Mangalore

ಕಡಬ: ನ್ಯೂ ಫ್ರೆಂಡ್ಸ್ ಕ್ಲಬ್ ವತಿಯಿಂದ ಇಫ್ತಾರ್ ಕೂಟ

(ನ್ಯೂಸ್ ಕಡಬ)newskadaba.com ಕಡಬ, ಏ.20. ನ್ಯೂ ಫ್ರೆಂಡ್ಸ್ ಕ್ಲಬ್ ರಿ ಕಡಬ ಇದರ ವತಿಯಿಂದ ದಿನಾಂಕ 16/04/2023ರಂದು ಕಡಬ ರಹ್ಮಾನಿಯಾ ಟೌನ್ ಜುಮಾ ಮಸೀದಿಯ ವತಾರದಲ್ಲಿ ನಡೆಯಿತು. ಸುಮಾರು 400 ಜನ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಕಡಬ,ಕಾರ್ಯದರ್ಶಿ ಇರ್ಷಾದ್,ಕಜಾಂಜಿ ಜಾಫರ್,ಉಸ್ತುವಾರಿ ಷರೀಫ್ ಟಿ, ಮಸೀದಿಯ ಅಧ್ಯಕ್ಷರಾದ ಕೆ ಅಬ್ದುಲ್ ಖಾದರ್ ಹಾಜಿ,ಕಾರ್ಯದರ್ಶಿ ಹಮೀದ್ ಹಾಜಿ,ಉಪಾಧ್ಯಕ್ಷರಾದ ಅಶ್ರಫ್ ಶೇಡಿಗುಂಡಿ, ಕೇಂದ್ರ ಜುಮಾ ಮಸೀದಿಯ ಕಾರ್ಯದರ್ಶಿ ಫೈಝಲ್ ಕಡಬ ಮುಂತಾದವರು ಭಾಗವಹಿಸಿದ್ದರು.

ಕಡಬ: ನ್ಯೂ ಫ್ರೆಂಡ್ಸ್ ಕ್ಲಬ್ ವತಿಯಿಂದ ಇಫ್ತಾರ್ ಕೂಟ Read More »

ಕರಾವಳಿ

ಮಂಗಳೂರು: ಮಣ್ಣು ಕುಸಿದು ಜೆಸಿಬಿ ಚಾಲಕ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.20. ಜೆಸಿಬಿಯಿಂದ ಮಣ್ಣು ಅಗೆತದ ವೇಳೆ ಮಣ್ಣು ಕುಸಿದು ಜೆಸಿಬಿಯ ಮೇಲೆ ಬಿದ್ದು ಜೆಸಿಬಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆ. ಜೆಸಿಬಿಯ ಚಾಲಕ ಝಾರ್ಖಂಡ್‌ ಕೊಸಾರ್‌ ಅನ್ಸಾರಿ (22) ಮೃತರು ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಬಜಪೆ ಪೊಲೀಸರು ಧಾವಿಸಿ ಬಂದಿದ್ದರು. ಸ್ಥಳೀಯರು ಹಾಗೂ ಎರಡು ಜೆಸಿಬಿ ಸಹಾಯದಿಂದ ಮಣ್ಣು ತೆಗೆಯಲಾಯಿತಾದರೂ, ಅದಾಗಲೇ ಚಾಲಕ ಮೃತಪಟ್ಟಿದ್ದರು ಎನ್ನಲಾಗಿದೆ.

ಮಂಗಳೂರು: ಮಣ್ಣು ಕುಸಿದು ಜೆಸಿಬಿ ಚಾಲಕ ಮೃತ್ಯು Read More »

ಕರಾವಳಿ

ಕಡಬ:ಕಂಠ ಪೂರ್ತಿ ಕುಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ವ್ಯಕ್ತಿ

(ನ್ಯೂಸ್ ಕಡಬ)newskadaba.com ಕಡಬ, ಏ,20. ಗ್ರಾಮಕರಣಿಕರೊಬ್ಬರು  ಕಂಠ ಪೂರ್ತಿ ಕುಡಿದು ಬಾರ್ ಮುಂದೆಯೇ  ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ  ಘಟನೆ ಕಡಬ ಸಮೀಪದ ಕಳಾರದಿಂದ ವರದಿಯಾಗಿದೆ. ಕಂಠ ಪೂರ್ತಿ ಬಿದ್ದಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಕೆಲ ಸಮಯದ ಬಳಿಕ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳೇ ಆತನನ್ನು ಮನೆಗೆ ತಲುಪಿಸಿರುವುದಾಗಿ ತಿಳಿದು ಬಂದಿದೆ. 15 ದಿನಗಳ ಹಿಂದೆ  ಕುಡಿದು ಬಿದ್ದು ಕಣ್ಣಿಗೆ ಪೆಟ್ಟಾಗಿ ಚಿಂತ ಜನಕ  ಸ್ಥಿತಿಯಲ್ಲಿ ಇದ್ದ ಇವರು ಕಡಬ ಆಸ್ಪತ್ರೆಗೆ ದಾಖಲಾಗಿ  ಹೆಚ್ಚಿನ ಚಿಕಿತ್ಸೆಗಾಗಿ 

