News Kadaba

ಮಂಗಳೂರು ಕೊಡಿಯಲ್‌ಬೈಲ್ ನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಓಣಂ ಸಂಭ್ರಮಾಚರಣೆ

(ನ್ಯೂಸ್‌ ಕಡಬ) newskadaba.com,  ಸೆ.15 ಮಂಗಳೂರು : ‘ಸುಗ್ಗಿಹಬ್ಬ’ ಎಂದು ಕರೆಯಲ್ಪಡುವ, ಸಮಾನತೆ, ಸಂತೋಷ ಮತ್ತು ಐಕ್ಯತೆಗೆ ಪ್ರತೀಕವಾದ ಓಣಂ ಆಚರಣೆಯನ್ನು ಮಂಗಳೂರು ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆಯಾದ ಡಾ.ಉಷಾಪ್ರಭಾ ಎನ್ ನಾಯಕ್  ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಓಣಂ ಆಚರಣೆಯ ಪ್ರಯುಕ್ತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವರ್ಣರಂಜಿತ ಪೂಕಳಂ ಅನ್ನು ರಚಿಸಿದರು. ಕೇರಳದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಬಂದ ಉಪನ್ಯಾಸಕರು ಪೂಕಳಂನ […]

ಮಂಗಳೂರು ಕೊಡಿಯಲ್‌ಬೈಲ್ ನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಓಣಂ ಸಂಭ್ರಮಾಚರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಬಾಕಿ ಇದ್ದ 6228 ದಾವಾ ಪ್ರಕರಣಗಳಲ್ಲಿ 785 ಪ್ರಕರಣಗಳು ಇತ್ಯರ್ಥ

(ನ್ಯೂಸ್‌ ಕಡಬ) newskadaba.com,  ಸೆ.15 ಬಂಟ್ವಾಳ : ಬಂಟ್ವಾಳ ಕೋರ್ಟ್ ನಲ್ಲಿ  ಸೆ.13 (ಶನಿವಾರ)  ರಂದು ನಡೆದ ಲೋಕ ಅದಾಲತ್ ನಲ್ಲಿ ಬಾಕಿ ಇದ್ದ ಹಲವು ಪ್ರಕರಣಗಳು ಇತ್ಯರ್ಥಗೊಂಡು ರೂ. 32,68,475 ರೂ. ಸಂದಾಯಗೊಂಡು ಇತ್ಯರ್ಥಗೊಂಡಿರುತ್ತದೆ. ಹಾಗೆಯೇ ಒಟ್ಟು 9898 ಪಿಎಲ್‌ಸಿ ಪ್ರಕರಣಗಳು ಇತ್ಯರ್ಥಗೊಂಡಿದ್ದು, 3,02,54,522 ರೂ. ಸಂದಾಯವಾಗಿದೆ. ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಂ ಪಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೃಷ್ಣಮೂರ್ತಿ ಎನ್. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ರಾಜೇಂದ್ರ ಪ್ರಸಾದ್ ಕೆ. ಎಸ್ ಹಾಗೂ

ಬಂಟ್ವಾಳ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಬಾಕಿ ಇದ್ದ 6228 ದಾವಾ ಪ್ರಕರಣಗಳಲ್ಲಿ 785 ಪ್ರಕರಣಗಳು ಇತ್ಯರ್ಥ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಠ್ಮಂಡು : ‘ ನಾನು ಅಧಿಕಾರದ ಆಸೆಯಿಂದ ಬಂದಿಲ್ಲ, ಆರು ತಿಂಗಳಿಗಿಂತ ಹೆಚ್ಚು ದಿನ ಇರಲ್ಲ’- ನೇಪಾಳ ಪ್ರಧಾನಿ ಸುಶೀಲಾ ಕರ್ಕಿ

