News Kadaba

ಫೆಬ್ರವರಿ 1 ಮತ್ತು 2ರಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಮ್ಮೇಳನ ► ಸಂಶೋಧನಾ ಪ್ರಾತ್ಯಕ್ಷಿಗಳಿಗಳಿಗೆ ನಗದು ಬಹುಮಾನ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.09. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಹನ್ನೊಂದನೆ ಪ್ರಧಾನ ಸಮ್ಮೇಳನವನ್ನು ಸಮಾಜ ಒಳಿತಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಆಯಾಮಗಳು ಎಂಬ ಕೇಂದ್ರ ವಿಷಯದಡಿ, ಬೆಂಗಳೂರಿನ ಜಯನಗರದಲ್ಲಿರುವ ಎನ್.ಎಂ.ಕೆ.ಆರ್ ಕಾಲೇಜಿನ ಸಹಯೋಗದೊಂದಿಗೆ ಎರಡು ದಿನಗಳ ಕಾಲ ಫೆಬ್ರವರಿ 1 ಮತ್ತು 2ರಂದು ಆಯೋಜಿಸಿದೆ.ಸಮ್ಮೆಳನದಲ್ಲಿ ಪ್ರತಿನಿಧಿಗಳು ಭೌತ ಮತ್ತು ಗಣಿತ ವಿಜ್ಞಾನ, ರಸಾಯನ ಮತ್ತು ಜೀವ ವಿಜ್ಞಾನ, ಇಂಜಿನಿಯರಿಂಗ್ ಹಾಗೂ ಅಂತರ್ ಶಾಸ್ತ್ರೀಯ ವಿಜ್ಞಾನಗಳಿಗೆ ಸಂಬಂಧಿಸಿದ ಸಂಶೋಧನಾ ಪ್ರಾತ್ಯಕ್ಷಿಗಳಿಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿದೆ. ತಜ್ಞ ಸಮಿತಿಯು […]

ಫೆಬ್ರವರಿ 1 ಮತ್ತು 2ರಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಮ್ಮೇಳನ ► ಸಂಶೋಧನಾ ಪ್ರಾತ್ಯಕ್ಷಿಗಳಿಗಳಿಗೆ ನಗದು ಬಹುಮಾನ Read More »

ಕರಾವಳಿ

ಜನವರಿ 8 ಮತ್ತು 9 ರಂದು ಭಾರತ್ ಬಂದ್ ಗೆ ಕಾರಣಗಳೇನು ಗೊತ್ತೆ?

(ನ್ಯೂಸ್ ಕಡಬ)newskadaba.com.ಬೆಂಗಳೂರು,ಜ.7. ಜನವರಿ 8 ಮತ್ತು 9 ರಂದು ಭಾರತ್ ಬಂದ್ ಗೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆನೀಡಿವೆ. ಒಟ್ಟು 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಮುಷ್ಕರ ನಡೆಸಲಾಗುತ್ತಿದ್ದು, ಜನವರಿ 8 ರ ಬೆಳಿಗ್ಗೆ 6 ರಿಂದ ಜನವರಿ 9 ರ ಸಂಜೆ 5 ರವರೆಗೆ ಬಂದ್ ನಡೆಯಲಿದೆ. ಯಾವ ಯಾವ ಸೌಲಭ್ಯಗಳಿಗೆ ಬಂದ್ ಇರುವುದಿಲ್ಲ: ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲಸಾರ್ವಜನಿಕರಿಗೆ  ದೈನಂದಿನಂತೆ ವ್ಯವಹಾರ ನಡೆಯುತ್ತದೆ. ಯಾವ  ಯಾವ ಕಾರಣಕ್ಕೆ

ಜನವರಿ 8 ಮತ್ತು 9 ರಂದು ಭಾರತ್ ಬಂದ್ ಗೆ ಕಾರಣಗಳೇನು ಗೊತ್ತೆ? Read More »

