News Kadaba

ಬಲ್ಯ:”ಮನೆ ಮನೆಗೆ ಕಾಂಗ್ರೆಸ್” ಕಾರ್ಯಕ್ರಮ ► ಕಾಂಗ್ರೆಸ್ ಸರಕಾರದ ಸಾಧನೆ, ಬಿಜೆಪಿಯ ವೈಪಲ್ಯವನ್ನು ಜನರಿಗೆ ತಿಳಿಸಿ-ಸವಿತಾ ರಮೇಶ್

(ನ್ಯೂಸ್ ಕಡಬ) newskadaba.com ಕಡಬ, ನ.11. ಕಾಂಗ್ರೆಸ್ ಸರಕಾರದ ಸಾಧನೆ ಮತ್ತು ಬಿಜೆಪಿ ಸರಕಾರದ ವೈಪಲ್ಯವನ್ನು ಮನೆ ಮನೆ ಭೇಟಿ ವೇಳೆ ಜನರಿಗೆ ತಿಳಿಸಿ ಮನದಟ್ಟು ಮಾಡಬೇಕು ಎಂದು ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಸವಿತಾ ರಮೇಶ್ ಹೇಳಿದರು. ಬಲ್ಯ ಗ್ರಾಮದ ದೇರಾಜೆ ಬೂತ್‍ನ ವತಿಯಿಂದ ನಡೆದ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಅಧಿಕಾರ ಇರುವುದು ಜನರ ಸೇವೆ ಮಾಡಲು ಆದರೆ ಇದನ್ನು ದುರುಪಯೋಗ ಮಾಡಬಾರದು, ಪಕ್ಷದ ಪದಾಧಿಕಾರಿಗಳಿಗೆ ದೊಡ್ಡ ಜವಾಬ್ದಾರಿ […]

ಬಲ್ಯ:”ಮನೆ ಮನೆಗೆ ಕಾಂಗ್ರೆಸ್” ಕಾರ್ಯಕ್ರಮ ► ಕಾಂಗ್ರೆಸ್ ಸರಕಾರದ ಸಾಧನೆ, ಬಿಜೆಪಿಯ ವೈಪಲ್ಯವನ್ನು ಜನರಿಗೆ ತಿಳಿಸಿ-ಸವಿತಾ ರಮೇಶ್ Read More »

ಕರಾವಳಿ

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ►ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ

(ನ್ಯೂಸ್ ಕಡಬ) newskadaba.com ಕಡಬ, ನ.11. ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖಾ ವತಿಯಿಂದ ನಡೆದ ಪುತ್ತೂರು ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ರಾಧಕೃಷ್ಣ ಎಂ ತರಭೇತಿ ನೀಡಿರುತ್ತಾರೆ.

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ►ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ Read More »

ಕರಾವಳಿ

ನೇಕಾರರ 50 ಸಾವಿರ ರೂ. ಸಾಲ ಮನ್ನಾ ► ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.11. ರೈತರ ಸಾಲ ಮನ್ನಾ ಮಾಡಿದ ಮಾದರಿಯಲ್ಲಿಯೇ ಸಹಕಾರ ಸಂಘಗಳಲ್ಲಿ ನೇಕಾರಿಕೆಗಾಗಿ ಪಡೆದ ನೇಕಾರರ ರೂ.50 ಸಾವಿರ ವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಜಿಲ್ಲಾಡಳಿತ ಮಂಡಳಿ ಹಾಗೂ ಇತರ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ರೈತರ ಸಾಲ ಮನ್ನಾ ಮಾಡಿದ ಮಾದರಿಯಲ್ಲಿಯೇ ನೇಕಾರರ ಸಾಲವನ್ನು ಮಾಡಲಾಗಿದ್ದು, ಸರ್ಕಾರದ ಈ ನಿರ್ಧಾರದಿಂದ 9,000 ನೇಕಾರರಿಗೆ ಲಾಭವಾಗಲಿದೆ. ಈ ಉದ್ದೇಶಕ್ಕೆ ಒಟ್ಟಾರೆ ರೂ.52 ಕೋಟಿ ಒದಗಿಸಲಾಗುತ್ತಿದೆ

ನೇಕಾರರ 50 ಸಾವಿರ ರೂ. ಸಾಲ ಮನ್ನಾ ► ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ Read More »

