆ ಪಡೆಯುವ ಸಾಧ್ಯತೆಯಿದೆ. ಮುಸುಕುಧಾರಿ ತೋರಿಸಿದ 17 ಪಾಯಿಂಟ್‌ಗಳಲ್ಲಿ ಏನೂ ಸಿಗದಿದ್ದ ಹಿನ್ನೆಲೆ ಎಸ್‌ಐಟಿ ತಂಡ ಸಮಾಧಿ ಶೋಧವನ್ನು ಸ್ಥಗಿತಗೊಳಿಸಿ ಮುಸುಕುಧಾರಿ ವಿರುದ್ಧವೇ ರಿವರ್ಸ್‌ ತನಿಖೆ ಶುರು ಮಾಡಿತ್ತು. ಪ್ರಕರಣದ ತನಿಖಾಧಿಕಾರಿ

ಧರ್ಮಸ್ಥಳ ಪ್ರಕರಣ: ಎಸ್.ಐ.ಟಿಯಿಂದ ಮುಸುಕುಧಾರಿ ವ್ಯಕ್ತಿಯ ಬಂಧನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಹುಬ್ಬಳ್ಳಿಯ ಕೃಪಾ ಜೈನ್ ಗೆ ಯಾವುದೇ ಕೋಚಿಂಗ್ ಇಲ್ಲದೆ ಯು.ಪಿ.ಎಸ್.ಸಿಯಲ್ಲಿ 440ನೇ ರ್‍ಯಾಂಕ್‌

(ನ್ಯೂಸ್‌ ಕಡಬ) newskadaba.com,ಆ.23 ಬೆಂಗಳೂರು :  ದೇಶದ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಾವುದೇ ಕೋಚಿಂಗ್ ಸಹಾಯವಿಲ್ಲದೇ ಸ್ವಂತ ಪರಿಶ್ರಮದಿಂದಲೇ ಹುಬ್ಬಳ್ಳಿಯ ಯುವತಿಯೊಬ್ಬರು 440 ನೇ ರ್‍ಯಾಂಕ್‌ ಪಡೆಯುವ ಮೂಲಕ ಬಹುದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಹುಬ್ಬಳ್ಳಿಯ ಅಭಯ ಜೈನ್ ಹಾಗೂ ಇಂದಿರಾ ಜೈನ್ ಅವರ ಪುತ್ರಿ ಕೃಪಾ ಎ ಜೈನ್‌ ಎಂಬುವವರೇ ಯು.ಪಿ.ಎಸ್.ಸಿಯಲ್ಲಿ 440 ನೇ ರ್‍ಯಾಂಕ್‌ ಪಡೆದ ಸಾಧಕಿ. ಕಿರಾಣಿ ವರ್ತಕರ ಮಗಳಾದ ಕೃಪಾ ಜೈನ್ ಓದಿರುವುದು ಇಂಜಿನಿಯರಿಂಗ್ ಆಗಿದ್ದರೂ ಸಿವಿಲ್ ಸರ್ವೀಸ್ ಮಾಡಬೇಕು

ಹುಬ್ಬಳ್ಳಿಯ ಕೃಪಾ ಜೈನ್ ಗೆ ಯಾವುದೇ ಕೋಚಿಂಗ್ ಇಲ್ಲದೆ ಯು.ಪಿ.ಎಸ್.ಸಿಯಲ್ಲಿ 440ನೇ ರ್‍ಯಾಂಕ್‌ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ವಿಜೃಂಭಣೆಯ ಗಣೇಶೋತ್ಸವಕ್ಕೆ ಅವಕಾಶ’-ಛಲವಾದಿ ನಾರಾಯಣಸ್ವಾಮಿ ಆಗ್ರಹ

(ನ್ಯೂಸ್‌ ಕಡಬ) newskadaba.com,ಆ.23 ಬೆಂಗಳೂರು:  ರಾಜ್ಯಕ್ಕೆ ಒಂದೇ ಕಾನೂನು ಇರಬೇಕು. ಗಣೇಶೋತ್ಸವವನ್ನು ವಿಜೃಂಭಣೆಯಿಂದ ಹಿಂದೂಗಳು ಕೊಂಡಾಡುವಂತೆ ಆಚರಿಸಲು ಸರಕಾರ ಅವಕಾಶ ಮಾಡಿಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ. ಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೇರೆ ಬೇರೆಯವರಿಗೆ ಬೇರೆ ಬೇರೆ ರೀತಿ ಮಣೆ ಹಾಕುವುದು, ಹಿಂದೂಗಳನ್ನು ದಮನಿಸುವ ನೀತಿಯನ್ನು ಮಾಡಿದ್ದೇ ಆದರೆ, ಇದರ ಪ್ರತಿಫಲವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಎಲ್ಲ ಕಡೆ ಹಿಂದೂಗಳು ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲು ಅನುವು

