Mangalore

ಮಂಗಳೂರು: ಸಿಇಟಿ ಪರೀಕ್ಷೆ ಆರಂಭ !!

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.20. ಎಂಜಿನಿಯರಿಂಗ್ ಮತ್ತು ಬಿಎಸ್ಸಿ ನರ್ಸಿಂಗ್ ವೃತ್ತಿಪರ ಕೋರ್ಸ್‌ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ದಕ್ಷಿಣ ಕನ್ನಡ , ಉಡುಪಿ ಉಭಯ ಜಿಲ್ಲೆಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂದು ಹಾಗೂ ನಾಳೆ ಪರೀಕ್ಷೆ ನಡೆಯಲಿದ್ದು ದ.ಕ.ದಲ್ಲಿ 28 ಕೇಂದ್ರಗಳಲ್ಲಿ 16,113 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಉಡುಪಿಯಲ್ಲಿ 12 ಕೇಂದ್ರಗಳಲ್ಲಿ 5,712 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳನ್ನು ಯಾವುದೇ ಅಡೆತಡೆಯಿಲ್ಲದೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಎರಡೂ […]

ಮಂಗಳೂರು: ಸಿಇಟಿ ಪರೀಕ್ಷೆ ಆರಂಭ !! Read More »

ಕರಾವಳಿ

ಉಡುಪಿ: ಶ್ರೀಕೃಷ್ಣನ ರಾಜಾಂಗಣದಲ್ಲಿ ಕಸ ತ್ಯಾಜ್ಯ        ➤ ಪ್ರವಾಸಿಗರಿಗೆ ದುರ್ವಾಸನೆಯ ದರ್ಶನ

(ನ್ಯೂಸ್ ಕಡಬ)newskadaba.com ಉಡುಪಿ, ಮೇ.20. ಉಡುಪಿಯ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕೃಷ್ಣ ಮಠದಲ್ಲಿ ಒಂದೆಡೆ ಪ್ರವಾಸಿಗರ ದಂಡು ಹರಿದು ಬರುತ್ತಿದ್ದಲ್ಲಿ ಮತ್ತೊಂದೆಡೆ ಪ್ರವಾಸಿಗರು ದುರ್ವಾಸನೆಯಲ್ಲಿ ನಲುಗುತ್ತಿದ್ದಾರೆ. ಶ್ರೀಕೃಷ್ಣ ಮಠದ, ಧಾರ್ಮಿಕ ಮತ್ತು ಇತರ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುವ ರಾಜಾಂಗಣ ಸಭಾಭವನದ, ಮೂಡಣ ಪ್ರವೇಶ ದ್ವಾರದ ಸನಿಹ ಕಸ ತ್ಯಾಜ್ಯಗಳನ್ನು ಸಂಗ್ರಹಿಸಿ ಇಡಲಾಗಿದ್ದು, ಪರಿಣಾಮ ಪವಿತ್ರ ತೀರ್ಥ ಕ್ಷೇತ್ರದ ಅಂದಗೆಟ್ಟಿದ್ದಲ್ಲದೆ, ಇಲ್ಲಿ ರೋಗ ವಾಹಕ ಸೊಳ್ಳೆಗಳ ಉತ್ಪತ್ತಿಯಾಗುವ ಲಕ್ಷಣಗಳು ಕಂಡುಬಂದಿವೆ. “ಸುಂದರ ಉಡುಪಿ- ಶ್ರೀಕೃಷ್ಣನ ಉಡುಪಿ”

ಉಡುಪಿ: ಶ್ರೀಕೃಷ್ಣನ ರಾಜಾಂಗಣದಲ್ಲಿ ಕಸ ತ್ಯಾಜ್ಯ        ➤ ಪ್ರವಾಸಿಗರಿಗೆ ದುರ್ವಾಸನೆಯ ದರ್ಶನ Read More »

