News Kadaba

1 ನೇ ತರಗತಿಗೆ 6 ವರ್ಷ ಕಡ್ಡಾಯ – ರಾಜ್ಯ ಸರ್ಕಾರ ಆದೇಶ                          

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.20   ರಾಜ್ಯ  ಸರ್ಕಾರವು  1ನೇ ತರಗತಿಗೆ  ಮಕ್ಕಳನ್ನು  ಶಾಲೆಗೆ  ಸೇರಿಸುವ  ಸಂಬಂಧ  ಮಹತ್ವದ  ಆದೇಶವನ್ನು ಹೊರಡಿಸಿದ್ದು, 1ನೇ ತರಗತಿ ದಾಖಲಾತಿಗೆ 6  ವರ್ಷ ಪೂರ್ಣ  ಕಡ್ಡಾಯ ಮಾಡಿದೆ ಎಂದು ತಿಳಿದುಬಂದಿದೆ. ರಾಜ್ಯ ಸರ್ಕಾರವು  ಶೈಕ್ಷಣಿಕ  ಸಾಲಿನಿಂದ  ಅನ್ವಯವಾಗುವಂತೆ  ಜೂನ್  1 ನೇ  ತಾರೀಖಿಗೆ  ಕಡ್ಡಾಯವಾಗಿ 6  ವರ್ಷಗಳು ಪೂರ್ಣಗೊಂಡಿರುವ ಮಗುವನ್ನು 1 ನೇ  ತರಗತಿಗೆ  ದಾಖಲಿಸಲು  ವಯೋಮಿತಿಯನ್ನು ನಿಗದಿಪಡಿಸಿ  ಆದೇಶ  ಹೊರಡಿಸಿದೆ ಎನ್ನಲಾಗಿದೆ. ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 6  ವರ್ಷಗಳು […]

1 ನೇ ತರಗತಿಗೆ 6 ವರ್ಷ ಕಡ್ಡಾಯ – ರಾಜ್ಯ ಸರ್ಕಾರ ಆದೇಶ                           Read More »

ಕರ್ನಾಟಕ

ತಟ್ಟೆಯಲ್ಲಿ ಅನ್ನ ಕೊಟ್ಟಾಗ ತಿನ್ನಲಿಲ್ಲ, ಕೈತುತ್ತು ಕೊಟ್ಟಾಗ ಹೊಟ್ಟೆ ತುಂಬಾ ಊಟ ಮಾಡಿದ ಕೋತಿ

(ನ್ಯೂಸ್ ಕಡಬ) newskadaba.com  ಕೊಪ್ಪಳ , ಡಿ 20 :  ಜಬ್ಬಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಕೋತಿಗೆ ತಾಯಿಯ ರೀತಿಯಲ್ಲಿ ಊಟ ಮಾಡಿಸಿರುವ ಘಟನೆಯೊಂದು ನಡೆದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೆಲ್ಲ ಮಧ್ಯಾಹ್ನ ಬಿಸಿಯೂಟವನ್ನು ಸೇವಿಸಿತ್ತಿರುವುದನ್ನು ಕೋತಿಯೊಂದು ಕುಳಿತು ಕೊಂಡು ನೋಡುತ್ತಿತ್ತು. ಇದನ್ನು ಗಮನಿಸಿದ ಶಾಲೆಯ ಮುಖ್ಯೋಪಾಧ್ಯಾಯ ಇಬ್ರಾಹಿಂ ತಟ್ಟೆಯಲ್ಲಿ ಊಟ ವನ್ನು ಕೋತಿಯ ಬಳಿ ಇಟ್ಟರು. ಆಗ ಬರಿ ಅನ್ನವನ್ನು ನೋಡಿದ ಕೋತಿ  ಊಟವನ್ನು ಸೇವಿಸಲಿಲ್ಲ. ಮತ್ತೆ ಅನ್ನವಿದ್ದ ತಟ್ಟೆಗೆ

ತಟ್ಟೆಯಲ್ಲಿ ಅನ್ನ ಕೊಟ್ಟಾಗ ತಿನ್ನಲಿಲ್ಲ, ಕೈತುತ್ತು ಕೊಟ್ಟಾಗ ಹೊಟ್ಟೆ ತುಂಬಾ ಊಟ ಮಾಡಿದ ಕೋತಿ Read More »

ಕರ್ನಾಟಕ

ಸ್ಮಶಾನದ ಬಾವಿಯಲ್ಲಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆ …..!  

