Mangalore

ಉದ್ಯೋಗ ಸಂದರ್ಶನಕ್ಕೆ ತೆರಳುವ ಮಹಿಳೆಯರು ಇನ್ಮುಂದೆ ವಾಸ್ತವ್ಯದ ಬಗ್ಗೆ ಚಿಂತೆ ಬಿಡಿ ➤ ಪ್ರಮುಖ ನಗರದಲ್ಲಿ ಎಲ್ಲಾ ಮಹಿಳೆಯರಿಗಾಗಿ ಲಭ್ಯವಿದೆ ಉಚಿತ ಟ್ರಾನ್ಸಿಟ್ ಹಾಸ್ಟೆಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.16. 2018-19ನೇ ಸಾಲಿನ ಆಯವ್ಯಯ ಘೋಷಣೆಯಂತೆ, ಬೆಂಗಳೂರು ನಗರಕ್ಕೆ ಉದ್ಯೋಗ ಸಂದರ್ಶನ ಪ್ರವೇಶ ಪರೀಕ್ಷೆಗಳಿಗೆ ಒಂಟಿಯಾಗಿ ಬರುವಂತಹ ಎಲ್ಲಾ ವರ್ಗದ ಮಹಿಳೆಯರಿಗೆ ವರಮಾನ ಮಿತಿಯಿಲ್ಲದೇ 3 ದಿನಗಳವರೆಗೂ ಉಚಿತ ಊಟೋಪಹಾರ ಮತ್ತು ಸುರಕ್ಷಿತ ವಾಸ್ತವ್ಯವನ್ನು ಟ್ರಾನ್ಸಿಟ್ ಹಾಸ್ಟೆಲ್‍ಗಳಲ್ಲಿ ಕಲ್ಪಿಸಲಾಗುವುದು ಎಂದು ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಇವರು ತಿಳಿಸಿರುತ್ತಾರೆ.   ಬೆಂಗಳೂರಿನಲ್ಲಿ ಲಭ್ಯವಿರುವ 13 ಟ್ರಾನ್ಸಿಟ್ ಹಾಸ್ಟೆಲ್‍ಗಳು : ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್, […]

ಉದ್ಯೋಗ ಸಂದರ್ಶನಕ್ಕೆ ತೆರಳುವ ಮಹಿಳೆಯರು ಇನ್ಮುಂದೆ ವಾಸ್ತವ್ಯದ ಬಗ್ಗೆ ಚಿಂತೆ ಬಿಡಿ ➤ ಪ್ರಮುಖ ನಗರದಲ್ಲಿ ಎಲ್ಲಾ ಮಹಿಳೆಯರಿಗಾಗಿ ಲಭ್ಯವಿದೆ ಉಚಿತ ಟ್ರಾನ್ಸಿಟ್ ಹಾಸ್ಟೆಲ್ Read More »

ಕರಾವಳಿ

ಚೆನ್ನೈ ಕ್ರಿಕೆಟಿಗನ ಕ್ರೀಡಾ ಸ್ಪೂರ್ತಿ ಕೊಂಡಾಡಿದ ಕ್ರಿಕೆಟ್ ಜಗತ್ತು:ಕಾಲಲ್ಲಿ ರಕ್ತ ಸುರಿಯುತ್ತಿದ್ದರೂ ಹೋರಾಡಿದ ವ್ಯಾಟ್ಸನ್

