Mangalore

ಇನ್ಮುಂದೆ ಅಟೋ ರಿಕ್ಷಾಗಳಲ್ಲಿ ಮಿತಿ ಮೀರಿ ಮಕ್ಕಳ ಸಾಗಾಟ ಮಾಡುವಂತಿಲ್ಲ ➤ ನಿಯಮ ಉಲ್ಲಂಘಿಸಿದ್ದಲ್ಲಿ ಸಾರಿಗೆ ಇಲಾಖೆಯಿಂದ ಕ್ರಮ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.18.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಕಾರ್ಖಾನೆಗಳಿದ್ದು, ಬಹಳ ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ವ್ಯವಸ್ಥಾಪಕರು ವಾಹನ ವ್ಯವಸ್ಥೆ ಮಾಡಿದ್ದಾರೆಯೇ? ಅಥವಾ ಇವರಿಗೆ ಸಮರ್ಪಕ ಬಸ್ ವ್ಯವಸ್ಥೆ ಇದೆಯೇ, ಇಲ್ಲದಿದ್ದಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ನಿಯೋಜಿಸುವಂತೆ ಬೆಂಗಳೂರು, ಕಾರ್ಮಿಕ ಇಲಾಖೆಯ ಆಯುಕ್ತ ಪಾಲಯ್ಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸರಕು ಸಾಗಾಣಿಕೆ ವಾಹನಗಳಲ್ಲಿ ಮಾನವ ಸಾಗಾಣಿಕೆ ತಡೆ ಕುರಿತ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. […]

ಇನ್ಮುಂದೆ ಅಟೋ ರಿಕ್ಷಾಗಳಲ್ಲಿ ಮಿತಿ ಮೀರಿ ಮಕ್ಕಳ ಸಾಗಾಟ ಮಾಡುವಂತಿಲ್ಲ ➤ ನಿಯಮ ಉಲ್ಲಂಘಿಸಿದ್ದಲ್ಲಿ ಸಾರಿಗೆ ಇಲಾಖೆಯಿಂದ ಕ್ರಮ Read More »

ಕರ್ನಾಟಕ

ಮೇ.21ರಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸುಳ್ಯ ಮತ್ತು ಕಡಬಕ್ಕೆ..!! ➤ ಸರಕಾರಿ ಕಛೇರಿಗಳಲ್ಲಿ ನಡೆಯುವ ಲಂಚದ ಬಗ್ಗೆ ದೂರು ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.18. ದಕ್ಷಿಣ ಕನ್ನಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮೇ 21 ರಂದು ಪೂರ್ವಾಹ್ನ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಸುಳ್ಯ ಸರ್ಕಾರಿ ಪ್ರವಾಸಿ ಮಂದಿರ ಅಪರಾಹ್ನ 2 ಗಂಟೆಯಿಂದ 4 ಗಂಟೆಯ ವರೆಗೆ ಡಾ ಅಂಬೇಡ್ಕರ್ ಭವನ ಕಡಬ ಇಲ್ಲಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಲಿದ್ದಾರೆ ಎಂದು ಪೊಲೀಸ್ ನಿರೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ

ಮೇ.21ರಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸುಳ್ಯ ಮತ್ತು ಕಡಬಕ್ಕೆ..!! ➤ ಸರಕಾರಿ ಕಛೇರಿಗಳಲ್ಲಿ ನಡೆಯುವ ಲಂಚದ ಬಗ್ಗೆ ದೂರು ಸ್ವೀಕಾರ Read More »

ಕರಾವಳಿ

ಲೋಕಾಯುಕ್ತರ ಭೇಟಿ – ದೂರು ಅರ್ಜಿ ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.18. ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ವಿವಿಧ ದಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಂದ ದೂರು ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಮೇ 27 ರಂದು ಪೂರ್ವಾಹ್ನ 11 ಗಂಟೆಯಿಂದ ಅಪರಾಹ್ನ 1 ಗಂಟೆಯವರೆಗೆ ಸುಳ್ಯ ತಾಲೂಕು ಕಚೇರಿ, ಮೇ 28 ರಂದು ಪೂರ್ವಾಹ್ನ 11 ಗಂಟೆಯಿಂದ 1 ಗಂಟೆಯವರೆಗೆ ಪುತ್ತೂರು ತಾಲೂಕು ಕಚೇರಿ, ಮೇ 29 ರಂದು ಪೂರ್ವಾಹ್ನ 11 ಗಂಟೆಯಿಂದ ಅಪರಾಹ್ನ 1 ಗಂಟೆಯವರೆಗೆ

