News Kadaba

ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು – 13 ಮಂದಿ ಸಾವು, ಹಲವರು ಗಂಭೀರ

(ನ್ಯೂಸ್‌ ಕಡಬ) newskadaba.com,ಡಿ.29: ದಕ್ಷಿಣ ಮೆಕ್ಸಿಕೋದಲ್ಲಿ ಇಂಟರ್‌ಓಷಿಯಾನಿಕ್ ರೈಲು ಹಳಿ ತಪ್ಪಿ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಪಘಾತದ ಪರಿಣಾಮವಾಗಿ ಪೆಸಿಫಿಕ್ ಮಹಾಸಾಗರವನ್ನು ಮೆಕ್ಸಿಕೋ ಕೊಲ್ಲಿಯೊಂದಿಗೆ ಸಂಪರ್ಕಿಸುವ ರೈಲು ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ರೈಲು ನಿಜಾಂಡಾ ಪಟ್ಟಣದ ಬಳಿ ಹಾದುಹೋಗುವಾಗ ಹಳಿ ತಪ್ಪಿರುವುದು ತಿಳಿದು ಬಂದಿದೆ. ಈ ರೈಲು ಅಪಘಾತವು ಓಕ್ಸಾಕಾ ಮತ್ತು ವೆರಾಕ್ರೂಜ್ ನಡುವಿನ ಮಾರ್ಗದಲ್ಲಿ ಸಂಭವಿಸಿದೆ. ಅಪಘಾತದ ವೇಳೆಯಲ್ಲಿ 241 […]

ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು – 13 ಮಂದಿ ಸಾವು, ಹಲವರು ಗಂಭೀರ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾರವಾರ ಬಳಿ ರಾಷ್ಟ್ರಪತಿ ಮುರ್ಮು ಸಬ್‌ಮರಿನ್‌‌ನಲ್ಲಿ ದಾಖಲೆ ಪಯಣ

(ನ್ಯೂಸ್‌ ಕಡಬ) newskadaba.com,ಡಿ.29: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರವಾರ ಬಳಿಯ ಕದಂಬ ನೌಕಾನೆಲೆಯಲ್ಲಿನ ಐಎನ್ಎಸ್ ವಾಗ್ಶೀರ್ ಸಬ್ ಮರಿನ್‌ನಲ್ಲಿ ಸುಮಾರು 2 ತಾಸುಗಳಿಗೂ ಹೆಚ್ಚು ಸಮಯ ಪಯಣಿಸಿದರು. ಸಬ್ ಮರಿನ್‌ನಲ್ಲಿ ಪ್ರಯಾಣಿಸಿದ 2ನೇ ರಾಷ್ಟಪತಿ ಎಂಬ ದಾಖಲೆ ಬರೆದರು. ಐಎನ್ಎಸ್ ವಾಗ್ಶೀರ್ (ಎಸ್26) ಅನ್ನು ಮುಂಬೈನ ಮಜಗಾವ್‌ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದ್ದು ಇದು ಭಾರತದ ಪ್ರಾಜೆಕ್ಟ್ 75 (ಸ್ಕಾರ್ಪಿನ್-ಕ್ಲಾಸ್)ನ 6ನೇ ಮತ್ತು ಅಂತಿಮ ಜಲಾಂತರ್ಗಾಮಿ ನೌಕೆಯಾಗಿದೆ. ಫ್ರಾನ್ಸ್‌ನ ನೇವಲ್ ಗ್ರೂಪ್‌ನ ಸಹಯೋಗದೊಂದಿಗೆ ತಂತ್ರಜ್ಞಾನ ವರ್ಗಾವಣೆಗಾಗಿ

ಕಾರವಾರ ಬಳಿ ರಾಷ್ಟ್ರಪತಿ ಮುರ್ಮು ಸಬ್‌ಮರಿನ್‌‌ನಲ್ಲಿ ದಾಖಲೆ ಪಯಣ Read More »

ಬ್ರೇಕಿಂಗ್ ನ್ಯೂಸ್

ಮಂಗಳೂರು ಕಂಬಳದಲ್ಲಿ ದಾಖಲೆ ಸೃಷ್ಟಿಸಿದ ಕೋಣಗಳು: ಓಡಿಸಿದ ಮಾಸ್ತಿಕಟ್ಟೆ ಸ್ವರೂಪ್‌ ಕೂಡಾ ಸಾರ್ವತ್ರಿಕ ದಾಖಲೆ

