News Kadaba

Theft, crime, Robbery

ಪುತ್ತೂರು: ಜೆರಾಕ್ಸ್ ಅಂಗಡಿಯಿಂದ ಕಳವು     

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 02. ಜೆರಾಕ್ಸ್ ಅಂಗಡಿಯಿಂದ ಸಾವಿರಾರು ರೂಪಾಯಿ ಕಳವುಗೈದಿರುವ ಘಟನೆ ಕೌಡಿಚ್ಚಾರಿನಲ್ಲಿ ವರದಿಯಾಗಿದೆ. ಕೌಡಿಚ್ಚಾರಿನಲ್ಲಿರುವ ವಿಶ್ವನಾಥ ಗೌಡ ಎಂಬವರಿಗೆ ಸೇರಿದ ಜೆರಾಕ್ಸ್ ಅಂಗಡಿಯಿಂದ ಕಳವಾಗಿದ್ದು, ಅವರು ಅಂಗಡಿಗೆ ಬಂದಾಗ ಅಂಗಡಿಯ ಎದುರಿನ ಬಾಗಿಲಿನ ಬೀಗ ಮುರಿದಿರುವುದು ಬೆಳಕಿಗೆ ಬಂದಿದೆ. ಅಂಗಡಿ ಒಳಗೆ ನೋಡಿದಾಗ ಡ್ರವರ್ ನಲ್ಲಿದ್ದ ಸುಮಾರು 20 ಸಾವಿರ ನಗದು ಮತ್ತು ಮೊಬೈಲ್ ಕಳವಾಗಿದೆ ಎಂದು ವರದಿಯಾಗಿದೆ. ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. […]

ಪುತ್ತೂರು: ಜೆರಾಕ್ಸ್ ಅಂಗಡಿಯಿಂದ ಕಳವು      Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಾ. 11 ಮತ್ತು 12 ರಂದು ವಿಜಯ-ವಿಕ್ರಮ ಜೋಡುಕರೆ ಕಂಬಳ               

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ. 02.  ಉಪ್ಪಿನಂಗಡಿ ಇಲ್ಲಿನ ಕೂಟೇಲು ಸೇತುವೆ ಬಳಿ ನೇತ್ರಾವತಿ ನದಿ ದಡದಲ್ಲಿ ವರ್ಷಂಪ್ರತಿ ನಡೆಯುವ ವಿಜಯ-ವಿಕ್ರಮ ಜೋಡುಕರೆ ಕಂಬಳ ಮಾ. 11 ಮತ್ತು 12ರಂದು ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು. ಈ ಕುರಿತು ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯಲ್ಲಿ ವಿಜಯ-ವಿಕ್ರಮ ಕಂಬಳ ಸಮಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಂಬಳ ಈ ಹಿಂದಿಗಿಂತಲೂ ಹೆಚ್ಚಿನ ವೈಭವಯುತವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು

ಮಾ. 11 ಮತ್ತು 12 ರಂದು ವಿಜಯ-ವಿಕ್ರಮ ಜೋಡುಕರೆ ಕಂಬಳ                Read More »

ಕರಾವಳಿ, ಕರ್ನಾಟಕ

ಮಂಗಳೂರು: ಯಶಸ್ವಿಯಾಗಿ ನಡೆದ ಬ್ರಿಕ್ ಬಿಡಿಎಮ್ ಆಸರೆ ಕಾರ್ಯಕ್ರಮ ➤ ಸಮಾಜದ ಅಭಿವೃದ್ಧಿಯು ಸಾಮಾಜಿಕ ಕಳಕಳಿಯ ಚಿಂತನೆಗಳಿಂದ ಸಾಧ್ಯ- ಯು.ಟಿ ಖಾದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ಬ್ರಿಕ್ ಸ್ಟೋನ್ ಕಂಪೆನಿ ಸೌದಿ ಅರೇಬಿಯಾ ಪ್ರಾಯೋಜಕತ್ವದಲ್ಲಿ, ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಹಕಾರದೊಂದಿಗೆ ಬ್ರಿಕ್-ಬಿಡಿಎಮ್ ಆಸರೆ ಎಂಬ ಕಾರ್ಯಕ್ರಮವು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಬೃಹತ್ ರಕ್ತದಾನ‌ ಶಿಬಿರ, ಸಾಧಕರಿಗೆ ಸನ್ಮಾನ, ದಿವ್ಯಾಂಗರಿಗೆ ಸವಲತ್ತು ವಿತರಣೆ, ಮಹಿಳೆಯರಿಗೆ ಹೊಲಿಗೆಯಂತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ, ಯುವಜನತೆ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಸಮಾಜದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ

