Mangalore

ಕಾಡಾನೆ ದಾಳಿ…! – ಕೃಷಿ ನಾಶ

(ನ್ಯೂಸ್ ಕಡಬ)newskadaba.com ಮಂಡೆಕೋಲು, ಜು.26. ಮಂಡೆಕೋಲು ಗ್ರಾಮದಲ್ಲಿ ದಾಳಿ ಮುಂದುವರಿಸಿರುವ ಕಾಡಾನೆಗಳ ಹಿಂಡು ಬೊಳುಗಲ್ಲು ಭಾಗದಲ್ಲಿ ಕೃಷಿ ನಾಶ ಪಡಿಸಿದೆ ಎಂದು ವರದಿ ತಿಳಿಸಿದೆ. ಬೊಳುಗಲ್ಲು ಭಾಗದಲ್ಲಿ ದಾಳಿ ನಡೆಸಿದ ಆನೆಗಳ ಹಿಂಡು ಶುಭಕರ ಬೊಳುಗಲ್ಲು ಅವರ ತೋಟಕ್ಕೆ ನುಗ್ಗಿ ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶಪಡಿಸಿದ್ದು, ನೂರಕ್ಕೂ ಅಧಿಕ ಬಾಳೆ ಗಿಡಗಳನ್ನು ನಾಶಪಡಿಸಿವೆ ಎಂದು ಶುಭಕರ ಬೊಳುಗಲ್ಲು ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಗಡಿಪ್ರದೇಶವಾದ ಮಂಡೆಕೋಲಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಕನ್ಯಾನ, ಚಾಕೋಟೆ, ಬೊಳುಗಲ್ಲು […]

ಕಾಡಾನೆ ದಾಳಿ…! – ಕೃಷಿ ನಾಶ Read More »

ಕರಾವಳಿ

ಸುಳ್ಯ ಕೆಪಿಸಿಸಿ ಉಸ್ತುವಾರಿಯಾಗಿ ಮಮತಾ ಗಟ್ಟಿ ನೇಮಕ

(ನ್ಯೂಸ್ ಕಡಬ)newskadaba.com ಸುಳ್ಯ, ಜು.26. ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಘಟನೆಯ ಕೆಪಿಸಿಸಿ ಉಸ್ತುವಾರಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತ ಗಟ್ಟಿ ನೇಮಕಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಳ್ಯ ಹಾಗೂ ಕಡಬ ಬ್ಲಾಕ್ ಒಳಗೊಂಡ ಸುಳ್ಯ ವಿಧಾನಸಭಾ ಕ್ಷೇತ್ತದ ಕೆಪಿಸಿಸಿ ಉಸ್ತುವಾರಿಯಾಗಿ ಮಮತ ಗಟ್ಟಿ ಅವರನ್ನುನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಕೆಪಿಸಿಸಿ ವತಿಯಿಂದ ನೀಡುವ ಕಾರ್ಯಕ್ರಮಗಳ ಅನುಷ್ಠಾನದ ಕಾಂಗ್ರೆಸ್ ಪಕ್ಷದ ಉಸ್ತುವಾರಿಯನ್ನು ಅವರಿಗೆ

ಸುಳ್ಯ ಕೆಪಿಸಿಸಿ ಉಸ್ತುವಾರಿಯಾಗಿ ಮಮತಾ ಗಟ್ಟಿ ನೇಮಕ Read More »