(ನ್ಯೂಸ್‌ ಕಡಬ) newskadaba.com,  ಸೆ.15 : ಕಠ್ಮಂಡು :   ನೇಪಾಳದ ನೂತನ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿ ಅವರು ‘ನಾನು ಅಧಿಕಾರದ ಆಸೆಯಿಂದ ಬಂದಿಲ್ಲ, 6 ತಿಂಗಳಿಗಿಂತ ಹೆಚ್ಚು ದಿನ ಇರಲ್ಲ ‘ ಎಂದು ತಿಳಿಸಿದ್ದಾರೆ ಹಂಗಾಮಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಹೊಸ ಸಂಸತ್ತಿಗೆ ಜವಾಬ್ದಾರಿಯನ್ನು ಹಸ್ತಾಂತರಿಸುತ್ತೇವೆ. ನಿಮ್ಮ ಬೆಂಬಲವಿಲ್ಲದೆ ನಾವು ಯಶಸ್ವಿಯಾಗುವುದಿಲ್ಲ. ಕೆ.ಪಿ.ಶರ್ಮಾ ಓಲಿ ಸರ್ಕಾರ ಉರುಳಿಸಿದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರವ್ಯಾಪಿ ‘ಜೆನ್-ಝಡ್’ ಪ್ರತಿಭಟನೆಗಳನ್ನು ಅವರು ಶ್ಲಾಘಿಸಿದರು.

ಕಠ್ಮಂಡು : ‘ ನಾನು ಅಧಿಕಾರದ ಆಸೆಯಿಂದ ಬಂದಿಲ್ಲ, ಆರು ತಿಂಗಳಿಗಿಂತ ಹೆಚ್ಚು ದಿನ ಇರಲ್ಲ’- ನೇಪಾಳ ಪ್ರಧಾನಿ ಸುಶೀಲಾ ಕರ್ಕಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಮೇಘಸ್ಫೋಟ: ಅಪಾರ ಬೆಳೆ ಹಾನಿ

(ನ್ಯೂಸ್‌ ಕಡಬ) newskadaba.com,  ಸೆ.13 : ಮೇಘಸ್ಫೋಟ ಸಂಭವಿಸಿದ ಪರಿಣಾಮ ಹಲವಾರು ವಾಹನಗಳು ಅವಶೇಷಗಳಡಿ ಹೂತುಹೋಗಿದ್ದು, ಅಪಾರ ಪ್ರಮಾಣದ ಬೆಳೆಹಾನಿಯುಂಟಾದ ಘಟನೆ ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನ ಜಾವ ನಡೆದಿದೆ. ನೈನಾ ದೇವಿ ವಿಧಾನಸಭಾ ಕ್ಷೇತ್ರದ ನಮ್ಹೋಲ್ ಪ್ರದೇಶದ ಗುತ್ರಹಾನ್ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜ್ಯ ರಾಜಧಾನಿ ಶಿಮ್ಲಾದಲ್ಲಿ ದಟ್ಟ ಮಂಜು ಆವರಿಸಿದ್ದು, ಕಡಿಮೆ ಗೋಚರತೆಯ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಶನಿವಾರ

ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಮೇಘಸ್ಫೋಟ: ಅಪಾರ ಬೆಳೆ ಹಾನಿ Read More »

ಕರಾವಳಿ

ಮಂಗಳೂರು: ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಚಾಲಕ ಪಾರು

(ನ್ಯೂಸ್‌ ಕಡಬ) newskadaba.com,  ಸೆ.13 : ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ರಸ್ತೆಯಲ್ಲೇ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರಿನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಮರದ ದಿಮ್ಮಿಗಳನ್ನು ಹೊತ್ತ ಲಾರಿ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಸಾಗುತ್ತಿತ್ತು. ಈ ವೇಳೆ ಎಕ್ಕೂರು ಬಳಿ ಇಳಿಜಾರು ರಸ್ತೆಯಲ್ಲಿ ಲಾರಿ ಮಗುಚಿ ಬಿದ್ದಿದೆ. ಅಪಘಾತದ ವೇಳೆ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಲಾರಿಯನ್ನು ಚಲಾಯಿಸುತ್ತಿದ್ದ. ಇದರಿಂದಾಗಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ. ಅದೃಷ್ಟವಶಾತ್ ಚಾಲಕ

ಮಂಗಳೂರು: ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಚಾಲಕ ಪಾರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಜಯಲಕ್ಷ್ಮೀ ದರ್ಶನ್ ಮನೆಯಲ್ಲಿ ಕಳ್ಳತನ; ದೂರು ದಾಖಲು, ಅವರ ಮೇಲೆಯೇ ಅನುಮಾನ!