ಕರಾವಳಿ

ತಂದೆ-ಮಗನ ಹೊಡೆದಾಟ..! ➤ ಗಾಯಾಳು ತಂದೆ ಚಿಕಿತ್ಸೆ ಫಲಿಸದೆ ಮೃತ್ಯು

(ನ್ಯೂಸ್ ಕಡಬ)newskadaba.com ಬೆಳ್ಳಾರೆ, ಮೇ.20. ತ೦ದೆ – ಮಗನ ಹೊಡೆದಾಟದಲ್ಲಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆ ಮೃತಪಟ್ಟ ಘಟನೆ ನಡೆದಿದೆ. ಅಮರಮುಡ್ಡೂರು ಗ್ರಾಮದ ಕುಕ್ಕುಜಡ್ಕದಲ್ಲಿ ಕಳೆದ ಒಂದು ವಾರದ ಹಿಂದೆ ಘಟನೆ ನಡೆದಿದ್ದು ಕಿಟ್ಟು ಹಾಗೂ ಮಗ ಹರ್ಷಿತ್‌ ಹೊಡೆದಾಟ ನಡೆಸಿಕೊಂಡಿದ್ದರು. ಹಳೆಯ ದ್ವೇಷದ ಕಾರಣದಿಂದ ಕಿಟ್ಟುರವರ ಮೊದಲನೆ ಹೆ೦ಡತಿಯ ಮಗ ಹರ್ಷಿತ್‌ ಎಂಬಾತ ಮನೆಗೆ ಬ೦ದು ಅಡಿಕೆ ಮರದಸಲಾಕೆಯಿಂದ ತಂದೆಗೆ ಹೊಡೆದಿದ್ದ . ಗಾಯಗೊಂಡಿದ್ದ ಕಿಟ್ಟುರವರನ್ನು ಆಂಬ್ಯುಲೆನ್ಸ್‌ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ

ತಂದೆ-ಮಗನ ಹೊಡೆದಾಟ..! ➤ ಗಾಯಾಳು ತಂದೆ ಚಿಕಿತ್ಸೆ ಫಲಿಸದೆ ಮೃತ್ಯು Read More »

ಕರಾವಳಿ

ಕಡಬ: ಪ್ರವಾಸಿ ಮಂದಿರದ ಬಳಿ ಸುಬ್ರಹ್ಮಣ್ಯ ನಿವಾಸಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಕಡಬ, ಮೇ.20. ಕುಲ್ಕುಂದ ನಿವಾಸಿಯೊಬ್ಬರು ಕಡಬದ ಹಳೆ ಪ್ರವಾಸಿ ಮಂದಿರದ ಬಳಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಕಾಲೋನಿ ನಿವಾಸಿ ನರಸಿಂಹ(60)ಮೃತಪಟ್ಟವರರು ಎಂದು ಗುರುತಿಸಲಾಗಿದೆ. ಐನೆಕಿದು ಸೊಸೈಟಿಯಲ್ಲಿ ಗುಮಾಸ್ತರಾಗಿದ್ದ ಇವರು ಪಾರ್ಶ್ವವಾಯು ಪೀಡಿತರಾಗಿ ಮನೆಯಲ್ಲೇ ಇದ್ದರು. ಮೂರ್ಛೆ ರೋಗದ ಮಾತ್ರೆಯನ್ನು ಸೇವಿಸುತ್ತಿದ್ದರು. ಇದರ ಜೊತೆಗೆ ಕುಡಿತದ ಚಟವನ್ನು ಹೊಂದಿದ್ದರು ಎನ್ನಲಾಗಿದೆ.

ಕಡಬ: ಪ್ರವಾಸಿ ಮಂದಿರದ ಬಳಿ ಸುಬ್ರಹ್ಮಣ್ಯ ನಿವಾಸಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ Read More »

ಕರಾವಳಿ

ಪುತ್ತೂರು: ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ

(ನ್ಯೂಸ್ ಕಡಬ)newskadaba.com ಪುತ್ತೂರು, ಮೇ.20. ಪೋಲಿಸರಿಂದ ಹಲ್ಲೆಗೊಳಗಾಗಿ ತೀವ್ರ ಸ್ವರೂಪದ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಅವಿನಾಶ್ ಹಾಗೂ ದೀಕ್ಷಿತ್ ರವರನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಾರ್ಯ ನಿರ್ವಾಹಕ ನಿರ್ದೇಶಕ, ಅಂತರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಾನೂನು ಸಲಹೆಗಾರ ಖ್ಯಾತ ನ್ಯಾಯವಾದಿ ಸುನೀಲ್ ಕುಮಾರ್ ಶೆಟ್ಟಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂಧರ್ಭದಲ್ಲಿ ಅವರಿಗೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವತಿಯಿಂದ ಧನಸಹಾಯ