(ನ್ಯೂಸ್ ಕಡಬ) newskadaba.com,ಹೈದರಾಬಾದ್,ಮೇ.14. ಇದು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಶೇನ್ ವ್ಯಾಟ್ಸನ್ ರ ಫೈನಲ್ ಪಂದ್ಯದ ಸಾಹಸಗಾಥೆ. ಫೈನಲ್ ಪಂದ್ಯದ ಒತ್ತಡ, ಒಂದೆಡೆ ವಿಕೆಟ್ ಗಳು ಬೀಳುತ್ತಿದೆ, ರನ್ ಔಟ್ ತಪ್ಪಿಸಲು ಹಾಕಿದ ಡೈವ್ ನಿಂದ ಮೊಣ ಕಾಲಿಂದ ರಕ್ತ ಸುರಿಯುತ್ತಿದೆ, ಹರಿದ ನೆತ್ತರಿಂದಾಗಿ ಹಳದಿ ಪ್ಯಾಂಟ್ ಕೆಂಪಾಗಿದೆ, ಆದರೆ ಛಲ ಬಿಡದ ಹೋರಾಟ.ಬ್ಯಾಟಿಂಗ್ ಮಾಡುತ್ತಿದ್ದ ಶೇನ್ ವ್ಯಾಟ್ಸನ್ ಡೈವ್ ಹಾಕುವ ವೇಳೆ ಗಾಯಗೊಂಡಿದ್ದರು. ಆದರೆ ಈ ವಿಷಯ ಯಾರಿಗೂ ಹೇಳದ ವ್ಯಾಟ್ಸನ್ ಬ್ಯಾಟಿಂಗ್ ಮುಂದುವರಿಸಿದರು. ಕಾಲಿನಲ್ಲಿ

ಚೆನ್ನೈ ಕ್ರಿಕೆಟಿಗನ ಕ್ರೀಡಾ ಸ್ಪೂರ್ತಿ ಕೊಂಡಾಡಿದ ಕ್ರಿಕೆಟ್ ಜಗತ್ತು:ಕಾಲಲ್ಲಿ ರಕ್ತ ಸುರಿಯುತ್ತಿದ್ದರೂ ಹೋರಾಡಿದ ವ್ಯಾಟ್ಸನ್ Read More »

ಕರಾವಳಿ

ನನ್ನ ಯೋಜನೆಗಳು ಶಾಶ್ವತ,ಯಾವುದೇ ಸರ್ಕಾರ ನಿಲ್ಲಿಸಲಿ ನೋಡೋಣ!:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

(ನ್ಯೂಸ್ ಕಡಬ) newskadaba.com,ಬೆಂಗಳೂರು,ಮೇ.14. ಮಂಗಳವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಯಾವ ಕಾರ್ಯಕ್ರಮವೂ ತಾತ್ಕಾಲಿಕ ಅಲ್ಲ. ಅನ್ನಭಾಗ್ಯ,ಕ್ಷೀರಭಾಗ್ಯ,ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ….ಇವುಗಳನ್ನು ಯಾವುದೇ ಸರ್ಕಾರ ನಿಲ್ಲಿಸಲಿ ನೋಡೋಣ. ಜಾಗೃತ ಮತದಾರರು ಇರುವ ವರೆಗೆ ಇವೆಲ್ಲ ಶಾಶ್ವತ ಕಾರ್ಯಕ್ರಮಗಳು. ಟೀಕಾಕಾರರಿಗೆ ನೆನಪಿರಲಿ. ಎಂದು ಮಂಗಳವಾರ ಟ್ವೀಟ್‌ ಮೂಲಕ ಎಚ್ಚರಿಕೆ ನೀಡಿದ್ದಾರೆ.ಇನ್ನೊಂದು ಟ್ವೀಟ್‌ನಲ್ಲಿ ಗೆಳೆಯ ಜಿ.ಟಿ.ದೇವೇಗೌಡರು ಇತ್ತೀಚೆಗೆ ನನ್ನ ವಿರುದ್ಧ ಮಾತನಾಡಿಲ್ಲ ನಿಜ. ಆದರೆ ಮೈಸೂರಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆಂಬ ಅವರ ಹೇಳಿಕೆ ಸತ್ಯವಾಗಿದ್ದರೂ ಅನಗತ್ಯವಾಗಿತ್ತು. ಇದರಿಂದಾಗಿ ಕೆರಳಿದ ನಮ್ಮ

