ಮದ್ಯ ಸೇವಿಸಿ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ಇಂಗ್ಲೆಂಡ್ ನ ಖ್ಯಾತ ಕ್ರಿಕೆಟಿಗನ ವಿರುದ್ಧ ತನಿಖೆ!

(ನ್ಯೂಸ್‌ ಕಡಬ) newskadaba.com,  ಸೆ.13 : ಲಂಡನ್: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಹಿರಿಯ ಆಟಗಾರನೊಬ್ಬ ಮದ್ಯ ಸೇವಿಸಿ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸ್ ತನಿಖೆಗೆ ಒಳಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇಂಗ್ಲೆಂಡ್ ತಂಡದ 40 ವರ್ಷದ ಪ್ರಮುಖ ಕ್ರಿಕೆಟಿಗ ಇಬ್ಬರು ಮಹಿಳೆಯರ ಮೇಲೆ ಮದ್ಯ ಸೇವಿಸಿ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸ್ ತನಿಖೆಗೆ ಒಳಪಟ್ಟಿದ್ದಾರೆ.

ಈ ಕುರಿತು ದಿ ಡೈಲಿ ಟೆಲಿಗ್ರಾಫ್‌ನ ವರದಿ ಮಾಡಿದ್ದು, ‘ಫುಲ್ಹ್ಯಾಮ್ ಮತ್ತು ಪಾರ್ಸನ್ಸ್ ಗ್ರೀನ್ ಸೇರಿದಂತೆ ನೈಋತ್ಯ ಲಂಡನ್‌ನ SW6 ಜಿಲ್ಲೆಯ ಪಬ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದ ದೂರಿನ ನಂತರ 40ರ ಹರೆಯದ ಕ್ರಿಕೆಟಿಗನನ್ನು ಜೂನ್‌ನಲ್ಲಿ ಸ್ಕಾಟ್ಲೆಂಡ್ ಯಾರ್ಡ್ ಎಚ್ಚರಿಕೆಯ ಅಡಿಯಲ್ಲಿ ಸಂದರ್ಶಿಸಿತ್ತು.

ಈ ಕುರಿತ ವರದಿ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಆದಾಗ್ಯೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Scroll to Top