News Kadaba

ಸಾಲುಮರದ ತಿಮ್ಮಕ್ಕ ನಿಧನ

(ನ್ಯೂಸ್‌ ಕಡಬ) newskadaba.com,  ನ.14:   ಪರಿಸರ ಮಾತೆ, ವೃಕ್ಷಮಾತೆ ಸಾಲುಮರ ತಿಮ್ಮಕ್ಕ(114) ಇಂದು ವಿಧಿವಶರಾಗಿದ್ದಾರೆ. ಪದ್ಮಶ್ರೀ ಪುರಸ್ಕೃತೆ ತಿಮ್ಮಕ್ಕ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಸಾಲುಮರದ ತಿಮ್ಮಕ್ಕ ನಿಧನ Read More »

ಕರ್ನಾಟಕ

ಪಾಕ್ ವಿರುದ್ಧ ಸರಣಿ ಅರ್ಧದಲ್ಲೇ ಮೊಟಕು: ಶ್ರೀಲಂಕಾ ಆಟಗಾರರಿಗೆ 2 ವರ್ಷ ಬ್ಯಾನ್ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com,  ನ.14:   ಪಾಕಿಸ್ತಾನ್ ವಿರುದ್ಧದ ಏಕದಿನ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಹಿಂತಿರುಗಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಎಚ್ಚರಿಸಿದೆ. ಈ ಎಚ್ಚರಿಕೆಯ ಹೊರತಾಗಿಯೂ ಯಾರಾದರು ಪಾಕಿಸ್ತಾನ್ ವಿರುದ್ಧದ ಸರಣಿಯಿಂದ ಹಿಂದೆ ಸರಿದರೆ, ಅವರನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಲಾಗುತ್ತದೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಮಂಗಳವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ನಂತರ ಶ್ರೀಲಂಕಾ ತಂಡದ ಕೆಲ ಆಟಗಾರರು ಶ್ರೀಲಂಕಾಗೆ ಮರಳಲು ಮುಂದಾಗಿದ್ದರು.

ಪಾಕ್ ವಿರುದ್ಧ ಸರಣಿ ಅರ್ಧದಲ್ಲೇ ಮೊಟಕು: ಶ್ರೀಲಂಕಾ ಆಟಗಾರರಿಗೆ 2 ವರ್ಷ ಬ್ಯಾನ್ ಎಚ್ಚರಿಕೆ Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಇಂಡೋನೇಷ್ಯಾದಲ್ಲಿ ಭೂ ಕುಸಿತ, ಇಬ್ಬರ ದುರ್ಮರಣ, 21 ಮಂದಿ ನಾಪತ್ತೆ

(ನ್ಯೂಸ್‌ ಕಡಬ) newskadaba.com,  ನ.14:   ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 21 ಜನರು ಕಾಣೆಯಾಗಿದ್ದಾರೆ. ಕಾಣೆಯಾದ 21 ಜನರಿಗಾಗಿ ರಕ್ಷಣಾ ಕಾರ್ಯಕರ್ತರು ಇನ್ನೂ ಹುಡುಕಾಟ ನಡೆಸುತ್ತಿದ್ದಾರೆ.ಈ ಪ್ರದೇಶದಲ್ಲಿ ಹಲವಾರು ದಿನಗಳ ಭಾರೀ ಮಳೆಯಿಂದಾಗಿ ಇಂಡೋನೇಷ್ಯಾದ ಮಧ್ಯ ಜಾವಾ ಪ್ರಾಂತ್ಯದ ಮೂರು ಹಳ್ಳಿಗಳಲ್ಲಿ ಡಜನ್‌ಗಟ್ಟಲೆ ಮನೆಗಳಿಗೆ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಂತಹ ಸಮಯದಲ್ಲಿ ಬಲಿಪಶುಗಳನ್ನು ಹುಡುಕುವಲ್ಲಿ ಅಸ್ಥಿರ ನೆಲದ ಪರಿಸ್ಥಿತಿಗಳು ಶೋಧ ಮತ್ತು ರಕ್ಷಣಾ ತಂಡಕ್ಕೆ ಸವಾಲನ್ನು

