ಕ್ನಾನಾಯ ಜ್ಯೋತಿಯ ವಿದ್ಯಾರ್ಥಿನಿ ಹಂಸಿನಿ ನವೋದಯ ವಿದ್ಯಾಲಯಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜು.03. ಇಲ್ಲಿನ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹಂಸಿನಿ.ಯು ರವರು ನವೋದಯ ಸಿ.ಇ.ಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಡಿಪು ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.

ಕ್ಯಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಹಂಸಿನಿಯವರು ಸಿ.ಇ.ಟಿ ಪರೀಕ್ಷೆ ಬರೆದು 6ನೇ ತರಗತಿಗೆ ಮುಡಿಪು ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ದೇರಾಜೆ ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಉಮೇಶ್ ನಾಯ್ಕ.ಎಸ್ ಹಾಗೂ ಶೀಲಾಬಾಯಿಯವರ ಪುತ್ರಿ.

Scroll to Top