News Kadaba

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ NITಯಿಂದ ಉಚಿತ ಗೇಟ್ ತರಬೇತಿ

(ನ್ಯೂಸ್‌ ಕಡಬ) newskadaba.com,  ನ.13 ವಾರಂಗಲ್ : ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಒಂದು ಪ್ರಮುಖ ಉಪಕ್ರಮವನ್ನು ಪ್ರಾರಂಭಿಸಿದೆ. ಈ ಸಂಸ್ಥೆಯು ಈಗ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್ ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿದೆ .ಗೇಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಮಾರ್ಗದರ್ಶನ ನೀಡುವುದು ಈ ತರಬೇತಿಯ ಉದ್ದೇಶವಾಗಿದೆ. ಈ ಎಂಟು ವಾರಗಳ ತರಬೇತಿ ಕಾರ್ಯಕ್ರಮವು ನವೆಂಬರ್ 17 ರಂದು ಪ್ರಾರಂಭವಾಗುತ್ತದೆ ಮತ್ತು ಜನವರಿ 9 ರವರೆಗೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ಅಧಿಕೃತ NIT ವಾರಂಗಲ್ ವೆಬ್‌ಸೈಟ್‌ಗೆ […]

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ NITಯಿಂದ ಉಚಿತ ಗೇಟ್ ತರಬೇತಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಚೀನಾ: ಸುಮಾರು 1,500 ವರ್ಷಗಳಷ್ಟು ಹಳೆಯ ದೇವಾಲಯದಲ್ಲಿ ಭಾರಿ ಬೆಂಕಿ

(ನ್ಯೂಸ್‌ ಕಡಬ) newskadaba.com,  ನ.13:  ಚೀನಾದ ಜಿಯಾಂಗ್ಸು ಪ್ರಾಂತ್ಯದ ಜಾಂಗ್ಜಿಯಾಗ್ಯಾಂಗ್‌ನಲ್ಲಿರುವ 1,500 ವರ್ಷಗಳಷ್ಟು ಹಳೆಯದಾದ ಯೋಂಗ್‌ಕಿಂಗ್ ದೇವಾಲಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಶತಮಾನಗಳಷ್ಟು ಹಳೆಯದಾದ ಬೌದ್ಧ ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾದ ಈ ಪ್ರಾಚೀನ ದೇವಾಲಯದ, ಸಂಕೀರ್ಣದೊಳಗಿನ ಬಹುಮಹಡಿ ಮಂಟಪಗಳು ಸುಟ್ಟುಹೋಗಿವೆ. ಬೆಂಕಿಯನ್ನು ಬಹುತೇಕ ನಿಯಂತ್ರಣಕ್ಕೆ ತರಲಾಗಿದ್ದು, ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ದಳ ಮತ್ತು ತುರ್ತು

ಚೀನಾ: ಸುಮಾರು 1,500 ವರ್ಷಗಳಷ್ಟು ಹಳೆಯ ದೇವಾಲಯದಲ್ಲಿ ಭಾರಿ ಬೆಂಕಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಿದ್ಯಾರ್ಥಿಗಳ ವಿದೇಶಿ ಪ್ರಯಾಣ ನಿಧಿ ದುರುಪಯೋಗ: ಇಬ್ಬರು IISC ಸಿಬ್ಬಂದಿ ಸೇರಿ ಮೂವರು ಆರೆಸ್ಟ್

(ನ್ಯೂಸ್‌ ಕಡಬ) newskadaba.com,  ನ.13 ಬೆಂಗಳೂರು: ವಿದ್ಯಾರ್ಥಿಗಳ ವಿದೇಶ ಪ್ರಯಾಣಕ್ಕಾಗಿ ಮೀಸಲಾದ 1.94 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸದಾಶಿವನಗರ ಪೊಲೀಸರು ಭಾರತೀಯ ವಿಜ್ಞಾನ ಸಂಸ್ಥೆಯ ಇಬ್ಬರು ಗುತ್ತಿಗೆ ನೌಕರರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಯಶವಂತಪುರ ನಿವಾಸಿ ವಿ. ಸೌಂದರ್ಯ (25) ಮತ್ತು ಹೆಸರಘಟ್ಟದ ​​ಆರ್. ದೀಪಿಕಾ (25) ಆರೋಪಿಗಳಾಗಿದ್ದು, ಐಐಎಸ್‌ಸಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಹಾಯಕ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ವಂಚನೆಗೆ ಸಹಾಯ ಮಾಡಿದ ಆರೋಪದ ಮೇಲೆ ದೀಪಿಕಾ ಗೆಳೆಯ ಸಚಿನ್ ರಾವ್ (25) ಎಂಬಾತನನ್ನು

