Mangalore

ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17.ಸರ್ಕಾರಿ ಪಾಲಿಟೆಕ್ನಿಕ್ ಬಂಟ್ವಾಳ ಇದರ ಕಟ್ಟಡ ಒಳ ಮತ್ತು ಹೊರ ಆವರಣ, ಉದ್ಯಾನವನ, ಕಾಲೇಜಿನ ವಸ್ತುಗಳು, ವರ್ಕ್‍ಶಾಪ್ ಉಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಪೀಠೋಪಕರಣಗಳು, ವಾಹನಗಳು, ಕಡತಗಳು ಇತ್ಯಾದಿಗಳ ಭದ್ರತೆಯನ್ನು ನೋಡಿಕೊಳ್ಳಲು ಭದ್ರತಾ ರಕ್ಷಕ (ಸೆಕ್ಯೂರಿಟಿ ಗಾರ್ಡ್ ) ಗುತ್ತಿಗೆ ಸೇವೆ ಒದಗಿಸಲು ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸರ್ಕಾರಿ ಪಾಲಿಟೆಕ್ನಿಕ್, ಬಂಟ್ವಾಳ ಇವರನ್ನು ಸಂಪರ್ಕಿಸಬಹುದು.

ಟೆಂಡರ್ ಆಹ್ವಾನ Read More »

ಕರಾವಳಿ

ಉಜಿರೆ ರುಡ್‍ಸೆಟ್‍ನಲ್ಲಿ ಹಲವು ಉಚಿತ ತರಬೇತಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.17. ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರಿತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆ ಬ್ಯಾಂಕುಗಳಿಂದ ರುಡ್‍ಸೆಟ್ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರಿಗೆ ಸ್ವ ಉದ್ಯೋಗವನ್ನು ಕಲ್ಪಿಸಿರುವ ಉಜಿರೆಯ ರುಡ್‍ಸೆಟ್ ಸಂಸ್ಥೆಯಲ್ಲಿ ಮುಂದಿನ ತಿಂಗಳುಗಳಲ್ಲಿ ನಡೆಯುವ ತರಬೇತಿಗಳ ವಿವರಗಳು: ಮಹಿಳೆಯರ ಟೈಲರಿಂಗ್ (ವಸ್ತ್ರವಿನ್ಯಾಸ) 30 ದಿನಗಳು ಮೇ 20 ರಿಂದ ಜೂನ್ 18,

ಉಜಿರೆ ರುಡ್‍ಸೆಟ್‍ನಲ್ಲಿ ಹಲವು ಉಚಿತ ತರಬೇತಿಗಳು Read More »

ಕರಾವಳಿ

ಪಿಂಚಣಿ ಅದಾಲತ್

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17. ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಬಲ್ಮಠದಲ್ಲಿ ಪಿಂಚಣಿ ಅದಾಲತ್ ಜೂನ್ ತಿಂಗಳ 7 ರಂದು ಪೂರ್ವಾಹ್ನ 11 ಗಂಟೆಗೆ ಜರುಗಲಿದೆ. ಮಂಗಳೂರು ಅಂಚೆ ವಿಭಾಗದಲ್ಲಿ ಪಿಂಚಣಿ ತೆಗೆದುಕೊಳ್ಳುವ ನಿವೃತ್ತ ಅಂಚೆ ನೌಕರರು ಸಂಬಂಧಪಟ್ಟ ದೂರುಗಳೇನಾದರೂ ಇದ್ದಲ್ಲಿ ಜೂನ್ 3ರ ರೊಳಗೆ ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಬಲ್ಮಠ, ಮಂಗಳೂರು -575002 ವಿಳಾಸಕ್ಕೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.

ಪಿಂಚಣಿ ಅದಾಲತ್ Read More »

ಕರಾವಳಿ

ಅಂಚೆ ಜೀವ ವಿಮೆ ಪ್ರೀಮಿಯಂ ಪಾವತಿಗೆ ಆನ್ ಲೈನ್/ಕೌಂಟರ್ ಸೌಲಭ್ಯ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17.ಅಂಚೆ ಕಚೇರಿಯ ಅಂಚೆ ಜೀವ ವಿಮೆಗೆECS ಮೂಲಕ ಪ್ರೀಮಿಯಂ ಪಾವತಿ ಮಾಡುತ್ತಿರುವ ಗ್ರಾಹಕರು ಹೊಸ ತಂತ್ರಜಾನದ ಬಳಕೆಯ ಕಾರ್ಯವು ಪ್ರಗತಿಯಲ್ಲಿರುವುದರಿಂದ SBI ಹೊರತಾಗಿ ಇತರ ಬ್ಯಾಂಕ್ ಗಳಿಂದ ECS ಗೆ ನೋಂದಾಯಿಸಿದ ಹೆಚ್ಚಿನ ಪಾಲಿಸಿಗಳಿಗೆ  ECS ಮುಖಾಂತರ ಪ್ರೀಮಿಯಂ ಪಾವತಿ ಆಗಿರುವುದಿಲ್ಲ. ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ ನಿಮ್ಮ ಪಾಲಿಸಿಯ ಸ್ಟೇಟಸ್ ಅನ್ನು ಪರಿಶೀಲಿಸಬೇಕು ಹಾಗೂ ತಂತ್ರಜಾನದ ಪ್ರಗತಿಯು ಪೂರ್ಣ ಆಗುವ ತನಕ ಕೌಂಟರ್ ಮೂಲಕ ಅಥವಾ ಆನ್ ಲೈನ್ ಮೂಲಕ (https://pli.indiapost.gov.in) ಪ್ರೀಮಿಯಂ ಪಾವತಿ

