Mumbai

ವಿಶ್ವದಲ್ಲೇ ಅತೀ ಶ್ರೀಮಂತ ಭಿಕ್ಷುಕ ಎಂಬ ಖ್ಯಾತಿಗೆ ಪಾತ್ರರಾದ ಮುಂಬಯಿಯ ಭಿಕ್ಷುಕ

(ನ್ಯೂಸ್ ಕಡಬ) newskadaba.com ಮುಂಬಯಿ, ಜು.09. ವೃತ್ತಿಯಲ್ಲಿ ಭಿಕ್ಷುಕನಾಗಿರುವ ಮುಂಬಯಿಯ ವ್ಯಕ್ತಿಯೋರ್ವ ಸುಮಾರು 7.5 ಕೋಟಿ ಸಂಪಾದಿಸುವ ಮೂಲಕ ವಿಶ್ವದಲ್ಲೇ ಅತೀ ಶ್ರೀಮಂತ ಭಿಕ್ಷುಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮುಂಬಯಿ ನಿವಾಸಿಯಾಗಿರುವ ಭರತ್ ಜೈನ್ ಎಂಬಾತ ಬಡತನದಿಂದಾಗಿ ಪ್ರಾಥಮಿಕ ಶಿಕ್ಷಣವನ್ನೂ ಪಡೆಯಲು ಸಾಧ್ಯವಾಗದೆ ಭಿಕ್ಷಾಟನೆ ವೃತ್ತಿಗಿಳಿದಿದ್ದು, ಆ ಬಳಿಕ ಅದೇ ವೃತ್ತಿಯನ್ನು ಮುಂದುವರಿಸಿದ್ದಾರೆ ಎಂದು ಪ್ರಸಿದ್ಧ ಆಂಗ್ಲ ಪತ್ರಿಕೆಯೊಂದು ವರದಿ‌ ಮಾಡಿದೆ. ಇಂದು ಕೋಟಿ ಆಸ್ತಿಯ ಒಡೆಯನಾಗಿರುವ ಭರತ್ ಜೈನ್, 1.2 ಕೋಟಿಯ ಫ್ಲ್ಯಾಟನ್ನು ಹೊಂದಿದ್ದು, ಎರಡು […]

ವಿಶ್ವದಲ್ಲೇ ಅತೀ ಶ್ರೀಮಂತ ಭಿಕ್ಷುಕ ಎಂಬ ಖ್ಯಾತಿಗೆ ಪಾತ್ರರಾದ ಮುಂಬಯಿಯ ಭಿಕ್ಷುಕ Read More »

ರಾಷ್ಟ್ರೀಯ ನ್ಯೂಸ್

ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

(ನ್ಯೂಸ್ ಕಡಬ)newskadaba.com ಮುಂಬೈ, ಜೂ . 15 . ಯುವಕನೊಬ್ಬ ರೀಲ್ಸ್​ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಘಟನೆ ಮುಂಬೈ ಬಳಿ ನಡೆದಿದೆ. ಮೃತನನ್ನು ಬಿಲಾಲ್ ಸೋಹಿಲ್ ಶೇಖ್ (18) ಎಂದು ಗುರುತಿಸಲಾಗಿದೆ, ಈತ  ಚೋಲೆ ಪ್ರದೇಶದಲ್ಲಿ ನೀರು ಸರಬರಾಜು ಮಾಡುವ ಬ್ರಿಟಿಷ್ ಪಂಪ್​ ಹೌಸ್​ಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ . ಬ್ರಿಟಿಷ್​ ಪಂಪ್​ ಹೌಸ್​ಗೆ ಜನಸಾಮಾನ್ಯರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಈ ಪ್ರದೇಶದಲ್ಲಿ ಪ್ರತಿದಿನ ಸಾಯಂಕಾಲ ವಾಯುವಿಹಾರಕ್ಕೆ ಬರಲು ಅವಕಾಶವಿದೆ. ಇದೇ ನೆಪದಲ್ಲಿ  ಬಂದ ಬಿಲಾಲ್​ ಹಾಗೂ

ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ Read More »