(ನ್ಯೂಸ್ ಕಡಬ) newskadaba.com  ವಿಜಯಪುರ, ಡಿ.20 ಸ್ಮಶಾನದ ಬಾವಿಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾದ ಘಟನೆ ವಿಜಯಪುರ ನಗರದ ದೇವಗಿರಿ ಎಂಬಲ್ಲಿ ಸಂಭವಿಸಿದೆ. ಸ್ಮಶಾನದ ಬಾವಿಯಲ್ಲಿನ ಮೋಟರ್ ಸ್ಟಾರ್ಟ್ ಮಾಡಲು ಹೋದಾಗ ಶಿಶುವಿನ ಶವ ಪತ್ತೆಯಾಗಿದ್ದು, ಪಾಪಿಗಳು ಆಗತಾನೆ ಜನಿಸಿದ ನವಜಾತ ಹೆಣ್ಣು ಶಿಶುವನ್ನು ಬಾವಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಹೆಣ್ಣು ಮಗುವಾಗಿದೆ ಎಂಬ ಕಾರಣಕ್ಕೆ ಯಾರು ಬಾವಿಯಲ್ಲಿ ಬಿಸಾಕಿ ಹೋಗಿದ್ದಾರೆ ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಆದರ್ಶ ನಗರ ಪಿಎಸ್ಐ ಯತೀಂದ್ರ ಭೇಟಿ ನೀಡಿ

ಸ್ಮಶಾನದ ಬಾವಿಯಲ್ಲಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆ …..!   Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ಮೈಸೂರು: ಹೆಚ್ಚುತ್ತಿರುವ ರಾಸುಗಳ ಚರ್ಮಗಂಟು ರೋಗ ➤ ಜಾನುವಾರು ಸಂತೆಗೆ ತಾತ್ಕಲಿಕ ತಡೆ

ಮೈಸೂರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ರಾಸುಗಳ ಚರ್ಮಗಂಟು ರೋಗ  ಇನ್ನೂಕೂಡ ನಿಯಂತ್ರಣಕ್ಕೆ ಬರುತ್ತಿಲ್ಲ. ಚರ್ಮಗಂಟು ರೋಗಕ್ಕೆ ರೈತರು ಕಂಗಾಲಾಗಿದ್ದಾರೆ. ರೋಗ ನಿಯಂತ್ರಣಕ್ಕೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇನ್ನಿಲ್ಲದ ಪ್ರಯತ್ನ ಪಟ್ಟರು ಜಾನುವಾರುಗಳ ಸಾವು ಮುಂದುವರೆದಿದೆ. ಅಗತ್ಯ ಮುನ್ನೆಚ್ಚರಿಕೆ  ಹಾಗೂ ಲಸಿಕೆ ನೀಡುವ ಕಾರ್ಯ ನಡೆದರು ಜಿಲ್ಲೆಯಲ್ಲಿ ಚರ್ಮಗಂಟು ರೋಗ ಹೆಚ್ಚುತ್ತಲೆ ಇದ್ದು, ಈವರೆಗೆ 158 ರಾಸುಗಳು ಮೃತಪಟ್ಟಿದೆ. ಜಾನುವಾರು ಸಂತೆಗೆ ತಡೆ:  ಚರ್ಮಗಂಟು ರೋಗ ಹೆಚ್ಚಾಗಿ ಹರಡುತ್ತಿರುವುದರಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ

➤ ಮೈಸೂರು: ಹೆಚ್ಚುತ್ತಿರುವ ರಾಸುಗಳ ಚರ್ಮಗಂಟು ರೋಗ ➤ ಜಾನುವಾರು ಸಂತೆಗೆ ತಾತ್ಕಲಿಕ ತಡೆ Read More »

ಕರ್ನಾಟಕ

ತಂದೆ ಎದುರೇ ಮಗಳನ್ನು ಕಿಡ್ನಾಪ್ ಮಾಡಿದ ನಾಲ್ವರ ಗ್ಯಾಂಗ್…!

