ಮಂಗಳೂರು ಕಂಬಳದಲ್ಲಿ ದಾಖಲೆ ಸೃಷ್ಟಿಸಿದ ಕೋಣಗಳು: ಓಡಿಸಿದ ಮಾಸ್ತಿಕಟ್ಟೆ ಸ್ವರೂಪ್‌ ಕೂಡಾ ಸಾರ್ವತ್ರಿಕ ದಾಖಲೆ

(ನ್ಯೂಸ್‌ ಕಡಬ) newskadaba.com,ಡಿ.29 ಮಂಗಳೂರು: ಬಂಗ್ರ ಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿಯಲ್ಲಿ ನಡೆದ ರಾಮ – ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳ ಕೂಟ ಭಾನುವಾರ ಸಮಾರೋಪಗೊಂಡಿದ್ದು, ನೇಗಿಲು ಹಿರಿಯ ವಿಭಾಗದ ಫೈನಲ್‌ ಸ್ಪರ್ಧೆಯಲ್ಲಿ 80 ಬಡಗಬೆಟ್ಟು ಶ್ರೀಕ ಸಂದೀಪ್‌ ಶೆಟ್ಟಿ ಅವರ ಕೋಣಗಳು 125 ಮೀ. ಉದ್ದದ ಕಂಬಳ ಕರೆಯನ್ನು ಕೇವಲ 10.87 ಸೆಕೆಂಡ್‌ನಲ್ಲಿ ತಲುಪಿ ನೂತನ ದಾಖಲೆ ನಿರ್ಮಿಸಿದವು.

ಈ ದಾಖಲೆಯನ್ನು 100 ಮೀ.ಗೆ ಪರಿಗಣಿಸಿದಾಗ 8.69 ಸೆಕೆಂಡ್‌ಗಳ ದಾಖಲೆ ಎಂದು ಪರಿಗಣಿಸಲಾಗುತ್ತದೆ. ‘ಗಾಂಧಿ ಮೈದಾನ ಸಂತು’ ಹಾಗೂ ‘ಸುರತ್ಕಲ್‌ ಪಾಂಚ’ ಕೋಣಗಳು ದಾಖಲೆ ನಿರ್ಮಿಸಿದ್ದು, ಈ ಕೋಣಗಳನ್ನು ಓಡಿಸುವ ಮೂಲಕ ಮಾಸ್ತಿಕಟ್ಟೆ ಸ್ವರೂಪ್‌ ಸಾರ್ವತ್ರಿಕ ದಾಖಲೆಗೆ ಕಾರಣರಾದರು.

ಕಕ್ಯಪದವಿನಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ 8.78 ಸೆಕೆಂಡ್‌ನಲ್ಲಿ100 ಮೀ. ದೂರ ದಾಟಿ ದಾಖಲೆ ಬರೆದಿದ್ದರು. ಭಾನುವಾರ ಸಂಜೆ ನಡೆದ ಮಂಗಳೂರು ಕಂಬಳದ ಫೈನಲ್‌ನಲ್ಲಿ 100 ಮೀ. ದೂರವನ್ನು 8.69 ಸೆಕೆಂಡ್‌ನಲ್ಲಿ ದಾಟುವ ಮೂಲಕ ಸಾರ್ವತ್ರಿಕ ದಾಖಲೆಯನ್ನು ಮಾಸ್ತಿಕಟ್ಟೆ ಸ್ವರೂಪ್‌ ತನ್ನದಾಗಿಸಿದ್ದಾರೆ. ಕಳೆದ ವರ್ಷ ಜೂನಿಯರ್‌ ವಿಭಾಗದಲ್ಲಿ ಮುನಿಯಾಲ್‌ ಉದಯ್‌ ಕುಮಾರ್‌ ಶೆಟ್ಟಿ ಅವರ ಕೋಣದ ಮೂಲಕ ಹಲವು ಪ್ರಶಸ್ತಿ ಪಡೆದಿದ್ದರು.

ಫಲಿತಾಂಶ
ಅಡ್ಡ ಹಲಗೆ: ಪ್ರಥಮ- ಇರುವೈಲು ದೊಡ್ಡಗುತ್ತು ಜಗದೀಶ್‌ ಎಂ ಶೆಟ್ಟಿ ‘ಎ'(11.68), ಹಲಗೆ ಮುಟ್ಟಿದವರು- ತೆಕ್ಕಟ್ಟೆ ಸುಧೀರ್‌ ದೇವಾಡಿಗ. ದ್ವಿತೀಯ- ನಾರ್ಯಗುತ್ತು ಕುವೆತ್ತಬೈಲು ಸಂತೋಷ್‌ ರೈ ಬೊಳ್ಯಾರು(11.83), ಹಲಗೆ ಮುಟ್ಟಿದವರು- ಬೈಂದೂರು ಮಹೇಶ್‌ ಪೂಜಾರಿ.

 

Scroll to Top