Mangalore

ಮಂಗಳೂರು: ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.23. ಮೀನುಗಾರಿಕೆಗೆ ತೆರಳಿ ದೋಣಿಯಲ್ಲಿ ಬಲೆಯನ್ನು ಎಳೆಯುತ್ತಿರುವವಾಗ ಸಮುದ್ರದ ಅಲೆಯ ಹೊಡೆತಕ್ಕೆ ಸಿಲುಕಿ ಮೀನುಗಾರರೊಬ್ಬರು ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ನಾಗರಾಜ (43) ಎಂದು ಗುರುತಿಸಲಾಗಿದೆ. ಇನ್ನು ದೋಣಿಯಲ್ಲಿದ್ದವರು ನೀರಿಗೆ ಬಿದ್ದ ತಕ್ಷಣ ನಾಗರಾಜ ಅವರನ್ನು ನೀರಿನಿಂದ ಮೇಲಕ್ಕೆತ್ತಿ ಉಪಚರಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ಸೇರಿಸಿ ಬಳಿಕ ಅಲ್ಲಿಂದ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.  

ಮಂಗಳೂರು: ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು Read More »

ಕರಾವಳಿ

ಧರ್ಮಸ್ಥಳ: ಡಿಕೆಶಿ ಹೆಲಿಕಾಪ್ಟರ್ ಧಿಡೀರ್ ತಪಾಸಣೆ

(ನ್ಯೂಸ್ ಕಡಬ)newskadaba.com ಧರ್ಮಸ್ಥಳ, ಏ.23. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಧರ್ಮಸ್ಥಳಕ್ಕೆ ಪ್ರವಾಸ ಕೈಗೊಂಡಿದ್ದು, ಹೆಲಿಪ್ಯಾಡ್ ನಲ್ಲಿ ಕುಟುಂಬ ಸಮೇತ ಬಂದಿಳಿದರು ಎಂದು ವರದಿ ತಿಳಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅಧಿಕಾರಿಗಳು ರಾಜಕಾರಣಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಡಿ.ಕೆ.ಶಿವಕುಮಾರ್ ಅವರ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಇತ್ತೀಚೆಗೆ ಧರ್ಮಸ್ಥಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬಂದಿದ್ದಾಗಲೂ ಅವರ ಹೆಲಿಕಾಪ್ಟರ್ ಅನ್ನು ಪರಿಶೀಲನೆ ನಡೆಸಲಾಗಿತ್ತು ಎನ್ನಲಾಗಿದೆ.

ಧರ್ಮಸ್ಥಳ: ಡಿಕೆಶಿ ಹೆಲಿಕಾಪ್ಟರ್ ಧಿಡೀರ್ ತಪಾಸಣೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ಉಗ್ರರ ದಾಳಿಯಿಂದಾಗಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.23. ಸೇನೆಯ ರಾಷ್ಟ್ರೀಯ ರೈಫಲ್ಸ್‌ ತುಕಡಿಗೆ ಸೇರಿದ ಜಮ್ಮುವಿನ ಪೂಂಚ್-ರಜೌರಿ ವಿಭಾಗದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯದಲ್ಲಿ ತೊಡಗಿದ್ದ ಸೇನಾ ವಾಹನವೊಂದರ ಮೇಲೆ ಭಯೋತ್ಪಾದಕರು ಗ್ರೆನೇಡ್ ಹಾಗೂ ಅತ್ಯಾಧುನಿಕ ವಿದೇಶಿ ಶಸ್ತ್ರಾಸ್ತ್ರಗಳ ಮೂಲಕ ನಡೆಸಿದ ದಾಳಿಯಲ್ಲಿ ಐವರು ಸೈನಿಕರು ಹುತಾತ್ಮರಾಗಿದ್ದು, ಓರ್ವ ಸೈನಿಕ ತೀವ್ರ ಗಾಯಗೊಂಡಿದ್ದು, ಸೇನಾ ವಾಹನ ಹೊತ್ತಿ ಉರಿದು ನಾಶವಾಗಿದೆ. ಇಂದು ಸಂಜೆ ಮಂಗಳೂರಿನ ಕದ್ರಿಯಲ್ಲಿರುವ ಸೈನಿಕ ಸ್ಮಾರಕದಲ್ಲಿ ನಗರದ ಪ್ರಮುಖರು ಸೇರಿ ರಾಷ್ಟ್ರಸೇವೆಗಾಗಿ ಬಲಿದಾನ ಗೈದು ಹುತಾತ್ಮರಾದ ರಾಷ್ಟ್ರೀಯ ರೈಫಲ್ಸ್‌ನ