ಲೋಕಾಯುಕ್ತರ ಭೇಟಿ – ದೂರು ಅರ್ಜಿ ಸ್ವೀಕಾರ Read More »

ಕರಾವಳಿ

ಗಡಿಭಾಗದಲ್ಲಿ ಮುಂದುವರಿದ ಉಗ್ರರ ಬೇಟೆ: ಪುಲ್ವಾಮಾದಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿ ಭಾರತೀಯ ಸೇನೆ

(ನ್ಯೂಸ್ ಕಡಬ) newskadaba.com,ಶ್ರೀನಗರ,ಮೇ.17.ಭಾರತೀಯ ಭದ್ರತಾ ಪಡೆಗಳ ಸಿಬ್ಬಂದಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಪುಲ್ವಾಮಾದ ದಿಲಿಪೊರ ಗ್ರಾಮದಲ್ಲಿ ಉಗ್ರರು ಅಡಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದರು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ತಕ್ಷಣವೇ ಸ್ಥಳವನ್ನು ಸುತ್ತುವರಿದ ಭದ್ರತಾಪಡೆ ಸಿಬ್ಬಂದಿ ಪ್ರತಿದಾಳಿ ಆರಂಭಿದರು.ಕಾರ್ಯಾಚರಣೆಯಲ್ಲಿ ಒಬ್ಬ ಯೋಧ ಗುಂಡಿನ ಚಕಮಕಿ ವೇಳೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೂ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಇವರೊಂದಿಗೆ ಗಾಯಗೊಂಡಿರುವ

ಗಡಿಭಾಗದಲ್ಲಿ ಮುಂದುವರಿದ ಉಗ್ರರ ಬೇಟೆ: ಪುಲ್ವಾಮಾದಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿ ಭಾರತೀಯ ಸೇನೆ Read More »

ರಾಷ್ಟ್ರೀಯ ನ್ಯೂಸ್

ಪೇರಡ್ಕ-ಕಾಯರಡ್ಕ ರಸ್ತೆ:

(ನ್ಯೂಸ್ ಕಡಬ) newskadaba.com,ಕಲ್ಲುಗುಡ್ಡೆ,ಮೇ.17. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಿಂದ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಪೇರಡ್ಕದಿಂದ ಕಾಯರಡ್ಕ ವರೆಗೆ ಡಾಮಾರು ಕಿತ್ತು ಹೋಗಿ ಹೊಂಡ ಗುಂಡಿಗಳು ನಿರ್ಮಾಣವಾಗಿ ತೀರಾ ಹದಗೆಟ್ಟಿದ್ದು, ಸರ್ವಋತುವಿನಲ್ಲಿ ಸಂಚಾರ ಕಷ್ಟಕರವಾಗಿದ್ದು, ಹಲವು ವರ್ಷಗಳಿಂದ ದುರಸ್ಥಿಗೊಳಿಸುವಂತೆ ಆಗ್ರಹಿಸುತ್ತಿದ್ದರೂ ದುರಸ್ಥಿ ಮಾಡದೇ ಇರುವುದಕ್ಕೆ ನಿತ್ಯ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಪೂರ್ಣ ಪ್ರಮಾಣದಲ್ಲಿ ದುರಸ್ಥಿಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿ.ಪಂ. ಇಂಜಿನೀಯರ್ ರೋಹಿದಾಸ್ ರವರು ಅನುದಾನ ಲಭ್ಯವಿದ್ದು 3-4 ದಿನಗಳಲ್ಲಿ ಕಾಮಗಾರಿ

ಪೇರಡ್ಕ-ಕಾಯರಡ್ಕ ರಸ್ತೆ: Read More »