(ನ್ಯೂಸ್‌ ಕಡಬ) newskadaba.com,ಡಿ.29 ಮಂಗಳೂರು: ಬಂಗ್ರ ಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿಯಲ್ಲಿ ನಡೆದ ರಾಮ – ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳ ಕೂಟ ಭಾನುವಾರ ಸಮಾರೋಪಗೊಂಡಿದ್ದು, ನೇಗಿಲು ಹಿರಿಯ ವಿಭಾಗದ ಫೈನಲ್‌ ಸ್ಪರ್ಧೆಯಲ್ಲಿ 80 ಬಡಗಬೆಟ್ಟು ಶ್ರೀಕ ಸಂದೀಪ್‌ ಶೆಟ್ಟಿ ಅವರ ಕೋಣಗಳು 125 ಮೀ. ಉದ್ದದ ಕಂಬಳ ಕರೆಯನ್ನು ಕೇವಲ 10.87 ಸೆಕೆಂಡ್‌ನಲ್ಲಿ ತಲುಪಿ ನೂತನ ದಾಖಲೆ ನಿರ್ಮಿಸಿದವು. ಈ ದಾಖಲೆಯನ್ನು 100 ಮೀ.ಗೆ ಪರಿಗಣಿಸಿದಾಗ 8.69 ಸೆಕೆಂಡ್‌ಗಳ ದಾಖಲೆ ಎಂದು ಪರಿಗಣಿಸಲಾಗುತ್ತದೆ. ‘ಗಾಂಧಿ ಮೈದಾನ

ಮಂಗಳೂರು ಕಂಬಳದಲ್ಲಿ ದಾಖಲೆ ಸೃಷ್ಟಿಸಿದ ಕೋಣಗಳು: ಓಡಿಸಿದ ಮಾಸ್ತಿಕಟ್ಟೆ ಸ್ವರೂಪ್‌ ಕೂಡಾ ಸಾರ್ವತ್ರಿಕ ದಾಖಲೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಮೀ ರೈಲ್ವೆ ಮಾರ್ಗ ವಿದ್ಯುದ್ದೀಕರಣ ಕಾಮಗಾರಿ ಪೂರ್ಣ

(ನ್ಯೂಸ್‌ ಕಡಬ) newskadaba.com,ಡಿ.29 ಮಂಗಳೂರು: ಭಾರತೀಯ ರೈಲ್ವೆಯಲ್ಲಿ ಅತ್ಯಂತ ಸವಾಲಿನ ರೈಲ್ವೆ ಮಾರ್ಗವಾಗಿರುವ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಮೀ ಉದ್ದದ ಘಟ್ಟದ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಯನ್ನು ರೈಲ್ವೆ ಇಲಾಖೆ ಪೂರ್ಣಗೊಳಿಸಿದ್ದು, ಪ್ರಯೋಗಾತ್ಮಕವಾಗಿ ವಿದ್ಯುತ್ ಲೋಕೊಮೋಟಿವ್ ಚಾಲನೆಯನ್ನು ಭಾನುವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಭಾರತೀಯ ರೈಲ್ವೆಯಲ್ಲಿ ಅತ್ಯಂತ ಸವಾಲಿನ ಕೆಲಸವಾಗಿರುವ ಘಾಟ್ ವಿಭಾಗವು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಲೋ ಮೀಟರ್​ ಉದ್ದದ ಮಾರ್ಗವನ್ನು ಒಳಗೊಂಡಿದ್ದು, ಇದು ಭಾರತೀಯ ರೈಲ್ವೆಯ ಅತ್ಯಂತ ತಾಂತ್ರಿಕ

ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಮೀ ರೈಲ್ವೆ ಮಾರ್ಗ ವಿದ್ಯುದ್ದೀಕರಣ ಕಾಮಗಾರಿ ಪೂರ್ಣ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ

(ನ್ಯೂಸ್‌ ಕಡಬ) newskadaba.com,ಡಿ.29 ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ  ವಿವಿಧ ಟ್ರೇಡ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ, ಟಿಪ್ಲೊಮಾ ಮತ್ತು ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 501 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜನವರಿ 12 ಆಗಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ iocl.com ಅಥವಾ ಅಪ್ರೆಂಟಿಸ್‌ಶಿಪ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹೊಸ ವರ್ಷದ ಮೆಸೇಜ್ ಓಪನ್ ಮಾಡೋ ಮುನ್ನ ಎಚ್ಚರ!