(ನ್ಯೂಸ್ ಕಡಬ) newskadaba.com ತೆಲಂಗಾಣ , ಡಿ 20 :  18 ವರ್ಷದ ಯುವತಿಯನ್ನು ಆಕೆಯ ತಂದೆಯ ಮುಂದೆಯೇ ಕಿಡ್ನಾಪ್ ಮಾಡಿರುವ ಆಘಾತಕಾರಿ ಘಟನೆ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಸಂಭವಿಸಿದೆ. ಬೆಳಗ್ಗೆ ತಂದೆಯೊಂದಿಗೆ ದೇವಸ್ಥಾನಕ್ಕೆ ತೆರಳಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಯುವತಿಯನ್ನು ಅಪಹರಿಸಲಾಗಿದೆ . ಕಾರಿನಲ್ಲಿ ಬಂದ ನಾಲ್ವರು ಯುವಕರು ಯುವತಿಯನ್ನು ಬಲವಂತವಾಗಿ ಹತ್ತಿಸಿಕೊಂಡು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ವೇಮುಲವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ತಂದೆ ಎದುರೇ ಮಗಳನ್ನು ಕಿಡ್ನಾಪ್ ಮಾಡಿದ ನಾಲ್ವರ ಗ್ಯಾಂಗ್…! Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು :  ವಿವಿ ಸಿಂಡಿಕೇಟ್ ಸಭೆಗೆ ನುಗ್ಗಲು ಯತ್ನ…..!   ➤ ಪೊಲೀಸರು-ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ, ವಾಗ್ವಾದ

(ನ್ಯೂಸ್ ಕಡಬ) newskadaba.com  ಮಂಗಳೂರು, ಡಿ.20  ಮಂಗಳೂರು ವಿವಿ ಫಲಿತಾಂಶ ವಿಳಂಬ ಖಂಡಿಸಿ ಎಬಿವಿಪಿ ಕಾರ್ಯಕರ್ತರು ವಿವಿ ಸಿಂಡಿಕೇಟ್ ಸಭೆಗೆ ನುಗ್ಗಲು ಯತ್ನಿಸಿದ ಘಟನೆ ಮಂಗಳೂರು ವಿವಿಯಲ್ಲಿ ಸಂಭವಿಸಿದೆ. ಈ ವೇಳೆ ಪೊಲೀಸರು-ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ ನಡೆದು ವಾಗ್ವಾದ ನಡೆಯಿತು ಎನ್ನಲಾಗಿದೆ. ಮಂಗಳೂರಿನ ಕೊಣಾಜೆಯ ಮಂಗಳೂರು ವಿವಿ ಯ ಆಡಳಿತ ಸೌಧಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದರು ಎಂದು ತಿಳಿದುಬಂದಿದೆ. ಅಂಕಪಟ್ಟಿ ಬಾರದೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲಾರದೇ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು

ಮಂಗಳೂರು :  ವಿವಿ ಸಿಂಡಿಕೇಟ್ ಸಭೆಗೆ ನುಗ್ಗಲು ಯತ್ನ…..!   ➤ ಪೊಲೀಸರು-ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ, ವಾಗ್ವಾದ Read More »

ಕರಾವಳಿ, ಕರ್ನಾಟಕ

ಅಪ್ರಾಪ್ತ ಬಾಲಕಿಯ ವಿವಾಹ ನಿಲ್ಲಿಸಿದ ಕ್ಲಾಸ್ ಮೇಟ್ !

(ನ್ಯೂಸ್ ಕಡಬ) newskadaba.com  ಕೊಲ್ಕತ್ತ , ಡಿ 20 :  ಅಪ್ರಾಪ್ತ  ವಯಸ್ಸಿನ ಬಾಲಕಿಯೊಬ್ಬಳ ವಿವಾಹವನ್ನು ಆಕೆಯ ಕ್ಲಾಸ್ ಮೇಟ್ ನಿಲ್ಲಿಸಿರುವ ಘಟನೆ ಪಶ್ಚಿಮ  ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದಿದೆ. ತನ್ನ ಕ್ಲಾಸ್ ಮೇಟ್ ಶಾಲೆಗೆ ಗೈರು ಹಾಜರಗಿರಿವುದನ್ನು ಗಮನಿಸಿದ ಗೊಲಾರ್ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ ಶುಹಿಲಾ, ನಂತರ ಆಕೆಗೆ ಮದುವೆ ನಿಗದಿಯಾಗಿರುವುದು ಗೊತ್ತಾಗಿದೆ. ಆಕೆಯ  ಬಾಲಕಿಯ ಮನೆಗೆ ತೆರಳಿ ಶಾಲೆಗೆ ಕಳಿಸುವಂತೆ ಒತ್ತಾಯಿಸಿದ್ದಾಳೆ . ಆಗ ಬಾಲಕಿಯನ್ನು ಮನೆಯವರು ಹಿಂಬಾಗಿಲಿನಿಂದ ವರನ

ಅಪ್ರಾಪ್ತ ಬಾಲಕಿಯ ವಿವಾಹ ನಿಲ್ಲಿಸಿದ ಕ್ಲಾಸ್ ಮೇಟ್ ! Read More »

ರಾಷ್ಟ್ರೀಯ ನ್ಯೂಸ್

ವಿಷಪೂರಿತ ಆಹಾರ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ತ..!         