ವಿದ್ಯಾರ್ಥಿಗಳ ವಿದೇಶಿ ಪ್ರಯಾಣ ನಿಧಿ ದುರುಪಯೋಗ: ಇಬ್ಬರು IISC ಸಿಬ್ಬಂದಿ ಸೇರಿ ಮೂವರು ಆರೆಸ್ಟ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೆಂಪು ಕೋಟೆ ಸ್ಫೋಟ ಪ್ರಕರಣ : ಮೂರನೇ ಕಾರಿಗಾಗಿ ಶೋಧ

(ನ್ಯೂಸ್‌ ಕಡಬ) newskadaba.com,  ನ.13:  ಕೆಂಪು ಕೋಟೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಮೂರನೇ ಕಾರನ್ನು ಬಹು ಭದ್ರತಾ ಸಂಸ್ಥೆಗಳು ಹುಡುಕುತ್ತಿವೆ ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ. ಸೋಮವಾರ ಸಂಜೆ ಕೆಂಪು ಕೋಟೆ ಬಳಿ ಬಿಳಿ ಬಣ್ಣದ ಹುಂಡೈ ಐ20 ಸ್ಫೋಟಗೊಂಡು 12 ಜನರು ಸಾವನ್ನಪ್ಪಿ 30 ಜನರು ಗಾಯಗೊಂಡಿದ್ದರೂ, ತನಿಖಾಧಿಕಾರಿಗಳು ನಂತರ ಎರಡನೇ ವಾಹನ – ಕೆಂಪು ಫೋರ್ಡ್‌ ಇಕೋಸ್ಪೋರ್ಟ್‌ – ಫರಿದಾಬಾದ್‌ನಲ್ಲಿ ಪತ್ತೆ ಹಚ್ಚಿದ್ದರು. ಆದಾಗ್ಯೂ, ಮಾರುತಿ ಬ್ರೆಝಾ ಎಂದು ಶಂಕಿಸಲಾದ ಮೂರನೇ ಕಾರು ಪತ್ತೆಯಾಗಿಲ್ಲ.ಕಾಣೆಯಾದ

ಕೆಂಪು ಕೋಟೆ ಸ್ಫೋಟ ಪ್ರಕರಣ : ಮೂರನೇ ಕಾರಿಗಾಗಿ ಶೋಧ Read More »

ರಾಷ್ಟ್ರೀಯ ನ್ಯೂಸ್

ಕಾರ್ಕಳದ ಕ್ರೈಸ್ಟ್ ಕಿಂಗ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕರಾಟೆಯಲ್ಲಿ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆ

(ನ್ಯೂಸ್‌ ಕಡಬ) newskadaba.com,  ನ.13 ಕಾರ್ಕಳ: ಕಾರ್ಕಳದ ಕ್ರೈಸ್ಟ್ ಕಿಂಗ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಸುಧೀಕ್ಷಾ ಅವರು ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯುವ ಮೂಲಕ ತಮ್ಮ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಈ ಸ್ಪರ್ಧೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಉಪನಿರ್ದೇಶಕರ ಕಚೇರಿ, ದಾವಣಗೆರೆಯ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ದಾವಣಗೆರೆಯ ಮಾಗನಹಳ್ಳಿ ಫಾತಃ ಕನ್ನಡ ಮತ್ತು ಉರ್ದು ಪ್ರಾಥಮಿಕ ಶಾಲೆಯಲ್ಲಿ 14 ವರ್ಷದೊಳಗಿನ ಬಾಲಕಿಯರ 50

