News Kadaba

ಹಿರಿಯ ಯಕ್ಷಗಾನ ಕಲಾವಿದ ,ರಂಗಕರ್ಮಿ ಸುಜನಾ ಸುಳ್ಯ ನಿಧನ

(ನ್ಯೂಸ್‌ ಕಡಬ) newskadaba.com,  ಅ..24 ಸುಳ್ಯ: ಹಿರಿಯ ಯಕ್ಷಗಾನ ಕಲಾವಿದ ಸುಜನಾ ಸುಳ್ಯ (ಎಸ್.ಎನ್. ಜಯರಾಮ್) ಶುಕ್ರವಾರ ಬೆಳಿಗ್ಗೆ ವಿಧಿವಶರಾದರು. ವಯೋಸಹಜ ನಿಶ್ಶಕ್ತಿಯಿಂದಿದ್ದ ಅವರು ಎರಡು ದಿನಗಳಿಂದ ಆರೋಗ್ಯ ಹದಗೆಟ್ಟು ಸುಳ್ಯದ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಸುಜನಾ ಸುಳ್ಯ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜಯರಾಮ ನಾವೂರು ಅವರು ಯಕ್ಷಗಾನದಲ್ಲಿ ಬಹುಮುಖ ಕಲಾವಿದರಾಗಿದ್ದರು. ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಗಾರರಾಗಿದ್ದ ಅವರು ಸುಳ್ಯ ತಾಲೂಕಿನ ‘ರಂಗಮನೆ’ ಎಂಬ ಕಲಾ ಕೇಂದ್ರದ ರೂವಾರಿ ಮತ್ತು ನಿರ್ದೇಶಕ ಜೀವನ್‌ರಾಮ್ ಸುಳ್ಯ […]

ಹಿರಿಯ ಯಕ್ಷಗಾನ ಕಲಾವಿದ ,ರಂಗಕರ್ಮಿ ಸುಜನಾ ಸುಳ್ಯ ನಿಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಸ್ತೆ ಗುಂಡಿ ಮುಚ್ಚಲು ಜಾತಿ ಸಮೀಕ್ಷೆ, ಮಳೆ ಅಡ್ಡಿ: GBA ಮುಖ್ಯಸ್ಥ ಮಹೇಶ್ವರ್ ರಾವ್

(ನ್ಯೂಸ್‌ ಕಡಬ) newskadaba.com,  ಅ..24 ಬೆಂಗಳೂರು: ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸಾಮಾಜಿಕ-ಆರ್ಥಿಕ ಸಮೀಕ್ಷೆ ಮತ್ತು ಮಳೆ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಸರ್ಕಾರದ ಗಡುವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯಸ್ಥ ಮಹೇಶ್ವರ್ ರಾವ್ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಸಮೀಕ್ಷೆ ಹಾಗೂ ಮಳೆ ಹಿನ್ನೆಲೆ ನಗರದಾದ್ಯಂತ ಸಾವಿರಾರು ಗುಂಡಿಗಳನ್ನು ಮುಚ್ಚಲು ಅಕ್ಟೋಬರ್ 31 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಗದಿಪಡಿಸಿದ ಗಡುವನ್ನು ಪೂರೈಸಲು ಗ್ರೇಟರ್

ರಸ್ತೆ ಗುಂಡಿ ಮುಚ್ಚಲು ಜಾತಿ ಸಮೀಕ್ಷೆ, ಮಳೆ ಅಡ್ಡಿ: GBA ಮುಖ್ಯಸ್ಥ ಮಹೇಶ್ವರ್ ರಾವ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇನ್ನು ಮುಂದೆ ಬ್ಯಾಂಕ್ ಗ್ರಾಹಕರಿಗೆ 4 ಜನ ನಾಮಿನಿಯನ್ನು ಹೆಸರಿಸಲು ಅವಕಾಶ

