ಆತೂರು: ಹಫ್ವಾ ಕುಟುಂಬ ಸಮ್ಮಿಲನ-2020 ➤ ಸಂಘಟಿತ ಕುಟುಂಬ ಸಂಬಂಧದಿಂದ ಸಮುದಾಯ ಸಬಲೀಕರಣ ಸಾಧ್ಯ-ಹೆಚ್. ಮಹಮ್ಮದ್ ಆಲಿ
(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.17. ಕುಟುಂಬ ಸಂಬಂಧವನ್ನು ಹತ್ತಿರ ಮಾಡಿಕೊಂಡು ಆ ಮೂಲಕ ಸಂಘಟಿತರಾಗಿ ಪರಸ್ಪರ ಸುಖ ದುಃಖಗಳಲ್ಲಿ ಕೈಜೋಡಿಸಿಕೊಂಡು ಬದುಕಿದರೆ ಸಮುದಾಯದ ಸಬಲೀಕರಣ ಸಾಧ್ಯ ಎಂದು ಪುತ್ತೂರು ನಗರ ಸಭೆಯ ಮಾಜಿ ಸದಸ್ಯ ಹೆಚ್. ಮಹಮ್ಮದ್ ಆಲಿ ಹೇಳಿದರು. ಅವರು ಫೆ. 16ರಂದು ಆತೂರುನಲ್ಲಿ ಹಫ್ವಾ ಕುಟುಂಬ ಸಮ್ಮಿಲನ-2020 ಸಮಾರಂಭದಲ್ಲಿ ಮಾತನಾಡಿ ಸಮುದಾಯದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಈ ಮೂಲಕ ಸಮುದಾಯದಲ್ಲಿ ಕಾಡುವ ಇನ್ನಷ್ಟು ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು. ಆತೂರು […]

