News Kadaba

ಸರ್ಕಾರದ ಸವಲತ್ತು ತಲುಪಲು ಹಾಗೂ ಸರ್ಕಾರಕ್ಕೆ ಜನನ ಮರಣದ ಸಮಗ್ರ ಮಾಹಿತಿ ಒಂದೇ ಕಡೆ ಸಿಗುವಂತಾಗಲು► ಇ-ಜನ್ಮ ತಂತ್ರಾಂಶ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಮಂಗಳೂರು,ಫೆ.07.ಸರ್ಕಾರದ ಸವಲತ್ತು ತಲುಪಲು ಹಾಗೂ ಸರ್ಕಾರಕ್ಕೆ ಜನನ ಮರಣದ ಸಮಗ್ರ ಮಾಹಿತಿ ಒಂದೇ ಕಡೆ ಸಿಗುವಂತಾಗಲು ಇ-ಜನ್ಮ ತಂತ್ರಾಂಶದಿಂದ ಸಾಧ್ಯವಾಗಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಹೇಳಿದರು.ಅವರಿಂದು ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಜನನ ಮರಣ ನೋಂದಣಿ ನಿಯಮಗಳು ಮತ್ತು ಇ-ಜನ್ಮ ತಂತ್ರಾಂಶ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಾರ್ಯಾಗಾರಗಳಿಂದ ಎಲ್ಲರಿಗೂ ಪ್ರಯೋಜನವಾಗಲಿದೆ. ಜನರಿಗೆ ಹಾಗೂ ಸರ್ಕಾರಗಳಿಗೆ ಯೋಜನೆ ರೂಪಿಸಲು ಅಗತ್ಯ ಅಂಕಿಅಂಶಗಳ ಮಾಹಿತಿ ಪಡೆಯಲು ಇ- ತಂತ್ರಜ್ಞಾನ ನೆರವಾಗಲಿದೆ […]

ಸರ್ಕಾರದ ಸವಲತ್ತು ತಲುಪಲು ಹಾಗೂ ಸರ್ಕಾರಕ್ಕೆ ಜನನ ಮರಣದ ಸಮಗ್ರ ಮಾಹಿತಿ ಒಂದೇ ಕಡೆ ಸಿಗುವಂತಾಗಲು► ಇ-ಜನ್ಮ ತಂತ್ರಾಂಶ ಕಾರ್ಯಾಗಾರ Read More »

ಕರಾವಳಿ

ಜಂಕ್ ಆಹಾರ ಸೇವಿಸಬೇಡಿ► ಡಾ| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು,ಫೆ.07.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ನಾರ್ಲ – ಪಡೀಲ್, ತಲಪಾಡಿ ಇಲ್ಲಿ ದಿನಾಂಕ 05/02/2019ರಂದು ಚೂಂತಾರು ಸರೋಜಿನಿ ಪ್ರತಿಷ್ಠಾನ ಭಟ್ ವತಿಯಿಂದ ಉಚಿತ ದಂತ ಆರೋಗ್ಯ ಮಾಹಿತಿ ಶಿಬಿರ ಮತ್ತು ಟೂತ್ ಪೇಸ್ಟ್ ವಿತರಣಾ ಕಾರ್ಯಕ್ರಮ ಜರುಗಿತು. ಸುರಕ್ಷಾ ದಂತ ಚಿಕಿತ್ಸಾಲಯ ಇದರ ಹಿರಿಯ ದಂತ ವೈದ್ಯರು ಮತ್ತು ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕರಾದ ಡಾ|ಮುರಲೀ ಮೋಹನ್ ಚೂಂತಾರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.   ಡಾ|

ಜಂಕ್ ಆಹಾರ ಸೇವಿಸಬೇಡಿ► ಡಾ| ಚೂಂತಾರು Read More »