(ನ್ಯೂಸ್‌ ಕಡಬ) newskadaba.com,  ಅ.24: ಕ್ಲೇಮ್ ಸೆಟಲ್‌ಮೆಂಟ್ ಅಥವಾ ಹಕ್ಕು ಕೋರಿಕೆಗಳ ಇತ್ಯರ್ಥದಲ್ಲಿ ಏಕರೂಪತೆ ಮತ್ತು ದಕ್ಷತೆ ತರಲು ಉದ್ದೇಶಿಸಿರುವ ಬ್ಯಾಂಕಿಂಗ್ ವ್ಯವಸ್ಥೆಯು, ಗ್ರಾಹಕರು ತಮ್ಮ ಖಾತೆಗಳಲ್ಲಿ ನಾಲ್ವರು ನಾಮಿನಿಗಳನ್ನು ನಿಯೋಜಿಸಲು ಅವಕಾಶ ಕಲ್ಪಿಸಿದೆ. ನವೆಂಬರ್ 1ರಿಂದ ಬ್ಯಾಂಕಿಂಗ್ ಕಾನೂನು(ತಿದ್ದುಪಡಿ) ಅಧಿನಿಯಮ 2025ರಡಿ ನಾಮನಿರ್ದೇಶನಕ್ಕೆ ಸಂಬಂಧಿಸಿದ ಪ್ರಮುಖ ನಿಬಂಧನೆಗಳು ಜಾರಿಗೆ ಬರಲಿವೆ ಎಂದು ಹಣಕಾಸು ಸಚಿವಾಲಯ ಗುರುವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಬ್ಯಾಂಕಿಂಗ್ ಕಾನೂನುಗಳ(ತಿದ್ದುಪಡಿ) ಕಾಯ್ದೆ 2025 ಅನ್ನು 2025ರ ಏಪ್ರಿಲ್ 15ರಂದು ಪ್ರಕಟಿಸಲಾಗಿತ್ತು. ಇದು ಭಾರತೀಯ

ಇನ್ನು ಮುಂದೆ ಬ್ಯಾಂಕ್ ಗ್ರಾಹಕರಿಗೆ 4 ಜನ ನಾಮಿನಿಯನ್ನು ಹೆಸರಿಸಲು ಅವಕಾಶ Read More »

ಬ್ರೇಕಿಂಗ್ ನ್ಯೂಸ್

ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಾಲೆ ತಪ್ಪಿಸಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ; ಶಿಕ್ಷಕನಿಗೆ ನೋಟಿಸ್

(ನ್ಯೂಸ್‌ ಕಡಬ) newskadaba.com,  ಅ..24 ಬೆಂಗಳೂರು: ಶಾಲೆಗೆ ಚಕ್ಕರ್‌ ಹಾಕಿದ್ದಾನೆ ಎಂಬ ಕಾರಣಕ್ಕೆ ವಿದ್ಯಾರ್ಥಿಯ ಮೈಯಲ್ಲಿ ಬಾಸುಂಡೆ ಬರುವಂತೆ ದಂಡಿಸಿದ್ದ ನಗರದ ಖಾಸಗಿ ಶಾಲೆಯ ಶಿಕ್ಷಕ ಮತ್ತು ಪ್ರಾಂಶುಪಾಲರಿಗೆ ಶಿಕ್ಷಣ ಇಲಾಖೆ ನೋಟಿಸ್‌ ಜಾರಿ ಮಾಡಿದೆ.ಸುಂಕದಕಟ್ಟೆ ಪೈಪ್‌ಲೈನ್ ರಸ್ತೆಯಲ್ಲಿರುವ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯನ್ನು ಶಾಲೆಯ ಶಿಕ್ಷಕರೊಬ್ಬರು ಕೊಠಡಿಯಲ್ಲಿ ಕೂಡಿಹಾಕಿ ಅಮಾನವೀಯವಾಗಿ ದಂಡಿಸಿದ್ದರು. ಇದಾದ ನಂತರ ಮಗು ವಿಚಿತ್ರವಾಗಿ ವರ್ತಿಸುತ್ತಿದೆ. ಶಾಲೆಗೆ ಹೋಗಲು ಹೆದರುತ್ತಿದೆ ಎಂದು ಮಗುವಿನ ಪೋಷಕರು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದರು.

ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಾಲೆ ತಪ್ಪಿಸಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ; ಶಿಕ್ಷಕನಿಗೆ ನೋಟಿಸ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ : ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ – ಆರೋಪಿ ಪರಾರಿ

(ನ್ಯೂಸ್‌ ಕಡಬ) newskadaba.com,  ಅ..24 ಬೆಳ್ತಂಗಡಿ: ರಿಕ್ಷಾದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪತ್ತೆ ಹಚ್ಚಿದ್ದು ಅಟೋ ರಿಕ್ಷಾ ಹಾಗೂ ಗೋ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಅ.23 ರಂದು ಮಧ್ಯಾಹ್ನ ಕಿಲ್ಲೂರು ರಸ್ತೆಯಿಂದ ಬರುತ್ತಿದ್ದ ಆಟೋ ರಿಕ್ಷಾವನ್ನು ಲಾಯಿಲ ಜಂಕ್ಷನ್ ನಲ್ಲಿ ತಡೆದು ನಿಲ್ಲಿಸಿ ಪರಿಶೀಲನೆಗೆ ಮುಂದಾದಾಗ ರಿಕ್ಷಾ ಚಾಲಕ ಲಾಯಿಲ ನಿವಾಸಿ ಹಕೀಂ (27) ಪೊಲೀಸರನ್ನು ನೋಡಿ ತಪ್ಪಿಸಿಕೊಂಡು ಓಡಿ ಪರಾರಿಯಾಗಿದ್ದಾನೆ

