News Kadaba

ಕಾಪು: ಅಕ್ರಮ ಮರಳು ಸಾಗಾಟ – 2 ಟಿಪ್ಪರ್ ಲಾರಿ ವಶಕ್ಕೆ

(ನ್ಯೂಸ್‌ ಕಡಬ) newskadaba.com,  ಸೆ.11 ಕಾಪು : ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್‌ ಲಾರಿಯನ್ನು ಶಿರ್ವ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಕಾಪು ತಾಲೂಕಿನ ಶಿರ್ವ ಗ್ರಾಮದ ಗರಡಿ ಮನೆಯಲ್ಲಿರುವ ಪಾಪನಾಶಿನಿ ಹೊಳೆ ಬಳಿಯ ಸರ್ಕಾರಿ ಜಮೀನಿನ  ಬಳಿ ಅಕ್ರಮ ಮರಳು ಸಾಗಾಟ ಮಾಡುವ ಕುರಿತು ಮಾಹಿತಿ ಪಡೆದ ಶಿರ್ವ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಿಟಾಚಿ ಅಗೆಯುವ ಯಂತ್ರದ ಸಹಾಯದಿಂದ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಕಾರ್ಯಾಚರಣೆಯ ವೇಳೆಯಲ್ಲಿ , ಪೊಲೀಸರು ಮರಳು […]

ಕಾಪು: ಅಕ್ರಮ ಮರಳು ಸಾಗಾಟ – 2 ಟಿಪ್ಪರ್ ಲಾರಿ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ನಕಲಿ ಆಧಾರ್ ಕಾರ್ಡ್‌ ತಯಾರಿಸಿ ಸರ್ಕಾರಿ ಇಲಾಖೆಗಳು, ನ್ಯಾಯಾಲಯಗಳಿಗೆ ವಂಚನೆ; ವ್ಯಕ್ತಿಯ ಬಂಧನ

(ನ್ಯೂಸ್‌ ಕಡಬ) newskadaba.com,  ಸೆ.11 ಮಂಗಳೂರು: ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್‌ಗಳು ಮತ್ತು ಭೂ ಸಂಬಂಧಿತ ದಾಖಲೆಗಳನ್ನು ನಕಲಿ ಮಾಡುವ ಮೂಲಕ ಸರ್ಕಾರಿ ಇಲಾಖೆಗಳು ಮತ್ತು ನ್ಯಾಯಾಲಯಗಳನ್ನು ವಂಚಿಸಿದ ಆರೋಪದ ಮೇಲೆ 46 ವರ್ಷದ ವ್ಯಕ್ತಿಯನ್ನು ಬುಧವಾರ (ಸೆ.10) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಚನೆ ಹಲವಾರು ಪ್ರಕರಣಗಳು ಮತ್ತು ಸರ್ಕಾರಿ ದಾಖಲೆಗಳ ಮೇಲೆ ಪರಿಣಾಮ ಬೀರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸುಳಿವು ದೊರೆತ ಹಿನ್ನೆಲೆಯಲ್ಲಿ, ಉರ್ವಾ ಪೊಲೀಸರು ಮುಲ್ಕಿಯ ಬಪ್ಪನಾಡು ಗ್ರಾಮದ ನಿವಾಸಿ ಅಬ್ದುಲ್ ರೆಹಮಾನ್ ಎಂಬಾತನನ್ನು

ಮಂಗಳೂರು: ನಕಲಿ ಆಧಾರ್ ಕಾರ್ಡ್‌ ತಯಾರಿಸಿ ಸರ್ಕಾರಿ ಇಲಾಖೆಗಳು, ನ್ಯಾಯಾಲಯಗಳಿಗೆ ವಂಚನೆ; ವ್ಯಕ್ತಿಯ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರಿನಲ್ಲಿ ಧಾರಾಕಾರ ಮಳೆ

(ನ್ಯೂಸ್‌ ಕಡಬ) newskadaba.com,  ಸೆ.11 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ರಾಜಾಜಿನಗರದ 4ನೇ ಬ್ಲಾಕ್​​ನಲ್ಲಿ 2 ಮನೆಗಳ ಮೇಲೆ ಮರ ಬಿದ್ದಿದೆ. ಚಂದ್ರಮ್ಮ, ಪೀಟರ್​ ಎಂಬುವರ ಮನೆಗಳ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಪ್ರಾಣಹಾನಿ ಉಂಟಾಗಿಲ್ಲ. ತೀವ್ರ ಮಳೆ ಗಾಳಿಗೆ ಮರ ಬಿದ್ದು 5 ಕಾರು, ಟಾಟಾ ಏಸ್​ ವಾಹನ, 3-4 ಬೈಕ್​ಗಳು ಜಖಂಗೊಂಡಿವೆ. ಮನೆಗಳ ಮೇಲೆ ಮರ ಬಿದ್ದ ಪರಿಣಾಮ  ಎರಡು

