ಮಂಗಳೂರು ವಿಶ್ವವಿದ್ಯಾನಿಲಯ ► ನಾಳೆ ನಡೆಯಬೇಕಾಗಿದ್ದ ಪದವಿ ಪರೀಕ್ಷೆಗಳ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.09. ನಾಳೆ (ನವೆಂಬರ್ 10) ನಡೆಯಬೇಕಾಗಿದ್ದ ಪ್ರಥಮ ಹಾಗೂ ಪಂಚಮ ಬಿ.ಎ, ಬಿ.ಎಸ್ಸಿ, ಬಿ.ಕಾಂ., ಪಂಚಮ ಬಿ.ಕಾಂ. ಹಾಗೂ ಪಂಚಮ ಬಿ.ಎಸ್ಸಿ.(ಎಫ್ಎನ್ ಡಿ) ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಲಾಗಿದೆ.

ಶುಕ್ರವಾರದಂದು ನಡೆಯಬೇಕಾಗಿದ್ದ ಪದವಿ ಪರೀಕ್ಷೆಗಳನ್ನು ನವೆಂಬರ್ 15 ಬುಧವಾರದಂದು ನಿಗದಿಪಡಿಸಲಾಗಿದ್ದು, ಪ್ರಥಮ ಹಾಗೂ ದ್ವಿತೀಯ ವರ್ಷದ ಪರೀಕ್ಷೆಗಳನ್ನು ಪೂರ್ವಾಹ್ನ ಹಾಗೂ ತೃತೀಯ ವರ್ಷದ ಪರೀಕ್ಷೆಗಳನ್ನು ಅಪರಾಹ್ನ ನಡೆಸುವಂತೆ ತಿಳಿಸಲಾಗಿದೆ. ಈಗಾಗಲೇ ನವೆಂಬರ್ 15 ರಂದು ನಡೆಯಲಿರುವ ತೃತೀಯ ವರ್ಷದ ಪರೀಕ್ಷೆಗಳು ಹಿಂದಿನಂತೆ ಅದೇ ದಿನ ನಡೆಯಲಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top