ಮಂಗಳೂರು: ಯಶಸ್ವಿಯಾಗಿ ನಡೆದ ಬ್ರಿಕ್ ಬಿಡಿಎಮ್ ಆಸರೆ ಕಾರ್ಯಕ್ರಮ ➤ ಸಮಾಜದ ಅಭಿವೃದ್ಧಿಯು ಸಾಮಾಜಿಕ ಕಳಕಳಿಯ ಚಿಂತನೆಗಳಿಂದ ಸಾಧ್ಯ- ಯು.ಟಿ ಖಾದರ್ Read More »

ಕರಾವಳಿ

ಚರ್ಚ್ ಸ್ಫೋಟಿಸುವುದಾಗಿ ಬೆದರಿಕೆ ಪ್ರಕರಣ ➤ ವ್ಯಕ್ತಿಯ ಬಂಧನ

(ನ್ಯೂಸ್ ಕಡಬ) newskadaba.com ಮುಂಬೈ, ಜ. 02. ಬಾಂದ್ರಾದಲ್ಲಿನ ಮೌಂಟ್ ಮೇರಿ ಚರ್ಚ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ವರದಿಯಾಗಿದೆ. ಚರ್ಚ್ ಸ್ಫೋಟಿಸುವುದಾಗಿ ಇ- ಮೇಲ್ ಕಳುಹಿಸಿದ ನಂತರ ಕೊಲ್ಕತ್ತಾದಲ್ಲಿ ಆರೋಪಿಯನ್ನು ಐಪಿ ವಿಳಾಸದ ಮೂಲಕ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇ-ಮೇಲ್ ಯಾರು ಕಳುಹಿಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಎಲ್ಲವೂ ವಿಚಾರಣೆ ನಂತರ ತಿಳಿದುಬರಲಿದೆ ಎಂದು ಅವರು ಹೇಳಿದ್ದಾರೆ.

ಚರ್ಚ್ ಸ್ಫೋಟಿಸುವುದಾಗಿ ಬೆದರಿಕೆ ಪ್ರಕರಣ ➤ ವ್ಯಕ್ತಿಯ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜಾನುವಾರು ಕಳ್ಳತನ ಆರೋಪದಲ್ಲಿ ಥಳಿಸಿ ಕೊಲೆ..!!                               

(ನ್ಯೂಸ್ ಕಡಬ) newskadaba.com ಜಾರ್ಖಂಡ್, ಜ. 02. ಗುಂಪು ಥಳಿತ ಪ್ರಕರಣದಲ್ಲಿ ವ್ಯಕ್ತಿಯೋರ್ವನನ್ನು ಹೊಡೆದು ಕೊಲೆ ಮಾಡಿದ ಘಟನೆ ಜಾರ್ಖಂಡ್ ನ ಗಿರಿಧ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಸಿಮಾರಿಯಾ ನಿವಾಸಿ ವಿನೋದ್ ಚೌಧರಿ ಎಂದು ಗುರುತಿಸಲಾಗಿದೆ. ಈತ ಜಾನುವಾರುಗಳನ್ನು ಕದಿಯಲು ಬಿರಾಲಾಲ್ ತುಡು ಎಂಬವರ ಗೋಶಾಲೆಗೆ ಪ್ರವೇಶಿಸಿದ್ದ ಎಂದು ಆರೋಪಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬಿರಾಲಾಲ್ ಆಡು ಹಾಗೂ ದನಗಳನ್ನು ಮನೆಯ ಒಳಗೆ ಕಟ್ಟಿ ಹಾಕಿದ್ದ. ವಿನೋದ್ ಆಡುಗಳನ್ನು ಬಿಚ್ಚಿದಾಗ