ಇಂಡೋನೇಷ್ಯಾದಲ್ಲಿ ಭೂ ಕುಸಿತ, ಇಬ್ಬರ ದುರ್ಮರಣ, 21 ಮಂದಿ ನಾಪತ್ತೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ರಾಜ್ಯದ ಎಲ್ಲಾ ಬಸ್ಗಳಲ್ಲಿ ತುರ್ತು ನಿರ್ಗಮನ ದ್ವಾರ ಕಡ್ಡಾಯ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

(ನ್ಯೂಸ್‌ ಕಡಬ) newskadaba.com,  ನ.14:   ರಾಜ್ಯದ ಎಲ್ಲಾ ಬಸ್‌ಗಳಲ್ಲಿ ತುರ್ತು ನಿರ್ಗಮನ ದ್ವಾರಗಳ ಅಳವಡಿಕೆ ಕಡ್ಡಾಯ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಗುರುವಾರ ಹೇಳಿದ್ದಾರೆ. ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಸಚಿವರು ಈ ನಿರ್ದೇಶನ ನೀಡಿದ್ದಾರೆಂದು ತಿಳಿದುಬಂದಿದೆ. ಸಭೆಯಲ್ಲಿ ಇತ್ತೀಚಿನ ಬಸ್ ಅಪಘಾತಗಳನ್ನು ಉಲ್ಲೇಖಿಸಿದ ಸಚಿವರು, ಕರ್ನಾಟಕದ ಎಲ್ಲಾ ಬಸ್‌ಗಳು ನೋಂದಣಿ ಅಥವಾ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ನವೀಕರಿಸುವ ಮೊದಲು ತುರ್ತು ನಿರ್ಗಮನ ದ್ವಾರಗಳನ್ನು ಹೊಂದಿರಬೇಕು. ನಿಯಮ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಶೀಘ್ರದಲ್ಲೇ ಸುತ್ತೋಲೆ

ರಾಜ್ಯದ ಎಲ್ಲಾ ಬಸ್ಗಳಲ್ಲಿ ತುರ್ತು ನಿರ್ಗಮನ ದ್ವಾರ ಕಡ್ಡಾಯ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೆಹಲಿ ಕಾರು ಸ್ಫೋಟದ ರೂವಾರಿ ಉಮರ್ ಮನೆ ಧ್ವಂಸಗೊಳಿಸಿದ ಭದ್ರತಾ ಪಡೆ

(ನ್ಯೂಸ್‌ ಕಡಬ) newskadaba.com,  ನ.14:   ದೆಹಲಿಯ ಕೆಂಪು ಕೋಟೆಯ ಬಳಿ ಸಂಭವಿಸಿದ್ದ ಕಾರು ಸ್ಫೋಟದ ರೂವಾರಿ ಉಮರ್ ಎಂದು ತನಿಖೆ ವೇಳೆ ತಿಳಿದುಬಂದಿದ್ದು, ಅದರ ಬೆನ್ನಲ್ಲೇ ಭದ್ರತಾ ಪಡೆಗಳು ಶುಕ್ರವಾರ ಉಗ್ರನ ಮನೆಯನ್ನು ಧ್ವಂಸಗೊಳಿಸಿವೆ. ದೆಹಲಿ ಸ್ಫೋಟದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಉಗ್ರರ ಹಿಂದಿನ ರಹಸ್ಯ ಒಂದೊಂದಾಗಿಯೇ ಹೊರಬರುತ್ತಿದೆ. ಡಾ.ಉಮರ್ ನಬಿ ತಾಯಿಯ ಡಿಎನ್‌ಎ ಪರೀಕ್ಷೆ ಮಾಡಿದಾಗ, ಸ್ಫೋಟದ ವೇಳೆ ಕಾರಿನಲ್ಲಿ ಸಿಕ್ಕಿದ್ದ ಶವದ ಡಿಎನ್‌ಎಗೆ ಹೊಂದಾಣಿಕೆಯಾಗಿದೆ. ಇದರಿಂದ ಸ್ಫೋಟದ ಪ್ರಮುಖ ರೂವಾರಿ ಡಾ.ಉಮರ್ ನಬಿ ಎಂಬುದು ಬೆಳಕಿಗೆ