ಕಾರ್ಕಳದ ಕ್ರೈಸ್ಟ್ ಕಿಂಗ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕರಾಟೆಯಲ್ಲಿ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಕುತ್ಲೂರು ಚಿನ್ನಾಭರಣ ಕಳವು ಪ್ರಕರಣ; ಕುಖ್ಯಾತ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ ಬಂಧನ

(ನ್ಯೂಸ್‌ ಕಡಬ) newskadaba.com,  ನ.13: ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಮಂಜುಶ್ರೀ ನಗರದ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಮುಂಬಾಗಿಲ ಬೀಗ ಮುರಿದು ಸುಮಾರು 9.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಕುಖ್ಯಾತ ಅಂತಾರಾಜ್ಯ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ (71) ಎಂಬಾತನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 11ರ ರಾತ್ರಿ ಪಿಎಸ್‌ಐ ಓಮನ ಮತ್ತು ಅವರ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ಅನುಮಾನಾಸ್ಪದವಾಗಿ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯನ್ನು ತಡೆದು ನಿಲ್ಲಿಸಿದ್ದರು. ಆತನ ದಾಖಲೆಗಳನ್ನು

ಬೆಳ್ತಂಗಡಿ: ಕುತ್ಲೂರು ಚಿನ್ನಾಭರಣ ಕಳವು ಪ್ರಕರಣ; ಕುಖ್ಯಾತ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ ಬಂಧನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಕ್ಕಳ ದಿನಾಚರಣೆಯಂದು ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ಪೆನ್ ವಿತರಣೆ : ಯಶ್ಪಾಲ್ ಸುವರ್ಣ

(ನ್ಯೂಸ್‌ ಕಡಬ) newskadaba.com,  ನ.13 ಭಾರತ ದೇಶದ ಮುಂದಿನ ಭವಿಷ್ಯವನ್ನು ರೂಪಿಸಲಿರುವ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಉಡುಗೊರೆಯಾಗಿ ಪ್ರತಿ ವರ್ಷದಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ ಸುಮಾರು 20,000 ವಿದ್ಯಾರ್ಥಿಗಳಿಗೆ ರೂ. 15 ಲಕ್ಷ ವೆಚ್ಚದಲ್ಲಿ ಪೆನ್ ವಿತರಣೆ ಮಾಡುವುದಾಗಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ. ಉಡುಪಿ ಜಿಲ್ಲೆ ಶಿಕ್ಷಣ ವ್ಯವಸ್ಥೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ

ಮಕ್ಕಳ ದಿನಾಚರಣೆಯಂದು ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ಪೆನ್ ವಿತರಣೆ : ಯಶ್ಪಾಲ್ ಸುವರ್ಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ | ಕುತ್ತೂರು ಮನೆಗಳ್ಳತನ ಪ್ರಕರಣ: ಆರೋಪಿ ‘ಇತ್ತೆ ಬರ್ಪೆ ಅಬೂಬಕ‌ರ್’ ಬಂಧನ

(ನ್ಯೂಸ್‌ ಕಡಬ) newskadaba.com,  ನ.13 ಬೆಳ್ತಂಗಡಿ: ಕುತ್ತೂರಿನಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣದ ಆರೋಪಿಯೊಬ್ಬನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. ಇತ್ತೆ ಬರ್ಪೆ ಅಬೂಬಕರ್(71) ಬಂಧಿತ ಆರೋಪಿ.ನಾರವಿ ಗ್ರಾಮದ ಕುತ್ತೂರಿನ ಮಂಜು ಶ್ರೀ ನಗರದ ಶಿಕ್ಷಕ ಅವಿನಾಶ್ ಎಂಬವರ ಮನೆಯಲ್ಲಿ ಅ.2 ರಿಂದ ಅ.6ರ ನಡುವೆ ಮನೆಯಲ್ಲಿ ಯಾರು ಇಲ್ಲದ ವೇಳೆ 9.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಈ ಬಗ್ಗೆ ವೇಣೂರು ಪೊಲೀಸ್‌ ಠಾಣೆಗೆ ಸಬ್ ಇನ್ಸೆಕ್ಟರ್ ಓಮನ ಮತ್ತು

