ಮಂಗಳೂರು: ಪೆಟ್ರೋಲ್ ಪಂಪ್ ಬಳಿ ಕಾರಿಗೆ ಹಠಾತ್ ಬೆಂಕಿ
(ನ್ಯೂಸ್ ಕಡಬ) newskadaba.com ನ. 09.ಮಂಗಳೂರು: ಮಂಗಳೂರಿನ ಲೇಡಿಹಿಲ್ ನ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಮಾರುತಿ 800 ಕಾರ್ ಹಠಾತ್ ಬೆಂಕಿ ಹತ್ತಿಕೊಂಡ ಘಟನೆ ಆದಿತ್ಯವಾರ ಸಂಭವಿಸಿದೆ. ಕಾರಿನಲ್ಲಿದ್ದ ಮೂವರೂ ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ರಸ್ತೆಯ ಅಂಚಿನಲ್ಲೇ ಇರುವ ಪೆಟ್ರೋಲ್ ಪಂಪ್ ಮುಂಭಾಗ ನಿಂತಿತ್ತು. ಕೂಡಲೇ ಪಂಪ್ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ರಸ್ತೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ […]
ಮಂಗಳೂರು: ಪೆಟ್ರೋಲ್ ಪಂಪ್ ಬಳಿ ಕಾರಿಗೆ ಹಠಾತ್ ಬೆಂಕಿ Read More »
ಕರಾವಳಿ







