Mangalore

ಬೋಳಿಯಾರು: ಬಿಜೆಪಿ ಸಭೆಯಲ್ಲಿ ಮುಸ್ಲಿಂ ಧರ್ಮಗುರುಗಳು ಭಾಗಿ ► ಭಾಷಣ ಮಾಡಿದ ಧರ್ಮಗುರುಗಳಿಗೆ ಜೀವ ಬೆದರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.11. ಸ್ವಾಮೀಜಿಗಳು, ಯೋಗಿಗಳು ಮುಖ್ಯಮಂತ್ರಿಯಾಗುತ್ತಾರೆ. ಆದರೆ ಮುಸ್ಲಿಮರಲ್ಲಿರುವ ಉಸ್ತಾದರುಗಳು, ಧಾರ್ಮಿಕ ಮುಂದಾಳುಗಳು ಕನಿಷ್ಠ ಗ್ರಾಮ ಪಂಚಾಯತ್ ಹಂತಕ್ಕೆ ಕೂಡಾ ತಲುಪುತ್ತಿಲ್ಲ. ಇದು ನಿಜಕ್ಕೂ ವಿಷಾದನೀಯವಾಗಿದ್ದು, ಇದಕ್ಕಾಗಿ ನಿಮಗೆ ಭಾರತೀಯ ಜನತಾ ಪಾರ್ಟಿಯು ವೇದಿಕೆ ಕಲ್ಪಿಸಿ ಕೊಡುತ್ತದೆ ಎಂದು ಫಝಲ್ ಅಸೈಗೋಳಿ ಹೇಳಿದರು. ಅವರು ಗುರುವಾರದಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾ ವತಿಯಿಂದ ಬೋಳಿಯಾರಿನಲ್ಲಿ ನಡೆದ ಮುಸ್ಲಿಮ್ ಧಾರ್ಮಿಕ ಗುರುಗಳ ಸಭೆಯಲ್ಲಿ ಮಾತನಾಡುತ್ತಿದ್ದರು. ಮುಸ್ಲಿಮರಿಗೆ ಬಿಜೆಪಿ ಎಂದರೆ ಆಗುವುದಿಲ್ಲ. ಕಾಂಗ್ರೆಸ್ ಅಂಥಹಾ ಒಂದು ಮನೋಭಾವವನ್ನು […]

ಬೋಳಿಯಾರು: ಬಿಜೆಪಿ ಸಭೆಯಲ್ಲಿ ಮುಸ್ಲಿಂ ಧರ್ಮಗುರುಗಳು ಭಾಗಿ ► ಭಾಷಣ ಮಾಡಿದ ಧರ್ಮಗುರುಗಳಿಗೆ ಜೀವ ಬೆದರಿಕೆ Read More »

ಕರಾವಳಿ

ಕಾವ್ಯಾ ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹ ► ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.09. ಮೂಡಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ 30ಕ್ಕೂ ಅಧಿಕ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ‘ಜಸ್ಟೀಸ್ ಫಾರ್ ಕಾವ್ಯಾ’ ಹೋರಾಟ ಸಮಿತಿ ದ.ಕ. ಜಿಲ್ಲೆಯ ವತಿಯಿಂದ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರದಂದು ಬೃಹತ್ ಪ್ರತಿಭಟನೆ ನಡೆಯಿತು. ಜ್ಯೋತಿ ವೃತ್ತದಿಂದ ಡಿಸಿ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು, ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಕಾವ್ಯಾ ಸಾವಿನ ಪ್ರಕರಣದ

ಕಾವ್ಯಾ ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹ ► ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ Read More »