ಕರಾವಳಿ

ಪುತ್ತೂರು: 26ನೇ ವರ್ಷದ ಕೋಟಿ -ಚೆನ್ನಯ ಜೋಡುಕರೆ ಕಂಬಳಕ್ಕೆ ಭರದ ಸಿದ್ಧತೆ

(ನ್ಯೂಸ್ ಕಡಬ)newskadaba.com. ಪುತ್ತೂರು. ಜ.7 .ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಜ. 19ರಂದು ನಡೆಯುವ 26ನೇ ವರ್ಷದ ಹೊನಲು ಬೆಳಕಿನ ಕೋಟಿ -ಚೆನ್ನಯ ಜೋಡುಕರೆ ಕಂಬಳ ಕೂಟಕ್ಕೆ ಕರೆ ನಿರ್ಮಾಣ ಕಾರ್ಯ ಭಾಗಶ: ಪೂರ್ಣಗೊಂಡಿದೆ.ಕಂಬಳ ಕರೆಗಳನ್ನು ಹದಗೊಳಿಸಿ ಸಮಗೊಳಿಸಲಾಗಿದೆ. ಕರೆಗಳಲ್ಲಿ ನೀರು ನಿಲ್ಲಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಜೋಡುಕರೆಗಳನ್ನು ಇನ್ನಷ್ಟು ಪಕ್ವಗೊಳ್ಳುವ ನಿಟ್ಟಿನಲ್ಲಿ ಕಂಬಳ ಪೂರ್ವವಾಗಿ ಓಟದ ಕೋಣಗಳನ್ನು ಕರೆಗಳಲ್ಲಿ ಓಡಿಸುವ ಕುದಿ ಕಂಬಳವನ್ನು ನಡೆಸಲಾಗುತ್ತದೆ.   ಜಿಲ್ಲೆಯಲ್ಲಿ ನಡೆಯುವ ಕಂಬಳಗಳಲ್ಲಿ ಪುತ್ತೂರಿನ ಕಂಬಳಕ್ಕೆ

ಪುತ್ತೂರು: 26ನೇ ವರ್ಷದ ಕೋಟಿ -ಚೆನ್ನಯ ಜೋಡುಕರೆ ಕಂಬಳಕ್ಕೆ ಭರದ ಸಿದ್ಧತೆ Read More »

ಕರಾವಳಿ

ಕಡಬ: ಬಿಟ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಷನ್ ಉದ್ಘಾಟನೆ ►ಶಿಕ್ಷಣದೊಂದಿಗೆ ಕಂಪ್ಯೂಟರ್ ಜ್ಞಾನ ಅತ್ಯವಶ್ಯಕ – ಪುಲಸ್ತ್ಯಾ ರೈ

(ನ್ಯೂಸ್ ಕಡಬ)newskadaba.com.ಮಂಗಳೂರು,ಜ.6. ಕೋಡಿಂಬಾಳ ರಸ್ತೆಯ ಕಡಬ ಮೆಸ್ಕಾಂ ಉಪವಿಭಾಗ ಕಚೇರಿ ಬಳಿ ಡೆನ್ಮಾ ಕಾಂಪ್ಲೆಕ್ಸ್‍ನ 3ನೇ ಮಹಡಿಯಲ್ಲಿ ಡಿ.31ರಂದು ಬಿಟ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಷನ್ ಉದ್ಘಾಟನೆಗೊಂಡಿತು.ತಾ.ಪಂ.ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ ಸಂಸ್ಥೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ತಾಲೂಕು ಕೇಂದ್ರವಾದ ಕಡಬದಲ್ಲಿ ಇಂದು ಅನೇಕ ಸಂಸ್ಥೆಗಳು ಪ್ರಾರಂಭಗೊಳ್ಳುತ್ತಿದ್ದು, ಇಂದು ಕಂಪ್ಯೂಟರ್ ತರಬೇತಿಯಂತಹ ಅತ್ಯವಶ್ಯಕ ಸಂಸ್ಥೆ ಪ್ರಾರಂಭಗೊಂಡಿದ್ದು, ಉದ್ಯೋಗಕ್ಕೂ ಇಂದು ಶಿಕ್ಷಣದೊಂದಿಗೆ ಕಂಪ್ಯೂಟರ್ ಜ್ಞಾನವೂ ಅವಶ್ಯಕವಾಗಿದೆ. ನಾವು ಮಾಡುವ ಉತ್ತಮ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ. ಕಡಬದ ಅಭಿವೃದ್ಧಿಯಲ್ಲಿ ನಾವೆಲ್ಲ ಕೈಜೋಡಿಸೋಣ

ಕಡಬ: ಬಿಟ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಷನ್ ಉದ್ಘಾಟನೆ ►ಶಿಕ್ಷಣದೊಂದಿಗೆ ಕಂಪ್ಯೂಟರ್ ಜ್ಞಾನ ಅತ್ಯವಶ್ಯಕ – ಪುಲಸ್ತ್ಯಾ ರೈ Read More »