ಕರಾವಳಿ

ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಸೈಕಲ್ ವಿತರಣೆ

(ನ್ಯೂಸ್ ಕಡಬ) newskadaba.comರಾಮಕುಂಜ,ಫೆ.06.  ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಸೈಕಲ್ ವಿತರಣಾ ಕಾರ್ಯಕ್ರಮ ನಡೆಯಿತು.ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ .ಆರ್.ಕೆ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಶುಭಹಾರೈಸಿದರು. ಶಾಲಾ ಮುಖ್ಯಗುರು ಸತೀಶ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಗಣೇಶ್ ಕಟ್ಟಪುಣಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೇಯಾ ಮತ್ತು ಮಯೂರಿ ಪ್ರಾರ್ಥಿಸಿದರು. ಶಿಕ್ಷಕಿ ರಶ್ಮಿ.ಬಿ.ಎಸ್ ವಂದಿಸಿದರು. ಶಿಕ್ಷಕಿ ನಿಶ್ಚಿತಾ.ಎಸ್.ಜಿ ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಸೈಕಲ್ ವಿತರಣೆ Read More »

ಕರಾವಳಿ

ಗಂಡಿಬಾಗಿಲು-ನೆಹರು ತೋಟ-ವಳಕಡಮ ರಸ್ತೆಗೆ ದುರಸ್ತಿಗೆ ಒಟ್ಟು 40 ಲಕ್ಷ ರೂ► ಕೊೈಲ ಫಾರ್ಮ್‍ನೊಳಗಿನ ರಸ್ತೆ ಸಮಸ್ಯೆಗೆ ಸಚಿವರ ಭೇಟಿ: ಶಾಸಕ ಅಂಗಾರ ಭರವಸೆ

(ನ್ಯೂಸ್ ಕಡಬ) newskadaba.comನೂಜಿಬಾಳ್ತಿಲ,ಫೆ.06. ತೀರಾ ಹದಗೆಟ್ಟಿರುವ ಕೊೈಲ ಗ್ರಾಮದ ಗಂಡಿಬಾಗಿಲಿನಿಂದ ನೆಹರು ತೋಟ ತನಕ ರಸ್ತೆಗೆ ಹದಿನೈದು ಲಕ್ಷ ರೂ ಹಾಗೂ ನೆಹರು ತೋಟದಿಂದ ವಳಕಡಮ ಶಾಲಾ ಬಳಿಯವರೆಗಿನ ರಸ್ತೆಗೆ ಇಪ್ಪತೈದು ಲಕ್ಷ ರೂ ಅನುದಾನವನ್ನು ಮಳೆಹಾನಿ ಯೋಜನೆಯಲ್ಲಿ ಮಂಜೂರು ಮಾಡಲಾಗಿದೆ, ಕೊೈಲ ಕೆ.ಸಿ.ಫಾರ್ಮ್‍ನೊಳಗಿನ ರಸ್ತೆ ಸಮಸ್ಯೆಗೆ ಪರಿಹಾರಕ್ಕೆ ಸಚಿವರ ಮಟ್ಟದಲ್ಲಿ ಒತ್ತಡ ಹಾಕುವುದಾಗಿ ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.   ಕೊೈಲ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಕೊೈಲ ಗ್ರಾಮ ಪಂಚಾಯತಿ ಅಧ್ಯಕ್ಷೆ ಹೇಮಾಮೋಹನ್‍ದಾಸ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ

ಗಂಡಿಬಾಗಿಲು-ನೆಹರು ತೋಟ-ವಳಕಡಮ ರಸ್ತೆಗೆ ದುರಸ್ತಿಗೆ ಒಟ್ಟು 40 ಲಕ್ಷ ರೂ► ಕೊೈಲ ಫಾರ್ಮ್‍ನೊಳಗಿನ ರಸ್ತೆ ಸಮಸ್ಯೆಗೆ ಸಚಿವರ ಭೇಟಿ: ಶಾಸಕ ಅಂಗಾರ ಭರವಸೆ Read More »