ಕರಾವಳಿ

 ಕಂಡಕಂಡಲ್ಲಿ ವಾಹನ ನಿಲ್ಲಿಸಿದರೆ ಲೈಸನ್ಸ್ ರದ್ದು ► ವಾಹನ ಚಾಲಕರಿಗೆ ಆರ್‍ಟಿಓ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಮ0ಗಳೂರು, ಆ.07. ಪ್ರಯಾಣಿಕರನ್ನು ಹತ್ತಿಸಲು ಹಾಗೂ ಇಳಿಸಲು ನಿಗದಿತ ಬಸ್‍ ತಂಗುದಾಣಗಳಲ್ಲಿಯೇ ಬಸ್ಸುಗಳನ್ನು ನಿಲ್ಲಿಸಬೇಕಲ್ಲದೆ ಎಲ್ಲೆಂದರಲ್ಲಿ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಹತ್ತಿಸುವುದು ಮತ್ತು ಇಳಿಸುವುದು ಕಂಡುಬಂದಲ್ಲಿ ಚಾಲಕರ ಡ್ರೈವಿಂಗ್ ಲೈಸನ್ಸನ್ನೇ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರ್‍ಟಿಓ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲೆಂದರಲ್ಲಿ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಹತ್ತಿಸುವುದು ಮತ್ತು ಇಳಿಸುವುದರಿಂದ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ ಹಾಗೂ ಅಪಘಾತಗಳು ನಡೆಯುವ ಸಂಭವವಿರುತ್ತದೆ. ವಾಹನಗಳನ್ನು ರಸ್ತೆ ಮಧ್ಯದಲ್ಲಿ ನಿಲುಗಡೆಗೊಳಿಸುವುದು ಕಂಡುಬಂದಲ್ಲಿ ಬಸ್ಸು ಚಾಲಕರ ಡ್ರೈವಿಂಗ್ ಲೈಸನ್ಸನ್ನೇ ರದ್ದುಪಡಿಸಲಾಗುವುದು. ಬಸ್ಸಿನ ಚಾಲಕ/ನಿರ್ವಾಹಕರು ಸಮವಸ್ತ್ರವನ್ನು

 ಕಂಡಕಂಡಲ್ಲಿ ವಾಹನ ನಿಲ್ಲಿಸಿದರೆ ಲೈಸನ್ಸ್ ರದ್ದು ► ವಾಹನ ಚಾಲಕರಿಗೆ ಆರ್‍ಟಿಓ ಎಚ್ಚರಿಕೆ Read More »

ಕರಾವಳಿ

ಆರೆಸ್ಸೆಸ್ ಕಾರ್ಯಕರ್ತ ಶರತ್ ಕೊಲೆ ಪತ್ತೆಗೆ ಆಗ್ರಹ ► ಹಿಂದೂ ಹಿತರಕ್ಷಣಾ ವತಿಯಿಂದ ನಾಳೆ ಜಿಲ್ಲೆಯಾದ್ಯಂತ ಉಪವಾಸ ಸತ್ಯಾಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಆ.07. ಬಂಟ್ವಾಳ ತಾಲೂಕಿನ ಆರೆಸ್ಸೆಸ್ ಕಾರ್ಯಕರ್ತ ಶರತ್ ಕೊಲೆ ನಡೆದು ತಿಂಗಳು ಕಳೆದರೂ ಪ್ರಕರಣವನ್ನು ಭೇದಿಸುವಲ್ಲಿ ವಿಫಲವಾದ ರಾಜ್ಯ ಸರಕಾರದ ವಿರುದ್ದ ಅಗೋಸ್ತು. 8 ಮಂಗಳವಾರದಂದು ಹಿಂದೂ ಹಿತರಕ್ಷಣಾ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಯಾದ್ಯಂತ ಏಕಕಾಲದಲ್ಲಿ ಉಪವಾಸ ಸತ್ಯಾಗ್ರಹ ನಡೆಯಲಿದೆ. ಅದರಂತೆ ಸಲುವಾಗಿ ಕಡಬದ ಮುಖ್ಯ ಪೇಟೆಯಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ 4 ವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.  

ಆರೆಸ್ಸೆಸ್ ಕಾರ್ಯಕರ್ತ ಶರತ್ ಕೊಲೆ ಪತ್ತೆಗೆ ಆಗ್ರಹ ► ಹಿಂದೂ ಹಿತರಕ್ಷಣಾ ವತಿಯಿಂದ ನಾಳೆ ಜಿಲ್ಲೆಯಾದ್ಯಂತ ಉಪವಾಸ ಸತ್ಯಾಗ್ರಹ Read More »