ಕರಾವಳಿ

ಜು.27ರಿಂದ ಸುಳ್ಯ-ಪಾಣತ್ತೂರು ಅಂತಾರಾಜ್ಯ ಮಾರ್ಗದಲ್ಲಿ ಮತ್ತೊಂದು ಬಸ್ ಸರ್ವೀಸ್ ಆರಂಭ

(ನ್ಯೂಸ್ ಕಡಬ)newskadaba.com ಸುಳ್ಯ, ಜು.26. ಅಂತಾರಾಜ್ಯ ರಸ್ತೆಯಲ್ಲಿ ಕಾಂಞಂಗಾಡ್-ಪಾಣತ್ತೂರು- ಕಲ್ಲಪಳ್ಳಿ-ಸುಳ್ಯ ಮಾರ್ಗದಲ್ಲಿ ಜು.27ರಿಂದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಇನ್ನೊಂದು ಬಸ್ ಸಂಚಾರ ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. ಪಾಣತ್ತೂರಿನಿಂದ ಬೆಳಿಗ್ಗೆ 5:50 ಹೊರಟು ಸುಳ್ಯ6:40ಕ್ಕೆ ತಲುಪಲಿದೆ. ಸುಳ್ಯದಿಂದ ಬೆಳಿಗ್ಗೆ 6:50ಕ್ಕೆ ಹೊರಟು ಪಾಣತ್ತೂರಿಗೆ 7:40ಕ್ಕೆ ತಲುಪಲಿದೆ. ಬೆಳಿಗ್ಗೆ ಪಾಣತ್ತೂರಿನಿಂದ 7:50ಕ್ಕೆ ಹೊರಟು 9.20ಕ್ಕೆ ಕಾಂಞಂಗಾಡು 9: 30ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ. ಸುಳ್ಯ-ಪಾಣತ್ತೂರು- ಕಾಞಂಗಾಡ್ ರಸ್ತೆಯಲ್ಲಿ ಈಗಾಗಲೇ ಒಂದು ಬಸ್ ಓಡಾಟ ನಡೆಸುತಿದೆ ಎಂದು ತಿಳಿದುಬಂದಿದೆ.

ಜು.27ರಿಂದ ಸುಳ್ಯ-ಪಾಣತ್ತೂರು ಅಂತಾರಾಜ್ಯ ಮಾರ್ಗದಲ್ಲಿ ಮತ್ತೊಂದು ಬಸ್ ಸರ್ವೀಸ್ ಆರಂಭ Read More »

ಕರಾವಳಿ

ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಸೋರಿಕೆ – 15 ದಿನಗಳಲ್ಲಿ ಪೂರ್ಣಗೊಳಿಸಲು ಸೂಚನೆ

(ನ್ಯೂಸ್ ಕಡಬ)newskadaba.com ಪುತ್ತೂರು, ಜು.26. ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಹೊಸ ಕಟ್ಟಡ ಸೋರಿಕೆಯಾಗುತ್ತಿದ್ದು, ಈ ಕುರಿತು ಕಟ್ಟಡದ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯವರನ್ನು ಶಾಸಕರು ತರಾಟೆಗೆತ್ತಿಕೊಂಡು ತನ್ನ ಕಚೇರಿಗೆ ಬರುವಂತೆ ತಿಳಿಸಿದ್ದರು. ಕಚೇರಿಗೆ ಬಂದ ಸಂಸ್ಥೆಯವರನ್ನು ಶಾಸಕರು ಮತ್ತೇ ಎತ್ತಿಕೊಂಡಿದ್ದು, ಕಾಮಗಾರಿ ಕಳಪೆಯಾಗದಂತೆ ಮತ್ತು ಎಲ್ಲಾ ಕೆಲಸಗಳನ್ನು 15 ದಿನದೊಳಗೆ ಪೂರ್ಣ ಮಾಡಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆಮೆಗತಿಯಲ್ಲಿ ಸಾಗಿದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಲೇಜಿಗೆ ಭೇಟಿ ನೀಡಿದ ಶಾಸಕರು ನೀರು ಹರಿಯುತ್ತಿರುವುದನ್ನು ಕಂಡು ಆಕ್ರೋಶಗೊಂದ್ದರು.

ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಸೋರಿಕೆ – 15 ದಿನಗಳಲ್ಲಿ ಪೂರ್ಣಗೊಳಿಸಲು ಸೂಚನೆ Read More »