ಕರಾವಳಿ

ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಾಡ್ಗಿಚ್ಚು ► ಅಪಾರ ಪ್ರಮಾಣದ ಅರಣ್ಯ ಪ್ರದೇಶ ಅಗ್ನಿಗಾಹುತಿ

(ನ್ಯೂಸ್ ಕಡಬ) newskadaba.com.ಮೂಡಿಗೆರೆ,ಜ.2. ಚಾರ್ಮಾಡಿ ಘಾಟ್‌ನ ಮಾಳೂರು ಮೀಸಲು ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಗಿಡಮರಗಳು ಹಾಗೂ ವನ್ಯಜೀವಿಗಳು ಅಗ್ನಿಗಾಹುತಿ ಆಗಿರಬಹುದೆಂದು ಶಂಕಿಸಲಾಗಿದೆ. ಕಳೆದ 5 ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಈಗನೂರಾರು ಎಕರೆಗೆ ವ್ಯಾಪಿಸಿದೆ. ಸುಮಾರು 50 ಎಕರೆ ಪ್ರದೇಶದಲ್ಲಿ ಕಾಡ್ಗಿಚ್ಚುಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಸಣ್ಣದಾಗಿ ಬೆಂಕಿ ಉರಿಯುತ್ತಲೇ ಇದ್ದು ಬೆಂಕಿ ಜೋರಾದಲ್ಲಿ ಮತ್ತಷ್ಟು ಹಾನಿಯಾಗುವ ಸಾಧ್ಯತೆಗಳಿವೆ. ಕಾಡ್ಗಿಚ್ಚಿನಿಂದಾಗಿ ಹುಲ್ಲುಗಾವಲು ಸಂಪೂರ್ಣ ಸುಟ್ಟು ಬೂದಿಯಾಗಿದ್ದು, ಹುಲ್ಲಿನ ಪೊದೆಗಳಲ್ಲಿ ಗೂಡುಕಟ್ಟಿದ್ದ ಪಕ್ಷಿಗಳು, ಪೊದೆಗಳ ನಡುವೆ ಇರುವ ಕಾಡುಕುರಿ, ಮೊಲಗಳಂತಹ ಪ್ರಾಣಿಗಳ ಮರಿಗಳು, ಚಿಟ್ಟೆ ಮತ್ತಿತರ ಕೀಟಗಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿವೆ.  

ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಾಡ್ಗಿಚ್ಚು ► ಅಪಾರ ಪ್ರಮಾಣದ ಅರಣ್ಯ ಪ್ರದೇಶ ಅಗ್ನಿಗಾಹುತಿ Read More »

ಕರಾವಳಿ

ಸುಳ್ಯದ ಆಟೋ ಚಾಲಕನಿಗೆ ಖುಲಾಯಿಸಿದ ಅದೃಷ್ಟ ►ಕೇರಳದ ಲಾಟರಿಯಲ್ಲಿ ಸಿಕ್ಕಿತ್ತು 80 ಲಕ್ಷ ರೂ. ಬಂಪರ್ ಬಹುಮಾನ

(ನ್ಯೂಸ್ ಕಡಬ) newskadaba.com.ಸುಳ್ಯ, ಜ.1. ಸುಳ್ಯತಾಲೂಕಿನ ದುಗಲಡ್ಕದ ಈಶ್ವರಡ್ಕ ಶಿವಕುಮಾರ್ ಎಂಬವರು ದುಗಲಡ್ಕದಲ್ಲಿ ಸುಮಾರು 15 ವರ್ಷ ದಿಂದ ರಿಕ್ಷಾ ಚಾಲಕರಾಗಿರುವ ಹಾಗೂ ಅವರು ಸುಳ್ಯ ಪಟ್ಟಣ ಪಂಚಾಯಿತಿ ದುಗ್ಗಲಡ್ಕ ವಾರ್ಡ್ನ ಪಂಪ್ ಆಪರೇಟರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಜೀವನದಲ್ಲಿ ಅವರೇ ಊಹಿಸಲಾಗದ ಅದೃಷ್ಟ ಘಟನೆ ನಡೆಯಿತು. ದೇವರ ದರ್ಶನಕ್ಕೆಂದು ಗಡಿನಾಡು ಕಾಸರಗೋಡು ಜಿಲ್ಲೆಗೆ ಹೋಗಿದ್ದ ಸಂದರ್ಭದಲ್ಲಿ ಖರೀದಿಸಿದ್ದ ಕೇರಳ ಲಾಟರಿಗೆ 80 ಲಕ್ಷ ರೂ. ಬಂಪರ್ ಬಹುಮಾನ ಹೊಡೆದಿರುವ ಪ್ರಸಂಗ ನಡೆದಿದೆ. ಡಿ.29ರಂದು ಅಡೂರು