‘ವಿಜೃಂಭಣೆಯ ಗಣೇಶೋತ್ಸವಕ್ಕೆ ಅವಕಾಶ’-ಛಲವಾದಿ ನಾರಾಯಣಸ್ವಾಮಿ ಆಗ್ರಹ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ದ.ಕ. ಜಿಲ್ಲಾ ಕ್ರೀಡಾ ಬಾಲಕ-ಬಾಲಕಿಯರ ವಸತಿಗೃಹಕ್ಕೆ ಲೋಕಾಯುಕ್ತ ದಾಳಿ

(ನ್ಯೂಸ್‌ ಕಡಬ) newskadaba.com, ಆ.23   ಮಂಗಳೂರು : ನಗರದ ಮಣ್ಣಗುಡ್ಡಯಲ್ಲಿರುವ ದ.ಕ. ಜಿಲ್ಲಾ ಕ್ರೀಡಾ ಬಾಲಕ ಮತ್ತು ಬಾಲಕಿಯರ ವಸತಿಗೃಹಕ್ಕೆ ಮಂಗಳೂರು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕಿ ಡಾ. ಗಾನ ಪಿ. ಕುಮಾರ್ ಹಾಗೂ ಪೊಲೀಸ್ ನಿರೀಕ್ಷಕಿಯರಾದ ಭಾರತಿ ಜಿ, ರವಿ ಪವಾರ್ ನೇತೃತ್ವದ ತಂಡವು ಶುಕ್ರವಾರ ದಾಳಿ ನಡೆಸಿದ್ದಾರೆ. ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ಸಾಕಷ್ಟು ಲೋಪದೋಷಗಳು ಕಂಡುಬಂದಿದೆ. ಮುಖ್ಯವಾಗಿ ವಸತಿಗೃಹದ ಅಡುಗೆ ಕೋಣೆಯಲ್ಲಿ ಶುಚಿತ್ವ ಇರಲಿಲ್ಲ. ಧವಸಧಾನ್ಯಗಳ ಸ್ಟಾಕ್ ಇರಲಿಲ್ಲ. ಅಕ್ಕಿಯಲ್ಲಿ ಹುಳುಗಳು ಕಂಡುಬಂದಿದೆ. ಸ್ಟಾಕ್

ಮಂಗಳೂರು: ದ.ಕ. ಜಿಲ್ಲಾ ಕ್ರೀಡಾ ಬಾಲಕ-ಬಾಲಕಿಯರ ವಸತಿಗೃಹಕ್ಕೆ ಲೋಕಾಯುಕ್ತ ದಾಳಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಳೆಗಾಲದ ರಜೆಯನ್ನು ಸರಿದೂಗಿಸಲು ದ,ಕ ಜಿಲ್ಲೆಯಲ್ಲಿ ಇಂದಿನಿಂದ ಹೆಚ್ಚುವರಿ ತರಗತಿ ಆರಂಭ

(ನ್ಯೂಸ್‌ ಕಡಬ) newskadaba.com, ಆ.23  ಮಂಗಳೂರು : ಭಾರೀ ಮಳೆಯಿಂದಾಗಿ ಘೋಷಿಸಲಾದ ರಜಾದಿನಗಳನ್ನು ಸರಿದೂಗಿಸಲು ಮುಖ್ಯೋಪಾಧ್ಯಾಯರಿಗೆ ಸೂಚಿಸಿದ ನಂತರ ಜಿಲ್ಲೆಯಲ್ಲಿ ಶನಿವಾರದಂದು ಹೆಚ್ಚುವರಿ ತರಗತಿಗಳು ಪ್ರಾರಂಭವಾಗಿವೆ ಎಂದು ದಕ್ಷಿಣ ಕನ್ನಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಆಡಳಿತ) ಶಶಿಧರ್ ಅವರು ಹೇಳಿದರು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ, ನಿರಂತರ ಮಳೆಯಿಂದಾಗಿ ಜಿಲ್ಲಾಡಳಿತವು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಏಳು ರಜೆಗಳನ್ನು ಘೋಷಿಸಿತ್ತು. ಹೆಚ್ಚುವರಿಯಾಗಿ, ಮಂಗಳೂರು ಮೂಡುಬಿದಿರೆ, ಮೂಲ್ಕಿ,  ಬಂಟ್ವಾಳ ಮತ್ತು ಉಳ್ಳಾಲದಂತಹ ತಾಲ್ಲೂಕುಗಳಲ್ಲಿ, ಆಯಾ