ಕರಾವಳಿ

ಹಣದ ವಿಚಾರದಲ್ಲಿ ಹಲ್ಲೆಗೈದು; ಜೀವಬೆದರಿಕೆ – ದೂರು ದಾಖಲು

(ನ್ಯೂಸ್ ಕಡಬ)newskadaba.com ನೆಲ್ಯಾಡಿ, ಜು.26. ಹಣದ ವಿಚಾರದಲ್ಲಿ ಹಲ್ಲೆಗೈದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಯಾಹ್ಯ ಕೊಕ್ಕಡ ಎಂಬವರು ನೀಡಿದ ದೂರಿನಂತೆ ಶಿವಪ್ರಸಾದ್ ಪಿ.ಎಂ ಹಾಗೂ ಗಣೇಶ್ ಎಂಬವರ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಉಪ್ಪಿನಂಗಡಿ ನಿವಾಸಿ ಯಾಹ್ಯ ನೀಡಿದ  ದೂರಿನಂತೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂದು ವರದಿ ತಿಳಿಸಿದೆ. ಯಾಹ್ಯ ಅವರಿಂದ ಶಿವಪ್ರಸಾದ್ ಎಂಬವರು ಅಂದಾಜು 46 ಲಕ್ಷ ಪಡೆದುಕೊಂಡಿದ್ದು, ಈ ಕುರಿತು ಕರಾರು ಪತ್ರ ಮತ್ತು ಚೆಕ್ ಗಳನ್ನು ನೀಡಿದ್ದಾರೆ.

ಹಣದ ವಿಚಾರದಲ್ಲಿ ಹಲ್ಲೆಗೈದು; ಜೀವಬೆದರಿಕೆ – ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಸಿಮೆಂಟ್ ಸಾಗಾಟದ ಲಾರಿ ನಿಯಂತ್ರಣ ತಪ್ಪಿ ಪಲ್ಟಿ – ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com ವಿಟ್ಲ, ಜು.26. ನಾಯಿಯ ಜೀವ ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಸಾಗಾಟದ ಲಾರಿ ರಸ್ತೆಯಲ್ಲಿ ಉರುಳಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲಿಂಜ ಕೊಟ್ಟಾರಿ ಕಟ್ಟೆ ಎಂಬಲ್ಲಿ ಸಂಭವಿಸಿದೆ. ಲಾರಿಯೊಳಗಡೆ ಸಿಲುಕಿದ್ದ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಕಲ್ಲಡ್ಕದಿಂದ ಪೆರ್ಲ ಕಡೆ ಸಿಮೆಂಟ್ ಸಾಗಾಟದ ಲಾರಿ ನಾಯಿಯೊಂದಕ್ಕೆ ಢಿಕ್ಕಿ ಯಾಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ ಎಂದು

ಸಿಮೆಂಟ್ ಸಾಗಾಟದ ಲಾರಿ ನಿಯಂತ್ರಣ ತಪ್ಪಿ ಪಲ್ಟಿ – ಚಾಲಕ ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್

ನೇತ್ರಾವತಿ- ಕುಮಾರಧಾರ ನದಿ ನೀರಿನ ಮಟ್ಟ ಇಳಿಕೆ – ತಹಶೀಲ್ದಾರ್ ಭೇಟಿ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಜು.26. ನೇತ್ರಾವತಿ- ಕುಮಾರಧಾರ ನದಿ ನೀರಿನ ಮಟ್ಟವು ಇಳಿಕೆಯಾಗತೊಡಗಿದ್ದು, ಇಲ್ಲಿನ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿಗಿಳಿಯುವ 38  ಮೆಟ್ಟಿಲುಗಳಲ್ಲಿ 11 ಮೆಟ್ಟಿಲುಗಳು ಕಾಣಿಸಿಕೊಂಡಿದೆ ಎನ್ನಲಾಗಿದೆ. ನಿನ್ನೆ 3 ಮೆಟ್ಟಿಲುಗಳಷ್ಟೇ ಕಾಣಿಸಿಕೊಂಡಿದ್ದವು. ಪುತ್ತೂರು ತಹಶೀಲ್ದಾರ್ ಶಿವಶಂಕರ್ ದೇವಾಲಯದ ಬಳಿ ಆಗಮಿಸಿ ನದಿಗಳ ವೀಕ್ಷಣೆ ನಡೆಸಿದರು.

ನೇತ್ರಾವತಿ- ಕುಮಾರಧಾರ ನದಿ ನೀರಿನ ಮಟ್ಟ ಇಳಿಕೆ – ತಹಶೀಲ್ದಾರ್ ಭೇಟಿ Read More »