ರಾಷ್ಟ್ರೀಯ ನ್ಯೂಸ್

ಎಚ್ಚರಿಕೆಗೆ ಕ್ಯಾರೇ ಎನ್ನದೇ ಸಮುದ್ರಕ್ಕೆ ಇಳಿದ ಬಾಲಕ-ನೀರುಪಾಲು

(ನ್ಯೂಸ್ ಕಡಬ) newskadaba.com ಮುಂಬೈ, ಜೂ. 13. ಎಷ್ಟೇ ಎಚ್ಚರಿಸಿದರೂ ಕ್ಯಾರೇ ಎನ್ನದೇ ಸುಮದ್ರಕ್ಕಿಳಿದಿದ್ದ ಮೂವರ ಪೈಕಿ ಓರ್ವ ಮೃತಪಟ್ಟು, ಇನ್ನಿಬ್ಬರು ಸಮುದ್ರಕ್ಕೆ ಇಳಿದು ನಾಪತ್ತೆಯಾಗಿರುವ ಘಟನೆ ಮುಂಬೈನ ಜುಹು ಬೀಚ್ ನಲ್ಲಿ ನಡೆದಿದೆ. 12 ರಿಂದ 16 ವರ್ಷ ವಯಸ್ಸಿನ ಐದು ಹುಡುಗರ ಗುಂಪೊಂದು, ಜೀವರಕ್ಷಕ ದಳದವರ ಎಚ್ಚರಿಕೆಗೆ ಮಣಿಯದೇ ಸಮುದ್ರಕ್ಕಿಳಿದು, ನಂತರ ದಡದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ನಾಪತ್ತೆಯಾಗಿದ್ದರು. ಈ ಪೈಕಿ  ಇಬ್ಬರು ಬಾಲಕರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದು, ಓರ್ವ ಆಸ್ಪತ್ರೆಗೆ ಕರೆತಂದ

ಎಚ್ಚರಿಕೆಗೆ ಕ್ಯಾರೇ ಎನ್ನದೇ ಸಮುದ್ರಕ್ಕೆ ಇಳಿದ ಬಾಲಕ-ನೀರುಪಾಲು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಶರದ್ ಪವಾರ್ ಗೆ ಕೊಲೆ ಬೆದರಿಕೆ ಪ್ರಕರಣ ➤ ಆರೋಪಿ ಐಟಿ ಕಂಪನಿ ಉದ್ಯೋಗಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮುಂಬೈ, ಜೂ. 12. ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್‌ಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಪುಣೆಯ ಐಟಿ ಕಂಪನಿ ಉದ್ಯೋಗಿಯೋರ್ವನನ್ನು ಮುಂಬೈ ಕ್ರೈಂ ಬಾಂಚ್, ಪುಣೆಯಲ್ಲಿ ಬಂಧಿಸಿದ ಕುರಿತು ವರದಿಯಾಗಿದೆ. ಬಂಧಿತನನ್ನು ಸಾಗರ್ ಬರ್ವೆ(34) ಎಂದು ಗುರುತಿಸಲಾಗಿದೆ. ಈತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೊಲೆ ಬೆದರಿಕೆಗಳನ್ನು ಕಳುಹಿಸಲು ಎರಡು ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ರಚಿಸಿ, ವಾಟ್ಸಾಪ್ ಮೂಲಕ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಅವರ ಮೊಬೈಲ್

ಶರದ್ ಪವಾರ್ ಗೆ ಕೊಲೆ ಬೆದರಿಕೆ ಪ್ರಕರಣ ➤ ಆರೋಪಿ ಐಟಿ ಕಂಪನಿ ಉದ್ಯೋಗಿ ಅರೆಸ್ಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಂಗಾತಿಯನ್ನು ಹತ್ಯೆಗೈದು ಕುಕ್ಕರ್‌ನಲ್ಲಿ ಬೇಯಿಸಿದ ಪ್ರಿಯಕರ..!

(ನ್ಯೂಸ್ ಕಡಬ) newskadba.com ಮುಂಬೈ, ಜೂ. 08. ವ್ಯಕ್ತಿಯೊಬ್ಬನು ತನ್ನ ಸಂಗಾತಿಯನ್ನು ಹತ್ಯೆಗೈದು, ದೇಹದ ಭಾಗವನ್ನು ತುಂಡು ಮಾಡಿ ಅದನ್ನು ಕುಕ್ಕರ್ ನಲ್ಲಿ ಬೇಯಿಸಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ. ಕೊಲೆಯಾದವರನ್ನು ಸರಸ್ವತಿ ವೈದ್ಯ (36) ಎಂದು ಗುರುತಿಸಲಾಗಿದೆ. ಈಕೆ ಮನೋಜ್ ಸಹಾನಿ (36) ಎಂಬಾತನೊಂದಿಗೆ ಕಳೆದ ಮೂರು ವರ್ಷಗಳಿಂದ ವಾಸವಾಗಿದ್ದಳು. ಬುಧವಾರದಂದು ಸಂಜೆ ಮನೋಜ್‌ ಅವರ ನಿವಾಸದಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಮಾಹಿತಿ ಪಡೆದು ತನಿಖೆ ನಡೆಸಿದ