ಜಾನುವಾರು ಕಳ್ಳತನ ಆರೋಪದಲ್ಲಿ ಥಳಿಸಿ ಕೊಲೆ..!!                                Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋಗಿ ಕೆಳಗೆ ಬಿದ್ದ ಮಹಿಳೆ ➤ ಕೂದಲೆಳೆ ಅಂತರದಲ್ಲಿ ಬಚಾವ್

(ನ್ಯೂಸ್ ಕಡಬ) newskadaba.com ಕಲಬುರಗಿ, ಜ. 02. ಚಲಿಸುತ್ತಿದ್ದ ರೈಲಿಗೆ ಹತ್ತಲು ಮುಂದಾದ ಮಹಿಳೆಯೊಬ್ಬರು ಕೆಳಗೆ ಬಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಚಲಿಸುತ್ತಿದ್ದ ರೈಲು ಹತ್ತಲು ಹೋದ ಮಹಿಳೆಯೊಬ್ಬರು ಕಾಲು ಜಾರಿ ಕೆಳಗೆ ಬಿದ್ದಿದ್ದು, ಕೂಡಲೇ ಎಚ್ಚೆತ್ತ ಸಿಬ್ಬಂದಿ ಮತ್ತು ಕಾರ್ಮಿಕರೊಬ್ಬರು ಮಹಿಳೆ ಹಳಿಗೆ ಬೀಳದಂತೆ ಎಳೆದು ರಕ್ಷಣೆ ಮಾಡಿದ್ದಾರೆ.

ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋಗಿ ಕೆಳಗೆ ಬಿದ್ದ ಮಹಿಳೆ ➤ ಕೂದಲೆಳೆ ಅಂತರದಲ್ಲಿ ಬಚಾವ್ Read More »

ಕರ್ನಾಟಕ

ಕರುವಿನ ಮೇಲೆ ಅತ್ಯಾಚಾರ ➤ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ರಾಯಚೂರು, ಜ. 02. ಕರುವಿನ ಮೇಲೆ ಯುವನೋರ್ವ ಅತ್ಯಾಚಾರ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಕಸಬಾಲಿಂಗಸುಗೂರು ಅಮೀನ ದರ್ಗಾ ಬಳಿ ವರದಿಯಾಗಿದೆ. ಆರೋಪಿಯನ್ನು ಇಮ್ತಿಯಾಜ್ ಹುಸೇನಮಿಯಾ ಎಂದು ಗುರುತಿಸಲಾಗಿದೆ. ಈತ ಹೊಲದಲ್ಲಿ ಆಕಳು ಕರುವಿನ ಕಾಲು ಕಟ್ಟಿ ನೆಲಕ್ಕೆ ಹಾಕಿ ಹಿಂಸೆ ನೀಡುವ ಮೂಲಕ ಅತ್ಯಾಚಾರ ನಡೆಸಿದ್ದಾನೆ ಎಂದು ಅಮರೇಶ ಬಸಣ್ಣ ಮಡಿವಾಳ ದೂರು ನೀಡಿದ್ದಾರೆ. ಈ ಬಗ್ಗೆ ಪಿಎಸ್ಐ ಹನುಮಂತಪ್ಪ ಪ್ರಕರಣ ದಾಖಲಿಸಿದ್ದಾರೆ.

ಕರುವಿನ ಮೇಲೆ ಅತ್ಯಾಚಾರ ➤ ಆರೋಪಿ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್
Crime

ಶಾಸಕ ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ..!!               

