ಬೈಕುಗಳಿಗೆ 50 ರೂ., ಕಾರುಗಳಿಗೆ 200 ರೂ., ಇದು ಯಾವುದೋ ಟೋಲ್ ದುಡ್ಡಲ್ಲ ► ಪೆರಿಯಶಾಂತಿಯಲ್ಲಿ ಮರ ತೆರವಿನ ನೆಪದಲ್ಲಿ ಹಗಲು ದರೋಡೆಯ ವೀಡಿಯೋ ವೈರಲ್
(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.21. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೆರಿಯಶಾಂತಿ ಎಂಬಲ್ಲಿ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಯುವಕರ ತಂಡವೊಂದು ಹಣ ಸಂಗ್ರಹಿಸಿದ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪೆರಿಯಶಾಂತಿ ಎಂಬಲ್ಲಿ ಸೋಮವಾರ ಸಂಜೆ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಬೃಹತ್ ಮರವೊಂದು ರಸ್ತೆಗೆ ಅಡ್ಡವಾಗಿ ಮುರಿದು ಬಿದ್ದಿದ್ದು, ಈ ಮರವನ್ನು ತೆರವುಗೊಳಿಸಿದ ಕೆಲವು ಮುಸ್ಲಿಂ ಯುವಕರು, ಅದೇ ರಸ್ತೆಯಲ್ಲಿ ಬರುತ್ತಿದ್ದ ಅನೇಕ ವಾಹನ ಚಾಲಕರಿಂದ ಹೆಚ್ಚುವರಿ ಹಣ ಸಂಗ್ರಹಣೆ ಮಾಡಿದ್ದಾರೆ. […]