(ನ್ಯೂಸ್ ಕಡಬ) newskadaba.com  ಕೊಪ್ಪಳ, ಡಿ.20  ದೋಷಪೂರಿತ ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ತಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಅಳವಂಡಿಯ ಸರ್ಕಾರಿ ಶಾಲೆಯಲ್ಲಿ ಸಂಭವಿಸಿದೆ. ಊಟ ಮಾಡಿದ್ದ ಕೆಲವರು ನಿತ್ರಾಣರಾಗಿದ್ದು, ವಾಂತಿಯಾಗಿ ಆರೋಗ್ಯ ಸಮಸ್ಯೆ ಉಲ್ಬಣಗೊಂಡಿತ್ತು ಎನ್ನಲಾಗಿದೆ. ಕೆಲವರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ, ಇನ್ನೂ ಕೆಲವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.  

ವಿಷಪೂರಿತ ಆಹಾರ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ತ..!          Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕುಸಿದು ಬಿದ್ದು ಚಾಲಕ ಮೃತ್ಯು!

(ನ್ಯೂಸ್ ಕಡಬ) newskadaba.com  ಸೋಮವಾರಪೇಟೆ  , ಡಿ 20 :  ಟ್ಯಾಕ್ಸಿ ಚಾಲಕರೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಆಯತಾನ ರೆಸಾರ್ಟ್ ಬಳಿ ಸಂಭವಿಸಿದೆ. ಮೃತರನ್ನು ಈರಣ್ಣ (36) ಎಂದು ಗುರುತಿಸಲಾಗಿದೆ. ಇವರು ಮಂಡ್ಯ ಜಿಲ್ಲೆಯ ಮಳವಳ್ಳಿ ನಿವಾಸಿ, ಸ್ನಾನ ಮುಗಿಸಿ ಹೊರಬಂದು ಕೊಠಡಿಯಲ್ಲಿ ಕುಳಿತಿದ್ದ ಸಂದರ್ಭ ದಿಢೀರ್ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರು ಪತ್ನಿ ಸೇರಿದಂತೆ ಎರಡು ವರ್ಷದ ಮಗುವನ್ನು ಅಗಲಿದ್ದಾರೆ.

ಕುಸಿದು ಬಿದ್ದು ಚಾಲಕ ಮೃತ್ಯು! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಥೈಲ್ಯಾಂಡ್ : ನೌಕಾಪಡೆಯ ಹಡಗು ಮುಳುಗಡೆ ; 31 ಮಂದಿ ನಾಪತ್ತೆ

(ನ್ಯೂಸ್ ಕಡಬ) newskadaba.com  ಬ್ಯಾಂಕಾಕ್ , ಡಿ 20 :  ಥೈಲ್ಯಾಂಡ್ ಕೊಲ್ಲಿಯಲ್ಲಿ ಗಸ್ತು ತಿರುಗುತ್ತಿದ್ದ ಥೈಲ್ಯಾಂಡ್ ನೌಕಾಪಡೆಯ ಹಡಗು ಸಮುದ್ರದಲ್ಲಿ ಮುಳುಗಿದೆ.  ಹಡಗಿನಲ್ಲಿ 100ಕ್ಕೂ ಅಧಿಕ ಮಂದಿ ನಾವಿಕರಿದ್ದರು ಎಂದು ವರದಿಯಾಗಿದೆ. 3 ಹಡಗು ಹಾಗೂ 2 ಹೆಲಿಕಾಪ್ಟರ್ ಬಳಸಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಹಡಗಿನಲ್ಲಿದ್ದ 75 ಮಂದಿಯನ್ನು ರಕ್ಷಿಸಲಾಯಿತು. ಇನ್ನೂ 31 ಮಂದಿ ನಾಪತ್ತೆಯಾಗಿದ್ದಾರೆ ಎಂದು ನೌಕಪಡೆಯ ಅಧಿಕಾರಿ ತಿಳಿಸಿದ್ದಾರೆ. ಬಿರುಗಾಳಿಯ ಹೊಡೆತಕ್ಕೆ ಹಡಗಿನ ವಿದ್ಯುತ್ ವ್ಯವಸ್ಥೆಗೆ ಹಾನಿಯಾದ್ದರಿಂದ ಪಂಪ್ ಬಳಸಿ  ಹಡಗಿನೊಳಗಿನ ನೀರನ್ನು

ಥೈಲ್ಯಾಂಡ್ : ನೌಕಾಪಡೆಯ ಹಡಗು ಮುಳುಗಡೆ ; 31 ಮಂದಿ ನಾಪತ್ತೆ Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top