ಕರಾವಳಿ

ಕರಬೂಜ ಬೀಜಗಳಲ್ಲಿದೆ ಆರೋಗ್ಯ ವೃದ್ಧಿಸುವ ಅಂಶ

(ನ್ಯೂಸ್ ಕಡಬ) newskadaba.com, ಆರೋಗ್ಯ ಮಾಹಿತಿ : ಕರಬೂಜ ಬೇಸಿಗೆಯ ಸಮಯದಲ್ಲಿ ಹೆಚ್ಚು ಫಲದಾಯಕವಾಗುವಂತಹ ಹಣ್ಣುಗಳಲ್ಲೊಂದು. ಹಣ್ಣುಗಳು ಮಾತ್ರವಲ್ಲ, ಇದರ ಬೀಜವೂ ಅಧಿಕ ಉಪಕಾರಿಯಾದಂತಹ ಪದಾರ್ಥ. ಆರೋಗ್ಯಸಹಕಾರಿ ಗುಣಗಳು ಹಾಗೂ ಅನೇಕ ಔಷಧೀಯ ಗುಣಗಳನ್ನು ಹೊಂದಿರುತ್ತದೆ.ಕರಬೂಜದ ಬೀಜಗಳು ಪ್ರೋಟೀನ್ ಭರಿತವಾದಂಥವುಗಳು. ಕಣ್ಣಿನ ಆರೋಗ್ಯಕ್ಕೆ ಇವುಗಳ ಸೇವನೆಯು ಬಹಳ ಒಳ್ಳೆಯದು. ಮೂಳೆಗಳ ಸಾಂದ್ರತೆಯನ್ನು ಹೆಚ್ಚು ಮಾಡಲು ಕರಬೂಜದ ಬೀಜಗಳ ಸೇವನೆಯು ಸಹಕಾರಿ. ವಯಸ್ಸಾದಂತೆ ಮೂಳೆಗಳ ಸಾಂದ್ರತೆಯು ಕಡಿಮೆ ಆಗುತ್ತ ಹೋಗುತ್ತದೆ. ಆ ಮಧುಮೇಹವು ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿ ಕಾಡುತ್ತಿರುವಂತಹ

ಕರಬೂಜ ಬೀಜಗಳಲ್ಲಿದೆ ಆರೋಗ್ಯ ವೃದ್ಧಿಸುವ ಅಂಶ Read More »

ಆರೋಗ್ಯ ಮಾಹಿತಿ

ಪುತ್ರಿ ಜತೆ ಶಬರಿಮಲೆಗೆ ತೆರಳಿದ್ದ ಯುವ ಉದ್ಯಮಿ ಸಾವು

(ನ್ಯೂಸ್ ಕಡಬ) newskadaba.com,ಪುತ್ತೂರು,ಮೇ.17. ನಗರದ ಯುವ ಉದ್ಯಮಿಯೋರ್ವರು ಗುರುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ತನ್ನ 8 ವರ್ಷದ ಪುತ್ರಿ ಜತೆ ಮಾಲಾಧಾರಿಯಾಗಿ ಶಬರಿಮಲೆಗೆ ತೆರಳಿದ್ದ ವೇಳೆಯಲ್ಲಿ ಈ ಘಡನೆ ನಡೆದಿದೆ.ನರಿಮೊಗರು ಗ್ರಾಮದ ವೀರಮಂಗಲ ಗುತ್ತು ನಿವಾಸಿ, ಜನಾರ್ದನ ಗೌಡ (36) ಮೃತಪಟ್ಟವರು. ಪುತ್ತೂರಿನ ತೆಂಕಿಲದಲ್ಲಿ ಶ್ರೀ ಮಹಾಲಿಂಗೇಶ್ವರ ಎಂಟರ್‌ಪ್ರೈಸಸ್‌ ಸಂಸ್ಥೆಯನ್ನು ನಡೆಸುತ್ತಿದ್ದರು. ಅವರು ಪುತ್ರಿ, ಭಾವ ಹಾಗೂ ಇನ್ನಿಬ್ಬರ ಜತೆ ಮೇ 15ರಂದು ಪೂರ್ವಾಹ್ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇರುಮುಡಿ ಕಟ್ಟಿ ಮಧ್ಯಾಹ್ನ ರೈಲಿನ ಮೂಲಕ ಮಂಗಳೂರಿನಿಂದ ಶಬರಿಮಲೆ ಯಾತ್ರೆ ತೆರಳಿದ್ದರು.

ಪುತ್ರಿ ಜತೆ ಶಬರಿಮಲೆಗೆ ತೆರಳಿದ್ದ ಯುವ ಉದ್ಯಮಿ ಸಾವು Read More »