ನನ್ನ ಯೋಜನೆಗಳು ಶಾಶ್ವತ,ಯಾವುದೇ ಸರ್ಕಾರ ನಿಲ್ಲಿಸಲಿ ನೋಡೋಣ!:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ Read More »

ಕರಾವಳಿ

ಶುಶ್ರೂಷಣಾಧಿಕಾರಿ ಹುದ್ದೆಗೆ ನೇರ ಸಂದರ್ಶನ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.13.ಜಿಲ್ಲಾ ತರಬೇತಿ ಕೇಂದ್ರ, ಸುರತ್ಕಲ್, ಮಂಗಳೂರು, ಇಲ್ಲಿ 2019-20ನೇ ಸಾಲಿಗೆ ಶುಶ್ರೂಷಣಾಧಿಕಾರಿ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ನೆಲೆಯಲ್ಲಿ ನೇಮಿಸಿಕೊಳ್ಳಲು ಮೇ 18 ರಂದು ನೇರ ಸಂದರ್ಶನ ನಡೆಸಲಾಗುವುದು. ಶುಶ್ರೂಷಣಾಧಿಕಾರಿ (ಗುತ್ತಿಗೆ) ಹಿರಿಯ ಆರೋಗ್ಯ ಸಹಾಯಕಿ, ಜನರಲ್ ನರ್ಸಿಂಗ್, ಡಿಪಿಹೆಚ್‍ಎನ್ ತರಬೇತಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು ತರಬೇತಿ ಬಗ್ಗೆ ಟಿ.ಓ.ಟಿ ಹೊಂದಿದ ದಾಖಲೆಗಳನ್ನು ಲಗ್ತೀಕರಿಸುವುದು. ಬಿ.ಎಸ್‍ಸಿ ನರ್ಸಿಂಗ್ ಪದವಿ ಹೊಂದಿರಬೇಕು, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಹಾಗೂ ಪ್ರತ್ಯೇಕವಾಗಿ ತರಬೇತಿ ನೀಡಿದ ಅನುಭವ

ಶುಶ್ರೂಷಣಾಧಿಕಾರಿ ಹುದ್ದೆಗೆ ನೇರ ಸಂದರ್ಶನ Read More »

ಕರಾವಳಿ

ಗ್ರಾಮ ಪಂಚಾಯತ್‍ಗಳ ಉಪ ಚುನಾವಣೆ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.14. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತ್‍ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನ, ನಾಮಪತ್ರ ಪರಿಶೀಲಿಸುವ ದಿನ ಮೇ 17, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುಲು ಕೊನೆಯ ದಿನ ಮೇ 20, ಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸಬೇಕಾದ ದಿನ ಮೇ 29 ರಂದು ಪೂರ್ವಾಹ್ನ 7 ರಿಂದ ಸಂಜೆ

ಗ್ರಾಮ ಪಂಚಾಯತ್‍ಗಳ ಉಪ ಚುನಾವಣೆ Read More »

ಕರಾವಳಿ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇವರ ವತಿಯಿಂದ ಸಾಲ ಸೌಲಭ್ಯ – ಆನ್‍ಲೈನ್ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.14.ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ಇವರ ವತಿಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಸಿಖ್ಖ್, ಹಾಗೂ ಪಾರ್ಸಿ ಜನಾಂಗದ ವಿದ್ಯಾರ್ಥಿಗಳು 2019-20ನೇ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ(ಸಿ.ಇ.ಟಿ)ಹಾಜರಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಕೈಗೊಳ್ಳಲು ನಿಗಮದಿಂದ ಇಂಜಿನಿಯರಿಂಗ್ ಕೋರ್ಸಿಗೆ ವಾರ್ಷಿಕ ಗರಿಷ್ಠ ರೂ 56,000/- ಹಾಗೂ ಬಿ.ಡಿ.ಎಸ್ ಮತ್ತು ಎಂ.ಬಿ.ಬಿ.ಎಸ್ ಕೋಸ್ರ್ಮಗಳಿಗೆ ನೀಟ್ ಮೂಲಕ ವಾರ್ಷಿಕ ಗರಿಷ್ಟ ರೂ. 3,50,000/- ಶೇ 2%ರ ಸೇವಾ ಶುಲ್ಕದ ಆಧಾರದ ಮೇಲೆ ಸಾಲ ಸೌಲಭ್ಯ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇವರ ವತಿಯಿಂದ ಸಾಲ ಸೌಲಭ್ಯ – ಆನ್‍ಲೈನ್ ಅರ್ಜಿ ಆಹ್ವಾನ Read More »