ಮಳೆಗಾಲದ ರಜೆಯನ್ನು ಸರಿದೂಗಿಸಲು ದ,ಕ ಜಿಲ್ಲೆಯಲ್ಲಿ ಇಂದಿನಿಂದ ಹೆಚ್ಚುವರಿ ತರಗತಿ ಆರಂಭ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆನ್‌ಲೈನ್‌ ಗೇಮಿಂಗ್‌ ಮಸೂದೆಗೆ ರಾಷ್ಟ್ರಪತಿ ಅನುಮೋದನೆ

(ನ್ಯೂಸ್‌ ಕಡಬ) newskadaba.com, ಆ.23  ನವದೆಹಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ ನಡೆದ  ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾಗಿದ್ದ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಮಸೂದೆಗೆ ಅನುಮೋದಿಸಿದ್ದಾರೆ. ಹಣ ಕಟ್ಟಿ ಆಡಲಾಗುವ ಎಲ್ಲಾ ಆನ್‌ಲೈನ್‌ ಗೇಮ್‌ಗಳನ್ನು ಕಾನೂನು ನಿಷೇಧಿಸುತ್ತದೆ. ಆನ್‌ಲೈನ್‌ ಗೇಮ್‌ ಆಡುವುದಕ್ಕೆ ಅವಕಾಶ ಹಾಗೂ ಪ್ರೋತ್ಸಾಹ ನೀಡುವವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿಯವರೆಗೆ ದಂಡ ವಿಧಿಸಲಾಗುವುದು ಅಂತಹ ಆಟಗಳ ಕುರಿತು ಜಾಹೀರಾತು ಪ್ರಕಟಿಸಿದರೆ ಎರಡು ವರ್ಷಗಳವರೆಗೆ ಶಿಕ್ಷೆ ಮತ್ತು 50 ಲಕ್ಷ

ಆನ್‌ಲೈನ್‌ ಗೇಮಿಂಗ್‌ ಮಸೂದೆಗೆ ರಾಷ್ಟ್ರಪತಿ ಅನುಮೋದನೆ Read More »

ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮ ಹಣ ವರ್ಗಾವಣೆ : ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಸಿಕ್ಕಿಂನಲ್ಲಿ ಇಡಿ ವಶಕ್ಕೆ

(ನ್ಯೂಸ್‌ ಕಡಬ) newskadaba.com, ಆ.22: ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರ ಮನೆ ಮೇಲೆ ಇಂದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಸಿಕ್ಕಿಂನಲ್ಲಿ ಶಾಸಕರನ್ನ ವಶಕ್ಕೆ ಪಡೆಯಲಾಗಿದೆ. ತನ್ನ ಒಡೆತನದ ಕಂಪನಿಗಳಿಂದ ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಆರೋಪದ ಮೇಲೆ ಶುಕ್ರವಾರ ಶಾಸಕರು, ಅವರ ಸಹೋದರಾದ ಕೆ.ಸಿ ನಾಗರಾಜ ಮತ್ತು ಕೆಸಿ ತಿಪ್ಪೇಸ್ವಾಮಿ ಮನೆಗಳ ಮೇಲೆ ದಾಳಿ ನಡೆದಿದೆ. ಬೆಂಗಳೂರು, ಚಿತ್ರದುರ್ಗ, ಚಳ್ಳಕೆರೆ,

ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮ ಹಣ ವರ್ಗಾವಣೆ : ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಸಿಕ್ಕಿಂನಲ್ಲಿ ಇಡಿ ವಶಕ್ಕೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಭಾರತ ಮಹಿಳಾ ತಂಡದ ಗೌಹರ್‌ ಸುಲ್ತಾನ

(ನ್ಯೂಸ್‌ ಕಡಬ) newskadaba.com, ಆ.22: ಭಾರತ ಮಹಿಳಾ ತಂಡದ ಎಡಗೈ ಸ್ಪಿನ್ನರ್‌ ಗೌಹರ್‌ ಸುಲ್ತಾನ ಅವರು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದು, ದೇಶದ ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸುವುದು ಶ್ರೇಷ್ಠ ಗೌರವ ಎಂದು ಹೇಳಿದ್ದಾರೆ. 2008 ರಲ್ಲಿ ಕ್ರಿಕೆಟ್‌ ರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ 37 ವರ್ಷದ ಸುಲ್ತಾನ ಭಾರತ ಪರ 50 ಏಕದಿನ ಮತ್ತು 37 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಕೊನೆಯದಾಗಿ ಏಪ್ರಿಲ್‌ 2014 ರಲ್ಲಿ ದೇಶವನ್ನು ಪ್ರತಿನಿಧಿಸಿದರು.ಆದಾಗ್ಯೂ, ಸುಲ್ತಾನ 2024 ಮತ್ತು 2025

ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಭಾರತ ಮಹಿಳಾ ತಂಡದ ಗೌಹರ್‌ ಸುಲ್ತಾನ Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top