ಮಂಗಳೂರು: ಉಗ್ರರ ದಾಳಿಯಿಂದಾಗಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ Read More »

ಕರಾವಳಿ

ಕರಾವಳಿಯಾದ್ಯಂತ ಗುಡುಗು ಸಹಿತ ಸಾಧರಣ ಮಳೆಯಾಗುವ ಸಾಧ್ಯತೆ     ➤ ಹವಾಮಾನ ‌ಇಲಾಖೆ ಮುನ್ಸೂಚನೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.21. ಮಂಗಳೂರು ಸೇರಿದಂತೆ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಅಥವಾ ಹಗುರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ‌ಇಲಾಖೆ ನೀಡಿದೆ. ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಗರಿಷ್ಠ ಉಷ್ಣಾಂಶವು ಕರಾವಳಿಯ ಕೆಲವು ಕಡೆಗಳಲ್ಲಿ ವಾಡಿಕೆಗಿಂತ 2ರಿಂದ 3 ಡಿಗ್ರಿ

ಕರಾವಳಿಯಾದ್ಯಂತ ಗುಡುಗು ಸಹಿತ ಸಾಧರಣ ಮಳೆಯಾಗುವ ಸಾಧ್ಯತೆ     ➤ ಹವಾಮಾನ ‌ಇಲಾಖೆ ಮುನ್ಸೂಚನೆ Read More »

ಕರಾವಳಿ

ಕಡಬ: ಐಪೋನ್ ಪಡೆಯಲು ಮೈಸೂರಿನಿಂದ ಕಡಬಕ್ಕೆ ಬಂದ ಯುವತಿ

(ನ್ಯೂಸ್ ಕಡಬ)newskadaba.com ಕಡಬ, ಏ.21. ಕಳೆದುಕೊಂಡ ಮೊಬೈಲ್ ಪಡೆಯಲು ಯುವತಿಯೊಬ್ಬಳು ತಮ್ಮ ಕುಟುಂಬ ಬಳಗದ ಜೊತೆ ಕಡಬ ಬಂದು ಪಡೆದುಕೊಂಡ ಘಟನೆ ವರದಿಯಾಗಿದೆ. ಬಟ್ಟೆ ಖರೀದಿಸಲು ಊಟಿಗೆ ಹೋಗಿದ್ದ ಕಡಬ ನಿವಾಸಿ ನಾಗರಾಜ್ ಎಂಬವರಿಗೆ  ಮೈಸೂರು ಬಳಿ ಬಸ್ ನಲ್ಲಿ ಅಧಿಕ ಬೆಲೆ ಬಾಳುವ ಐಪೋನ್ ಸಿಕ್ಕಿತ್ತು.  ಮೊಬೈಲ್  ಆನ್ ಮಾಡಿದ  ಕೆಲ ಸಮಯದ ಬಳಿಕ ಕರೆ ಬಂದಿದ್ದು ಖಚಿತ ಮಾಹಿತಿ ಪಡೆದುಕೊಂಡು ಸುಬ್ರಹ್ಮಣ್ಯ ಸಮೀಪದ ಕಡಬದಲ್ಲಿ ತಾನು ಇದ್ದು ಮೊಬೈಲ್ ತನ್ನ ಬಳಿಯೇ ಇದೆ ಎಂದು