ಕರಾವಳಿ

ನೂಜಿಬಾಳ್ತಿಲ: ಸ.ಉ.ಹಿ.ಪ್ರಾ.ಶಾಲೆಗೆ ತಾ.ಪಂ.ಅಧ್ಯಕ್ಷರ ಬೇಟಿ ► 9 ಹಾಗೂ 10ನೇ ತರಗತಿ ಪ್ರಾರಂಭಿಸಲು ಎಸ್.ಡಿ.ಎಂ.ಸಿ.ಯಿಂದ ಮನವಿ

(ನ್ಯೂಸ್ ಕಡಬ) newskadaba.comನೂಜಿಬಾಳ್ತಿಲ,ಫೆ.06. ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಕೃಷ್ಣ ಬೋರ್ಕರ್ ರವರು ಫೆ.4ರಂದು ನೂಜಿಬಾಳ್ತಿಲ ಸ.ಉ.ಹಿ.ಪ್ರಾ.ಶಾಲೆಗೆ ಬೇಟಿ ನೀಡಿದರು.ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡರ ನೇತೃತ್ವದಲ್ಲಿ ಶಾಲೆಯಲ್ಲಿ ಈಗಾಗಲೇ 8ನೇ ತರಗತಿ ಪ್ರಾರಂಭಿಸಲಾಗಿದ್ದು, ಮುಂದೆ 9 ಹಾಗೂ 10ನೇ ತರಗತಿ ಪ್ರಾರಂಭಿಸುವಂತೆ ಮನವಿ ಸಲ್ಲಿಸಲಾಯಿತು. ನೂಜಿಬಾಳ್ತಿಲ, ರೆಂಜಿಲಾಡಿ, ಇಚ್ಲಂಪಾಡಿ, ಕೊಣಾಜೆ ಪರಿಸರದ ಕಿ.ಪ್ರಾ ಹಾಗೂ ಹಿ.ಪ್ರಾ ಶಾಲಾ ವಿದ್ಯಾರ್ಥಿಗಳು ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಹತ್ತಿರವೆಲ್ಲಿಯೂ ಸರಕಾರಿ ಶಾಲೆಗಳಿಲ್ಲದೇ ಖಾಸಗಿ ಶಾಲೆಗಳನ್ನು ಅವಲಂಭಿಸುತ್ತಿದ್ದು, ನೂಜಿಬಾಳ್ತಿಲದಲ್ಲಿ ಹೈಸ್ಕೂಲ್

ನೂಜಿಬಾಳ್ತಿಲ: ಸ.ಉ.ಹಿ.ಪ್ರಾ.ಶಾಲೆಗೆ ತಾ.ಪಂ.ಅಧ್ಯಕ್ಷರ ಬೇಟಿ ► 9 ಹಾಗೂ 10ನೇ ತರಗತಿ ಪ್ರಾರಂಭಿಸಲು ಎಸ್.ಡಿ.ಎಂ.ಸಿ.ಯಿಂದ ಮನವಿ Read More »

ಕರಾವಳಿ

ಕನ್ವಾರೆ ಸಾರಿಮಂಟಮೆ ಶ್ರೀ ರಾಜನ್ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ

(ನ್ಯೂಸ್ ಕಡಬ) newskadaba.comಕಡಬ,ಫೆ.06. ನೂಜಿಬಾಳ್ತಿಲ ಗ್ರಾಮದ ಕನ್ವಾರೆ ಸಾರಿಮಂಟಮೆಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ರಾಜನ್ ದೈವದ ನೇಮೋತ್ಸವ ಫೆ.3 ಹಾಗೂ 4ರಂದು ನಡೆಯಿತು.ಫೆ.3ರಂದು ಸಾರಿಮಂಟಮೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಕುರಿಯಾಳ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಪ್ರಧಾನ ಅರ್ಚಕರಾದ ವೆಂಕಟರಮಣ ಅಮ್ಮಣ್ಣಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ರಾತ್ರಿ ಬಾಳ್ತಿಲ ಗುತ್ತುಮನೆಯಿಂದ ಶ್ರೀ ರಾಜನ್ ದೈವದ ಭಂಡಾರ ಸಾರಿಮಂಟಮೆಗೆ ಬ್ಯಾಂಡ್ ವಾದ್ಯಗಳೊಂದಿಗೆ ತರಲಾಯಿತು. ರಾತ್ರಿ ಸ್ಥಳೀಯ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದರೆ, ಉದ್ಯಮಿ ಬಾಲಕೃಷ್ಣ