ಅಂಚೆ ಜೀವ ವಿಮೆ ಪ್ರೀಮಿಯಂ ಪಾವತಿಗೆ ಆನ್ ಲೈನ್/ಕೌಂಟರ್ ಸೌಲಭ್ಯ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಗಳಲ್ಲಿ ಉಪ ಚುಣಾವಣೆಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗರೂಕತಾ ಕ್ರಮ : ನಿಷೇಧಾಜ್ಷೆ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17.ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್‍ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು ಈ ಸಮಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗರೂಕತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ, ಕರ್ನಾಟಕ ಅಬಕಾರಿ ಸನ್ನದುಗಳ (ಸಾಮಾನ್ಯ ಷರತ್ತುಗಳು) ನಿಯಮ 1967 ರ ನಿಯಮ 10-ಬಿ ಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪಡುಪೆರಾರ ಮತ್ತು ತಲಪಾಡಿ ಗ್ರಾಮ ಪಂಚಾಯತ್, ಪುತ್ತೂರು ತಾಲೂಕಿನ ಕಬಕ ಮತ್ತು

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಗಳಲ್ಲಿ ಉಪ ಚುಣಾವಣೆಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗರೂಕತಾ ಕ್ರಮ : ನಿಷೇಧಾಜ್ಷೆ Read More »

ಕರಾವಳಿ

ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17.ಗೌತಮಿ (ಪ್ರಾಯ 28 ವರ್ಷ) ಎಂಬಾಕೆ ಮೇ 12 ರಂದು ಪೂರ್ವಾಹ್ನ 10 ಗಂಟೆಗೆ ತನ್ನ ತಾಯಿಯಲ್ಲಿ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರ ಹೋದವಳು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಪ್ರಕರಣ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಕಾಣೆಯಾದವರ ಚಹರೆ ಇಂತಿವೆ: ಮೈಬಣ್ಣ – ಬಿಳಿ, 5.3 ಅಡಿ ಎತ್ತರ, ಕಪ್ಪು ಚೂಡಿದಾರ್ ಪ್ಯಾಂಟ್ ಮತ್ತು ಕೆಂಪು ಟಾಪ್ ಧರಿಸಿದ್ದು, ವಿದ್ಯಾಭ್ಯಾಸ 7 ನೇ ಕ್ಲಾಸು, ತಿಳಿದಿರುವ ಭಾಷೆ ತುಳು, ಕನ್ನಡ. ಈ

ಯುವತಿ ನಾಪತ್ತೆ Read More »

ಕರಾವಳಿ

ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳಿಗೆ ದಾಖಲಾತಿ ಪ್ರಾರಂಭ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17.2019-20ನೇ ಸಾಲಿನಲ್ಲಿ ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ ಮತ್ತು ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‍ಸೈಟ್www.schooleducation.kar.nic.in ನಲ್ಲಿರುವ ದಾಖಲಾತಿ ಅರ್ಜಿಯನ್ನು ಮುದ್ರಿಸಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಿಸಿದ ಡಯಟ್‍ಗೆ ಸಲ್ಲಿಸಬೇಕು. ದಾಖಲಾತಿ ಅರ್ಜಿಗಳನ್ನು ಮೇ 28 ರವರೆಗೆ ಸಲ್ಲಿಸಬಹುದಾಗಿದ್ದು, ಅರ್ಜಿಯನ್ನು ಸಲ್ಲಿಸುವ ವಿಧಾನ, ಅರ್ಹತೆ ಮತ್ತು ಮೀಸಲಾತಿ ವಿವರಗಳು

ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳಿಗೆ ದಾಖಲಾತಿ ಪ್ರಾರಂಭ Read More »