ಕರಾವಳಿ

ಮಾಣಿ ಅಪಘಾತದ ಗಾಯಾಳು ಬೈಕ್ ಸವಾರ ಮೃತ್ಯು ► ಸಹ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಜು.30. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಶಾಲಾ ಬಳಿ ಕಾರು ಮತ್ತು ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ. ಮಾಣಿಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಬೈಕಿಗೆ ಎದುರಿನಿಂದ ಬಂದ ಕೇರಳ ನೋದಣಿಯ ಕಾರು ಡಿಕ್ಕಿ ಹೊಡೆದುದರ ಪರಿಣಾಮ ಬೈಕ್ ಸವಾರ ಬೆಳ್ತಂಗಡಿ ತಾಲೂಕಿನ ಕರಾಯ ಬದಿಯಾರು ನಿವಾಸಿ ಜಾಫರ್

ಮಾಣಿ ಅಪಘಾತದ ಗಾಯಾಳು ಬೈಕ್ ಸವಾರ ಮೃತ್ಯು ► ಸಹ ಸವಾರ ಗಂಭೀರ Read More »

ಕರಾವಳಿ

ಬೈಕ್ – ಲಾರಿ ಢಿಕ್ಕಿ: ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 27. ಬೈಕ್ ಹಾಗೂ ಕಂಟೈನರ್ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಗರದ ನಂತೂರ್ ಜಂಕ್ಷನ್‍ನಲ್ಲಿ ಗುರುವಾರ ಸಂಜೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದು, ಮಂಗಳೂರಿನಲ್ಲಿ ಸಹಕಾರ ಇಲಾಖೆಯಲ್ಲಿ ಆಡಿಟರ್ ಆಗಿ ಕೆಲಸ ನಿರ್ವಹಿಸುತ್ತಿರುವ  ಮಹೇಶ್ವರಪ್ಪ ಎಂಬವರ ಏಕೈಕ ಪುತ್ರಿ ನಗರದ ಪ.ಪೂ.ಕಾಲೇಜೊಂದರ ದ್ವಿತೀಯ ವರ್ಷದ ವಿದ್ಯಾರ್ಥಿನಿ ಬಿಂದು (18) ಎಂದು ಗುರುತಿಸಲಾಗಿದೆ. ಈ ಕೆ ತನ್ನ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕಂಟೈನರ್ ಲಾರಿ ಢಿಕ್ಕಿ ಹೊಡೆದಿದ್ದು, ಬಿಂದು ತೀವ್ರ

ಬೈಕ್ – ಲಾರಿ ಢಿಕ್ಕಿ: ವಿದ್ಯಾರ್ಥಿನಿ ಮೃತ್ಯು Read More »

ಕರಾವಳಿ

ರೌಡಿಶೀಟರ್ ಪವನ್ ರಾಜ್ ಕೊಲೆ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.26. ಮಂಗಳೂರಿನ ಹೊರವಲಯದ ವಾಮಂಜೂರಿನಲ್ಲಿ ಮಂಗಳವಾರದಂದು ನಡೆದಿದ್ದ ಕೊಲೆ ಪ್ರಕರಣವನ್ನು ಕೃತ್ಯ ನಡೆದ 24 ಗಂಟೆಗಳೊಳಗಾಗಿ ಪೊಲೀಸರು ಬೇಧಿಸಿದ್ದಾರೆ. ಮಂಗಳವಾರದಂದು ರೌಡಿಶೀಟರ್ ಪವನ್ ರಾಜ್ ಶೆಟ್ಟಿಯನ್ನು ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಮಂಗಳೂರು ಗ್ರಾಮಾಂತರ ಪೋಲೀಸರು ಇದೀಗ ಹತ್ಯೆಗೆ ಸಂಬಂಧಿಸಿದಂತೆ ವಾಮಂಜೂರಿನ ಬಿಪಿನ್, ಶರಣ್ ಹಾಗೂ ಹರೀಶ್ ರವರನ್ನು ಬಂಧಿಸಿದ್ದಾರೆ. ಪವನ್ ರಾಜ್ ಕೊಲೆ ಮಾಡಿದ ಬಳಿಕ ಆರೋಪಿಗಳು ಹತ್ಯೆಗೆ ನಡೆಸಿದ ಲಾಂಗ್ ಮಚ್ಚುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ಕೊಲೆಯಾದ ಪವನ್ ರಾಜ್

ರೌಡಿಶೀಟರ್ ಪವನ್ ರಾಜ್ ಕೊಲೆ ಆರೋಪಿಗಳ ಬಂಧನ Read More »