ಸುಳ್ಯದ ಆಟೋ ಚಾಲಕನಿಗೆ ಖುಲಾಯಿಸಿದ ಅದೃಷ್ಟ ►ಕೇರಳದ ಲಾಟರಿಯಲ್ಲಿ ಸಿಕ್ಕಿತ್ತು 80 ಲಕ್ಷ ರೂ. ಬಂಪರ್ ಬಹುಮಾನ Read More »

ಕರಾವಳಿ

ಬಂಟ್ವಾಳ: ನಾಟಕ ನೋಡಲು ಹೋಗಿ ಬಂದವನಿಗೆ ಕಾದಿತ್ತು ಶಾಕಿಂಗ್ ನ್ಯೂಸ್ !

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಡಿ.29.ಬಂಟ್ವಾಳ ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮ,ಮುಂಡಡ್ಕ ಮನೆ ಕರುಣಕರ ಶೆಟ್ಟಿ ಪ್ರಾಯ  (50)   ಮುಂಡಡ್ಕ ಮನೆ, ಎಂಬವರು ದಿನಾಂಕ 25-12-2018 ರಂದು ಸಮಯ  ರಾತ್ರಿ 11.30 ಗಂಟೆಗೆ ತಮ್ಮ ಬಾಬ್ತು  ಬೈಕ್ KA 19 EY 7945 ನೇದನ್ನು ಕಳ್ಳಿಗೆ ಗ್ರಾಮದ ತೊಡಂಬಿಲ ಚರ್ಚ್ ಬಳಿ ನಿಲ್ಲಿಸಿ, ಚರ್ಚ್ ವಠಾರದಲ್ಲಿ ನಡೆಯುತ್ತಿದ್ದ ನಾಟಕವನ್ನು ನೋಡಲು ಹೋಗಿದ್ದು, ನಂತರ ನಾಟಕ ಮುಗಿದ ನಂತರ ಸದ್ರಿ ಬೈಕನ್ನು ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ, ಸದ್ರಿ ಮೊಟರ್ ಸೈಕಲ್

ಬಂಟ್ವಾಳ: ನಾಟಕ ನೋಡಲು ಹೋಗಿ ಬಂದವನಿಗೆ ಕಾದಿತ್ತು ಶಾಕಿಂಗ್ ನ್ಯೂಸ್ ! Read More »

ಕರಾವಳಿ

ಪೊಲೀಸರ ಸೋಗಿನಲ್ಲಿ ಚಿನ್ನಾಭರಣ ಕಳ್ಳತನ ► ಒಬ್ಬಂಟಿಯಾಗಿ ತೆರಳುವಾಗ ಎಚ್ಚರಿಕೆ

(ನ್ಯೂಸ್ ಕಡಬ) newskadaba.com. ಮಂಗಳೂರು, ಡಿ. 26.  ಸಿಐಡಿ ಪೊಲೀಸರೆಂದು ನಂಬಿಸಿ ಗಮನ ಬೇರೆಡೆ ಸೆಳೆದು ಸರಗಳ್ಳತನ ಮಾಡುವ ತಂಡವೊಂದು ಕರಾವಳಿಗೆ ಎಂಟ್ರಿ ಕೊಟ್ಟಿದ್ದು ಇದರ ಬಗ್ಗೆ ಜನ ಜಾಗೃತರಾಗಬೇಕು ಎಂದು ಡಿಸಿಪಿ ಉಮಾಪ್ರಶಾಂತ್ ಜಿಲ್ಲಾ ನಾಗರೀಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಡಿಸಿಪಿ ಉಮಾ ಪ್ರಶಾಂತ್, ಉಡುಪಿ ಜಿಲ್ಲಾ ಪೊಲೀಸರು ಈ ಬಗ್ಗೆ ಅಲರ್ಟ್ ಮಾಹಿತಿ ನೀಡಿದ್ದಾರೆ. ಬಂದರು ಠಾಣಾ ವ್ಯಾಪ್ತಿಯಲ್ಲಿ ದಾರಿಹೋಕ ವೃದ್ದರೊಬ್ಬರ ಬಳಿ ಬಂದ ಕಳ್ಳರು ತಾವು ಪೊಲೀಸರೆಂದು ವಂಚಿಸಿ ಚಿನ್ನಾಭರಣ

