News Kadaba

ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟ; ತಪ್ಪಿದ ಭಾರಿ ದುರಂತ

(ನ್ಯೂಸ್‌ ಕಡಬ) newskadaba.com,  ಅ.23: ಅಸ್ಸಾಂನ ಕೊಕ್ರಜಾರ್​​ ಜಿಲ್ಲೆಯಲ್ಲಿ ಗುರುವಾರ (ಅಕ್ಟೋಬರ್‌ 23) ಬೆಳಗಿನ ಜಾವ ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟ ಸಂಭವಿಸಿದೆ. ಇದರಿಂದ ಮೂರು ಅಡಿ ಉದ್ದದ ಹಳಿಗೆ ಹಾನಿಯಾಗಿದ್ದು, ರೈಲು ಸೇವೆಗಳು ಕೆಲಕಾಲ ಸ್ಥಗಿತಗೊಂಡವು. ಸದ್ಯ ಹಳಿಯನ್ನು ದುರಸ್ತಿಗೊಳಿಸಲಾಗಿದ್ದು, ರೈಲು ಸಂಚಾರ ಸಾಮಾನ್ಯ ಸ್ಥಿತಿಗೆ ಬಂದಿದೆ. ಕೊಕ್ರಜಾರ್ ರೈಲು ನಿಲ್ದಾಣದಿಂದ ಸುಮಾರು ಐದು ಕಿ.ಮೀ. ದೂರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಸಾವು-ನೋವು ಸಂಭವಿಸಿಲ್ಲ ಮತ್ತು ರೈಲು ಹಳಿತಪ್ಪಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. […]

ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟ; ತಪ್ಪಿದ ಭಾರಿ ದುರಂತ Read More »

ಬ್ರೇಕಿಂಗ್ ನ್ಯೂಸ್

ಖಾದ್ಯ ತೈಲ ಘಟಕ ನೋಂದಣಿ ಕಡ್ಡಾಯ, ಪಾಲಿಸದಿದ್ದರೆ ಕಠಿಣ ಕ್ರಮ- ಜೋಶಿ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com,  ಅ.23: ಖಾದ್ಯ ತೈಲ ವಲಯದಲ್ಲಿ ಹೆಚ್ಚಿನ ನಿಯಂತ್ರಣ, ಮೇಲ್ವಿಚಾರಣೆ ಮತ್ತು ಪಾರದರ್ಶಕತೆಗಾಗಿ ಕೇಂದ್ರ ಸರ್ಕಾರ 2011ರ VOPPA ಆದೇಶಕ್ಕೆ ತಿದ್ದುಪಡಿ ತಂದಿದ್ದು, ಪಾಲಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ. ತರಕಾರಿ ತೈಲ ಉತ್ಪನ್ನಗಳು, ಉತ್ಪಾದನೆ ಮತ್ತು ಲಭ್ಯತೆ (ನಿಯಂತ್ರಣ) ಆದೇಶ-2011 (VOPPA ಆದೇಶ)ಕ್ಕೆ ಪ್ರಮುಖ ತಿದ್ದುಪಡಿಗೆ ಸೂಚಿಸಲಾಗಿದೆ. ತಿದ್ದುಪಡಿ ಮಾಡಲಾದ VOPPA ಆದೇಶ-2025 ಭಾರತದಲ್ಲಿ ಖಾದ್ಯ ತೈಲ

ಖಾದ್ಯ ತೈಲ ಘಟಕ ನೋಂದಣಿ ಕಡ್ಡಾಯ, ಪಾಲಿಸದಿದ್ದರೆ ಕಠಿಣ ಕ್ರಮ- ಜೋಶಿ ಎಚ್ಚರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತುರ್ತು ನಿರ್ವಹಣೆ: ಅ.24-25ರಂದು ESCOM ಸೇವೆಯಲ್ಲಿ ವ್ಯತ್ಯಯ