ಕರ್ನಾಟಕ

ಮಂಗಳೂರು: ರೌಡಿಶೀಟರ್ ಪುತ್ರನ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.25. ಮಾಜಿ ರೌಡಿಶೀಟರ್ ವಾಮಂಜೂರು ರೋಹಿಯ ಪುತ್ರನನ್ನು ತಂಡವೊಂದು ಕೊಚ್ಚಿ ಕೊಲೆಗೈದ ಘಟನೆ ವಾಮಂಜೂರಿನಲ್ಲಿ ಮಂಗಳವಾರದಂದು ಬೆಳಿಗ್ಗೆ ನಡೆದಿದೆ. ರೌಡಿಶೀಟರ್ ವಾಮಂಜೂರು ರೋಹಿಯ ಪುತ್ರ ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಗೊಂಡಿದ್ದ ರೌಡಿಶೀಟರ್ ಪವನ್ ರಾಜ್ ಶೆಟ್ಟಿ (22) ಎಂಬಾತನನ್ನು ವಾಮಂಜೂರು ಕುಕ್ಕಿಪಲ್ಕೆ ಎಂಬಲ್ಲಿ ನಾಲ್ವರು ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ಕೊಚ್ಚಿ ಕೊಲೆಗೈದಿದೆ ಎನ್ನಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರು: ರೌಡಿಶೀಟರ್ ಪುತ್ರನ ಬರ್ಬರ ಹತ್ಯೆ Read More »

ಕರಾವಳಿ

ಕಾರು ಚಲಾಯಿಸಿ ರೌಡಿಯಿಂದ ಎಎಸ್ಸೈ ಕೊಲೆಯತ್ನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.21. ರೌಡಿ ಶೀಟರ್ ವ್ಯಕ್ತಿಯೋರ್ವ ಎಎಸ್‍ಐಯೊಬ್ಬರ ಮೇಲೆ ಕಾರು ಚಲಾಯಿಸಿ ಕೊಲೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ಶುಕ್ರವಾರ ಸಂಜೆ ನಡೆದಿದೆ. ರೌಡಿಶೀಟರ್ ಹ್ಯಾರಿಸ್ ಮತ್ತು ತಂಡ ದರೋಡೆಗೆ ಸಂಚು ರೂಪಿಸಿದ್ದಾರೆಂಬ ಖಚಿತ ಮಾಹಿತಿ ಆಧಾರದಲ್ಲಿ  ಪಣಂಬೂರು ಪೊಲೀಸರು ಎರಡು ತಂಡಗಳಾಗಿ ಮಂಗಳೂರಿನ ಕಸಬಾ ಬೆಂಗ್ರೆಯಲ್ಲಿ ರೌಂಡಪ್ ಮಾಡಿದ್ದರು. ಈ ವೇಳೆ ಸಾಗಿಬಂದ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಪಣಂಬೂರು ಠಾಣೆಯ ಎಎಸ್‍ಐ ಪುರಂದರ ಗೌಡರವರ ಮೇಲೆ ಕಾರು ಚಲಾಯಿಸಿ ಕೊಲೆಗೆ ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ. ಪುರಂದರ

ಕಾರು ಚಲಾಯಿಸಿ ರೌಡಿಯಿಂದ ಎಎಸ್ಸೈ ಕೊಲೆಯತ್ನ Read More »

ಕರಾವಳಿ

ಶರತ್ ಮಡಿವಾಳ ಹಂತಕರ ಸೆರೆ…? ► ಮಾಧ್ಯಮಗಳಿಗೆ ತಲುಪಿದ ರಹಸ್ಯ ಮಾಹಿತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.15. ಇತ್ತೀಚೆಗೆ ಬಿ.ಸಿ.ರೋಡ್‍ನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ವಲಯ ಐಜಿಪಿ ಪಿ. ಹರಿಶೇಖರನ್ ನೇತೃತ್ವದಲ್ಲಿ ಆರು ತನಿಖಾ ತಂಡಗಳನ್ನು ರಚಿಸಲಾಗಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಿಗೆ ತಲುಪಿದೆ.  ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು

ಶರತ್ ಮಡಿವಾಳ ಹಂತಕರ ಸೆರೆ…? ► ಮಾಧ್ಯಮಗಳಿಗೆ ತಲುಪಿದ ರಹಸ್ಯ ಮಾಹಿತಿ Read More »

ಕರಾವಳಿ
Scroll to Top