News Kadaba

ರಸ್ತೆ ದುರಸ್ತಿಗೆ ರೂ.2.69 ಕೋಟಿ ಅನುದಾನ ಬಿಡುಗಡೆ  ➤ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್  

(ನ್ಯೂಸ್ ಕಡಬ) newskadaba.com ದೊಡ್ಡ ಬಳ್ಳಾಪುರ, ಡಿ. 21. ಗುಂಡಿ ಬಿದ್ದ ರಸ್ತೆಗಳ ದುರಸ್ತಿಗೆ ಸರ್ಕಾರದಿಂದ 2.69 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ. ಮಳೆಯಿಂದ ತಾಲ್ಲೂಕಿನಲ್ಲಿ 35 ಕಿ.ಮೀ. ಉದ್ದದ 23 ರಸ್ತೆಗಳು ಹಾಳಾಗಿದೆ, ಮಾಕಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದ ಕಾರಣ ಗ್ರಾಮಸ್ಥರಿಗೆ ಸಂಪರ್ಕ ಇಲ್ಲವಾಗಿದೆ. ತ್ವರಿತವಾಗಿ ದುರಸ್ತಿ ಮಾಡಬೇಕು ಎಂದು ಸರ್ಕಾರದ ಗಮನ ಸೆಳೆದರು. ಕ್ಷೇತ್ರದಲ್ಲಿ 844 ಕಿ.ಮೀ. ಉದ್ದದಷ್ಟು ಜಿಲ್ಲಾ […]

ರಸ್ತೆ ದುರಸ್ತಿಗೆ ರೂ.2.69 ಕೋಟಿ ಅನುದಾನ ಬಿಡುಗಡೆ  ➤ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್   Read More »

ಕರ್ನಾಟಕ

ಬೆಂಗಳೂರು : 7ನೇ ಮಹಡಿಯಿಂದ ಬಿದ್ದು ಕಾರ್ಮಿಕ ಮೃತ್ಯು..!

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ. 21. ಕಟ್ಟಡದ 7 ನೇ ಮಹಡಿಯಿಂದ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹೊಸೂರು ರಸ್ತೆಯಲ್ಲಿರುವ ಪಿಇಎಸ್ ಕಾಲೇಜು ಆವರಣದಲ್ಲಿ ಸಂಭವಿಸಿದೆ. ಮೃತ ಕಾರ್ಮಿಕರನ್ನು ಪಶ್ಚಿಮ ಬಂಗಾಳದ ಮೂಲದ ಎಸ್.ಕೆ.ಜಿಯಾರುಲ್ (24) ಎಂದು ಗುರುತಿಸಲಾಗಿದೆ. ಮಗನ ಸಾವಿನ ಕುರಿತು ತಾಯಿ ನೀಡಿರುವ ದೂರಿನನ್ವಯ, ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿದ್ದ ಎವಿಎಸ್ ಕಂಪನಿಯ ಜವಾಹರ್, ಎಂಜಿನಿಯರ್ ನಂಬಿರಾಜನ್, ಉಸ್ತುವಾರಿ ಕುಮಾರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬೆಂಗಳೂರು : 7ನೇ ಮಹಡಿಯಿಂದ ಬಿದ್ದು ಕಾರ್ಮಿಕ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹೊಸ ಅಥಿತಿಗಳ ಕಲರವ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 21. ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಗುಜರಾತ್ ನ ಗ್ರೀನ್ ಮೃಗಾಲಯದಿಂದ ಮಧ್ಯ ಮತ್ತು ದಕ್ಷಿಣ ಅಮೇರಿಕ, ಬ್ರೆಜಿಲ್, ಅರ್ಜೆಂಟೀನ, ಆಪ್ರೀಕಾ ಖಂಡಗಳಲ್ಲಿ ಕಾಣಸಿಗುವ ವಿವಿಧ ಪ್ರಾಣಿಗಳನ್ನು ತರಲಾಗಿದೆ.   ಸಣ್ಣ ಜಾತಿಯ ಅಳಿಲು, ಕಪಿ, ಮಾರ್ಮೋಸೆಟ್, ಕೆಂಪು ಕೈಯ ಟೆಮಾರನ, ಮಾರ ಮಾರ, ಬೃಹತ್ ಗಾತ್ರದ ನೀಲಿ ಬಂಗಾರದ ಮಕಾವು, ಗಾಲಾ ಕೋಕಟು, ಹಸಿರು ಟೊರೆಕೊ ಮತ್ತು ವಿವಿಧ ಜಾತಿಯ ಪರದೇಶದ ಪಕ್ಷಿಗಳನ್ನು ತರಿಸಲಾಗಿದೆ. ಹೊಸದಾಗಿ ಬಂದ ಅತಿಧಿಗಳ

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹೊಸ ಅಥಿತಿಗಳ ಕಲರವ Read More »