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 02. ಮಾಜಿ ಸಚಿವ, ಶಾಸಕ ಅರವಿಂದ ಲಿಂಬಾವಳಿ ಸೇರಿ ಪ್ರಭಾವಿ ರಾಜಕಾರಣಿಗಳ ಹೆಸರು ಬರೆದಿಟ್ಟು ಓರ್ವ ವ್ಯಕ್ತಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪ್ರದೀಪ್ (47) ಎಂದು ಗುರುತಿಸಲಾಗಿದೆ. ಡೆತ್ ನೋಟ್ ನಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಒಟ್ಟು 6 ಪ್ರಭಾವಿ ರಾಜಕಾರಣಿಗಳ ಹೆಸರನ್ನು ಉಲ್ಲೇಖಿಸಿ ಕಾರಿನಲ್ಲಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ

ಶಾಸಕ ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ..!!                Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಮೂಲ್ ಜೊತೆ ನಂದಿನಿ ವಿಲೀನ ಇಲ್ಲ ➤ ಸಿಎಂ ಬೊಮ್ಮಾಯಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 02. ಕೆಎಂಎಫ್ ಉತ್ಪನ್ನ ನಂದಿನಿಯನ್ನು ಗುಜರಾತ್ ನ ಅಮೂಲ್ ಜೊತೆಗೆ ವಿಲೀನ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಂದಿನಿ ವಿಲೀನವಾಗಲಿದೆ ಎಂದು ಯಾರೂ ಟೀಕೆ ಮಾಡಬಾರದು. ನಂದಿನಿ ತನ್ನ ಸ್ವಂತ ಅಸ್ಥಿತ್ವ ಉಳಿಸಿಕೊಳ್ಳಲಿದೆ. ಅಮುಲ್ ನೊಂದಿಗೆ ವಿಲೀನ ಮಾಡುತ್ತಾರೆ ಎನ್ನುವುದು ತಪ್ಪು ಕಲ್ಪನೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಮಾತನಾಡಿರುವುದು ಸ್ಪಷ್ಟವಾಗಿದೆ. ನಂದಿನಿ ಮತ್ತು ಅಮುಲ್ ಮಾರುಕಟ್ಟೆಯಲ್ಲಿ ಸಹಕಾರ

ಅಮೂಲ್ ಜೊತೆ ನಂದಿನಿ ವಿಲೀನ ಇಲ್ಲ ➤ ಸಿಎಂ ಬೊಮ್ಮಾಯಿ ಸ್ಪಷ್ಟನೆ Read More »

ಕರ್ನಾಟಕ

ಸಮುದ್ರದ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ…!                     

(ನ್ಯೂಸ್ ಕಡಬ) newskadaba.com ಸುರತ್ಕಲ್, ಜ. 02. ಸುರತ್ಕಲ್ ಬಳಿಯ ಲೈಟ್ ಹೌಸ್ ಬೀಚ್ ನಲ್ಲಿ ಸಮುದ್ರದ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ. ಮೃತ ಯುವಕನನ್ನು ಕಾನ ನಿವಾಸಿ ಸುರೇಶ್ ಪ್ರಸಾದ್ ಯಾದವ್ ಎಂಬವರ ಪುತ್ರ ಸತ್ಯಂ (18) ಎಂದು ಗುರುತಿಸಲಾಗಿದೆ. ಲೈಟ್ ಹೌಸ್ ಬೀಚ್ ನಿಂದ 1.5 ಕಿ.ಮೀ ದೂರದಲ್ಲಿರುವ ರೇಡ್ ರಾಕ್ ಬೀಚ್ ನಲ್ಲಿ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ. ಸತ್ಯಂ ಮತ್ತು ಆತನ ಸ್ನೇಹಿತ ಸಮುದ್ರದಲ್ಲಿ ಈಜಲು

ಸಮುದ್ರದ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ…!                      Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top