ಬೆಳ್ತಂಗಡಿ | ಕುತ್ತೂರು ಮನೆಗಳ್ಳತನ ಪ್ರಕರಣ: ಆರೋಪಿ ‘ಇತ್ತೆ ಬರ್ಪೆ ಅಬೂಬಕ‌ರ್’ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದ 4 ರೈಲು ನಿಲ್ದಾಣಗಳ ಹೆಸರು ಬದಲಿಸುವಂತೆ ಕೇಂದ್ರ ಗೃಹ ಇಲಾಖೆಗೆ ಎಂ.ಬಿ ಪಾಟೀಲ್ ಶಿಫಾರಸು

(ನ್ಯೂಸ್‌ ಕಡಬ) newskadaba.com,  ನ.13: ರಾಜ್ಯದ ವಿಜಯಪುರ, ಬೆಳಗಾವಿ, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿರುವ ರೈಲು ನಿಲ್ದಾಣಗಳನ್ನು ಸ್ಥಳೀಯ ಸಾಂಸ್ಕೃತಿಕ ಮಹತ್ತ್ವಕ್ಕೆ ಪೂರಕವಾಗಿ ಬದಲಿಸಿ, ಹೊಸ ನಾಮಕರಣ ಮಾಡಬೇಕೆಂದು ಸಚಿವ ಎಂ.ಬಿ ಪಾಟೀಲ್ ಅವರು ಶಿಫಾರಸು ಮಾಡಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ವಿಜಯಪುರ ರೈಲು ನಿಲ್ದಾಣಕ್ಕೆ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ರೈಲು ನಿಲ್ದಾಣ, ಬೆಳಗಾವಿ ನಿಲ್ದಾಣಕ್ಕೆ ಶ್ರೀ ಬಸವ ಮಹಾಸ್ವಾಮೀಜಿ, ಬೀದರ್ ನಿಲ್ದಾಣಕ್ಕೆ ಚನ್ನಬಸವ ಪಟ್ಟದ್ದೇವರು ಮತ್ತು ಸೂರಗೊಂಡನಕೊಪ್ಪ ನಿಲ್ದಾಣಕ್ಕೆ ಭಾಯಗಡ ರೈಲು ನಿಲ್ದಾಣ

ರಾಜ್ಯದ 4 ರೈಲು ನಿಲ್ದಾಣಗಳ ಹೆಸರು ಬದಲಿಸುವಂತೆ ಕೇಂದ್ರ ಗೃಹ ಇಲಾಖೆಗೆ ಎಂ.ಬಿ ಪಾಟೀಲ್ ಶಿಫಾರಸು Read More »

ಕರ್ನಾಟಕ

ಮತ್ತೆ ಏರಿಕೆಯಾದ ಚಿನ್ನ,ಬೆಳ್ಳಿ ಬೆಲೆ

(ನ್ಯೂಸ್‌ ಕಡಬ) newskadaba.com,  ನ.13 ಬೆಂಗಳೂರು: ಬೆಳ್ಳಿ ಬೆಲೆಯ ಸತತ ಏರಿಕೆ ಮುಂದುವರಿದಿದೆ. ಇಂದು ಒಂದೇ ದಿನಕ್ಕೆ 10 ರೂ ಜಿಗಿತ ಕಂಡಿದೆ. ನಿನ್ನೆ ಇದರ ಬೆಲೆ 2 ರೂ ಹೆಚ್ಚಿತ್ತು. ಚಿನ್ನದ ಬೆಲೆಯೂ (gold rate) ಕೂಡ ಏರಿಕೆಯ ಹಾದಿಗೆ ಮರಳಿದೆ. ಗುರುವಾರ ಚಿನ್ನದ ಬೆಲೆಯಲ್ಲಿ 210 ರೂಗಳಷ್ಟು ಹೆಚ್ಚಳ ಆಗಿದೆ. ಆಭರಣ ಚಿನ್ನದ ಬೆಲೆ 11,700 ರೂ ಗಡಿದಾಟಿದೆ. ಅಪರಂಜಿ ಚಿನ್ನ 12,800 ರೂ ಗಡಿ ಸಮೀಪಕ್ಕೆ ಹೋಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22

ಮತ್ತೆ ಏರಿಕೆಯಾದ ಚಿನ್ನ,ಬೆಳ್ಳಿ ಬೆಲೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top