ಕಡಬ: ಐಪೋನ್ ಪಡೆಯಲು ಮೈಸೂರಿನಿಂದ ಕಡಬಕ್ಕೆ ಬಂದ ಯುವತಿ Read More »

ಕರಾವಳಿ

ಬಂಟ್ವಾಳ: ಮಹಡಿ ಮೇಲಿನಿಂದ ಬಿದ್ದು ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.21. ಯುವಕನೋರ್ವ ಮಹಡಿ ಮೇಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ನಡೆದಿದೆ. ಸಿದ್ದಕಟ್ಟೆ ದೇವಸ್ಯ ನಿವಾಸಿ ದುರ್ಗಾ ಪ್ರಸಾದ್ ಮೃತರು ಎಂದು ಗುರುತಿಸಲಾಗಿದೆ. ದುರ್ಗಾ ಪ್ರಸಾದ್ ಸಿದ್ಧಕಟ್ಟೆ ಸಮೀಪದ ಮಾಡಮೆ ಎಂಬಲ್ಲಿ ಮನೆಯೊಂದರಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಮೇಲಿನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ‌ದೂರು ದಾಖಲಾಗಿದೆ.  

ಬಂಟ್ವಾಳ: ಮಹಡಿ ಮೇಲಿನಿಂದ ಬಿದ್ದು ಯುವಕ ಮೃತ್ಯು Read More »

ಕರಾವಳಿ

ಮಂಗಳೂರು: ಸೌದಿ ಅರೇಬಿಯಾದಲ್ಲಿ ಅಪಘಾತ..! ➤ ಕರಾವಳಿ ಮೂಲದ ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.21. ಸೌದಿ ಅರೇಬಿಯಾದಲ್ಲಿ ನಡೆದ ಅಪಘಾತದಲ್ಲಿ ಕರಾವಳಿ ಮೂಲದ ಯುವಕನೊಬ್ಬ ಮೃತಪಟ್ಟ ಬಗ್ಗೆ ವರದಿಯಾಗಿದೆ. ವಿಟ್ಲ ಸಮೀಪದ ಉಕ್ಕುಡ ನಿವಾಸಿ ಮಹಮ್ಮದ್ ಮೊಯ್ಲಿರ್ ಎಂಬವರ ಪುತ್ರ ಹಮೀಬ್ ಮೃತ ಯುವಕ. ಹಮೀಬ್ ಅವರು ಮೂರು ತಿಂಗಳ ಹಿಂದೆಯಷ್ಟೇ ವಿದೇಶಕ್ಕೆ ಕೆಲಸಕ್ಕೆ ತೆರಳಿದ್ದರು. ನಿಯಂತ್ರಣ ಕಳೆದುಕೊಂಡ ಕಾರು ಕಂಬಕ್ಕೆ ಢಿಕ್ಕಿ ಹೊಡೆದು ರಸ್ತೆಗೆ ಪಲ್ಟಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು: ಸೌದಿ ಅರೇಬಿಯಾದಲ್ಲಿ ಅಪಘಾತ..! ➤ ಕರಾವಳಿ ಮೂಲದ ಯುವಕ ಮೃತ್ಯು Read More »

ಕರಾವಳಿ

ಪಾನಮತ್ತ ವ್ಯಕ್ತಿಗಳಿಬ್ಬರ ಜಗಳ   ➤ ಕೊಲೆಯಲ್ಲಿ ಅಂತ್ಯ

(ನ್ಯೂಸ್ ಕಡಬ)newskadaba.com ಉದ್ಯಾವರ, ಏ.21. ಪಾನಮತ್ತರಾಗಿರುವ ವ್ಯಕ್ತಿಗಳಿಬ್ಬರ ನಡುವೆ ಜಗಳ ಉಂಟಾಗಿ, ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪಿತ್ರೋಡಿ ನಿವಾಸಿ ದಯಾನಂದ (40) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿ ಭರತ್ ನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.  