(ನ್ಯೂಸ್‌ ಕಡಬ) newskadaba.com,  ಸೆ.13 : ಜೈಲಿನಲ್ಲಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ನಿವಾಸದಲ್ಲಿ ಕಳ್ಳತನವಾಗಿದೆ. ಈ ಸಂಬಂಧ ವಿಜಯಲಕ್ಷ್ಮೀ ದರ್ಶನ್ ಅವರ ಮ್ಯಾನೇಜರ್ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಹಿನ್ನಲೆ CK ಅಚ್ಚುಕಟ್ಟು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮನೆಕೆಲಸದವರ ಮೇಲೆ ಶಂಕೆ ವ್ಯಕ್ತಪಡಿಸಿ ಮ್ಯಾನೇಜರ್ ನಾಗರಾಜ್ ಈ ದೂರನ್ನು ದಾಖಲಿಸಿದ್ದಾರೆ. ದೂರಿನಲ್ಲಿ 3 ಲಕ್ಷ ರೂಪಾಯಿ ಕಳ್ಳತನವಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ 4ರಂದು ಕೆಲಸದ ನಿಮಿತ್ ವಿಜಯಲಕ್ಷ್ಮೀ ದರ್ಶನ್ ಮೈಸೂರಿಗೆ ತೆರಳಿದ್ದರು.

ವಿಜಯಲಕ್ಷ್ಮೀ ದರ್ಶನ್ ಮನೆಯಲ್ಲಿ ಕಳ್ಳತನ; ದೂರು ದಾಖಲು, ಅವರ ಮೇಲೆಯೇ ಅನುಮಾನ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಷ್ಯಾದ ಕರಾವಳಿಯಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ

(ನ್ಯೂಸ್‌ ಕಡಬ) newskadaba.com,  ಸೆ.13 : ರಷ್ಯಾದ ಕರಾವಳಿಯಲ್ಲಿ ಶನಿವಾರ ಬೆಳಗಿನ ಜಾವ 2:23 ಕ್ಕೆ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಹಾಗೂ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಒಂದು ತಿಂಗಳ ಹಿಂದೆಯಷ್ಟೇ 8.8 ತೀವ್ರತೆಯ ಭೀಕರ ಭೂಕಂಪ ಸಂಭವಿಸಿ, ಸುನಾಮಿ ಉಂಟಾಗಿತ್ತು. ಇದೀಗ ಮತ್ತೆ ಪ್ರಬಲ ಭೂಕಂಪ ಸಂಭವಿಸಿದ ಹಿನ್ನೆಲೆ, ಸುನಾಮಿ ಆತಂಕ ಎದುರಾಗಿದೆ. ರಷ್ಯಾದ ಕಮ್ಚಟ್ಕಾ ಪ್ರದೇಶದ ಪೂರ್ವ ಕರಾವಳಿಯ ಬಳಿ ಭೂಕಂಪ ಸಂಭವಿಸಿದೆ. 10 ಕಿಮೀ

ರಷ್ಯಾದ ಕರಾವಳಿಯಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಹಾಟ್ ಏರ್ ಬಲೂನ್‌ಗೆ ಬೆಂಕಿ; ಕೂದಲೆಳೆ ಅಂತರದಲ್ಲಿ ಬಚಾವಾದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್

(ನ್ಯೂಸ್‌ ಕಡಬ) newskadaba.com,  ಸೆ.13 ಭೋಪಾಲ್‌: ಮಂದ್ಸೌರ್‌ನಲ್ಲಿ ಗಾಂಧಿ ಸಾಗರ್ ಫಾರೆಸ್ಟ್ ರಿಟ್ರೀಟ್‌ನಲ್ಲಿ  ಕಾರ್ಯಕ್ರಮದ ಸಮಯದಲ್ಲಿ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರನ್ನು ಹೊತ್ತೊಯ್ಯುತ್ತಿದ್ದ ಬಿಸಿ ಗಾಳಿಯ ಬಲೂನ್‌ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ, ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ . ಅದೃಷ್ಟವಶಾತ್, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಸಿಎಂ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಘಟನೆಯ ವಿಡಿಯೋವೊಂದು ಹೊರಬಿದ್ದಿದ್ದು, ಮೋಹನ್ ಯಾದವ್ ಅವರಿದ್ದ ಬಲೂನಿಗೆ ಬೆಂಕಿ ಬಿದ್ದಿರುವುದನ್ನು ನೋಡಬಹುದಾಗಿದೆ. ಶುಕ್ರವಾರ ಸಂಜೆ 4ನೇ ಆವೃತ್ತಿಯ ಗಾಂಧಿಸಾಗರ್ ಉತ್ಸವವನ್ನು ಉದ್ಘಾಟಿಸಿದ ಒಂದು ದಿನದ