ಕನ್ವಾರೆ ಸಾರಿಮಂಟಮೆ ಶ್ರೀ ರಾಜನ್ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ Read More »

ಕರಾವಳಿ

ಪುಣ್ಯತಿಥಿ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯ ಮೇಲೆ ►ಯುವಕರ ಗುಪೊಂದರಿಂದ ಹಲ್ಲೆ

(ನ್ಯೂಸ್ ಕಡಬ) newskadaba.comಕಡಬ,ಫೆ.05.ಸಂಬದಿಕಕರ ಮನೆಯಿಂದ  ಪುಣ್ಯತಿಥಿ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಯುವಕರ ಗುಪೊಂದು ಹಲ್ಲೆ ನಡೆಸಿದ ಪ್ರಕರಣ ಕಡಬ ಪೊಲೀಸ್ ಠಾಣೆಯಿಂದ ವರದಿಯಾಗಿದೆ.ಪುತ್ತೂರು ತಾಲೂಕು ದೋಳ್ಪಾಡಿ ಗ್ರಾಮದ ಕೂರೇಲು ನಿವಾಸಿಯಾದ ವಿಶ್ವನಾಥ ಎಂಬವರ ಮೇಲೆ  ಅದೇ ಗ್ರಾಮದ ವಿಶ್ವನಾಥ, ದಯಾನಂದ, ಪುರಂದರ, ಯುವರಾಜ್, ಎಂಬವರು ಹಲ್ಲೆನಡೆಸಿದ್ದಾರೆ. ಯುವಕರ  ಗುಂಪು ವಿಶ್ವನಾಥ,ರಿಗೆದೋಣ್ಣೆಯಿಂದ ಹೊಡೆದ ಪರಿಣಾಮ ಅವರಿಗೆ ವಿಪರೀತ ಗಾಯವಾಗಿದ್ದು  ಚಿಕಿತ್ಸೆ ಗಾಗಿ  ಕಡಬ ಸರಕಾರಿ ಆಸ್ಬತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ

ಪುಣ್ಯತಿಥಿ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯ ಮೇಲೆ ►ಯುವಕರ ಗುಪೊಂದರಿಂದ ಹಲ್ಲೆ Read More »

ಕರಾವಳಿ

ಬಂಟ್ವಾಳ: ಯಕ್ಷಗಾನ ನೋಡಲು ಹೋದ ವ್ಯಕ್ತಿ ಶವವಾಗಿ ಪತ್ತೆ

(ನ್ಯೂಸ್ ಕಡಬ) newskadaba.comಬಂಟ್ವಾಳ,ಫೆ.05.ಯಕ್ಷಗಾನ ನೋಡಲು ಹೋದವರು  ನದಿಗೆ ಬಿದ್ದು ಮೃತ ಪಟ್ಟ ಘಟನೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಬಂಟ್ವಾಳ ತಾಲೂಕು ಕಸಬ ಗ್ರಾಮದ ಎಸ್.ವಿ.ಎಸ್ ಕಾಲೇಜು ರಸ್ತೆ  ನಿವಾಸಿ ಪ್ರವೀಣ್  ಕುಮಾರ್ ಎಂದು ಗುರುತಿಸಲಾಗಿದೆ. ಪ್ರವೀಣ್  ಕುಮಾರ್ ರವರು ಸ್ಪರ್ಶ ಕಲಾಮಂದಿರದಲ್ಲಿನ ನಡೆಯುವ ಯಕ್ಷಗಾನ  ಸಂಜೆ  ವೇಳೆ ಯಕ್ಷಗಾನ ನೋಡಲೆಂದು  ಮನೆಯಿಂದ ತೆರಳಿದ್ದರು. ಆದರೆ ತುಂಬಾ ಹೊತ್ತಾದರೂ ಮನೆಗೆ ಹಿಂತಿರುಗದ ಕಾರಣ ಮನೆಯವರು ಹುಡುಕಾಡಿದಾಗ ಮೂಡ ಗ್ರಾಮದ ನೇತ್ರಾವತಿ ನದಿಯ ಹೊಸ