ಕರಾವಳಿ

ಭರ್ಜರಿ ಏರಿಕೆ ಕಂಡ ಪೆಪ್ಪರ್ – 600ರ ಗಡಿ ದಾಟಿದ ಕಾಳುಮೆಣಸು

(ನ್ಯೂಸ್ ಕಡಬ)newskadaba.com ಮಂಗಳೂರು, ಜು.26. ಕೆಲ ದಿನಗಳ ಹಿಂದೆ ಕೆ.ಜಿ.ಗೆ 480ರಿಂದ 500 ರೂ. ಇದ್ದ ಕಾಳುಮೆಣಸು ದರ, ದಿಢೀರ್ ಆಗಿ ಈಗ 600ರ ಗಡಿ ದಾಟಿದೆ. ಕಾಳುಮೆಣಸಿನ ಧಾರಣೆ ಏರಿಕೆ ಮಾರುಕಟ್ಟೆಯಲ್ಲಿ ಮುಂದುವರಿದಿದ್ದು,  ಕೇರಳದ ಕೊಚ್ಚಿ ಮಾರುಕಟ್ಟೆಯಲ್ಲಿ ಸತತವಾಗಿ ಏರುತ್ತಿದೆ. ಗುಣಮಟ್ಟದ ಕಾಳುಮೆಣಸಿಗೆ ಕೊಚ್ಚಿಯಲ್ಲಿ ಕೆ.ಜಿ.ಯೊಂದಕ್ಕೆ ಗರಿಷ್ಠ 570ರೂ. ಧಾರಣೆ ದೊರೆತಿದೆ ಎನ್ನಲಾಗಿದೆ. ಕ್ಯಾಂಪ್ಕೋದಲ್ಲಿ 550 ರೂ ತನಕ ಧಾರಣೆ ಇತ್ತು. ಕಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ 40 ರಿಂದ 50 ರೂ ತನಕ ಧಾರಣೆ ಹೆಚ್ಚಿತ್ತು. ಕಳೆದ ಮೂರು

ಭರ್ಜರಿ ಏರಿಕೆ ಕಂಡ ಪೆಪ್ಪರ್ – 600ರ ಗಡಿ ದಾಟಿದ ಕಾಳುಮೆಣಸು Read More »

ಕರಾವಳಿ

ವಿಮಾ ಕಚೇರಿಯಲ್ಲಿ ಬೆಂಕಿ ಅವಘಡ – ಅಪಾರ ನಷ್ಟ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.26. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬಾವುಟ ಗುಡ್ಡೆಯ ಇನ್ಶೂರೆನ್ಸ್ ಸಂಸ್ಥೆಯೊಂದರ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿ ಕಂಪ್ಯೂಟರ್, ಎಸಿ ಮತ್ತಿತರ ಪರಿಕರಗಳು ಸುಟ್ಟು ಹೋಗಿರುವ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ. ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಇನ್ಶೂರೆನ್ಸ್ ಕಚೇರಿಯು ಕಟ್ಟಡದ ಮೂರನೇ ಅಂತಸ್ತಿನಲ್ಲಿ ಅಗ್ನಿ ಅವಘಢ ಸಂಭವಿಸಿದ್ದು, ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು,

ವಿಮಾ ಕಚೇರಿಯಲ್ಲಿ ಬೆಂಕಿ ಅವಘಡ – ಅಪಾರ ನಷ್ಟ Read More »

ಕರಾವಳಿ, ಕ್ರೈಮ್ ನ್ಯೂಸ್

ಕಟ್ಟಿಗೆಗಾಗಿ ಗುಡ್ಡೆಗೆ ಹೋದ ವ್ಯಕ್ತಿ ಹೆಜ್ಜೇನು ಕಡಿದು ಮೃತ್ಯು

(ನ್ಯೂಸ್ ಕಡಬ)newskadaba.com  ಪುತ್ತೂರು, ಜು.25. ಕಟ್ಟಿಗೆಗಾಗಿ ಮನೆಯ ಪಕ್ಕದ ಗುಡ್ಡೆಗೆ ಹೋಗಿದ್ದ ವೇಳೆ ಹೇಜ್ಜೇನು ಕಡಿದು ಗಂಭೀರ ಗಾಯಗೊಂಡಿದ್ದ ಒಳಮೊಗ್ರು ಗ್ರಾಮದ ಕೈಕಾರ ನಿವಾಸಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೇ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಗುರುವ(55) ಎಂದು ಗುರುತಿಸಲಾಗಿದೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಕಟ್ಟಿಗೆಗಾಗಿ ಗುಡ್ಡೆಗೆ ಹೋದ ವ್ಯಕ್ತಿ ಹೆಜ್ಜೇನು ಕಡಿದು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top