ದೆಹಲಿ ಕಾರು ಸ್ಫೋಟದ ರೂವಾರಿ ಉಮರ್ ಮನೆ ಧ್ವಂಸಗೊಳಿಸಿದ ಭದ್ರತಾ ಪಡೆ Read More »

ಬ್ರೇಕಿಂಗ್ ನ್ಯೂಸ್

ಇಂದು ಬಿಹಾರ ಚುನಾವನಾ ಪಲಿತಾಂಶ ಪ್ರಕಟ

(ನ್ಯೂಸ್‌ ಕಡಬ) newskadaba.com,  ನ.14:   ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ಶುಕ್ರವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ನಿತೀಶ್ ಕುಮಾರ್ ದಾಖಲೆಯ ಐದನೇ ಅವಧಿಗೆ ಗೆಲ್ಲುತ್ತಾರೋ ಅಥವಾ ತೇಜಸ್ವಿ ಯಾದವ್ ವಿರೋಧ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೋ ಎಂಬುದನ್ನು ರಾಜ್ಯದ ಜನತೆ ನಿರ್ಧರಿಸುತ್ತಾರೆ. ಮೊನ್ನೆ ನವೆಂಬರ್ 6 ಮತ್ತು 11 ರಂದು ನಡೆದ 243 ಸದಸ್ಯ ಬಲದ ವಿಧಾನಸಭೆಗೆ ನಡೆದ ಎರಡು ಹಂತದ ಚುನಾವಣೆಯಲ್ಲಿ ಬಿಹಾರವು ಐತಿಹಾಸಿಕ 67.13% ಮತದಾನ ದಾಖಲಿಸಿದೆ, ಈ ಬಾರಿ

ಇಂದು ಬಿಹಾರ ಚುನಾವನಾ ಪಲಿತಾಂಶ ಪ್ರಕಟ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಮೂಡಬಿದರೆಯಲ್ಲಿ ನಡೆದ ಕೊಲೆ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ

(ನ್ಯೂಸ್‌ ಕಡಬ) newskadaba.com,  ನ.14:  ಮೂಡಬಿದಿರೆಯ ಕಾಲೇಜೊಂದರಲ್ಲಿ ಕ್ಯಾಂಟೀನ್‌ ಕೆಲಸ ಮಾಡುತ್ತಿದ್ದ ಚೇತನ್‌ ಎಂಬವರನ್ನು ಕೊಲೆ ಮಾಡಿದ ಆರೋಪಿ ಚಿದಾನಂದ ಪರಶು ನಾಯ್ಕನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಮಂಗಳೂರಿನ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಈ ತೀರ್ಪು ನೀಡಿದೆ. ಮೂಡಬಿದಿರೆಯ ಕಾಲೇಜೊಂದರ ಕ್ಯಾಂಟೀನ್‌ನಲ್ಲಿ ಜೊತೆಗೆ ಕೆಲಸ ಮಾಡಿಕೊಂಡಿರುವ ಚೇತನ್ (22) ಮತ್ತು ಚಿದಾನಂದ ಎಂಬವರಿಗೆ ಗೆ ಕ್ಯಾಂಟೀನ್ ನಲ್ಲಿ ಕೆಲಸದ ವಿಚಾರದಲ್ಲಿ ಮತ್ತು ವೈಯುಕ್ತಿಕ ವಿಚಾರದಲ್ಲಿ ಪರಸ್ಪರ ತಕರಾರು ನಡೆದಿತ್ತು. ಆರೋಪಿ

ಮಂಗಳೂರು: ಮೂಡಬಿದರೆಯಲ್ಲಿ ನಡೆದ ಕೊಲೆ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ Read More »