ಕರಾವಳಿ

ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.14.ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ಸಮಗ್ರ ಸೌಲಭ್ಯ ನೀಡುವರೇ ಜಿಲ್ಲಾ ಲೇಡಿಗೋಷನ್ ಆಸ್ಪತ್ರೆಯ ಗೆಳತಿ ವಿಶೇಷ ಚಿಕಿತ್ಸಾ ಘಟಕದಲ್ಲಿ ತೆರವಾಗಿರುವ ಸಮಾಜ ಸೇವಾ ಕಾರ್ಯಕರ್ತೆಯ 2 ಹುದ್ದೆ ಬಿ.ಎಸ್.ಡಬ್ಲ್ಯೂ/ಬಿ.ಎ (ಸೈಕಾಲಜಿ) ಹಾಗೂ 1 ವರ್ಷದ ಕಂಪ್ಯೂಟರ್ ಅನುಭವವುಳ್ಳ 22 ರಿಂದ 35 ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾಸಿಕ ಗೌರವಧನ ರೂ.10,000/-ಆಗಿರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ 18.ಹೆಚ್ಚಿನ ವಿವರಗಳಿಗೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ

ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ Read More »

ಕರಾವಳಿ

ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪ್ರಧಾನಿ ಮೋದಿ ವಿರುದ್ಧ ಮಾಡಿರುವ ವೈಯಕ್ತಿಕ ಟೀಕೆಗೆ ಅರುಣ್ ಜೇತ್ಲಿ ಖಂಡನೆ

(ನ್ಯೂಸ್ ಕಡಬ) newskadaba.com, ನವದೆಹಲಿ ,ಮೇ.13.  ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿಯವರು ರಾಜಸ್ಥಾನದ ಅಳವಾರ್‌ ಕೇಸಿಗೆ ಸಂಬಂಧಿಸಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿರುವ ವೈಯಕ್ತಿಕ ಟೀಕೆಗಳನ್ನು ಖಂಡಿಸಿದ್ದಾರೆ.ಮಾಯಾವತಿ ಅವರ ವೈಯಕ್ತಿಕ ಟೀಕೆಗಳು ರಾಜಕೀಯ ಚರ್ಚೆಯನ್ನು ಹೊಸ ಕೆಳಮಟ್ಟಕ್ಕೆ ಒಯ್ದಿದೆ ಎಂದು ಅವರು ಹೇಳಿದ್ದಾರೆ.‘ಅಳವಾರ್‌ ರೇಪ ಕೇಸಿಗೆ ಆಕ್ರೋಶ ವ್ಯಕ್ತಪಡಿಸುವ ಮೂಲಕ ಮಾಯಾವತಿ ಮೊಸಳೆ ಕಣ್ಣೀರು ಸುರಿಸಿದ್ದಾರೆ. ಆಕೆಗೆ ನಿಜವಾಗಿಯೂ ಕಳಕಳಿ ಇದ್ದರೆ ರಾಜಸ್ಥಾನದಲ್ಲಿನ ಕಾಂಗ್ರೆಸ್‌ ಸರಕಾರಕ್ಕೆ ಆಕೆ ನೀಡಿರುವ

ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪ್ರಧಾನಿ ಮೋದಿ ವಿರುದ್ಧ ಮಾಡಿರುವ ವೈಯಕ್ತಿಕ ಟೀಕೆಗೆ ಅರುಣ್ ಜೇತ್ಲಿ ಖಂಡನೆ Read More »