ಬೆಳ್ತಂಗಡಿ : ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ – ಆರೋಪಿ ಪರಾರಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಡ್ಯ: ಕೃಷ್ಣರಾಜಸಾಗರ ಜಲಾಶಯವು ಬರೆದ ವಿಶಿಷ್ಟ ದಾಖಲೆ

(ನ್ಯೂಸ್‌ ಕಡಬ) newskadaba.com,  ಅ..24 ಮಂಡ್ಯ: ನಾಡಿಗೆ ನೀರುಣಿಸುವ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯ, ಈ ವರ್ಷ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದೆ. ಈ ವರ್ಷ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿ ದಾಖಲೆ ನಿರ್ಮಿಸಿದೆ ಕಳೆದ ಹಲವಾರು ವರ್ಷಗಳಲ್ಲಿ ಸರಿಯಾದ ಅವಧಿಗೆ ಕೆಆರ್‌ಎಸ್‌ ಡ್ಯಾಂ ಭರ್ತಿಯಾಗದೇ ಸಾಕಷ್ಟು ಸಮಸ್ಯೆ ನಿರ್ಮಾಣವಾಗ್ತಿತ್ತು. ಅಣೆಕಟ್ಟು ಭರ್ತಿಯಾಗದ ಸಂದರ್ಭಗಳಲ್ಲಿ ತಮಿಳುನಾಡು ನೀರಿಗಾಗಿ ಕ್ಯಾತೆ ತೆಗೆದು ವಿವಾದ ಉಲ್ಬಣಿಸುತ್ತಿತ್ತು. ಕಳೆದ

ಮಂಡ್ಯ: ಕೃಷ್ಣರಾಜಸಾಗರ ಜಲಾಶಯವು ಬರೆದ ವಿಶಿಷ್ಟ ದಾಖಲೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದು ಕರ್ನಾಟದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

(ನ್ಯೂಸ್‌ ಕಡಬ) newskadaba.com,  ಅ..24 ಬೆಂಗಳೂರು: ಇಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ 3 ಜಿಲ್ಲೆಗಳಿಗೆ ಆರೆಂಜ್ ಮತ್ತು 27 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಿದೆ.ಕರಾವಳಿಯಲ್ಲಿ ಮಳೆ ಮುಂದುವರಿಯಲಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಂಭವವಿದ್ದು, ಬೆಂಗಳೂರಿನಲ್ಲಿ ಸಾಧಾರಣ ಮಳೆಯಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಭಾರಿ ಪ್ರಮಾಣದ ಮಳೆಯಾಗಲಿದ್ದು, ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ. ಮಳೆ

ಇಂದು ಕರ್ನಾಟದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗುರುವಾಯೂರು ದೇವಸ್ಥಾನದಲ್ಲಿ ಚಿನ್ನ ನಾಪತ್ತೆ

(ನ್ಯೂಸ್‌ ಕಡಬ) newskadaba.com,  ಅ.23: ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳವಾದ ಸುದ್ದಿ ಇನ್ನೂ ತಣಿಯದೇ ಇದ್ದರೂ, ಕೇರಳದ ಮತ್ತೊಂದು ಪ್ರಮುಖ ಹಿಂದೂ ಧಾರ್ಮಿಕ ತಾಣವಾದ ಗುರುವಾಯೂರ್ ದೇವಸ್ಥಾನದಲ್ಲಿ ಕೂಡ ಇದೇ ರೀತಿಯ ಮತ್ತೊಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಗುರುವಾಯೂರಪ್ಪ ದೇವಸ್ಥಾನವನ್ನು ನಿರ್ವಹಿಸುವ ಗುರುವಾಯೂರ್ ದೇವಸ್ವಂ ಮಂಡಳಿಯ ಆಡಿಟಿಂಗ್ ವರದಿಯಲ್ಲಿ ಸಾವಿರಾರು ಭಕ್ತರ ನಂಬಿಕೆಯನ್ನು ಕುಸಿಯುವಂತೆ ಮಾಡಬಹುದಾದ ಅಸಮರ್ಪಕತೆಗಳು ಪತ್ತೆಯಾಗಿವೆ. ಈ ವರದಿ ಪ್ರಕಾರ, ಚಿನ್ನ, ಬೆಳ್ಳಿ, ದಂತ ಹಾಗೂ ಇತರ ಮೌಲ್ಯಮಾಪನವಾಗದ ಧಾರ್ಮಿಕ ವಸ್ತುಗಳು ನಾಪತ್ತೆಯಾಗಿದ್ದು,