ಕರಾವಳಿ, ಕರ್ನಾಟಕ

ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ಗೆಲುವು

(ನ್ಯೂಸ್‌ ಕಡಬ) newskadaba.com,  ನ.13:  ಕರ್ನಾಟಕ ಮತ್ತು ತಮಿಳು ನಾಡು ಮಧ್ಯೆ ಕಾವೇರಿ ನೀರು ಹಂಚಿಕೆಯ ಮೇಕೆದಾಟು ಯೋಜನೆ ವಿವಾದದಲ್ಲಿ ಪ್ರವೇಶಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ನೀರಿನ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ಉದ್ದೇಶಕ್ಕಾಗಿ ರಚಿಸಲಾದ ತಜ್ಞರ ಸಮಿತಿ ನಿರ್ವಹಿಸುವುದು ಉತ್ತಮ ಎಂದು ಪುನರುಚ್ಚರಿಸಿದೆ. ಕರ್ನಾಟಕದ ಮೇಕೆದಾಟು ಅಣೆಕಟ್ಟಿನ ವಿವರವಾದ ಯೋಜನಾ ವರದಿ (DPR) ನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಇತ್ತೀಚೆಗೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಅನುಮೋದನೆಗಳು ನ್ಯಾಯಾಂಗದಿಂದ ಬರಬೇಕಿರುವುದು ಅಲ್ಲ. ಕಾವೇರಿ

ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ಗೆಲುವು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

3 ಚಿನ್ನ, 2 ಬೆಳ್ಳಿ ಗೆದ್ದ ಭಾರತ

(ನ್ಯೂಸ್‌ ಕಡಬ) newskadaba.com,  ನ.13:  ಏಷ್ಯನ್ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಕಾಂಪೌಂಡ್ ವಿಭಾಗದಲ್ಲಿ ತನ್ನ ಪ್ರಬಲ ಪ್ರದರ್ಶನವನ್ನು ಮುಂದುವರಿಸಿದ್ದು, ಗುರುವಾರ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಗೆದ್ದಿದೆ. ಮಹಿಳೆಯರ ವಿಭಾಗದಲ್ಲಿ ದೀಪ್ಶಿಕಾ, ಜ್ಯೋತಿ ಸುರೇಖಾ ವೆನ್ನಂ ಮತ್ತು ಪ್ರತೀಕಾ ಪ್ರದೀಪ್ ಅವರಿದ್ದ ಕಾಂಪೌಂಡ್‌ ತಂಡ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 236-234 ಅಂತರದ ಜಯ ಸಾಧಿಸಿ ಚಿನ್ನಕ್ಕೆ ಗುರಿಯಿಟ್ಟಿತು. ಸೆಮಿಫೈನಲ್‌ನಲ್ಲಿ 234– 227 ರಿಂದ ಆತಿಥೇಯ ಬಾಂಗ್ಲಾದೇಶ ತಂಡವನ್ನು ಸೋಲಿಸಿತ್ತು. ಫೈನಲ್‌ನಲ್ಲಿಯೂ ಶ್ರೇಷ್ಠ ಪ್ರದರ್ಶನ

3 ಚಿನ್ನ, 2 ಬೆಳ್ಳಿ ಗೆದ್ದ ಭಾರತ Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

32 ವಾಹನ ಬಳಸಿ 4 ನಗರಗಳಲ್ಲಿ ಏಕಕಾಲದಲ್ಲಿ ಸರಣಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಉಗ್ರರು!

(ನ್ಯೂಸ್‌ ಕಡಬ) newskadaba.com,  ನ.13:  ಬಂಧನಕ್ಕೆ ಒಳಗಾದ ಉಗ್ರರು ಸುಮಾರು 32 ಹಳೆಯ ವಾಹನಗಳನ್ನು ಬಳಸಿ ದೇಶದ 4 ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಏಕಕಾಲದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಬಂಧಿತರನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು ದೆಹಲಿಯ ಹಲವು ಕಡೆ, ಅಯೋಧ್ಯೆ, ವಾರಾಣಸಿ ದೇವಸ್ಥಾನ ಸೇರಿದಂತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ದೇಶದ ಹಲವು ಜಾಗಗಳಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಐ20 ಕಾರು ಸ್ಫೋಟದಲ್ಲಿ ಕೆಣಪು ಕೋಟೆ

32 ವಾಹನ ಬಳಸಿ 4 ನಗರಗಳಲ್ಲಿ ಏಕಕಾಲದಲ್ಲಿ ಸರಣಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಉಗ್ರರು! Read More »

ರಾಷ್ಟ್ರೀಯ ನ್ಯೂಸ್
Scroll to Top