ಸಂಗಾತಿಯನ್ನು ಹತ್ಯೆಗೈದು ಕುಕ್ಕರ್‌ನಲ್ಲಿ ಬೇಯಿಸಿದ ಪ್ರಿಯಕರ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹಾಸ್ಟೆಲ್ ರೂಂನಲ್ಲಿ ವಿದ್ಯಾರ್ಥಿನಿ ಕೊಲೆ ಪ್ರಕರಣ ➤ ನಾಪತ್ತೆಯಾಗಿದ್ದ ಸೆಕ್ಯುರಿಟಿ ಗಾರ್ಡ್ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮುಂಬೈ, ಜೂ. 07. ಹಾಸ್ಟೆಲ್ ನಲ್ಲಿ ವಾಸವಿದ್ದ 18 ವರ್ಷದ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಆರೋಪಿ ಸೆಕ್ಯುರಿಟಿ ಗಾರ್ಡ್ ಮೃತದೇಹವು ಹಾಸ್ಟೆಲ್ ಸಮೀಪದ ರೈಲ್ವೇ ಟ್ರಾಕ್ ಬಳಿ ಪತ್ತೆಯಾಗಿದೆ. ಆದುದರಿಂದ ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ. ಹಾಸ್ಟೆಲ್ ನಲ್ಲಿ ವಾಸವಿದ್ದ ವಿದ್ಯಾರ್ಥಿನಿಯು ಮಂಗಳವಾರದಂದು ಸಂಜೆ ನಾಪತ್ತೆಯಾಗಿರುವ ಕುರಿತು ದಾಖಲಾದ ದೂರಿನಂತೆ ಹುಡುಕಾಟ ನಡೆಸಿದಾಗ ಹಾಸ್ಟೆಲ್ ನ ನಾಲ್ಕನೇ ಮಹಡಿಯ ಕೊಠಡಿಯೊಂದರಲ್ಲಿ ವಿದ್ಯಾರ್ಥಿನಿಯ ಮೃತದೇಹ

ಹಾಸ್ಟೆಲ್ ರೂಂನಲ್ಲಿ ವಿದ್ಯಾರ್ಥಿನಿ ಕೊಲೆ ಪ್ರಕರಣ ➤ ನಾಪತ್ತೆಯಾಗಿದ್ದ ಸೆಕ್ಯುರಿಟಿ ಗಾರ್ಡ್ ಮೃತದೇಹ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಖ್ಯಾತ ಸಿನಿಮಾ ಪತ್ರಕರ್ತ ಮಂಗಳೂರು ಮೂಲದ ರೌಫ್ ಅಹ್ಮದ್ ನಿಧನ

(ನ್ಯೂಸ್ ಕಡಬ) newskadaba.com ಮುಂಬೈ, ಫೆ. 07. ಚಲನಚಿತ್ರ ಪತ್ರಿಕೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿ ಆ ಕ್ಷೇತ್ರದಲ್ಲಿ ಹಲವು ಹೊಸ ಪ್ರಯೋಗಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ಮಂಗಳೂರು ಮೂಲದ ಖ್ಯಾತ ಪತ್ರಕರ್ತ, ಲೇಖಕ, ರೌಫ್ ಅಹ್ಮದ್ ಮುಂಬೈನಲ್ಲಿ ನಿಧನರಾಗಿದ್ದಾರೆ. 70ರ ದಶಕದ ಮದ್ಯಭಾಗದಿಂದ ಸಂಪಾದಕರಾಗಿ, ನಿಯತಕಾಲಿಕೆಗಳ ಮೂಲಕ ಚಲನಚಿತ್ರ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದ ಕೀರ್ತಿ ರೌಫ್ ಅಹ್ಮದ್ ಅವರದ್ದು. ಮೃತರು ಪತ್ನಿ, ಪುತ್ರ, ಪುತ್ರಿ,ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಎಂದೆನ್ನಲಾಗಿದೆ.

ಖ್ಯಾತ ಸಿನಿಮಾ ಪತ್ರಕರ್ತ ಮಂಗಳೂರು ಮೂಲದ ರೌಫ್ ಅಹ್ಮದ್ ನಿಧನ Read More »

ರಾಷ್ಟ್ರೀಯ ನ್ಯೂಸ್

ಮಾಜಿ ಕ್ರಿಕೆಟರ್‌ ವಿನೋದ್‌ ಕಾಂಬ್ಳಿ ವಿರುದ್ಧ ಎಫ್‌ಐಆರ್‌ !