ಪುತ್ತೂರು: ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ Read More »

ಕರಾವಳಿ

ಬಂಟ್ವಾಳ: ಜನಸೇವೆಗೆ ಶೃಂಗಾರಗೊಳ್ಳುತ್ತಿದೆ ಶಾಸಕರ ಕಚೇರಿ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಮೇ.20. ಅತ್ತ ಬೆಂಗಳೂರಿನಲ್ಲಿ ಸಿಎಂ ಪ್ರಮಾಣ ವಚನಕ್ಕೆ ಇಡೀ ಬೆಂಗಳೂರು ಸಜ್ಜುಗೊಳ್ಳುತ್ತಿದ್ದರೆ, ಇತ್ತ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಶಾಸಕರ ಕಚೇರಿ ಶೃಂಗಾರಗೊಳ್ಳುತ್ತಿದೆ. ಅವರು ಕಳೆದ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಸಕರ ಕಚೇರಿಯಲ್ಲಿಯೇ ಈ ಬಾರಿ ಕೂಡ ಶಾಸಕರ ಕಚೇರಿ ಕಾರ್ಯಚರಿಸಲಿದ್ದು ಜನಸೇವೆ ನೀಡಲು ಸಜ್ಜಾಗುತ್ತಿದೆ.  

ಬಂಟ್ವಾಳ: ಜನಸೇವೆಗೆ ಶೃಂಗಾರಗೊಳ್ಳುತ್ತಿದೆ ಶಾಸಕರ ಕಚೇರಿ Read More »

ಕರಾವಳಿ

ಉಡುಪಿ: ದ್ವಿಚಕ್ರ ವಾಹನ ಖರೀದಿಸಲು ಹೋಗಿ ವ್ಯಕ್ತಿಯೊಬ್ಬರಿಗೆ 69 ಸಾವಿರ ವಂಚನೆ

(ನ್ಯೂಸ್ ಕಡಬ)newskadaba.com ಉಡುಪಿ, ಮೇ.20. ಆನ್‌ಲೈನ್ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಸಲು ಹೋಗಿ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾದ ಘಟನೆ ಉಡುಪಿಯ ನಡೆದಿದೆ. ರಾಜೇಶ್ ಅಮೀನ್ ಎನ್ನುವವರು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀಸುವ ಉದ್ದೇಶದಿಂದ ಆನ್‌ಲೈನ್‌‌ನಲ್ಲಿ ಓಲಾ ಎಲೆಕ್ಟ್ರಿಕಲ್ ಮೊಬಿಲಿಟಿ ಪ್ರೈ.ಲಿಮಿಟೆಡ್(OLA Electrical Mobility Prv.ltd)ಎಂಬ ವೆಬ್‌ಸೈಟ್‌ನಲ್ಲಿ ಹುಡುಕಾಡಿದ್ದಾರೆ. ಈ ಸಂದರ್ಭ ವೆಬ್‌ಸೈಟ್‌ನಲ್ಲಿ ದೊರಕಿದ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿದಾಗ ಅಪರಿಚಿತ ವ್ಯಕ್ತಿ ಬ್ಯಾಂಕಿನ ವಿವರ ಮುಂಗಡವಾಗಿ ಹಣ ಪಾವತಿಸುವಂತೆ ತಿಳಿಸಿದ್ದಾನೆ.  

ಉಡುಪಿ: ದ್ವಿಚಕ್ರ ವಾಹನ ಖರೀದಿಸಲು ಹೋಗಿ ವ್ಯಕ್ತಿಯೊಬ್ಬರಿಗೆ 69 ಸಾವಿರ ವಂಚನೆ Read More »

ಕರಾವಳಿ

ಮಂಗಳೂರು: ನರ್ಸಿಂಗ್‌ ವಿದ್ಯಾರ್ಥಿನಿ ನಾಪತ್ತೆ..!

