ಕಡಬ: ಬಿಟ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಷನ್ ಉದ್ಘಾಟನೆ ►ಶಿಕ್ಷಣದೊಂದಿಗೆ ಕಂಪ್ಯೂಟರ್ ಜ್ಞಾನ ಅತ್ಯವಶ್ಯಕ – ಪುಲಸ್ತ್ಯಾ ರೈ

(ನ್ಯೂಸ್ ಕಡಬ)newskadaba.com.ಮಂಗಳೂರು,ಜ.6. ಕೋಡಿಂಬಾಳ ರಸ್ತೆಯ ಕಡಬ ಮೆಸ್ಕಾಂ ಉಪವಿಭಾಗ ಕಚೇರಿ ಬಳಿ ಡೆನ್ಮಾ ಕಾಂಪ್ಲೆಕ್ಸ್‍ನ 3ನೇ ಮಹಡಿಯಲ್ಲಿ ಡಿ.31ರಂದು ಬಿಟ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಷನ್ ಉದ್ಘಾಟನೆಗೊಂಡಿತು.ತಾ.ಪಂ.ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ ಸಂಸ್ಥೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ತಾಲೂಕು ಕೇಂದ್ರವಾದ ಕಡಬದಲ್ಲಿ ಇಂದು ಅನೇಕ ಸಂಸ್ಥೆಗಳು ಪ್ರಾರಂಭಗೊಳ್ಳುತ್ತಿದ್ದು, ಇಂದು ಕಂಪ್ಯೂಟರ್ ತರಬೇತಿಯಂತಹ ಅತ್ಯವಶ್ಯಕ ಸಂಸ್ಥೆ ಪ್ರಾರಂಭಗೊಂಡಿದ್ದು, ಉದ್ಯೋಗಕ್ಕೂ ಇಂದು ಶಿಕ್ಷಣದೊಂದಿಗೆ ಕಂಪ್ಯೂಟರ್ ಜ್ಞಾನವೂ ಅವಶ್ಯಕವಾಗಿದೆ. ನಾವು ಮಾಡುವ ಉತ್ತಮ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ. ಕಡಬದ ಅಭಿವೃದ್ಧಿಯಲ್ಲಿ ನಾವೆಲ್ಲ ಕೈಜೋಡಿಸೋಣ ಎಂದು ಹೇಳಿ ಸಂಸ್ಥೆಗೆ ಶುಭಹಾರೈಸಿದರು.

ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಇಂದು ಕಡಬ ಶೀಘ್ರಗತಿಯಲ್ಲಿ ಬೆಳೆಯುತ್ತಿದ್ದು ಇಂದಿನ ಯುಗದಲ್ಲಿ ಕಂಪ್ಯೂಟರ್ ಜ್ಞಾನ ತಿಳಿದಿರಲೇ ಬೇಕಾಗಿದ್ದು, ಇಂದು ಇಲ್ಲಿ ಉದ್ಘಾಟನೆಗೊಂಡ ಕಂಪ್ಯೂಟರ್ ತರಬೇತಿಕೇಂದ್ರ ನಿರುದ್ಯೋಗಿಗಳಿಗೆ ವರದಾನವಾಗಿ, ಈ ಭಾಗದ ಜನತೆ ಇದರ ಪ್ರಯೋಜನ ಪಡೆದುಕೊಳ್ಳಲಿ ಎಂದು ಹೇಳಿ ಶುಭಹಾರೈಸಿದರು.ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ ಕ್ಸಾಸ್ ರೂಂ ಉದ್ಘಾಟಿಸಿ ಮಾತನಾಡಿ ಬೆಳೆಯುತ್ತಿರುವ ಕಡಬದಲ್ಲಿ ಹಲವು ಅಗತ್ಯ ಸಂಸ್ಥೆಗಳು ಪ್ರಾರಂಭಗೊಂಡು ಕಡಬದ ಅಭಿವೃದ್ಧಿಯಲ್ಲಿ ಪಾಲು ಪಡೆಯುತ್ತಿದೆ, ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಅಭಿವೃದ್ಧಿ ಕಾಣಬೇಕಾದ ಇಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ಪ್ರಾರಂಭಿಸಿ, ಜನತೆ ಕಂಪ್ಯೂಟರ್ ಕಲಿಯಲು ಈ ಸಂಸ್ಥೆ ಪ್ರೇರಣೆ ನೀಡಿದೆ ಎಂದರು.ಮಂಗಳೂರು ವಕ್ಫ್ ಬೋರ್ಡ್ ಸದಸ್ಯ ಅಬ್ದುಲ್ ನಝೀರ್ ಮಠ ಮಾತನಾಡಿ ಗಾಳಿ ನೀರಿನಷ್ಟೆ ಶಿಕ್ಷಣವೂ ಅವಶ್ಯಕವಾಗಿದ್ದು, ಅದರೊಂದಿಗೆ ಕಂಪ್ಯೂಟರ್ ತಿಳಿದಿರಬೇಕಾದದ್ದು ಇಂದು ಸರ್ವೆ ಸಾಮಾನ್ಯವಾಗಿದೆ. ಈ ಬಿಟ್ಸ್ ಟ್ರೈನಿಂಗ್ ಸೆಂಟರ್‍ನಿಂದ ಇಲ್ಲಿಯ ಜನತೆ ಕಂಪ್ಯೂಟರ್ ಜ್ಞಾನ ವೃದ್ಧಿಸಿಕೊಳ್ಳಲಿ ಎಂದರು.