ಕರಾವಳಿ, ಕರ್ನಾಟಕ

ಬ್ರಹ್ಮಾವರ: ಮನೆ ಕಳವು ಆರೋಪಿಯ ಬಂಧನ  ➤ 7 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ    

(ನ್ಯೂಸ್ ಕಡಬ) newskadaba.com  ಬ್ರಹ್ಮಾವರ, ಡಿ.21. ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತ ಆರೋಪಿಯನ್ನು ಕಾಡೂರು ತಂತ್ರಾಡಿ ನಿವಾಸಿ ವಿಜಯ್ ಕುಮಾರ್ ಶೆಟ್ಟಿ (28) ಎಂದು ಗುರುತಿಸಲಾಗಿದೆ. ಈತ ಹೊಂಡಾ ಮ್ಯಾಟ್ರಿಕ್ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಡೆದು ಪರಿಶೀಲನೆ ನಡೆಸಿದಾಗ ಕಳ್ಳತನ ನಡೆಸಲು ಬೇಕಾದ ಸಲಕರಣೆಗಳು ಆತನ ಜೊತೆಯಿದ್ದು, ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ

ಬ್ರಹ್ಮಾವರ: ಮನೆ ಕಳವು ಆರೋಪಿಯ ಬಂಧನ  ➤ 7 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ     Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೈಕ್ ಗೆ ಗೂಡ್ಸ್ ವಾಹನ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು..!

(ನ್ಯೂಸ್ ಕಡಬ) newskadaba.com ಸಂತೆಬೆನ್ನೂರು, ಡಿ. 21. ಗೂಡ್ಸ್ ವಾಹನಕ್ಕೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಂತೇಬೆನ್ನೂರು ಸಮೀಪದ ಕಾಕನೂರು ವಿನಾಯಕ ಪ್ರೌಢಶಾಲೆ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ದಾವಣಗೆರೆ ತಾಲ್ಲೂಕಿನ ಗೋಪನಾಳು ಗ್ರಾಮದ ನಿವಾಸಿ ಪರಮೇಶ್ (33) ಎಂದು ಗುರುತಿಸಲಾಗಿದೆ. ಇವರು ಪಾಂಡೋಮಟ್ಟಿ ಗ್ರಾಮಕ್ಕೆ ಸಂಬಂಧಿಕರ ಶವ ಸಂಸ್ಕಾರಕ್ಕೆಂದು ತೆರಳುವಾಗ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಗೆ ಗೂಡ್ಸ್ ವಾಹನ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

2 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಅನುದಾನ ನೀಡಿಲ್ಲ ➤ ಸಿಎಂ ಬೊಮ್ಮಾಯಿ       

(ನ್ಯೂಸ್ ಕಡಬ) newskadaba.com ವಿಧಾನಸಭೆ, ಡಿ. 21. ಮುಖ್ಯಮಂತ್ರಿಗಳ ಅಭಿವೃದ್ಧಿ ಯೋಜನೆಯಡಿ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಕೊರೋನಾದಿಂದ ಉಂಟಾದ ಆರ್ಥಿಕ ಸಂಕಷ್ಟ ಕಾರಣ ಕಳೆದ ಎರಡು ವರ್ಷಗಳಿಂದ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಒಪ್ಪಿಕೊಂಡಿದ್ದಾರೆ. ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶಗಳಿಗೆ ಸೌಲಭ್ಯ ಒದಗಿಸಲು 2018-19 ರಲ್ಲಿ 500 ಕೋಟಿ ರೂ., 2019-20 ರಲ್ಲಿ 500 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳ ಅಭಿವೃದ್ಧಿ ಯೋಜನೆಯಡಿ ನೀಡಲಾಗಿತ್ತು. ಆದರೆ ಕೊರೋನಾ ಕಾರಣಗಳಿಂದ

2 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಅನುದಾನ ನೀಡಿಲ್ಲ ➤ ಸಿಎಂ ಬೊಮ್ಮಾಯಿ        Read More »

ಕರ್ನಾಟಕ

ಉಪ್ಪಿನಂಗಡಿ : ಓಮ್ನಿ-ದ್ವಿಚಕ್ರ ವಾಹನ ಢಿಕ್ಕಿ ➤ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 21. ಓಮ್ನಿ ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ವ್ಯಕ್ತಿಯೋರ್ವ ಗಾಯಗೊಂಡ ಘಟನೆ ಉಪ್ಪಿನಂಗಡಿ ಬಳಿ ನಡೆದಿದೆ. ಗಾಯಾಳುವನ್ನು ಕೊಯಿಲ ನಿವಾಸಿ ನಝೀರ್ ಎಂಬವರ ಪುತ್ರ ಉಬ್ಬಿ ಎಂದು ಗುರುತಿಸಲಾಗಿದೆ. ಈತ ಉಪ್ಪಿನಂಗಡಿಯಿಂದ ಕೆಮ್ಮಾರದ ಕಡೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಉಪ್ಪಿನಂಗಡಿ : ಓಮ್ನಿ-ದ್ವಿಚಕ್ರ ವಾಹನ ಢಿಕ್ಕಿ ➤ ಸವಾರನಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ರಕ್ತದಲ್ಲಿ ಪತ್ರ ಬರೆದು ಅಸಮಾಧಾನ ಹೊರ ಹಾಕಿದ ರೈಲ್ವೇ ಕಾರ್ಮಿಕರು…!!!     