ಗುರುವಾಯೂರು ದೇವಸ್ಥಾನದಲ್ಲಿ ಚಿನ್ನ ನಾಪತ್ತೆ Read More »

ಬ್ರೇಕಿಂಗ್ ನ್ಯೂಸ್

ಬೆಂಗಳೂರು: ಸಾಮೂಹಿಕ ಅತ್ಯಾಚಾರ ಪ್ರಕರಣ, ಮೂವರು ಆರೋಪಿಗಳ ಸೆರೆ

(ನ್ಯೂಸ್‌ ಕಡಬ) newskadaba.com,  ಅ.23: ಪಶ್ಚಿಮ ಬಂಗಾಳ ಮೂಲದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಮೂವರನ್ನು ಕೆಲವೇ ಗಂಟೆಗಳಲ್ಲಿ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಗಂಗೊಂಡನಹಳ್ಳಿಯ ಸುತ್ತಮುತ್ತಲಿನ ನಿವಾಸಿಗಳಾದ ಕಾರ್ತಿಕ್‌, ಗೆಲಿನ್‌ ಮತ್ತು ನವೀನ್‌ ಬಂಧಿತ ಆರೋಪಿಗಳು. ಇವರು ಚಾಲಕ ವೃತ್ತಿ ಮಾಡುತ್ತಿದ್ದರು. ಇವರಿಗೆ ಇನ್ನಿಬ್ಬರು ಸಹಕರಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದ್ದು, ಪರಾರಿಯಾಗಿರುವ ಅವರುಗಳ ಶೋಧಕಾರ್ಯ ಮುಂದುವರೆದಿದೆ.ಗಂಗೊಂಡನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪಶ್ಚಿಮ ಬಂಗಾಳ ಮೂಲದ ಇಬ್ಬರು ಪುರುಷರು ಹಾಗೂ 35 ವರ್ಷದ ಮಹಿಳೆ ವಾಸವಾಗಿದ್ದಾರೆ. ಪೊಲೀಸ್‌‍

ಬೆಂಗಳೂರು: ಸಾಮೂಹಿಕ ಅತ್ಯಾಚಾರ ಪ್ರಕರಣ, ಮೂವರು ಆರೋಪಿಗಳ ಸೆರೆ Read More »

ಕರ್ನಾಟಕ

ಪಾಸಾದ ಪದವಿ ವಿದ್ಯಾರ್ಥಿಗಳ ಅಂಕಪಟ್ಟಿ ವಿತರಿಸಲು ಆಗ್ರಹ

(ನ್ಯೂಸ್‌ ಕಡಬ) newskadaba.com,  ಅ.23: ಬಳ್ಳಾರಿ-ವಿಜಯನಗರ ಜಿಲ್ಲೆಯಗಳ ಸರಕಾರಿ ಮತ್ತು ಖಾಸಗಿಯ ಪದವಿ ಕಾಲೇಜ್ ನ  70, ಸಾವಿರಕ್ಕೂ  ಅಧಿಕ ವಿದ್ಯಾರ್ಥಿಗಳ ಅಂಕಪಟ್ಟಿ ವಿತರಿಸುವುದು  ಆಯಾ ಕಾಲೇಜಿನ ಬೇಜವಾಬ್ದಾರಿಯಾಗಿರುತ್ತದೆ.  ಪ್ರಿನ್ಸಿಪಾಲರು ಅಂಕಪಟ್ಟಿ ತೆಗೆದುಕೊಂಡು ಹೋಗಿ  ವಿತರಿಸಲಾರದೆ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದ್ದು ಆಯಾ ಕಾಲೇಜಿನ ಪ್ರಿನ್ಸಿಪಾಲರ ಮೇಲೆ ಕೂಡಲೇ ಕಟ್ಟುನಿಟ್ಟಿನ ಶಿಸ್ತಿನ ಕ್ರಮ ಕೈಗೊಳ್ಳುವಂತೆ  ಕರ್ನಾಟಕ ದಲಿತ ರಕ್ಷಣಾ ವೇದಿಕೆ ಬಳ್ಳಾರಿ ಜಿಲ್ಲಾ ಸಮಿತಿ ಆಗ್ರಹಿಸಿದೆ. ಈ ಕುರಿತು ವಿ.ಎಸ್.ಕೆ ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದೆ. ಒಂದು

ಪಾಸಾದ ಪದವಿ ವಿದ್ಯಾರ್ಥಿಗಳ ಅಂಕಪಟ್ಟಿ ವಿತರಿಸಲು ಆಗ್ರಹ Read More »

ಕರ್ನಾಟಕ
Scroll to Top