ಕರ್ನಾಟಕ

ರಿಲಯನ್ಸ್ ಜಿಯೋ ಸೇವಾ ದರವನ್ನು ಏರಿಸಿದ ಹಿನ್ನೆಲೆ ► ಶೀಘ್ರದಲ್ಲೇ ಏರಲಿದೆ ಮೊಬೈಲ್ ಕರೆ ದರಗಳು

(ನ್ಯೂಸ್ ಕಡಬ) newskadaba.com ನವದೆಹಲಿ, ನ.09. ಕಡಿಮೆ ಹಣದಲ್ಲಿ ತಿಂಗಳು ಪೂರ್ತಿ ಇಂಟರ್ನೆಟ್ ಮತ್ತು ಉಚಿತ ಕರೆ ಪಡೆದು ಖುಷಿಯಾಗಿದ್ದ ಮೊಬೈಲ್ ಗ್ರಾಹಕರ ಸಂತೋಷ ಹೆಚ್ಚು ದಿನ ಉಳಿಯುವುದು ಅನುಮಾನವಾಗಿದೆ. ಕಳೆದ ಒಂದು ವರ್ಷದಿಂದ ರೇಸಿಗೆ ಬಿದ್ದಂತೆ ದರ ಇಳಿಸಿದ್ದ ಮೊಬೈಲ್ ನೆಟ್‌ವರ್ಕ್ ಸೇವಾ ಸಂಸ್ಥೆಗಳು, ಇದೀಗ ಬೆಲೆ ಹೆಚ್ಚಿಸುವ ಆಲೋಚನೆಯಲ್ಲಿ ತೊಡಗಿವೆ. ಮೊಬೈಲ್ ನೆಟ್‌ವರ್ಕ್ ಸಂಸ್ಥೆಗಳ ನಡುವೆ ದರ ಸಮರಕ್ಕೆ ನಾಂದಿ ಹಾಡಿದ್ದ ರಿಲಯನ್ಸ್ ಜಿಯೊ ಅಕ್ಟೋಬರ್ ನಲ್ಲಿ ತನ್ನ ಸೇವಾ ದರವನ್ನು 15 ರಿಂದ

ರಿಲಯನ್ಸ್ ಜಿಯೋ ಸೇವಾ ದರವನ್ನು ಏರಿಸಿದ ಹಿನ್ನೆಲೆ ► ಶೀಘ್ರದಲ್ಲೇ ಏರಲಿದೆ ಮೊಬೈಲ್ ಕರೆ ದರಗಳು Read More »

ರಾಷ್ಟ್ರೀಯ ನ್ಯೂಸ್

ಕಾಂಗ್ರೆಸ್ ನಾಯಕ ಹರಿಕೃಷ್ಣ ಬಂಟ್ವಾಳ್ ನಾಳೆ ಬಿಜೆಪಿಗೆ ಸೇರ್ಪಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.10. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಆಪ್ತ ಹರಿಕೃಷ್ಣ ಬಂಟ್ವಾಳ ಅವರು ಶನಿವಾರ ನೆಹರೂ ಮೈದಾನದಲ್ಲಿ ನಡೆಯಲಿರುವ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆಯ ವೇಳೆ ಬಿಜೆಪಿ ಸೇರಲಿದ್ದು, ಇದರೊಂದಿಗೆ ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಉಹಾಪೋಹಗಳಿಗೆ ತೆರೆ ಬಿದ್ದಿದೆ. ಈ ಬಗ್ಗೆ ಹರಿಕೃಷ್ಣ ಬಂಟ್ವಾಳ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಮಾಣಿಯಲ್ಲಿ ಸರ್ಕಾರದ ಜಮೀನನ್ನು ಅಕ್ರಮವಾಗಿ

ಕಾಂಗ್ರೆಸ್ ನಾಯಕ ಹರಿಕೃಷ್ಣ ಬಂಟ್ವಾಳ್ ನಾಳೆ ಬಿಜೆಪಿಗೆ ಸೇರ್ಪಡೆ Read More »

ಕರಾವಳಿ

ಈ ವರ್ಷದ ಟಿಪ್ಪು ಜಯಂತಿ ಕೊನೆಯ ಟಿಪ್ಪು ಜಯಂತಿ ಆಗಲಿದೆ ► ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಮಂಗಳೂರು ನ.10. ಇಂದು ನಡೆಯುವ ಟಿಪ್ಪು ಜಯಂತಿ ರಾಜ್ಯದಲ್ಲಿ ನಡೆಯುವ ಕೊನೆಯ ಟಿಪ್ಪುಜಯಂತಿ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅವರು ಗುರುವಾರದಂದು ಮಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಿಟ್ಲರ್ ಜಯಂತಿಯೂ ಒಂದೇ, ಟಿಪ್ಪು ಜಯಂತಿಯೂ ಒಂದೇ ಎಂದು ಹೇಳಿದರು. ಸರಕಾರಿ ಕಾರ್ಯಕ್ರಮವಾಗಿ ಟಿಪ್ಪು ಜಯಂತಿಗೆ ವಿರೋಧ ವಿದ್ದು ಇದೇ ಕೊನೆಯ ಟಿಪ್ಪು ಜಯಂತಿ ಆಗಲಿದೆ ಎಂದು ಅವರು ಹೇಳಿದರು. ಡಿ.ಕೆ