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಡಿ. 21. ರೈಲ್ವೇ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸ್ವಚ್ಚತಾ ಕಾರ್ಮಿಕರನ್ನು ಕಾನೂನುಬಾಹಿರ ತೆಗೆದುಹಾಕಿದನ್ನು ಖಂಡಿಸಿ ಕಾರ್ಮಿಕರು ರಕ್ತದಲ್ಲಿ ಪತ್ರಬರೆಯುವ ಚಳುವಳಿ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ವರದಿಯಾಗಿದೆ. ಇದು ರೈಲ್ವೇ ಇಲಾಖೆಯು ದಲಿತರ ಮೇಲೆ ಮಾಡಿರುವಂತಹ ಅಮಾನವೀಯ ಶೋಷಣೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.  ಸ್ವಚ್ಚತಾ ಕಾರ್ಮಿಕರ ಕುರಿತು ರೈಲ್ವೇ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರ್ಮಿಕ ಇಲಾಖೆಯು ಯಾವುದೇ ಸ್ಪಂದನೆ ನೀಡಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ರಕ್ತದಲ್ಲಿ ಪತ್ರ ಬರೆದು ಅಸಮಾಧಾನ ಹೊರ ಹಾಕಿದ ರೈಲ್ವೇ ಕಾರ್ಮಿಕರು…!!!      Read More »

ಕರ್ನಾಟಕ
crime, arrest, suspected

ಜೋಡಿ ಕೊಲೆ ಪ್ರಕರಣ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 21. ಕೋರಮಂಗಲ ಜೋಡಿ ಕೊಲೆ ಪ್ರಕರಣ ಭೇಧಿಸಿದ ಪೊಲೀಸರು ಪ್ರಮುಖ ಆರೋಪಿ ಉದ್ಯಮಿಯ ಮಾಜಿ ಕಾರು ಚಾಲಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಬಂಧಿತ ಆರೊಪಿಯನ್ನು ಜಗದೀಶ್ (24), ಅಭಿಷೇಕ್ (22) ಮತ್ತು ಆತನ ಸಹೋದರ ಕಿರಣ್ (19) ಎಂದು ಗುರುತಿಸಲಾಗಿದೆ. ಉದ್ಯಮಿ ರಾಜಗೋಪಾಲ್ ರೆಡ್ಡಿ ಅವರ ಮಾಜಿ ಚಾಲಕನಾಗಿದ್ದ ಜಗದೀಶ್ ಪ್ರಕರಣದ ಪ್ರಮುಖ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳಿಂದ ರೂ. 5

ಜೋಡಿ ಕೊಲೆ ಪ್ರಕರಣ ➤ ಮೂವರ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ಸುಳ್ಯ ಜುವೆಲರ್ಸ್ ಮಾಲಕನ ಅಪಹರಣ ಯತ್ನ!

 (ನ್ಯೂಸ್ ಕಡಬ) newskadaba.com ಸುಳ್ಯ , ಡಿ. 20 ಸುಳ್ಯ ಕಾಮಧೇನ್ ಜುವೆಲರ್ಸ್ ಮಾಲಕ ನವೀನ್ ಎಂಬವರನ್ನು ಅಪರಿಚಿತ ತಂಡವೊಂದು ಅಪಹರಿಸಿರುವ ಘಟನೆ ಸೋಮವಾರ ಮಧ್ಯಾಹ್ನ ಬೆಳ್ಳಾರೆಯಲ್ಲಿ ನಡೆದಿದೆ. ಈ ಘಟನೆ ಸಂಧರ್ಭ ಉದ್ಯಮಿಯ ತಾಯಿ ಗಾಯಗೊಂಡಿದ್ದಾರೆ. ತಕ್ಷಣದಲ್ಲಿ ಪೊಲೀಸರಿಗೆ ಮಾಹಿತಿಸಿಕ್ಕ ಹಿನ್ನೆಲೆಯಲ್ಲಿ ಬೆಳ್ಳಾರೆಯಿಂದ ಹೋದ ಅಪರಿಚಿತ ತಂಡವನ್ನು ತಡೆದು ನವೀನ್ ರವರನ್ನುರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.    

➤ ಸುಳ್ಯ ಜುವೆಲರ್ಸ್ ಮಾಲಕನ ಅಪಹರಣ ಯತ್ನ! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top