ಕಡಬ:ಕಂಠ ಪೂರ್ತಿ ಕುಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ವ್ಯಕ್ತಿ Read More »

ಕರಾವಳಿ

ದಕ್ಷಿಣ ಕನ್ನಡ: 17 ಅಭ್ಯರ್ಥಿಗಳಿಂದ 18 ನಾಮಪತ್ರ ಸಲ್ಲಿಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.20. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಪ್ರಿಲ್ 19 ರ ಬುಧವಾರ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 17 ಅಭ್ಯರ್ಥಿಗಳು 18 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಹೇಶ್ ನಾಮಪತ್ರ ಸಲ್ಲಿಸಿದ್ದಾರೆ. ಮೂಡುಬಿದರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರ ಎಸ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ದಯಾನಂದ, ಪಕ್ಷೇತರ ಅಭ್ಯರ್ಥಿಯಾಗಿ

ದಕ್ಷಿಣ ಕನ್ನಡ: 17 ಅಭ್ಯರ್ಥಿಗಳಿಂದ 18 ನಾಮಪತ್ರ ಸಲ್ಲಿಕೆ Read More »

ಕರಾವಳಿ

ನಿಷೇಧಿತ ಇ-ಸಿಗರೇಟ್‌ ವಿರುದ್ಧ ಪೊಲೀಸರ ಕಾರ್ಯಾಚರಣೆ ➤ ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ)newskadaba.com ಉಡುಪಿ, ಏ. 20. ಐ.ಟಿ.ಸಿ ಕಂಪೆನಿಯ ಗೋಲ್ಡ್ ಫ್ಲೇಕ್ ನಕಲಿ ಸಿಗರೇಟ್‌ಗಳು, ವಿದೇಶಿ ಕಂಪನಿಯ ಸಿಗರೇಟ್ ಹಾಗೂ ನಿಷೇಧಿತ ಇ- ಸಿಗರೇಟ್‌ ವಿರುದ್ಧ ಉಡುಪಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, 3 ಪ್ರಕರಣಗಳಲ್ಲಿ 4 ಆರೋಪಿಗಳನ್ನು ಬಂಧಿಸಿ 6,34,970 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಪ್ರಿಲ್ 17 ರಂದು ಪಡುಬಿದ್ರಿ ಪೊಲೀಸರು ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 4,79,970 ರೂಪಾಯಿ ಮೌಲ್ಯದ ಇ ಸಿಗರೇಟ್ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದರು.

ನಿಷೇಧಿತ ಇ-ಸಿಗರೇಟ್‌ ವಿರುದ್ಧ ಪೊಲೀಸರ ಕಾರ್ಯಾಚರಣೆ ➤ ನಾಲ್ವರು ಆರೋಪಿಗಳ ಬಂಧನ Read More »

ಕರಾವಳಿ

ಮಂಗಳೂರು: ಹೂಡಿಕೆ ಮಾಡಿಸಿಕೊಂಡು ವಂಚನೆ   ➤ 10.25 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.20. ಅಧಿಕ ಲಾಭ ಗಳಿಸುವ ಉದ್ದೇಶದಿಂದ ತಾನು ಆ್ಯಪ್ ಒಂದರಲ್ಲಿ ಹಣ ಹೂಡಿಕೆ ಮಾಡಿ ಬಳಿಕ 10.25 ಲಕ್ಷ ರೂ.ವನ್ನು ಕಳೆದುಕೊಂಡಿರುವುದಾಗಿ ವ್ಯಕ್ತಿಯೊಬ್ಬರು ಮಂಗಳೂರು ಸೆನ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾರರು ಕಳೆದ ವರ್ಷ ಇನ್ಸ್ಸ್ಟಾಗ್ರಾಮ್ ಖಾತೆ ಪರಿಶೀಲನೆ ಮಾಡುತ್ತಿದ್ದಾಗ, ಕ್ರಿಕೆಟಿಗ ಸುರೇಶ್ ರೈನಾ ಬ್ರಾಂಡ್ ಅಂಬಾಸೆಡರ್ ಆಗಿದ್ದ ಆ್ಯಪ್ ನೋಡಿದ್ದರು. ಅದರಲ್ಲಿ ಹಣ ಹೂಡಿಕೆಯಿಂದ ಲಾಭಗಳಿಸಬಹುದು ಎಂದು ಪ್ರಚಾರ ಮಾಡಿರುವುದು ಕಂಡು ಬಂದಿದೆ ಎನ್ನಲಾಗಿದೆ.  