ಈ ವರ್ಷದ ಟಿಪ್ಪು ಜಯಂತಿ ಕೊನೆಯ ಟಿಪ್ಪು ಜಯಂತಿ ಆಗಲಿದೆ ► ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ Read More »

ಕರ್ನಾಟಕ

ಮರ್ಧಾಳದಲ್ಲಿ ಮದ್ಯದಂಗಡಿಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ► ವಾರದೊಳಗೆ ಅನುಮತಿ ರದ್ದುಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ನ.09. ಇಲ್ಲಿನ ಬಂಟ್ರ ಗ್ರಾಮದ ಚಾಕೋಟೆಕರೆ ಎಂಬಲ್ಲಿ ಕಾನೂನು ಬಾಹಿರವಾಗಿ ಬಾರ್ & ರೆಸ್ಟೋರೆಂಟನ್ನು ತೆರೆಯಲಾಗಿದ್ದು, ವಾರದೊಳಗೆ ಪರವಾನಿಗೆಯನ್ನು ರದ್ದುಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕಡಬ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಎ.ಬಿ. ಮನೋಹರ್ ರೈ ಹೇಳಿದ್ದಾರೆ. ಅವರು ಗುರುವಾರದಂದು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಬಕಾರಿ ಕಾನೂನಿನಲ್ಲಿ ಮದ್ಯದಂಗಡಿಯು ರಾಜ್ಯ ಹೆದ್ದಾರಿಯಿಂದ 220 ಮೀಟರ್ ಹಾಗೂ ಪರಿಶಿಷ್ಟ ಜಾತಿ/ಪಂಗಡದ ಕಾಲನಿಯಿಂದ 100 ಮೀಟರ್ ದೂರದಲ್ಲಿರಬೇಕೆಂಬ ನಿಯಮವಿದ್ದರೂ, ಚಾಕೋಟೆಕರೆಯಲ್ಲಿ ಪರಿಶಿಷ್ಟ ಜಾತಿ

ಮರ್ಧಾಳದಲ್ಲಿ ಮದ್ಯದಂಗಡಿಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ► ವಾರದೊಳಗೆ ಅನುಮತಿ ರದ್ದುಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ Read More »

ಕರಾವಳಿ

ಸಬಳೂರು ಶಾಲೆಯಲ್ಲಿ ಮೆಟ್ರಿಕ್ ಮೇಳ ► ಯಶಸ್ವಿಯಾಗಿ ನಡೆದ ನಾಲ್ಕನೇ ವರ್ಷದ ಮಕ್ಕಳ ಸಂತೆ

(ನ್ಯೂಸ್ ಕಡಬ) newskadaba.com ಕಡಬ, ನ.09. ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ವರ್ಷದ ‘ಮೆಟ್ರಿಕ್ ಮೇಳ’ ಮಕ್ಕಳ ಮಾರುಕಟ್ಟೆ ಬುಧವಾರ ಯಶಸ್ವಿಯಾಗಿ ನಡೆಯಿತು. ಗ್ರಾಮೀಣ ಪ್ರದೇಶವಾದ ಸಬಳೂರು ಶಾಲಾ ಮಕ್ಕಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಗೆಡ್ಡೆ ಗೆಣಸು, ಹೂವು, ಹಣ್ಣು ಹಂಪಲುಗಳನ್ನು, ತಿಂಡಿ ತಿನಿಸುಗಳನ್ನು ಶಾಲಾ ಆವರಣದಲ್ಲಿ ಮಾರಾಟ ಮಾಡಿ ಸಂತೆಯ ವಾತಾವರಣವನ್ನು ನೆನಪಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ವ್ಯಾಪಾರ ವ್ಯವಹಾರ ಜ್ಞಾನವನ್ನು ವೃದ್ಧಿಸುವ ಕಾರ್ಯವನ್ನು ಮಾಡಲಾಯಿತು. ಪೋಷಕರು

ಸಬಳೂರು ಶಾಲೆಯಲ್ಲಿ ಮೆಟ್ರಿಕ್ ಮೇಳ ► ಯಶಸ್ವಿಯಾಗಿ ನಡೆದ ನಾಲ್ಕನೇ ವರ್ಷದ ಮಕ್ಕಳ ಸಂತೆ Read More »