ಬೆಂಗಳೂರಿನಲ್ಲಿ ಧಾರಾಕಾರ ಮಳೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಎಕ್ಸ್‌ಪರ್ಟ್ ಪಿಯು ಕಾಲೇಜು; 15 ವಿದ್ಯಾರ್ಥಿಗಳು ಏಮ್ಸ್‌ಗೆ ಪ್ರವೇಶ

(ನ್ಯೂಸ್‌ ಕಡಬ) newskadaba.com,  ಸೆ.11 ಮಂಗಳೂರು: ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ 15 ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಏಮ್ಸ್ ಹಾಗೂ 11 ವಿದ್ಯಾರ್ಥಿಗಳು ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸಂಶೋಧನಾ ಕೇಂದ್ರ (ಜಿಪ್ಮರ್)ಕ್ಕೆ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ಪಡೆದಿದ್ದಾರೆ. ಇದಲ್ಲದೆ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಾದ ಬೆಂಗಳೂರಿನ ಬಿಎಂಸಿಗೆ 23, ಮೈಸೂರಿನ ಎಂಎಂಸಿಗೆ 27, ಮಂಗಳೂರಿನ ಕೆಎಂಸಿಗೆ 13, ಹುಬ್ಬಳ್ಳಿಯ ಕೆಐಎಂಎಸ್ 14, ಧಾರವಾಡದ ಎಸ್‌ಡಿಎಂಗೆ 21 ಸೇರಿದಂತೆ ಒಟ್ಟು ಅಖಿಲ ಭಾರತ ಕೋಟಾದಡಿ 78

ಮಂಗಳೂರು: ಎಕ್ಸ್‌ಪರ್ಟ್ ಪಿಯು ಕಾಲೇಜು; 15 ವಿದ್ಯಾರ್ಥಿಗಳು ಏಮ್ಸ್‌ಗೆ ಪ್ರವೇಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಿಎಂ ಆವಾಸ್ ಯೋಜನೆಯಡಿ ಒಟ್ಟು 47,848 ಮನೆಗಳ ಮಂಜೂರು-ಸಿಎಂ

(ನ್ಯೂಸ್‌ ಕಡಬ) newskadaba.com, ಸೆ.10: ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)‌ ಅಡಿ ಹಿಂದಿನ ಬಾರಿ ನಮ್ಮ ಸರ್ಕಾರವಿದ್ದಾಗ 43,874 ಮನೆಗಳು ಸೇರಿದಂತೆ ಒಟ್ಟು 47,848 ಮನೆಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ 13,303 ಮನೆಗಳು ಬಹುತೇಕ ಪೂರ್ಣಗೊಂಡಿದ್ದು, ಒಟ್ಟು 25,815 ಮನೆಗಳು ನಿರ್ಮಾಣ ಹಂತದಲ್ಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಫಲಾನುಭವಿಗಳ ವಂತಿಕೆ ಒಟ್ಟು ರೂ. 134 ಕೋಟಿ ಸಂಗ್ರಹಿಸಲಾಗಿದೆ. ಮೊದಲ ಹಂತದಲ್ಲಿ

ಪಿಎಂ ಆವಾಸ್ ಯೋಜನೆಯಡಿ ಒಟ್ಟು 47,848 ಮನೆಗಳ ಮಂಜೂರು-ಸಿಎಂ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪೂರ್ವ ಉಕ್ರೇನ್ನಲ್ಲಿ ರಷ್ಯಾ ವಾಯುದಾಳಿ; ಪಿಂಚಣಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ 24 ಜನ ಸಾವು

(ನ್ಯೂಸ್‌ ಕಡಬ) newskadaba.com, ಸೆ.10: ಕೀವ್‌: ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದ ಯಾರೋವಾ ಗ್ರಾಮದಲ್ಲಿ ರಷ್ಯಾ ಗ್ಲೈಡ್ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 24 ಜನರು ಮೃತಪಟ್ಟಿದ್ದು, 19 ಜನರು ಗಾಯಗೊಂಡಿದ್ದಾರೆ. ಈ ದಾಳಿಯು ಮಂಗಳವಾರ (ಸೆ. 9) ಬೆಳಗ್ಗೆ 11 ಗಂಟೆಗೆ ಪಿಂಚಣಿ ಸಂಗ್ರಹಿಸಲು ಸಾಲಿನಲ್ಲಿ ನಿಂತಿದ್ದ ಜನರ ಮೇಲೆ ನಡೆದಿದೆ. ಈ ಘಟನೆಯಿಂದಾಗಿ ಪೋಲೆಂಡ್‌ನ ಸೈನ್ಯವು ಹೈ ಅಲರ್ಟ್‌ನಲ್ಲಿದೆ. ಯಾರೋವಾ ಗ್ರಾಮವು ಯುದ್ಧದ ಸ್ಥಳದಿಂದ ಕೇವಲ 10 ಕಿ.ಮೀ. ದೂರದಲ್ಲಿದೆ. ಡೊನೆಟ್ಸ್ಕ್ ಪ್ರಾದೇಶಿಕ ಮುಖ್ಯಸ್ಥ ವಾಡಿಮ್ ಫಿಲಾಶ್ಕಿನ್ ಪ್ರಕಾರ, ಮೃತಪಟ್ಟವರಲ್ಲಿ

ಪೂರ್ವ ಉಕ್ರೇನ್ನಲ್ಲಿ ರಷ್ಯಾ ವಾಯುದಾಳಿ; ಪಿಂಚಣಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ 24 ಜನ ಸಾವು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಂಗಳೂರು: ಕ್ಯಾನ್ಸರ್‌ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲು; ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿ ಪರಾರಿ..!

