ಕಾರು ಚಲಾಯಿಸಿ ರೌಡಿಯಿಂದ ಎಎಸ್ಸೈ ಕೊಲೆಯತ್ನ



(ನ್ಯೂಸ್ ಕಡಬ) newskadaba.com ಮಂಗಳೂರು, ಜು.21. ರೌಡಿ ಶೀಟರ್ ವ್ಯಕ್ತಿಯೋರ್ವ ಎಎಸ್‍ಐಯೊಬ್ಬರ ಮೇಲೆ ಕಾರು ಚಲಾಯಿಸಿ ಕೊಲೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.







ರೌಡಿಶೀಟರ್ ಹ್ಯಾರಿಸ್ ಮತ್ತು ತಂಡ ದರೋಡೆಗೆ ಸಂಚು ರೂಪಿಸಿದ್ದಾರೆಂಬ ಖಚಿತ ಮಾಹಿತಿ ಆಧಾರದಲ್ಲಿ  ಪಣಂಬೂರು ಪೊಲೀಸರು ಎರಡು ತಂಡಗಳಾಗಿ ಮಂಗಳೂರಿನ ಕಸಬಾ ಬೆಂಗ್ರೆಯಲ್ಲಿ ರೌಂಡಪ್ ಮಾಡಿದ್ದರು. ಈ ವೇಳೆ ಸಾಗಿಬಂದ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಪಣಂಬೂರು ಠಾಣೆಯ ಎಎಸ್‍ಐ ಪುರಂದರ ಗೌಡರವರ ಮೇಲೆ ಕಾರು ಚಲಾಯಿಸಿ ಕೊಲೆಗೆ ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ. ಪುರಂದರ ಗೌಡ ಅವರು ಅಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹದಿನೈದಕ್ಕೂ ಹೆಚ್ಚು ಕೃತ್ಯದಲ್ಲಿ ಆರೋಪಿಯಾಗಿರುವ ಹ್ಯಾರಿಸ್ ವಿರುದ್ಧ ಪಣಂಬೂರು ಠಾಣೆಯಲ್ಲಿ ಕೊಲೆಯತ್ನ ದೂರು ದಾಖಲಾಗಿದೆ.






error: Content is protected !!
Scroll to Top