ಕರಾವಳಿ

ರೆಡ್ ಕ್ರಾಸ್ ಲೇಡಿಗೋಷನ್ ರಕ್ತ ನಿಧಿಯಲ್ಲಿ ಕೆಳಕಂಡ ರಕ್ತದ ಎಲ್ಲಾ ಗುಂಪುಗಳು ಲಭ್ಯ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತ ನಿಧಿಯು ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ರೋಗಿಗಳಿಗೆ ರಕ್ತ ನೀಡಲು ರಕ್ತದ ಕೊರತೆ ಕಂಡುಬಂದಿತ್ತು. ಆದರೆ ಕಳೆದ ಒಂದು ವಾರದಿಂದ ಸತತವಾಗಿ ರಕ್ತದಾನ ಶಿಬಿರಗಳನ್ನು ನಮ್ಮ ಸಂಸ್ಥೆಯ ವತಿಯಿಂದ ಏರ್ಪಡಿಸಲಾಗಿದ್ದು, ದಾನಿಗಳು ಸ್ಪಂದಿಸಿ ಉದಾರವಾಗಿ ರಕ್ತ ದಾನ ಮಾಡಿದ್ದರಿಂದ ರೆಡ್ ಕ್ರಾಸ್ ಲೇಡಿಗೋಷನ್ ರಕ್ತ ನಿಧಿಯಲ್ಲಿ ಕೆಳಕಂಡ ರಕ್ತದ ಎಲ್ಲಾ ಗುಂಪುಗಳು ಲಭ್ಯವಿರುತ್ತವೆ. BLOOD GROUP PCV FFP PLTC A+ 71

ರೆಡ್ ಕ್ರಾಸ್ ಲೇಡಿಗೋಷನ್ ರಕ್ತ ನಿಧಿಯಲ್ಲಿ ಕೆಳಕಂಡ ರಕ್ತದ ಎಲ್ಲಾ ಗುಂಪುಗಳು ಲಭ್ಯ Read More »

ಕರಾವಳಿ

ಜೂನ್ 8 ಮತ್ತು 9 ರಂದು ಹಣ್ಣುಗಳ ಉತ್ಸವ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17.ಮಂಗಳೂರಿನ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಜೂನ್ 8 ಮತ್ತು 9 (ಶನಿವಾರ ಮತ್ತು ಆದಿತ್ಯವಾರ) ರಂದು ‘ಹಣ್ಣುಗಳ ಉತ್ಸವ’ ವನ್ನು ತೋಟಗಾರಿಕಾ ಇಲಾಖಾ ಸಹಯೋಗದೊಂದಿಗೆ ಆಚರಿಸಲಾಗುವುದು.ಈ ಕಾರ್ಯಕ್ರಮಕ್ಕೆ ಪ್ರಾದೇಶಿಕವಾದ ಹಲಸು, ಮಾವು ಹಾಗೂ ಇತರ ಹಣ್ಣುಗಳಲ್ಲದೆ ರಾಜ್ಯದ ಇತರೆ ಕಡೆಯ ಮೌಲ್ಯವರ್ದಿತ ಹಣ್ಣುಗಳನ್ನು ಬೆಳೆಗಾರರೇ ತಂದು ಪ್ರದರ್ಶಿಸಿ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ, ವಿವಿಧ ಹಣ್ಣುಗಳು, ಔಷದೀಯ ಸಸಿಗಳು, ಕಸಿ ಗಿಡಗಳು, ಬೀಜಗಳು, ಖಾದಿ ಬಟ್ಟೆಗಳು, ಸಹಜ ಬಣ್ಣದ ಕೈಮಗ್ಗದ ವಸ್ತ್ರಗಳು, ಸಾವಯವ

ಜೂನ್ 8 ಮತ್ತು 9 ರಂದು ಹಣ್ಣುಗಳ ಉತ್ಸವ Read More »

ಕರಾವಳಿ

ಸೇನಾ ನೇಮಕಾತಿ ರ್ಯಾಲಿ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.16. ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ ಸೇನಾ ನೇಮಕಾತಿ ರ್ಯಾಲಿ ಮೇ 28 ರಿಂದ ಜೂನ್ 6 ರವರೆಗೆ ಜಿಲ್ಲಾ ಕ್ರೀಡಾಂಗಣ ಗದಗ ಜಿಲ್ಲೆಯಲ್ಲಿ ನಡೆಯಲಿದ್ದು ಸಿಪಾಯಿ ಜಿ.ಡಿ. ಸಿಪಾಯಿ ಕ್ಲರ್ಕ್ ಮತ್ತು ಎಸ್.ಕೆ.ಟಿ. ಸಿಪಾಯಿ ಟೆಕ್ನಿಕಲ್, ಸಿಪಾಯಿ ಟ್ರೇಡ್ಸಮೆನ್ ಹುದ್ದೆಗಳಿಗಾಗಿ ಸೇನಾ ನೇಮಕಾತಿ ರ್ಯಾಲಿಯನ್ನು ಆಯೋಜಿಸಿದ್ದು ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದು. ವಿದ್ಯಾರ್ಹತೆ 8ನೇ ಅಥವಾ 10ನೇ ತರಗತಿ ಉತೀರ್ಣರಾಗಿರಬೇಕು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಆನ್‍ಲೈನ್ ಮೂಲಕ ಪಡೆಯಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ www.joinindianarmy.nic.in ಹಾಗೂ ಸೇನಾ

ಸೇನಾ ನೇಮಕಾತಿ ರ್ಯಾಲಿ Read More »

ಕರಾವಳಿ
Scroll to Top