(ನ್ಯೂಸ್‌ ಕಡಬ) newskadaba.com,  ಅ.23: ರಾಜ್ಯದ ಐದೂ ಎಸ್ಕಾಂಗಳ ಸೇವೆಗಳಲ್ಲಿ ಅಕ್ಟೋಬರ್ 24-25ರಂದು ವ್ಯತ್ಯಯ ಉಂಟಾಗಲಿದೆ. ತುರ್ತು ನಿರ್ವಹಣಾ ಕಾರ್ಯಗಳಿಂದಾಗಿ ಅ.24 ರಂದು ರಾತ್ರಿ 8 ಗಂಟೆಯಿಂದ ಅ.25 ರ ಮಧ್ಯಾಹ್ನ 1 ಗಂಟೆವರೆಗೆ ಐದು ಎಸ್ಕಾಂಗಳ ನಗರ ವ್ಯಾಪ್ತಿಯ ಗ್ರಾಹಕರಿಗೆ (ಆರ್‌ಎಪಿಡಿಆರ್‌ಪಿ) ವಿದ್ಯುತ್‌ ಬಿಲ್‌ ಪಾವತಿ, ಹೆಸರು ಬದಲಾವಣೆ, ಮೀಟರ್‌ ಬದಲಾವಣೆ, ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆ ಸೇರಿದಂತೆ ಯಾವುದೇ ಆನ್‌ಲೈನ್‌ ಸೇವೆ ಲಭ್ಯವಿರುವುದಿಲ್ಲ. ಜತೆಗೆ ವಿದ್ಯುತ್ ಬಿಲ್ ಪಾವತಿಗಾಗಿ ಬಳಸುವ ಬೆಸ್ಕಾಂ ಮಿತ್ರ ಆ್ಯಪ್‌,

ತುರ್ತು ನಿರ್ವಹಣೆ: ಅ.24-25ರಂದು ESCOM ಸೇವೆಯಲ್ಲಿ ವ್ಯತ್ಯಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂಡಿಯಾ ಬಣದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಘೋಷಣೆ; ಮುಖೇಶ್ ಸಹಾನಿ ಸೇರಿ ಇಬ್ಬರು ಉಪಮುಖ್ಯಮಂತ್ರಿ

(ನ್ಯೂಸ್‌ ಕಡಬ) newskadaba.com,  ಅ.23: ಬಿಹಾರ ವಿಧಾನಸಭಾ ಚುನಾವಣೆಗೆ ಆರ್‌ಜೆಡಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿರೋಧ ಪಕ್ಷಗಳ ಇಂಡಿಯಾ ಬಣ ಗುರುವಾರ ಘೋಷಿಸಿದೆ. ಎಲ್ಲ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಈ ಘೋಷಣೆ ಮಾಡಿದರು. ಈ ನಿರ್ಧಾರವನ್ನು ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸಿದ್ದಾರೆ ಎಂದು ಪ್ರತಿಪಾದಿಸಿದರು. ಇಂಡಿಯಾ ಬಣವು ಬಿಹಾರದಲ್ಲಿ ಸರ್ಕಾರ

ಇಂಡಿಯಾ ಬಣದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಘೋಷಣೆ; ಮುಖೇಶ್ ಸಹಾನಿ ಸೇರಿ ಇಬ್ಬರು ಉಪಮುಖ್ಯಮಂತ್ರಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪೊಲೀಸ್ ಎನ್ಕೌಂಟರ್ – ಸಿಗ್ಮಾ ಗ್ಯಾಂಗ್ನ ನಾಲ್ವರು ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ಗಳು ಹತ್ಯೆ

(ನ್ಯೂಸ್‌ ಕಡಬ) newskadaba.com,  ಅ.23: ರೋಹಿಣಿ ಪ್ರದೇಶದಲ್ಲಿ ಬೆಳಗಿನ ಜಾವ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಪ್ರಸಿದ್ಧ ಸಿಗ್ಮಾ ಗ್ಯಾಂಗ್‌ನ ನಾಲ್ವರು ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್‌ಗಳು ಹತ್ಯೆಯಾಗಿದ್ದಾರೆ. ಬೆಳಗಿನ ಸುಮಾರು 2.20 ಗಂಟೆಗೆ ವಾಯುವ್ಯ ದೆಹಲಿಯಲ್ಲಿರುವ ಪ್ರದೇಶದಲ್ಲಿ ದೆಹಲಿ ಹಾಗೂ ಬಿಹಾರ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯ ವೇಳೆ ಈ ಘಟನೆ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ, ಗ್ಯಾಂಗ್ ಸದಸ್ಯರನ್ನು ಬಂಧಿಸಲು ಪ್ರಯತ್ನಿಸಿದಾಗ ಅವರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಪೊಲೀಸರು ದಾಳಿ ನಡೆಸಿದ್ದು, ನಡೆದ ಗುಂಡಿನ