ಕರಾವಳಿ

ವಿಶ್ವಕಪ್ ಗೆ ಫಿಟ್: ಶಾದಾಬ್ ಖಾನ್

(ನ್ಯೂಸ್ ಕಡಬ) newskadaba.com,ಕರಾಚಿ,ಮೇ.17.ವೈರಲ್ ಸೋಂಕಿನಿಂದ ನರಳುತ್ತಿದ್ದ ಶಾದಾಬ್‌ ಖಾನ್‌ ಈಗ ಪೂರ್ತಿ ಚೇತರಿಸಿಕೊಂಡಿದ್ದಾರೆ. ಪಾಕಿಸ್ಥಾನದ ಯುವ ಲೆಗ್‌ಸ್ಪಿನ್‌ ಬೌಲಿಂಗ್‌ ಆಲ್ರೌಂಡರ್‌ ಶಾದಾಬ್‌ ಖಾನ್‌ ಆರೋಗ್ಯ ಸಂಪೂರ್ಣ ಚೇತರಿಸಿದ್ದು, ವಿಶ್ವಕಪ್‌ನಲ್ಲಿ ಆಡಲಿದ್ದಾರೆ ಎಂದು ಪಿಸಿಬಿ ತಿಳಿಸಿದೆ.ತವರಿಗೆ ಮರಳಿದ ಶಾದಾಬ್‌ ಗುರುವಾರ ಇಂಗ್ಲೆಂಡಿಗೆ ತೆರಳಲಿದ್ದಾರೆ.ಹೆಪಟೈಟಿಸ್‌ ಸಿ ಲಕ್ಷಣವಿದ್ದುದರಿಂದ ಅವರು ಮ್ಯಾಂಚೆಸ್ಟರ್‌ ವೈದ್ಯ ಡಾ| ಪ್ಯಾಟ್ರಿಕ್‌ ಕೆನಡಿ ಬಳಿ ಚಿಕಿತ್ಸೆ ಪಡೆದಿದ್ದರು. ವಿಶ್ವಕಪ್‌ ಆಡುವುದನ್ನು ನಾನು ಎದುರು ನೋಡುತ್ತಿದ್ದೇನೆ. ಪಾಕಿಸ್ಥಾನದ ಯಶಸ್ಸಿನಲ್ಲಿ ನನ್ನ ಪಾತ್ರವೂ ಇರಬೇಕೆಂಬ ಬಯಕೆ ಹೊಂದಿದ್ದೇನೆ’ ಎಂದು ಶಾದಾಬ್‌

ವಿಶ್ವಕಪ್ ಗೆ ಫಿಟ್: ಶಾದಾಬ್ ಖಾನ್ Read More »

ಕ್ರೀಡಾ ನ್ಯೂಸ್

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com,ಬೆಳ್ತಂಗಡಿ,ಮೇ.17. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಶೃಂಗೇರಿಯಿಂದ ಹೊರಟು ಮಧ್ಯಾಹ್ನ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಗುರುವಾರ ಭೇಟಿ ನೀಡಿದರು. ಬಳಿಕ ಸಂಜೆ 5 ಗಂಟೆಗೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ರಾಜಕೀಯ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.ದೇವರ ದರ್ಶನ ಪಡೆಯಲು ಬಂದಿದ್ದೇನೆ. ರಾಜಕೀಯ ವಿಚಾರವಾಗಿ ನೋ ಕಮೆಂಟ್ಸ್‌ ಎಂದರು. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಸದಾಶಿವ ಮತ್ತಿತರರಿದ್ದರು.  

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ Read More »

ಕರಾವಳಿ

ಹಿರಿಯ ನಾಗರಿಕರಿಗೆ ಒಂದು ದಿನದ ಉಚಿತ ಕಾರ್ಯಗಾರ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17. ಮಂಗಳೂರಿನ ಕದ್ರಿಹಿಲ್ಸ್‍ನ ಐ.ಟಿ.ಐ ಕ್ಯಾಂಪಸ್‍ನಲ್ಲಿರುವ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ಹಿರಿಯ ನಾಗರಿಕರಿಗಾಗಿ ಇಂಟರ್ನೆಟ್ ಹಾಗೂ ಇ-ಪೇಮೆಂಟ್ ಬಗ್ಗೆ ಅರಿವು ಮೂಡಿಸಲು ಒಂದು ದಿನದ ಕಾರ್ಯಗಾರವನ್ನು ಮೇ 21 ರಂದು ಆಯೋಜಿಸಲಾಗಿದೆ. ತ್ವರಿತವಾಗಿ ಬೆಳೆಯುತ್ತಿರುವ ತಾಂತ್ರಿಕತೆಗೆ ತಕ್ಕಂತೆ ಹಿರಿಯ ನಾಗರಿಕರು ತಮ್ಮನ್ನು ಅಗತ್ಯ ಇ-ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿ ಪಡೆಯಲು ಆಸಕ್ತಿ ಹೊಂದಿದ, ದೈಹಿಕ ಹಾಗೂ ಮಾನಸಿಕ ಕ್ಷಮತೆಯಿಂದ ಕೂಡಿದ, 60 ವರ್ಷ ಮೀರಿದ ಹಿರಿಯ ನಾಗರಿಕರು ತಮ್ಮ

ಹಿರಿಯ ನಾಗರಿಕರಿಗೆ ಒಂದು ದಿನದ ಉಚಿತ ಕಾರ್ಯಗಾರ Read More »

ಕರಾವಳಿ
Scroll to Top