(ನ್ಯೂಸ್‌ ಕಡಬ) newskadaba.com,ಡಿ.29 ಬೆಂಗಳೂರು: ಹಬ್ಬಗಳು, ಹೊಸ ವರ್ಷದಂತಹ ವಿಶೇಷ ಸಂದರ್ಭಗಳನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ನಕಲಿ ಜಾಲವನ್ನು ಹರಡುತ್ತಿದ್ದಾರೆ. ಆಫರ್‌ಗಳು, ಗಿಫ್ಟ್‌ಗಳು, ಕ್ಯಾಶ್‌ಬ್ಯಾಕ್ ಎನ್ನುವ ಆಕರ್ಷಕ ಸಂದೇಶಗಳನ್ನು ವಾಟ್ಸ್‌ಆಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಕಳುಹಿಸಲಾಗುತ್ತಿದೆ. ಇಂತಹ ಸಂದೇಶಗಳಲ್ಲಿರುವ ಲಿಂಕ್‌ಗಳನ್ನು ತಿಳಿಯದೇ ಒಂದು ಬಾರಿ ಕ್ಲಿಕ್ ಮಾಡಿದರೂ ಬ್ಯಾಂಕ್ ಖಾತೆ ಲೂಟಿ ಆಗುವ ಸಾಧ್ಯತೆ ಹೆಚ್ಚಿದೆ… ಈ ಹಿನ್ನೆಲೆಯಲ್ಲಿ ಜನರು ಮೋಸದ ಜಾಲಕ್ಕೆ ಬಲಿಯಾಗದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಪರಿಚಿತ ಲಿಂಕ್‌ಗಳು, ಅನುಮಾನಾಸ್ಪದ

ಹೊಸ ವರ್ಷದ ಮೆಸೇಜ್ ಓಪನ್ ಮಾಡೋ ಮುನ್ನ ಎಚ್ಚರ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು – ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,ಡಿ.29 ಉಡುಪಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳ್ಳತನ ಆಗಿರುವ ಬಗ್ಗೆ ದೂರು ದಾಖಲಾಗಿದೆ… ಮುಂಬೈ ಚೆಂಬೂರಿನ ಹೆಲ್ಮೀನಾ ಸಾಲಿನ್ಸ್, ತಮ್ಮ ಮಗಳು, ಪತಿ ಮತ್ತು ಮೊಮ್ಮಗಳೊಂದಿಗೆ ಡಿ.26ರಂದು ಮಧ್ಯಾಹ್ನ ಮತ್ಸ್ಯಗಂಧ ರೈಲಿನಲ್ಲಿ ಒಡವೆಗಳಿದ್ದ ಒಂದು ವ್ಯಾನಿಟಿ ಬ್ಯಾಗ್, ಬಟ್ಟೆಗಳಿದ್ದ ಹ್ಯಾಂಡ್ ಬ್ಯಾಗ್ ಮತ್ತು ಸೂಟ್ಕೇಸ್ ಗಳೊಂದಿಗೆ ಉಡುಪಿಗೆ ಪ್ರಯಾಣಿಸುತಿದ್ದರು. ಹೆಲ್ಮೀನಾ ಸಾಲಿನ್ಸ್ ಒಡವೆಗಳಿದ್ದ ವ್ಯಾನಿಟಿ ಬ್ಯಾಗನ್ನು ತನ್ನ ತಲೆಯ ಹತ್ತಿರ ಇರಿಸಿ ರಾತ್ರಿ ಮಲಗಿದ್ದರು. ಡಿ.27ರಂದು ಬೆಳಗ್ಗೆ 6.10ರ ಸುಮಾರಿಗೆ ಮುರ್ಡೇಶ್ವರ

ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು – ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳುವ ಹಂತದಲ್ಲಿದೆ ; ಟ್ರಂಪ್