ಪೊಲೀಸ್ ಎನ್ಕೌಂಟರ್ – ಸಿಗ್ಮಾ ಗ್ಯಾಂಗ್ನ ನಾಲ್ವರು ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ಗಳು ಹತ್ಯೆ Read More »

ಬ್ರೇಕಿಂಗ್ ನ್ಯೂಸ್

ಅಸ್ಸಾಂನ ಕೊಕ್ರಜಾರ್ನಲ್ಲಿ ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟ – ರೈಲು ಸಂಚಾರ ಅಸ್ತವ್ಯಸ್ತ

(ನ್ಯೂಸ್‌ ಕಡಬ) newskadaba.com,  ಅ.23: ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿನ ರೈಲ್ವೆ ಹಳಿಯಲ್ಲಿ ಇಂದು ಬೆಳಗಿನ ಜಾವ ಭೀಕರ ಐಇಡಿ ಸ್ಫೋಟ ಸಂಭವಿಸಿದ್ದು, ಅಸ್ಸಾಂ ಮತ್ತು ಉತ್ತರ ಬಂಗಾಳ ನಡುವಿನ ರೈಲು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿಯಾಗಿದೆ. ಈ ಸ್ಫೋಟದಲ್ಲಿ ಸುಮಾರು ಮೂರು ಅಡಿ ಉದ್ದದ ರೈಲ್ವೆ ಹಳಿ ಹಾನಿಗೊಳಗಾಗಿದ್ದು, ಸ್ಫೋಟದ ಶಬ್ದದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆ ಕೊಕ್ರಜಾರ್ ರೈಲು ನಿಲ್ದಾಣದಿಂದ ಸಲಕಟಿ ಕಡೆಗೆ ಐದು ಕಿಲೋಮೀಟರ್ ದೂರದಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ, ರೈಲು

ಅಸ್ಸಾಂನ ಕೊಕ್ರಜಾರ್ನಲ್ಲಿ ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟ – ರೈಲು ಸಂಚಾರ ಅಸ್ತವ್ಯಸ್ತ Read More »

ಬ್ರೇಕಿಂಗ್ ನ್ಯೂಸ್

ಚಿನ್ನದ ದರದಲ್ಲಿ ಇಳಿಕೆ

(ನ್ಯೂಸ್‌ ಕಡಬ) newskadaba.com,  ಅ.23: ಭಾರತದಲ್ಲಿ ಕಳೆದ ಆರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬರುತ್ತಿದೆ. ಇಂದು 24 ಕ್ಯಾರಟ್ 10 ಗ್ರಾಂ ಚಿನ್ನದ 8 ಸಾವಿರ ರೂ.ಗೂ ಅಧಿಕ ಕಡಿಮೆಯಾಗಿದೆ. ಕಳೆದ ಆರು ದಿನಗಳಲ್ಲಿ 7,050 ರೂ.ವರಗೆ ದರ ಇಳಿಕೆಯಾಗಿದೆ. ಚಿನ್ನದ ಬೆಲೆ ನಗರದಿಂದ ನಗರಕ್ಕೆ ಬದಲಾಗುತ್ತಿರುತ್ತದೆ. ಹಾಗೆಯೇ 22, 24 ಮತ್ತು 18 ಕ್ಯಾರಟ್ ಚಿನ್ನದ ಬೆಲೆಯಲ್ಲಿಯೂ ವ್ಯತ್ಯಾಸವಿರುತ್ತದೆ. ಇಂದು ಚಿನ್ನದ ಜೊತೆ ಬೆಳ್ಳಿ ದರವೂ ಗಣನೀಯವಾಗಿ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ

ಚಿನ್ನದ ದರದಲ್ಲಿ ಇಳಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ಹವಮಾನ ವರದಿ: ರಾಜ್ಯದಲ್ಲಿ ಇನ್ನೂ 5 ದಿನಗಳ ಮಳೆ ಮುಂದುವರಿಕೆ