ಪಾನಮತ್ತ ವ್ಯಕ್ತಿಗಳಿಬ್ಬರ ಜಗಳ   ➤ ಕೊಲೆಯಲ್ಲಿ ಅಂತ್ಯ Read More »

ಕರಾವಳಿ

ಮಂಗಳೂರು: ಇನ್‌ಸ್ಟಾಗ್ರಾಂ ಖಾತೆ ಮೂಲಕ 90 ಸಾವಿರ ರೂ.ವಂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.21. ಇನ್‌ಸ್ಟಾಗ್ರಾಂ ಖಾತೆಯ ಮೂಲಕ 90 ಸಾವಿರ ರೂ. ವಂಚನೆ ಮಾಡಿರುವ ಕುರಿತಂತೆ ನಗರದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಇನ್‌ಸ್ಟಾ ಗ್ರಾಂ ಖಾತೆಯನ್ನು ವೀಕ್ಷಿಸುತ್ತಿರುವಾಗ ಸಮಯ ಅವರ ಗೆಳೆಯನ ಖಾತೆಯಿಂದ “ರಿಸಿವ್ಡ್ ರುಪೀಸ್‌ 4,16,000 ಇನ್‌ ಯುವರ್‌ ಇನ್‌ಸ್ಟಾಗ್ರಾಂ ವಾಲೆಟ್‌’ ಎಂಬ ಪೋಸ್ಟ್‌ ಬಂದಿದೆ. ತತ್‌ಕ್ಷಣ ಅವರಿಗೆ “ಲಿಝಿ ಹೋಪರ್‌’ ಎನ್ನುವ ಖಾತೆಯಿಂದ ಸಂದೇಶಗಳು ಬರಲು ಆರಂಭಿಸಿದ್ದು, ಅದು ಗೆಳೆಯನ ಇನ್‌ಸ್ಟಾಗ್ರಾಂ ಖಾತೆ ಎಂದು ನಂಬಿ ಎ. 12ರಂದು 40,000

ಮಂಗಳೂರು: ಇನ್‌ಸ್ಟಾಗ್ರಾಂ ಖಾತೆ ಮೂಲಕ 90 ಸಾವಿರ ರೂ.ವಂಚನೆ Read More »

ಕರಾವಳಿ

ಪುತ್ತೂರು: ಟಿಪ್ಪರ್ ಲಾರಿ ವಿದ್ಯುತ್ ಕಂಬಕ್ಕೆ ಢಿಕ್ಕಿ

(ನ್ಯೂಸ್ ಕಡಬ)newskadaba.com ಪುತ್ತೂರು, ಏ.20. ಬೆದ್ರಾಳ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಟಿಪ್ಪರ್‌ ಲಾರಿಯೊಂದು ಬೆದ್ರಾಳ ರೈಲ್ವೇ ಸೇತುವೆ ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಬಸಕ್ಕೆ ವಿದ್ಯತ್‌ ಕಂಬ ಧರೆಗೆ ಉರುಳಿ ಬಿದ್ದಿದ್ದು, ತಂತಿಗಳು ತುಂಡಾಗಿ ಬಿದ್ದಿದೆ. ಇನ್ನು ಟಿಪ್ಪರ್‌ ಚಾಲಕನ ಕೈಗೆ ಗಾಯವಾಗಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರ್‌ ನ ಅತೀ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ವರದಿಯಾಗಿದೆ.

ಪುತ್ತೂರು: ಟಿಪ್ಪರ್ ಲಾರಿ ವಿದ್ಯುತ್ ಕಂಬಕ್ಕೆ ಢಿಕ್ಕಿ Read More »

ಕರಾವಳಿ
Scroll to Top