News Kadaba

ಕಡಬ: ದೂರವಾಣಿ ಇಲಾಖೆಯ ವೆಂಕಪ್ಪ ಗೌಡರಿಗೆ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com ಕಡಬ, ಜು.03. ಇಲ್ಲಿನ ದೂರವಾಣಿ ವಿನಿಮಯ ಕೇಂದ್ರದ ಐತ್ತೂರು ಕೇಂದ್ರದಲ್ಲಿ ಟಿ.ಟಿ, ಆಗಿದ್ದ ವೆಂಕಪ್ಪ ಗೌಡರು ಜೂ.30ರಂದು ಸೇವಾ ನಿವೃತ್ತಿ ಹೊಂದಿದ್ದು, ಅವರಿಗೆ ದೂರವಾಣಿ ಕೇಂದ್ರದ ವತಿಯಿಂದ ಜು.30ರಂದು ಬೀಳ್ಕೋಡಲಾಯಿತು. ವೆಂಕಪ್ಪ ಗೌಡರು 1984ರಲ್ಲಿ ಇಲಾಖೆಗೆ ಕರ್ತವ್ಯಕ್ಕೆ ನೇಮಕಗೊಂಡಿದ್ದು ಬಳಿಕ ಡಿ.ಟಿ.ಓ ಮಣಿಪಾಲ, ಸಿ.ಟಿ.ಒ ಮಂಗಳೂರು ದೂರವಾಣಿ ವಿನಿಮಯ ಕೇಂದ್ರ ಕಾಂಚನ ಬಜತ್ತೂರು, ಐತ್ತೂರು ಮರ್ದಾಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕಡಬ ದೂರವಾಣಿ ವಿನಿಮಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಎಸ್.ಡಿ.ಇ ದೀಪಕ್ ಗುರ್ಜಾರ್ ಶಾಲು […]

ಕಡಬ: ದೂರವಾಣಿ ಇಲಾಖೆಯ ವೆಂಕಪ್ಪ ಗೌಡರಿಗೆ ಬೀಳ್ಕೊಡುಗೆ Read More »

ಕರಾವಳಿ

ಕ್ನಾನಾಯ ಜ್ಯೋತಿಯ ವಿದ್ಯಾರ್ಥಿನಿ ಹಂಸಿನಿ ನವೋದಯ ವಿದ್ಯಾಲಯಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜು.03. ಇಲ್ಲಿನ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹಂಸಿನಿ.ಯು ರವರು ನವೋದಯ ಸಿ.ಇ.ಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಡಿಪು ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ. ಕ್ಯಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಹಂಸಿನಿಯವರು ಸಿ.ಇ.ಟಿ ಪರೀಕ್ಷೆ ಬರೆದು 6ನೇ ತರಗತಿಗೆ ಮುಡಿಪು ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ದೇರಾಜೆ ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಉಮೇಶ್ ನಾಯ್ಕ.ಎಸ್ ಹಾಗೂ ಶೀಲಾಬಾಯಿಯವರ ಪುತ್ರಿ.

ಕ್ನಾನಾಯ ಜ್ಯೋತಿಯ ವಿದ್ಯಾರ್ಥಿನಿ ಹಂಸಿನಿ ನವೋದಯ ವಿದ್ಯಾಲಯಕ್ಕೆ ಆಯ್ಕೆ Read More »

ಕರಾವಳಿ

ರೆಂಜಿಲಾಡಿ: ವಿಶ್ವ ಮಾದಕ ವಿರೋಧಿ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಜು.03. ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟನಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವುದರಿಂದ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಹತ್ತರ ಪಾತ್ರ ವಹಿಸುತ್ತದೆ ಎಂದು ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ , ಪ್ರಗತಿಬಂಧು ಸ್ವಸಹಾಯ ಒಕ್ಕೂಟ ಬಿಳಿನೆಲೆ ವಲಯ ಸಂಯುಕ್ತ ಆಶ್ರಯದಲ್ಲಿ ರೆಂಜಿಲಾಡಿ .ಹಿ.ಪ್ರಾ.ಶಾಲೆಯಲ್ಲಿ ನಡೆದ ವಿಶ್ವ ಮಾದಕ ವಿರೋಧಿ ದಿನಾಚರಣೆ