ಕರಾವಳಿ

ವಿರೋಧದ ನಡುವೆ ಮರ್ದಾಳದಲ್ಲಿ ಮದ್ಯದಂಗಡಿ ಆರಂಭ ► ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸಿದ ಅಬಕಾರಿ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ನ.09. ಗ್ರಾಮಸ್ಥರ ವಿರೋಧದ ನಡುವೆಯೂ ಇಲ್ಲಿನ ಮರ್ಧಾಳ ಸಮೀಪದ ಚಾಕಟೆಕರೆ ಎಂಬಲ್ಲಿ ಗುರುವಾರದಂದು ಮದ್ಯದಂಗಡಿ ಆರಂಭಗೊಂಡಿದೆ. ಮದ್ಯದಂಗಡಿಯನ್ನು ವಿರೋಧಿಸಿ ಮರ್ಧಾಳ ಪರಿಸರದ ಗ್ರಾಮಸ್ಥರು ಕಾನೂನಾತ್ಮಕ ಹೋರಾಟಕ್ಕಿಳಿದಿದ್ದು, ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಹಲವು ಮನವಿಗಳನ್ನು ಅರ್ಪಿಸಿದ್ದರು. ಒಂದೆಡೆ ಅಬಕಾರಿ ಅಧಿಕಾರಿಗಳು ಮದ್ಯದಂಗಡಿಯ ಬಗ್ಗೆ ಯಾವುದೇ ಅರ್ಜಿಗಳು ಇಲಾಖೆಗೆ ಬಂದಿಲ್ಲ ಎಂದು ಗ್ರಾಮಸ್ಥರನ್ನು ನಂಬಿಸಿ ಇನ್ನೊಂದೆಡೆ ಮದ್ಯದಂಗಡಿಗೆ ಅನುಮತಿ ನೀಡುವ ಮೂಲಕ ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ರಾಜ್ಯ ಹೆದ್ದಾರಿಯಿಂದ 100 ಮೀಟರ್ ಹಾಗೂ ಪರಿಶಿಷ್ಟ

ವಿರೋಧದ ನಡುವೆ ಮರ್ದಾಳದಲ್ಲಿ ಮದ್ಯದಂಗಡಿ ಆರಂಭ ► ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸಿದ ಅಬಕಾರಿ ಅಧಿಕಾರಿಗಳು Read More »

ಕರಾವಳಿ

ಮಂಗಳೂರು ವಿಶ್ವವಿದ್ಯಾನಿಲಯ ► ನಾಳೆ ನಡೆಯಬೇಕಾಗಿದ್ದ ಪದವಿ ಪರೀಕ್ಷೆಗಳ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.09. ನಾಳೆ (ನವೆಂಬರ್ 10) ನಡೆಯಬೇಕಾಗಿದ್ದ ಪ್ರಥಮ ಹಾಗೂ ಪಂಚಮ ಬಿ.ಎ, ಬಿ.ಎಸ್ಸಿ, ಬಿ.ಕಾಂ., ಪಂಚಮ ಬಿ.ಕಾಂ. ಹಾಗೂ ಪಂಚಮ ಬಿ.ಎಸ್ಸಿ.(ಎಫ್ಎನ್ ಡಿ) ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಶುಕ್ರವಾರದಂದು ನಡೆಯಬೇಕಾಗಿದ್ದ ಪದವಿ ಪರೀಕ್ಷೆಗಳನ್ನು ನವೆಂಬರ್ 15 ಬುಧವಾರದಂದು ನಿಗದಿಪಡಿಸಲಾಗಿದ್ದು, ಪ್ರಥಮ ಹಾಗೂ ದ್ವಿತೀಯ ವರ್ಷದ ಪರೀಕ್ಷೆಗಳನ್ನು ಪೂರ್ವಾಹ್ನ ಹಾಗೂ ತೃತೀಯ ವರ್ಷದ ಪರೀಕ್ಷೆಗಳನ್ನು ಅಪರಾಹ್ನ ನಡೆಸುವಂತೆ ತಿಳಿಸಲಾಗಿದೆ. ಈಗಾಗಲೇ ನವೆಂಬರ್ 15 ರಂದು ನಡೆಯಲಿರುವ ತೃತೀಯ ವರ್ಷದ ಪರೀಕ್ಷೆಗಳು ಹಿಂದಿನಂತೆ ಅದೇ

ಮಂಗಳೂರು ವಿಶ್ವವಿದ್ಯಾನಿಲಯ ► ನಾಳೆ ನಡೆಯಬೇಕಾಗಿದ್ದ ಪದವಿ ಪರೀಕ್ಷೆಗಳ ಮುಂದೂಡಿಕೆ Read More »

ಕರಾವಳಿ
Scroll to Top