ಹಾಟ್ ಏರ್ ಬಲೂನ್‌ಗೆ ಬೆಂಕಿ; ಕೂದಲೆಳೆ ಅಂತರದಲ್ಲಿ ಬಚಾವಾದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮದ್ಯ ಸೇವಿಸಿ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ಇಂಗ್ಲೆಂಡ್ ನ ಖ್ಯಾತ ಕ್ರಿಕೆಟಿಗನ ವಿರುದ್ಧ ತನಿಖೆ!

(ನ್ಯೂಸ್‌ ಕಡಬ) newskadaba.com,  ಸೆ.13 : ಲಂಡನ್: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಹಿರಿಯ ಆಟಗಾರನೊಬ್ಬ ಮದ್ಯ ಸೇವಿಸಿ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸ್ ತನಿಖೆಗೆ ಒಳಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಂಗ್ಲೆಂಡ್ ತಂಡದ 40 ವರ್ಷದ ಪ್ರಮುಖ ಕ್ರಿಕೆಟಿಗ ಇಬ್ಬರು ಮಹಿಳೆಯರ ಮೇಲೆ ಮದ್ಯ ಸೇವಿಸಿ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸ್ ತನಿಖೆಗೆ ಒಳಪಟ್ಟಿದ್ದಾರೆ. ಈ ಕುರಿತು ದಿ ಡೈಲಿ ಟೆಲಿಗ್ರಾಫ್‌ನ ವರದಿ ಮಾಡಿದ್ದು, ‘ಫುಲ್ಹ್ಯಾಮ್

ಮದ್ಯ ಸೇವಿಸಿ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ಇಂಗ್ಲೆಂಡ್ ನ ಖ್ಯಾತ ಕ್ರಿಕೆಟಿಗನ ವಿರುದ್ಧ ತನಿಖೆ! Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಟ್ರ್ಯಾಕ್ಟರ್‌ ಅನ್ನು ಲಾರಿಯಿಂದ ಇಳಿಸುವಾಗ ಮೈಮೇಲೆ ಬಿದ್ದು ಯುವಕ ಮೃತ್ಯು

(ನ್ಯೂಸ್‌ ಕಡಬ) newskadaba.com,  ಸೆ.13 ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿಮೇಳದ ಮೊದಲ‌ ದಿನವೇ ದುರಂತವೊಂದು ಸಂಭವಿಸಿದೆ‌. ಲಾರಿಯಿಂದ ಟ್ರ್ಯಾಕ್ಟರ್ ಇಳಿಸುವಾಗ ಮೈಮೇಲೆ ಬಿದ್ದು ಯುವಕ ಮೃತಪಟ್ಟಿದ್ದಾನೆ. ತುಮಕೂರು ಮೂಲದ ಪರಶುರಾಮ (32) ಮೃತ. ಶನಿವಾರದಿಂದ ನಡೆಯುವ ಕೃಷಿ ಮೇಳದ ಪ್ರದರ್ಶನಕ್ಕೆ ಪರಶುರಾಮ ಟ್ರ್ಯಾಕ್ಟರ್ ತಂದಿದ್ದ. ಲಾರಿಯಿಂದ ಟ್ರ್ಯಾಕ್ಟರ್ ಇಳಿಸುವಾಗ ನಿಯಂತ್ರಣ ತಪ್ಪಿ ಪರಶುರಾಮನ ಮೈಮೇಲೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಟ್ರ್ಯಾಕ್ಟರ್‌ ಅನ್ನು ಲಾರಿಯಿಂದ ಇಳಿಸುವಾಗ ಮೈಮೇಲೆ ಬಿದ್ದು ಯುವಕ ಮೃತ್ಯು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top