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.20. ಪ್ರಥಮ ವರ್ಷದ ನರ್ಸಿಂಗ್‌ ವ್ಯಾಸಂಗ ಮಾಡುತ್ತಿದ್ದ ಆಸ್ಮಾ ಬಾನೊ ಮೇ.15ರಂದು ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ. ಮನೆಯಿಂದ ವ್ಯಾಸಂಗ ಮಾಡುತ್ತಿದ್ದ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ತೆರಳಿದ್ದರು. ಅನಂತರ ಮನೆಗೆ ಬರಲಿಲ್ಲ. 18 ವರ್ಷದ ಅವರು ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆ ಬಲ್ಲರು. ಈ ಬಗ್ಗೆ ಕಾಣೆಯಾದವರ ತಂದೆ ಮಹಮ್ಮದ್‌ ಖಾಲಿಕ್‌ ಅವರು ಮಂಗಳೂರು ಪೂರ್ವ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಮಂಗಳೂರು ಪೂರ್ವ ಪೊಲೀಸ್‌

ಮಂಗಳೂರು: ನರ್ಸಿಂಗ್‌ ವಿದ್ಯಾರ್ಥಿನಿ ನಾಪತ್ತೆ..! Read More »

ಕರಾವಳಿ

ಮಂಗಳೂರು: ಬಾಲಕನಿಗೆ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿದ ಬಿರುವೆರ್ ಕುಡ್ಲ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.18. ಫ್ರೆಂಡ್ಸ್ ಬಳ್ಳಾಲ್‍ಬಾಗ್ ಬಿರುವೆರ್ ಕುಡ್ಲ ಇದರ ಸಂಸ್ಥಾಪಕ ಅಧ್ಯಕ್ಷ ಉದಯ ಪೂಜಾರಿ ನೇತೃತ್ವದಲ್ಲಿ 2 ವರ್ಷದ ಬಾಲಕನಿಗೆ 50,000 ರೂಪಾಯಿ ವೈದ್ಯಕೀಯ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು. ಮೇ 17 ರಂದು ಬುಧವಾರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಕುಪ್ಪೆ ಪದವಿನ ಜಯಶೀಲ ಮತ್ತು ಸದಾಶಿವ ಆಚಾರ್ಯ ಅವರ ಪುತ್ರ ಎರಡು ವರ್ಷದ ಬಾಲಕನ ಚಿಕಿತ್ಸೆಗಾಗಿ 50,000 ರೂಪಾಯಿಗಳ ಚೆಕ್ ಅನ್ನು ಕ್ಷೇತ್ರದ ಮೊಕ್ತೇಸರ ಸಾಯಿರಾಮ್ ಹಸ್ತಾಂತರಿಸಿ ಬಿರುವೆರ್ ಕುಡ್ಲ

ಮಂಗಳೂರು: ಬಾಲಕನಿಗೆ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿದ ಬಿರುವೆರ್ ಕುಡ್ಲ Read More »

ಕರಾವಳಿ

ಕಟೀಲು ದೇವಸ್ಥಾನದ ಮುಂಭಾಗದಲ್ಲಿ ಖಾಸಗಿ ಬಸ್ ಗೆ ಬೆಂಕಿ

(ನ್ಯೂಸ್ ಕಡಬ)newskadaba.com ಕಟೀಲು, ಮೇ.18. ಖಾಸಗಿ ಬಸ್ ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಕಟೀಲು ದೇವಸ್ಥಾನದ ಮುಂಭಾಗದಲ್ಲಿ ನಡೆದಿದ್ದು, ಘಟನೆಯಲ್ಲಿ ಪ್ರಯಾಣಿಕರು ಹಾಗೂ ಬಸ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಗೋಲ್ಡನ್ ಟ್ರಾವೆಲ್ಸ್ ಎಂಬ ಹೆಸರಿನ ಬಸ್ ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ದೇವಸ್ಥಾನದ ಮುಂಭಾಗವೇ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ಬಸ್ ನಲ್ಲಿ ಇಬ್ಬರ ಮಹಿಳೆಯರು ಮತ್ತು ಬಸ್ ಚಾಲಕ ಇದ್ದರು ಎಂದು ಹೇಳಲಾಗಿದ್ದು, ಮೂವರು ಬಸ್ ನಿಂದ ಇಳಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

ಕಟೀಲು ದೇವಸ್ಥಾನದ ಮುಂಭಾಗದಲ್ಲಿ ಖಾಸಗಿ ಬಸ್ ಗೆ ಬೆಂಕಿ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top