(ನ್ಯೂಸ್ ಕಡಬ)newskadaba.com ಮುಂಬೈ,ಫೆ.06.ಕುಡಿದ ಮತ್ತಿನಲ್ಲಿ ತನ್ನ ಪತ್ನಿಯ ಮೇಲೆ ದೌರ್ಜನ್ಯವೆಸಗಿದ ಆರೋಪದ ಮೇಲೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನೋದ್‌ ಕಾಂಬ್ಳಿ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇಬ್ಬರು ಪೊಲೀಸ್‌ ಸಿಬ್ಬಂದಿ ಕ್ರಿಕೆಟಿಗನ ಫ್ಲ್ಯಾಟ್‌ಗೆ ತೆರಳಿ ನೋಟೀಸ್‌ ನೀಡಿದ್ದಾರೆ. ಆ ಮೂಲಕ ಈ ಪ್ರಕರಣ ಸಂಬಂಧ ಬಾಂದ್ರಾ ಪೊಲೀಸ್‌ ಠಾಣೆಗೆ ಬಂದು ಹೇಳಿಕೆ ನೀಡುವಂತೆ ಸೂಚಿಸಿದ್ದಾರೆ. ಆದರೆ, ಈ ಪ್ರಕರಣ ಸಂಬಂಧ ವಿನೋದ್ ಕಾಂಬ್ಳಿ ಅವರನ್ನು ಬಂಧಿಸಿಲ್ಲ ಎಂದು ತಿಳಿದುಬಂದಿದೆ.  

ಮಾಜಿ ಕ್ರಿಕೆಟರ್‌ ವಿನೋದ್‌ ಕಾಂಬ್ಳಿ ವಿರುದ್ಧ ಎಫ್‌ಐಆರ್‌ ! Read More »

ರಾಷ್ಟ್ರೀಯ ನ್ಯೂಸ್

ಮೂರೇ ದಿನದಲ್ಲಿ ಅದಾನಿಗೆ 5.56 ಲಕ್ಷ ಕೋಟಿ ರೂ. ನಷ್ಟ

(ನ್ಯೂಸ್ ಕಡಬ)newskadaba.com ಮುಂಬೈ, ಜ.31. ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ ನ ವರದಿಯ ಬಳಿಕ ಅದಾನಿ ಸಮೂಹಕ್ಕೆ ಸೇರಿದ ಕಂಪನಿಗಳ ಷೇರು ಮೌಲ್ಯ ಒಂದೇ ಸಮನೆ ಕುಸಿತ ಕಾಣುತ್ತಿದ್ದು, ಕಳೆದ ಮೂರು ದಿನಗಳಲ್ಲಿ 5.56 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿವೆ. ಅದಾನಿ ಸಮೂಹ ಸಂಸ್ಥೆಗಳ ಮಾರುಕಟ್ಟೆ ಮೌಲ್ಯ ಒಟ್ಟು 5.56 ಲಕ್ಷ ಕೋಟಿ ರೂ. ಕಡಿಮೆಯಾಗಿದೆ.

ಮೂರೇ ದಿನದಲ್ಲಿ ಅದಾನಿಗೆ 5.56 ಲಕ್ಷ ಕೋಟಿ ರೂ. ನಷ್ಟ Read More »

ರಾಷ್ಟ್ರೀಯ ನ್ಯೂಸ್

ಬಾಲಿವುಡ್ ನಟಿ ರಾಖಿ ಸಾವಂತ್ ತಾಯಿ ನಿಧನ !

(ನ್ಯೂಸ್ ಕಡಬ)newskadaba.com ಮುಂಬೈ, ಜ.30. ಬಾಲಿವುಡ್ ನಟಿ ರಾಖಿ ಸಾವಂತ್‌ ಅವರ ತಾಯಿ ಜಯಾ ಭೇದಾ ಸಾವಂತ್‌ ಅವರು ನಿಧನರಾಗಿದ್ದಾರೆ. ಸುದೀರ್ಘ ಕಾಲದಿಂದ ಕ್ಯಾನ್ಸರ್ ಹಾಗೂ ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಜಯಾ ಭೇದಾ, ಮುಂಬೈನ ಜುಹು ಪ್ರದೇಶದಲ್ಲಿರುವ ಸಿಟಿ ಕೇರ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.   ಮೃತದೇಹವನ್ನು ಆಸ್ಪತ್ರೆಯಿಂದ ಅಂತಿಮ ವಿಧಿ ವಿಧಾನಕ್ಕಾಗಿ ತೆಗೆದುಕೊಂಡು ಹೋಗಲಾಗಿದೆ. ರಾಖಿ ಸಾವಂತ್‌ ತಾಯಿಯ ನಿಧನಕ್ಕೆ ಬಾಲಿವುಡ್‌ನ ಹಲವರು ಕಂಬನಿ ಮಿಡಿದಿದ್ದಾರೆ. ತಾಯಿಯನ್ನು ಕಳೆದುಕೊಂಡು ರಾಖಿ ಸಾವಂತ್ ದುಃಖತಪ್ತರಾಗಿದ್ದಾರೆ.  

ಬಾಲಿವುಡ್ ನಟಿ ರಾಖಿ ಸಾವಂತ್ ತಾಯಿ ನಿಧನ ! Read More »

ರಾಷ್ಟ್ರೀಯ ನ್ಯೂಸ್
Scroll to Top