(ನ್ಯೂಸ್‌ ಕಡಬ) newskadaba.com,ಡಿ.29:  ರಷ್ಯಾ ಉಕ್ರೇನ್‌ ನಡುವಿನ ಯುದ್ಧ ಕೊನೆಗೊಳ್ಳುವ ಹಂತದಲ್ಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.ಉಕ್ರೇನ್‌ ಅಧ್ಯಕ್ಷ ವ್ಲಾಡಿಮಿರ್‌ ಝೆಲೆನ್ಸ್ಕಿ ಅವರೊಂದಿಗೆ ತನ್ನ ಖಾಸಗಿ ನಿವಾಸ ಫ್ಲೋರಿಡಾದ ಮಾರ್‌-ಎ-ಲಾಗೊದಲ್ಲಿ ಟ್ರಂಪ್‌ ಮಹತ್ವದ ಸಭೆ ನಡೆಸಿದರು.ಎರಡು ಗಂಟೆಗಳ ಕಾಲ ನಡೆದ ಸಭೆಯ ಬಳಿಕ ಮಾತನಾಡಿದ ಟ್ರಂಪ್‌, ನಾವು ಎರಡೂ ಕಡೆಯವರೊಂದಿಗೆ ಬಹಳ ಹತ್ತಿರವಾಗಿದ್ದೇವೆ ಎಂದರು. ಯುದ್ಧವನ್ನು ಕೊನೆಗೊಳಿಸುವ ಕರಡು ಒಪ್ಪಂದ ಬಹುತೇಕ ಪೂರ್ಣಗೊಂಡಿದೆ. ಎರಡೂ ಕಡೆಯವರು ಆ ಯುದ್ಧವನ್ನು ಕೊನೆಗೊಳಿಸುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ

ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳುವ ಹಂತದಲ್ಲಿದೆ ; ಟ್ರಂಪ್ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಮುಂದುವರಿದ ತೀವ್ರ ಚಳಿ

(ನ್ಯೂಸ್‌ ಕಡಬ) newskadaba.com,ಡಿ.29:  ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ವರ್ಷಾಂತ್ಯದ ವರೆಗೂ ರಾಜ್ಯದಲ್ಲಿ ಒಣ ಹವೆಯೇ ಇರಲಿದ್ದು, ಹೊಸ ವರ್ಷಕ್ಕೆ ಮಳೆಯ ಸಿಂಚನ ಆಗಬಹುದೆಂದು ಇಲಾಖೆ ತಿಳಿಸಿದೆ.  

ರಾಜ್ಯದಲ್ಲಿ ಮುಂದುವರಿದ ತೀವ್ರ ಚಳಿ Read More »

ಕರ್ನಾಟಕ

ನಟನೆಗೆ ವಿದಾಯ ಹೇಳಿದ ತಮಿಳು ನಟ ವಿಜಯ್

(ನ್ಯೂಸ್‌ ಕಡಬ) newskadaba.com,ಡಿ.29:  ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ ಅಧಿಕೃತವಾಗಿ ನಟನೆಯಿಂದ ನಿವೃತ್ತಿ ಘೋಷಿಸಿದ್ದಾರೆ. ಸುಮಾರು 33 ವರ್ಷಗಳ ಕಾಲ ನಾಯಕನಾಗಿ ಸಿನಿಪಯಣ ನಡೆಸಿದ ವಿಜಯ್, ಅಭಿಮಾನಿಗಳ ಭಾರೀ ಬೆಂಬಲದ ನಡುವೆ ಈ ನಿರ್ಧಾರ ಪ್ರಕಟಿಸಿ ಭಾವುಕರಾದರು. 51 ವರ್ಷದ ನಟ ಇನ್ನು ಮುಂದೆ ಸಂಪೂರ್ಣವಾಗಿ ರಾಜಕೀಯದತ್ತ ಗಮನ ಹರಿಸಲಿದ್ದಾರೆ. ಮಲೇಷ್ಯಾದಲ್ಲಿ ನಡೆದ ‘ಜನ ನಾಯಗನ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್, ಈ ಚಿತ್ರದ ನಂತರ ನಟನೆಯಿಂದ ದೂರ ಸರಿಯುವುದಾಗಿ ಘೋಷಿಸಿದರು. “ಜನರು

ನಟನೆಗೆ ವಿದಾಯ ಹೇಳಿದ ತಮಿಳು ನಟ ವಿಜಯ್ Read More »

ಸಿನಿಮಾ
Scroll to Top