 

Also Read  ದ.ಕ ಜಿಲ್ಲೆಯ ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ➤ ಕರ್ನಾಟಕ ರಾಜ್ಯ ಚುನಾವಣಾ ಆಯೋಗದಿಂದಸಾರ್ವತ್ರಿಕ ರಜೆ ಘೋಷಣೆ

ಕಡಬ ಆರ್‍ಟಿಜೆಎಂ ಮಸೀದಿ ಅಧ್ಯಕ್ಷ ಎಸ್.ಅಬ್ದುಲ್ ಖಾದರ್    ಅಧ್ಯಕ್ಷತೆ ವಹಿಸಿ ಮಾತನಾಡಿ, ಕಡಬದ ಅವಶ್ಯಕತೆಗಳು ಇಂದು ಒಂದೊಂದಾಗಿ ಈಡೇರುತ್ತಿದ್ದು, ಸ್ಪರ್ದಾತ್ಮಕ ಜಗತ್ತಿನ ಅಗತ್ಯತೆಗಳಲ್ಲಿ ಒಂದಾದ ಕಂಪ್ಯೂಟರ್ ಕಲಿಕೆಯ ತರಬೇತಿ ಕೇಂದ್ರ ಪ್ರಾರಂಭಿಸುವ ಮೂಲಕ ಈ ಭಾಗದ ಜನತೆ, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಲಿ ಎಂದು ಹೇಳಿದ ಅವರು, ಕಡಬದಲ್ಲಿ ಇನ್ನೂ ಹೆಚ್ಚಿನ ಉದ್ಯಮಗಳು ಪ್ರಾರಂಭವಾಗಲಿ ಎಂದು ಶುಭಹಾರೈಸಿದರು.ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ ಕಂಪ್ಯೂಟರ್ ಸ್ವಿಚ್‍ಆನ್ ಮಾಡುವ ಮೂಲಕ ಚಾಲನೆ ನೀಡಿ ಶುಭಹಾರೈಸಿದರು.

Also Read  ಮಲೇರಿಯಾ ಹಾಗೂ ಡೆಂಗ್ಯೂ ನಿಯಂತ್ರಣ ಸಭೆ

ವೇದಿಕೆಯಲ್ಲಿ ಪ್ರಗತಿಪರ ಕೃಷಿಕರಾದ ಪ್ರಪುಲ್ಲಾ ಚಂದ್ರ ರೈ, ಶುಕ್ರಿಯ ಉಪ್ಪಿನಂಗಡಿ ಮಾಲಕ ರಶೀದ್ ಹಾಜಿ, ಜಯಚಂದ್ರ ರೈ ಉಪಸ್ಥಿತರಿದ್ದರು. ಪಾಲುದಾರರಾದ ಜೈನುದ್ದೀನ್, ಕಟ್ಟಡದ ಮಾಲಕ ಡೆನ್ನಿಸ್ ಫೆರ್ನಾಂಡಿಸ್, ಮನ್ಸೂರು ಆಲಿ ಮರ್ವೆಲ್, ಅಬ್ದುಲ್ ಹಮೀದ್ ಹ್ಯಾಬಿಟ್ಯೂಡ್ ಪುತ್ತೂರು, ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ನೌಶದ್ ಕಡಬ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಿಟ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಷನ್ ಡೈರೆಕ್ಟರ್ ಬದ್ರುದ್ದಿನ್ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ಸಂಸ್ಥೆಯ ಶಿಕ್ಷಕಿಯರಾದ ಎಲ್ಸಿಟ ಜೋಸೆಫ್, ಸಸೀಮಾ ಸಹಕರಿಸಿದರು.

error: Content is protected !!
Scroll to Top