ಬಂಟ್ವಾಳ: ಯಕ್ಷಗಾನ ನೋಡಲು ಹೋದ ವ್ಯಕ್ತಿ ಶವವಾಗಿ ಪತ್ತೆ Read More »

ಕರಾವಳಿ

ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ ಅನ್ನದಾತನಿಗೆ ಬಂಪರ್ ಕೊಡುಗೆ

(ನ್ಯೂಸ್ ಕಡಬ) newskadaba.comಬೆಂಗಳೂರು ,ಫೆ.05.ಬೆಂಗಳೂರು :  ಮುಖ್ಯಮಂತ್ರಿ  ಎಚ್.ಡಿ ಕುಮಾರಸ್ವಾಮಿ ಬಜೆಟ್‍ ಮಂಡನೆಗೆ ಭರದ ಸಿದ್ಧತೆ ಕೈಗೊಂಡಿದ್ದಾರೆ. ಇದೇ ವೇಳೆ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ರೈತರಿಗೆ  ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ.  ಈ ಬಾರಿ ರೈತಪರ ಬಜೆಟ್‌ ಮಂಡಿಸಲು ಮುಖ್ಯಮಂತ್ರಿ ಭರದ ಸಿದ್ಧತೆ ಕೈಗೊಂಡಿದ್ದು, ರೈತರ ಬೆಳೆಸಾಲ ಯೋಜನೆಗೆ ಬಾಕಿ ಉಳಿದಿರುವ ಎಲ್ಲ ಹಣವನ್ನೂ ಹಂಚಿಕೆ ಮಾಡುವ ಪ್ರಯತ್ನದಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ಮಂಡಿಸಿದ್ದ ಬಜೆಟ್‌ ಗಾತ್ರ 2.18 ಲಕ್ಷ

ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ ಅನ್ನದಾತನಿಗೆ ಬಂಪರ್ ಕೊಡುಗೆ Read More »

ಕರ್ನಾಟಕ

ಬಾಯಿ ಕ್ಯಾನ್ಸರ್ ತಡೆಗಟ್ಟಬಹುದು ► ಹರ್ಷದ್ ವರ್ಕಾಡಿ

(ನ್ಯೂಸ್ ಕಡಬ) newskadaba.com ಕಡಬ,ಫೆ.05.“ವಿಶ್ವ ಕ್ಯಾನ್ಸರ್ ತಿಳುವಳಿಕಾ ದಿನ ಫೆಬ್ರವರಿ 4” ಇದರ ಅಂಗವಾಗಿ ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ, ಮಂಜೇಶ್ವರ ಇಲ್ಲಿ ಉಚಿತ ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಮಾಹಿತಿ ಶಿಬಿರವನ್ನು ಮಾನ್ಯ ಹರ್ಷದ್ ವರ್ಕಾಡಿ, ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಾಯಿ ಕ್ಯಾನ್ಸರ್ ಎನ್ನುವುದು ಹೆಚ್ಚಾಗಿ ಎಲೆ ಅಡಿಕೆ, ಹೊಗೆ ಸೊಪ್ಪು, ಗುಟ್ಕಾ, ಪಾನ್ ಪರಾಗ್, ಬೀಡಿ ಸಿಗರೇಟ್, ಮುಂತಾದ ತಂಬಾಕು ಉತ್ಪನ್ನಗಳಿಂದ ಬರುತ್ತದೆ

ಬಾಯಿ ಕ್ಯಾನ್ಸರ್ ತಡೆಗಟ್ಟಬಹುದು ► ಹರ್ಷದ್ ವರ್ಕಾಡಿ Read More »

ಕರಾವಳಿ
Scroll to Top