ರೆಂಜಿಲಾಡಿ: ವಿಶ್ವ ಮಾದಕ ವಿರೋಧಿ ದಿನಾಚರಣೆ Read More »

ಕರಾವಳಿ

ಅಂಗಡಿ ತೆರೆಯುವುದಕ್ಕೂ ಮೊದಲೇ ಕ್ಯೂ ►ನಮ್ಮೂರಲ್ಲೂ ಇಂತಹ ಮಳಿಗೆ ಇದೆಯೆಂದರೆ ನಂಬುತ್ತೀರಾ…?

ಅಂಗಡಿ ತೆರೆಯುವುದಕ್ಕೂ ಮೊದಲೇ ಕ್ಯೂ ►ನಮ್ಮೂರಲ್ಲೂ ಇಂತಹ ಮಳಿಗೆ ಇದೆಯೆಂದರೆ ನಂಬುತ್ತೀರಾ…? Read More »

ಕರಾವಳಿ

ಜಿಎಸ್‍ಟಿ ಜೊತೆ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದು ನಿಮಗೆ ತಿಳಿದಿದೆಯಾ…?

(ನ್ಯೂಸ್ ಕಡಬ) newskadaba.com ನವದೆಹಲಿ, ಜು.03. ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜುಲೈ 1ರಿಂದ ಜಾರಿಗೆ ಬಂದಿದೆ. ಜಿಎಸ್‍ಟಿ ಜೊತೆ ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಜುಲೈ 1ರಿಂದ ಇತರೇ ಕ್ಷೇತ್ರಗಳಲ್ಲೂ ಕೆಲ ಬದಲಾವಣೆಯಾಗಿದೆ‌. ಹೀಗಾಗಿ ದೇಶದಲ್ಲಿ ಮತ್ತು ವಿಶ್ವದಲ್ಲಿ ಏನು ಬದಲಾವಣೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 1. ಐಟಿ ರಿಟರ್ನ್: ಜುಲೈ 1ರಿಂದ ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ (ಐಟಿಆರ್) ಸಲ್ಲಿಸಲು ಆಧಾರ್ ಸಂಖ್ಯೆಯನ್ನು

ಜಿಎಸ್‍ಟಿ ಜೊತೆ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದು ನಿಮಗೆ ತಿಳಿದಿದೆಯಾ…? Read More »

ರಾಷ್ಟ್ರೀಯ ನ್ಯೂಸ್

ಭಾನುವಾರವೂ ಕಡಬದ ಮದ್ಯದಂಗಡಿಗೆ ಮುಗಿಬಿದ್ದ ಜನತೆ ► ಎಣ್ಣೆ ಹಾಕಲು ಸರತಿ ಸಾಲಿನಲ್ಲಿ ನಿಂತ ಮದ್ಯಪ್ರಿಯರು

(ನ್ಯೂಸ್ ಕಡಬ) newskadaba.com ಕಡಬ, ಜು.02. ಕಡಬ ಪಂಜ ರಸ್ತೆಯಲ್ಲಿನ ಸರಕಾರಿ ಸ್ವಾಮ್ಯದ ಮದ್ಯದಂಗಡಿಯಲ್ಲಿ ಪಾನಪ್ರಿಯರು ಮದ್ಯ ಖರೀದಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಭಾನುವಾರವೂ ಕಂಡುಬಂದಿದೆ. ಹೆದ್ದಾರಿ ಬದಿಗಳಲ್ಲಿನ ಮದ್ಯದಂಗಡಿಗಳನ್ನು ಮುಚ್ಚಬೇಕೆಂಬ ಸುಪ್ರಿಂಕೋರ್ಟ್ ಅದೇಶದಂತೆ ಕಡಬ ಪೇಟೆಯಲ್ಲಿನ ಎರಡು ಮದ್ಯದಂಗಡಿ ಹಾಗೂ ಕಡಬಕ್ಕೆ ಸಮೀಪದಲ್ಲಿರುವ ಆಲಂಕಾರು ಮತ್ತು ನೆಟ್ಟಣ ಪೇಟೆಯಲ್ಲಿನ ಮದ್ಯದಂಗಡಿ ಬಂದ್ ಮಾಡಲಾಗಿತ್ತು. ಆದರೆ ಕಡಬದಲ್ಲಿನ ಸರಕಾರಿ ಮದ್ಯದಂಗಡಿ ಹೆದ್ದಾರಿಯಿಂದ 200 ಮೀಟರ್ ಗಿಂತಲೂ ದೂರ ಇದೆ. ಹೀಗಾಗಿ ಈ ವೈನ್ ಶಾಪ್ನಲ್ಲಿ ಭಾರಿ ವ್ಯಾಪಾರ