ಪೊಲೀಸರ ಸೋಗಿನಲ್ಲಿ ಚಿನ್ನಾಭರಣ ಕಳ್ಳತನ ► ಒಬ್ಬಂಟಿಯಾಗಿ ತೆರಳುವಾಗ ಎಚ್ಚರಿಕೆ Read More »

ಕರಾವಳಿ

ಓವರ್ ಟೇಕ್ ಮಾಡಿ ಮುಂದೆ ಹೋಗಿದ್ದಕ್ಕೆ ಜೀವ ಬೆದರಿಕೆ ಪ್ರಕರಣ

(ನ್ಯೂಸ್ ಕಡಬ) newskadaba.com ಪುತ್ತೂರು ನಗರ ಪೊಲೀಸ್ ಠಾಣೆ ,ಡಿ. 26.  ದಿನಾಂಕ: 24-12-2018 ರಂದು  ಪುತ್ತೂರು ತಾಲೂಕು ಬನ್ನೂರು ಗ್ರಾಮ ಕುಮೆರಡ್ಕ ದ ಶ್ರೀ ಲಕ್ಷ್ಮೀ ನಿಲಯದ ನೇಮಣ್ಣಗೌಡರ  ಪುತ್ರರಾದ  ಪುನೀತ್ ಕುಮಾರ್ ತನ್ನ ಬಾಬ್ತು ದ್ವಿಚಕ್ರ ಕೆ.ಎ 12 ಇ-5071 ರಲ್ಲಿ ಪುತ್ತೂರು ನಗರದಿಂದ ಹಾರಾಡಿ ಎಂಬಲ್ಲಿರುವ ಸ್ವಾಮಿಗಳ ಆಶ್ರಮದ ಕಡೆಗೆ ಹೋಗುತ್ತಿರುವಾಗ ಬೊಳ್ವಾರು ಎಂಬಲ್ಲಿ ತನ್ನ ಎದುರಿಗಿದ್ದ ಮಾರುತಿ ಓಮಿನಿ ಕಾರು ಕೆ ಎ 19-ಎಂ -9188 ನೇಯದನ್ನು ಓವರ್ ಟೇಕ್ ಮಾಡಿ ಮುಂದೆ ಹೋದರು.

ಓವರ್ ಟೇಕ್ ಮಾಡಿ ಮುಂದೆ ಹೋಗಿದ್ದಕ್ಕೆ ಜೀವ ಬೆದರಿಕೆ ಪ್ರಕರಣ Read More »

ಕರಾವಳಿ

ದೂರವಾಣಿ ಕೇಂದ್ರ ನೌಕರರಿಗೆ ಮೂರು ತಿಂಗಳಿಂದ ಪಾವತಿಯಾಗದ ವೇತನ ► ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರಿಗೆ ಮನವಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ ,  ಡಿ. 26.  ಸರಕಾರಿ ಸ್ವಾಮ್ಯದ ಸಂಸ್ಥೆಯ ಕಚೇರಿ ಮತ್ತು ದೂರವಾಣಿ ಕೇಂದ್ರದಲ್ಲಿ ಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಕಳೆದ ಮೂರು ತಿಂಗಳಿಂದ ಸಂಸ್ಥೆ ವೇತನ ಪಾವತಿಸಿಲ್ಲ. ಈ ಕುರಿತು ಈ ಸಂಸ್ಥೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ನೌಕರರು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರನ್ನು ರವಿವಾರ ಭೇಟಿಯಾಗಿ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಸಲ್ಲಿಸಿದರು. ಸುದೀರ್ಘ‌ ಅವಧಿಯಿಂದ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಇದುವರೆಗೆ ಮೂಲ ಸೌಕರ್ಯ ವಂಚಿತರಾಗಿ ಸೇವೆ ನೀಡಿರುವ ನಮಗೆ

ದೂರವಾಣಿ ಕೇಂದ್ರ ನೌಕರರಿಗೆ ಮೂರು ತಿಂಗಳಿಂದ ಪಾವತಿಯಾಗದ ವೇತನ ► ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರಿಗೆ ಮನವಿ Read More »

ಕರಾವಳಿ
Scroll to Top