ಮಂಗಳೂರು: ಹೂಡಿಕೆ ಮಾಡಿಸಿಕೊಂಡು ವಂಚನೆ   ➤ 10.25 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ Read More »

ಕರಾವಳಿ

ಬಂಟ್ವಾಳ: ಅಕ್ರಮ ಗೋ ಸಾಗಾಟ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.20. ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ಖಚಿತ ಮಾಹಿತಿಯನ್ವಯ ಬಂಟ್ವಾಳ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಬಂಧಿಸಿ, ಎರಡು ಜಾನುವಾರುಗಳನ್ನು ರಕ್ಷಿಸಲಾಗಿದೆ. ಆರೋಪಿ ಕಾರಾಜೆಯ ಪ್ರದೀಪ್ ಸಿಕ್ವೇರ ಚಲಾಯಿಸುತ್ತಿದ್ದ ಪಿಕಪ್ ನಲ್ಲಿ ಎರಡು ಜಾನುವಾರುಗಳಿದ್ದು, ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.  

ಬಂಟ್ವಾಳ: ಅಕ್ರಮ ಗೋ ಸಾಗಾಟ ➤ ಆರೋಪಿ ಅರೆಸ್ಟ್ Read More »

ಕರಾವಳಿ

ಬಟ್ಟೆ ತೊಳೆಯಲು ನದಿಗೆ ತೆರಳಿದ್ದ ಮಹಿಳೆ ಮೃತ್ಯು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.20. ಬಟ್ಟೆ ತೊಳೆಯಲು ನದಿಗೆ ಹೋಗಿದ್ದ ಮಹಿಳೆಯೋರ್ವರು ನೇತ್ರಾವತಿ ನದಿಯಲ್ಲಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಂಟ್ವಾಳದ ಬರಿಮಾರು ಗ್ರಾಮದ ಬುರ್ದು ನಿವಾಸಿ ರಾಮಕ್ಕು(58) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಬಡ ಕುಟುಂಬದ ಮಹಿಳೆ ಇವರಾಗಿದ್ದು, ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ‌‌  

ಬಟ್ಟೆ ತೊಳೆಯಲು ನದಿಗೆ ತೆರಳಿದ್ದ ಮಹಿಳೆ ಮೃತ್ಯು Read More »

ಕರಾವಳಿ

ಸುಳ್ಯ: ಮರದಿಂದ ಬಿದ್ದು ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ಸುಳ್ಯ, ಏ.19. ಯುವಕನೋರ್ವ ಮರದಿಂದ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಸಂಪಾಜೆಯಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಕರಿಕೆ ಮೂಲದ ವಿಜಯ್ ಗುರುತಿಸಲಾಗಿದೆ. ಕರಿಕೆಯಿಂದ ಮೂವರು ಜೇನು ತೆಗೆಯಲೆಂದು ಸಂಪಾಜೆಗೆ ಬಂದಿದ್ದರು. ಸಂಪಾಜೆಯಲ್ಲಿ ಜೇನು ತೆಗೆಯುತ್ತಿದ್ದ ಸಂದರ್ಭ ವಿಜಯ್ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಸುಳ್ಯ: ಮರದಿಂದ ಬಿದ್ದು ಯುವಕ ಮೃತ್ಯು Read More »

ಕರಾವಳಿ

(ನ್ಯೂಸ್ ಕಡಬ)Newskadaba.com ಮಂಗಳೂರು ,ಏ.19 ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಗ್ರಾಮಾಂತರ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ. ಮಂಗಳೂರಿನ ಕಣ್ಣೂರಿನ ಬೋರುಗುಡ್ಡೆ ನಿವಾಸಿ ಫಝಲ್ ಅಲಿಯಾಸ್ ಮೊಹಮ್ಮದ್ ಫಝಲ್ ಅಲಿಯಾಸ್ ಪಚ್ಚು ಮಲ್ಲೂರು (32), ಅಡ್ಯಾರ್ ಮಸೀದಿ ಬಳಿಯ ನಿವಾಸಿ ಮೊಹಮ್ಮದ್ ಅಶ್ರಫ್ ಅಲಿಯಾಸ್ ಅಚ್ಚ (42), ಅಡ್ಯಾರ್ ಪದವು ಮತ್ತು ರೈಲ್ವೆ ಗೇಟ್ ಬಳಿಯ ನಿವಾಸಿ ಮೊಹಮ್ಮದ್ ಅಲ್ತಾಫ್ (26) ಬಂಧಿತರು ಎಂದು ತಿಳಿದುಬಂದಿದೆ.          

Read More »

ಕರಾವಳಿ
Scroll to Top