ಭಾನುವಾರವೂ ಕಡಬದ ಮದ್ಯದಂಗಡಿಗೆ ಮುಗಿಬಿದ್ದ ಜನತೆ ► ಎಣ್ಣೆ ಹಾಕಲು ಸರತಿ ಸಾಲಿನಲ್ಲಿ ನಿಂತ ಮದ್ಯಪ್ರಿಯರು Read More »

ಕರಾವಳಿ

ಜಿಲ್ಲೆಯಾದ್ಯಂತ ಜು.4 ರವರೆಗೆ ನಿಷೇಧಾಜ್ಞೆ ಮುಂದುವರಿಕೆ

(ನ್ಯೂಸ್ ಕಡಬ) newskadaba.com ಮ0ಗಳೂರು ಜು.02. ಬಂಟ್ವಾಳ, ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನಾದ್ಯಂತ ಜುಲೈ 2 ರವರೆಗೆ ವಿಧಿಸಲಾಗಿದ್ದ  ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆಯನ್ನು ಜುಲೈ 4 ರ ಮಧ್ಯರಾತ್ರಿವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಆದೇಶ ಹೊರಡಿಸಿದ್ದಾರೆ.  ದಕ್ಷಿಣ ಮೇಲೆ ತಿಳಿಸಿದ ಅವಧಿಯಲ್ಲಿ ಸಾರ್ವಜನಿಕರು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ,ಬೀದಿ,ಓಣೆ,ಕೇರಿಗಳಲ್ಲಿ ಸಾರ್ವಜನಿಕ ಸ್ಥಳ, ಸಾರ್ವಜನಿಕ ಕಟ್ಟಡ ಮತ್ತು ಸರ್ಕಾರಿ ಕಛೇರಿ ಸುತ್ತಮುತ್ತ ಗುಂಪು ಸೇರಬಾರದು ಅಥವಾ ಗುಂಪು ಕೂಡುವುದನ್ನು ನಿಷೇಧಿಸಲಾಗಿದೆ. ಯಾವುದೇ ಆಯುಧ,

ಜಿಲ್ಲೆಯಾದ್ಯಂತ ಜು.4 ರವರೆಗೆ ನಿಷೇಧಾಜ್ಞೆ ಮುಂದುವರಿಕೆ Read More »

ಕರಾವಳಿ

ಇಂದು ಕರೋಪಾಡಿ ಗ್ರಾ.ಪಂ. ಉಪಚುನಾವಣೆ

(ನ್ಯೂಸ್ ಕಡಬ) newskadaba.com ವಿಟ್ಲ, ಜು.02. ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿಯವರು ಇತ್ತೀಚೆಗೆ ಬರ್ಬರವಾಗಿ ಹತ್ಯೆಗೀಡಾಗಿದ್ದರಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯು ಇಂದು ನಡೆಯುತ್ತಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅನ್ವರ್ ಕರೋಪಾಡಿ(ಮೃತ ಜಲೀಲ್ ರವರ ಸಹೋದರ) ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಹರೀಶ್ ಭಟ್ ಕೋಡ್ಲ ಮಧ್ಯೆ ನೇರ ಹಣಾಹಣಿ ನಡೆಯುತ್ತಿದೆ. ಮತದಾನವು ಮಿತ್ತನಡ್ಕ ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿದ್ದು, ಮತದಾನ ಕೇಂದ್ರದ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ‌.