(ನ್ಯೂಸ್‌ ಕಡಬ) newskadaba.com,  ಅ.23: ಈಶಾನ್ಯ ಹಿಂಗಾರು ಕ್ರಿಯಾಶೀಲವಾಗಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದ್ದು, ಇನ್ನೂ ಐದು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ, ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಮೇಲೈ ಸುಳಿಗಾಳಿಯ ಪರಿಣಾಮದಿಂದ ಹಿಂಗಾರು ಮಳೆ ಚೇತರಿಕೆ ಕಂಡಿದೆ. ಇದರಿಂದ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದ ಹಲವೆಡೆ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಹಲವೆಡೆ

ಇಂದಿನ ಹವಮಾನ ವರದಿ: ರಾಜ್ಯದಲ್ಲಿ ಇನ್ನೂ 5 ದಿನಗಳ ಮಳೆ ಮುಂದುವರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ : ಶಬರಿಮಲೆ ಮಾಜಿ ಆಡಳಿತಾಧಿಕಾರಿ ಎಸ್ಐಟಿ ವಶಕ್ಕೆ

(ನ್ಯೂಸ್‌ ಕಡಬ) newskadaba.com,  ಅ.23: ಶಬರಿಮಲೆ ದೇವಸ್ಥಾನದಿಂದ ಕಾಣೆಯಾದ ಚಿನ್ನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌‍ಐಟಿ) ಇಂದು ಮಾಜಿ ಆಡಳಿತ ಅಧಿಕಾರಿ ಬಿ ಮುರಾರಿ ಬಾಬು ಅವರನ್ನು ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ. ಚಿನ್ನ ನಾಪತ್ತೆ ಪ್ರಕರಣದ ನಂತರ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯಿಂದ ಅಮಾನತುಗೊಂಡಿದ್ದ ಬಾಬು ಅವರನ್ನು ತಡರಾತ್ರಿ ಚಂಗನಶ್ಶೇರಿಯಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.ನಂತರ ಅವರನ್ನು ವಿಚಾರಣೆಗಾಗಿ ತಿರುವನಂತಪುರಂನಲ್ಲಿರುವ ಅಪರಾಧ ಶಾಖೆಯ ಕಚೇರಿಗೆ ಸ್ಥಳಾಂತರಿಸಲಾಯಿತು

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ : ಶಬರಿಮಲೆ ಮಾಜಿ ಆಡಳಿತಾಧಿಕಾರಿ ಎಸ್ಐಟಿ ವಶಕ್ಕೆ Read More »

ಬ್ರೇಕಿಂಗ್ ನ್ಯೂಸ್

ಹಾಸನ: ದಾಖಲೆ ನಿರ್ಮಾಣದೊಂದಿಗೆ ಹಾಸನಾಂಬೆ ಜಾತ್ರಾಮಹೋತ್ಸವ ಸಂಪನ್ನ

(ನ್ಯೂಸ್‌ ಕಡಬ) newskadaba.com,  ಅ.23: ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಿಯ ವಾರ್ಷಿಕ ಜಾತ್ರಾಮಹೋತ್ಸವ ಈ ಬಾರಿ ಅಭೂತಪೂರ್ವ ಭಕ್ತರ ನಿರೀಕ್ಷೆಯೊಂದಿಗೆ ಇಂದು ಯಶಸ್ವಿಯಾಗಿ ಸಂಪನ್ನವಾಗಿದೆ. ಅಕ್ಟೋಬರ್ 10ರಿಂದ ಆರಂಭವಾದ ದರ್ಶನೋತ್ಸವದಲ್ಲಿ ಈವರೆಗೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ 24 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಕ್ಟೋಬರ್ 22, ಅಂದರೆ ಇಂದು, ಜಾತ್ರೆಯ ಕೊನೆಯ ದಿನವಾಗಿದ್ದರಿಂದ ಮುಂಜಾನೆ 6 ಗಂಟೆಯಿಂದಲೇ ಭಕ್ತರ ದಂಡೆ ಹರಿದುಬಂದಿದ್ದು, ದೇವಾಲಯದ ಸುತ್ತಮುತ್ತ ಭಕ್ತರ ಬೃಹತ್ ಸಮುದಾಯ ಕಂಡುಬಂದಿತು. ಈ ವರ್ಷ

ಹಾಸನ: ದಾಖಲೆ ನಿರ್ಮಾಣದೊಂದಿಗೆ ಹಾಸನಾಂಬೆ ಜಾತ್ರಾಮಹೋತ್ಸವ ಸಂಪನ್ನ Read More »

ಕರ್ನಾಟಕ
Scroll to Top