ಬೆಂಗಳೂರು: ಕ್ಯಾನ್ಸರ್‌ ಚಿಕಿತ್ಸೆಗೆಂದು ಕಿದ್ವಾಯಿ ಆಸ್ಪತ್ರೆಗೆ ದಾಖಲಾಗಿದ್ದ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿ ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ. ಚೈತನ್ಯ ಕಲ್ಯಾಣಿ (34) ಪರಾರಿಯಾಗಿರುವ ಸಜಾಬಂದಿ. ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ. ವಿಜಯಪುರ ಜಿಲ್ಲಾ ಕಾರಾಗೃಹದಲ್ಲಿದ್ದ ಆತನನ್ನು ಆಗಸ್ಟ್‌ 3ರಂದು ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೈದಿಗೆ, ಜೈಲಿನ ವೈದ್ಯರ ಸಲಹೆ ಮೇರೆಗೆ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಚೇತನ್, ಸೋಮವಾರ ಮಧ್ಯಾಹ್ನ

ಬೆಂಗಳೂರು: ಕ್ಯಾನ್ಸರ್‌ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲು; ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿ ಪರಾರಿ..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸ್ವರ್ಣ ಪ್ರಿಯರಿಗೆ ಶಾಕ್‌; ಚಿನ್ನದ ದರದಲ್ಲಿ ಭಾರೀ ಏರಿಕೆ, ರೇಟ್‌ ಚೆಕ್‌ ಮಾಡಿ

(ನ್ಯೂಸ್‌ ಕಡಬ) newskadaba.com, ಸೆ.10 ಬೆಂಗಳೂರು : ಚಿನ್ನದ ದರದಲ್ಲಿ ಬುಧವಾರ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 20 ರೂ. ಏರಿಕೆ ಕಂಡಿದ್ದು, 10,130 ರೂ.ಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 21.90 ರೂ. ಏರಿಕೆ ಕಂಡು ಬಂದಿದ್ದು, 11,051 ರೂ ಆಗಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 81,040 ರೂ. ಬಾಳಿದರೆ, 10 ಗ್ರಾಂಗೆ ನೀವು 1,01,300

ಸ್ವರ್ಣ ಪ್ರಿಯರಿಗೆ ಶಾಕ್‌; ಚಿನ್ನದ ದರದಲ್ಲಿ ಭಾರೀ ಏರಿಕೆ, ರೇಟ್‌ ಚೆಕ್‌ ಮಾಡಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದು ಬೆಂಗಳೂರು, ತುಮಕೂರು ಸೇರಿ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ!

(ನ್ಯೂಸ್‌ ಕಡಬ) newskadaba.com, ಸೆ.10  ಬೆಂಗಳೂರು: ಮುಂದಿನ 6 ದಿನಗಳ ಕಾಲ ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದ್ದು, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇಂದು (ಸೆ.10) ಕೂಡ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ರಾಮನಗರ, ಮಂಡ್ಯ, ಮೈಸೂರು, ಬಳ್ಳಾರಿ, ಬೆಂಗಳೂರು, ವಿಜಯನಗರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ

ಇಂದು ಬೆಂಗಳೂರು, ತುಮಕೂರು ಸೇರಿ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಮ್ಮ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರು: ಪ್ರಸ್ತಾವನೆಗೆ ಸಿಎಂ ಒಪ್ಪಿಗೆ, ತೀವ್ರ ವಿರೋಧ

(ನ್ಯೂಸ್‌ ಕಡಬ) newskadaba.com, ಸೆ.10: ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣವೊಂದಕ್ಕೆ ಸೇಂಟ್ ಮೇರಿ ಹೆಸರಿಡುವ ಪ್ರಸ್ತಾವನೆಯನ್ನು ಪರಿಗಣಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದು, ಮುಖ್ಯಮಂತ್ರಿಗಳ ಈ ಪ್ರತಿಕ್ರಿಯೆ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನಲ್ಲಿ ನಡೆದ ಸೆಂಟ್ ಮೇರೀಸ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರು ನಗರದಲ್ಲಿನ ಒಂದು ಮೆಟ್ರೋ ನಿಲ್ದಾಣಕ್ಕೆ ‘ಸೆಂಟ್ ಮೇರಿ’ ಎಂಬ ಹೆಸರಿಡಬೇಕು ಎಂಬ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಇದಕ್ಕೆ ಅನುಮೋದನೆ ದೊರೆತ

ನಮ್ಮ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರು: ಪ್ರಸ್ತಾವನೆಗೆ ಸಿಎಂ ಒಪ್ಪಿಗೆ, ತೀವ್ರ ವಿರೋಧ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top