ಇಂದು ಕರೋಪಾಡಿ ಗ್ರಾ.ಪಂ. ಉಪಚುನಾವಣೆ Read More »

ಕರಾವಳಿ

ABVP ಕಾರ್ಯಕರ್ತರಿಗೆ ಸಿಂಹಸ್ವಪ್ನವಾದ ಎಸ್ಪಿ ಅಣ್ಣಾಮಲೈ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜು.02. ಇಲ್ಲಿನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯ ನಡುವಿನ ಕಿತ್ತಾಟಕ್ಕೆ ಮಧ್ಯಸ್ಥಿಕೆ ವಹಿಸೋಕೆ ಬಂದ ಎಬಿವಿಪಿ ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರಿಗೆ ಎಸ್‍ಪಿ ಅಣ್ಣಾಮಲೈ ಚಾರ್ಜ್ ತೆಗೆದುಕೊಂಡಿದ್ದಾರೆ. ಎಸ್‍ಪಿ ಅಣ್ಣಾಮಲೈ ಅವರು ವಿದ್ಯಾರ್ಥಿಗಳು ಹಾಗೂ ಮ್ಯಾನೇಜ್‍ಮೆಂಟ್ ಜೊತೆ ಮಾತುಕತೆ ನಡೆಸುತ್ತಿದ್ದ ವೇಳೆ ಒಳಹೋಗಲು ಯತ್ನಿಸಿದ ಸಂಘಟನಾ ಕಾರ್ಯಕರ್ತರಿಗೆ, ಇದು ಕಾಲೇಜು. ನಿಮಗೆ ಅನುಮತಿ ಹಾಗೂ ದೂರು ಕೊಟ್ಟೋರು ಯಾರೆಂದು ಕಿಡಿಕಾರಿ ಸ್ವತಃ ಎಸ್ಪಿಯವರೇ ಕಾರ್ಯಕರ್ತರನ್ನು ಹೊರದೂಡಿದ್ದಾರೆ. ಇದಕ್ಕೂ

ABVP ಕಾರ್ಯಕರ್ತರಿಗೆ ಸಿಂಹಸ್ವಪ್ನವಾದ ಎಸ್ಪಿ ಅಣ್ಣಾಮಲೈ Read More »

ಕರ್ನಾಟಕ

ಅಶ್ರಫ್ ಕಲಾಯಿ ಕೊಲೆ ಪ್ರಕರಣ ►ಪ್ರಮುಖ ಆರೋಪಿ ಭರತ್ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.01. SDPI ಮುಖಂಡ ಅಶ್ರಫ್ ಕಲಾಯಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ, ಬಜರಂಗದಳ ಮುಖಂಡ ಭರತ್ ಕುಮ್ಡೇಲ್ ಎಂಬಾತನನ್ನು ಪೊಲೀಸರು ಶನಿವಾರದಂದು ಬಂಧಿಸಿದ್ದಾರೆ. ಜೂನ್ 21ರಂದು ಬೆಂಜನಪದವು ಬಳಿ ಅಶ್ರಫ್ ರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಕೊಲೆಗೆ ಸಂಚು ನಡೆಸಿದ ಇಬ್ಬರಲ್ಲಿ ಒಬ್ಬನಾದ ದಿವ್ಯರಾಜ್ ಶೆಟ್ಟಿ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ, ಹತ್ಯೆಗೆ ಸಂಚು ರೂಪಿಸಿದ್ದ ಮುಖಂಡ ಭರತ್ ಕುಮ್ಡೇಲುವನ್ನು ಇಂದು

ಅಶ್ರಫ್ ಕಲಾಯಿ ಕೊಲೆ ಪ್ರಕರಣ ►ಪ್ರಮುಖ ಆರೋಪಿ ಭರತ್ ಬಂಧನ Read More »

ಕರಾವಳಿ
Scroll to Top