ರಾಷ್ಟ್ರೀಯ ನ್ಯೂಸ್

ಬಿಸಿಲಿನ ತಾಪವನ್ನು ತಣ್ಣಗಾಗಿಸುವ ತಂಪುಪಾನೀಯಾಗಳು

(ನ್ಯೂಸ್ ಕಡಬ) newskadaba.com, ಅಡುಗೆ ಮಾಹಿತಿ: ಬಿಸಿಲಿನ ಝಳಕ್ಕೆ ದೇಹವು ದಾಹದಿಂದ ತಣ್ಣಗಿನ ಪಾನೀಯವನ್ನು ಅರಸುತ್ತಿದೆ. ಇಂತಹ ಸಂದರ್ಭದಲ್ಲಿ ದಣಿವಾರಿಸಲು ಸಹಾಯಕವಾಗುವ ಸಿಹಿ, ಹುಳಿ, ಖಾರ ಮಿಶ್ರಿತ ರುಚಿ ಹೊಂದಿರುವ ಶರೀರವನ್ನು ತಂಪಾಗಿಸುವ ಆರೋಗ್ಯಕರ ಪಾನೀಯಗಳು ನಿಮಗಾಗಿ… ಮಜ್ಜಿಗೆಜ್ಯೂಸ್‌ ಬೇಕಾಗುವ ಸಾಮಗ್ರಿ: ದಪ್ಪಮಜ್ಜಿಗೆ- ಒಂದು ಕಪ್‌, ನೀರು- ಮೂರು ಕಪ್‌, ಹಸಿಮೆಣಸಿನ ಕಾಯಿ- ಮೂರು, ಲಿಂಬೆರಸ- ಮೂರು ಚಮಚ, ಶುಂಠಿ-ಸಣ್ಣ ತುಂಡು, ಕೊತ್ತಂಬರಿ ಸೊಪ್ಪು-ಮೂರು ಗರಿ, ಒಗ್ಗರಣೆಗೆ- ಸಾಸಿವೆ, ತುಪ್ಪ-ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ:

ಬಿಸಿಲಿನ ತಾಪವನ್ನು ತಣ್ಣಗಾಗಿಸುವ ತಂಪುಪಾನೀಯಾಗಳು Read More »

ಆರೋಗ್ಯ ಮಾಹಿತಿ

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಮುಖಂಡರ ಒಳಜಗಳದಿಂದ ಸರ್ಕಾರ ಪತನ: ಶೋಭಾ ಹೇಳಿಕೆ

(ನ್ಯೂಸ್ ಕಡಬ) newskadaba.com,ಕಲಬುರುಗಿ,ಮೇ.13. ಸೋಮವಾರ ಕಲಬುರಗಿಯಲ್ಲಿ ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಂಸದೆ ಶೋಭಾ ಕರಂದ್ಲಾಜೆ ಅವರು, ಜೆಡಿಎಸ್ ನವರು ಕೇವಲ 7 ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರಕ್ಕೆ ಸೀಮಿತವಾಗಿದ್ದಾರೆ. ರೆಸಾರ್ಟ್ ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಸಿಎಂ ಮತ್ತೆ ಆ ಸ್ಥಾನದಲ್ಲಿ ಮುಂದುವರಿಯಬಾರದು ಎಂದರು.ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಹೇಳಿಕೆ ಸಾಕ್ಷಿ. ಈ ಒಳಜಗಳ ಸರ್ಕಾರವನ್ನು ಬಲಿ ತೆಗೆದುಕೊಳ್ಳುತ್ತದೆ. ಮೈತ್ರಿ

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಮುಖಂಡರ ಒಳಜಗಳದಿಂದ ಸರ್ಕಾರ ಪತನ: ಶೋಭಾ ಹೇಳಿಕೆ Read More »

ರಾಷ್ಟ್ರೀಯ ನ್ಯೂಸ್
Scroll to Top